Back
Home » ಇತ್ತೀಚಿನ
ಆಫರ್‌ನಲ್ಲಿ 'ರಿಯಲ್‌ ಮಿ' ಸ್ಮಾರ್ಟ್‌ಫೋನ್ ಖರೀದಿಗೆ ಒಂದೊಳ್ಳೆ ಅವಕಾಶ!
Gizbot | 6th Nov, 2019 02:00 PM
 • ಫ್ಲಿಪ್‌ಕಾರ್ಟ್

  ಹೌದು, ಜನಪ್ರಿಯ ಇ-ಕಾಮರ್ಸ್‌ ಫ್ಲಿಪ್‌ಕಾರ್ಟ್ ಇದೀಗ 'ರಿಯಲ್‌ ಮಿ ಡೇಸ್‌' ಸೇಲ್ ಮೇಳವನ್ನು ಆಯೋಜಿಸಿದೆ. ನಾಲ್ಕು ದಿನಗಳ ಈ ಮೇಳದಲ್ಲಿ ಇದೇ ನವೆಂಬರ್ 5 ರಿಂದ(ನಿನ್ನೆ) ಶುರುವಾಗಿದ್ದು, ನವೆಂಬರ್ 8ರ ವರೆಗೂ ನಡೆಯಲಿದೆ. ಮೇಳದಲ್ಲಿ 'ರಿಯಲ್‌ ಮಿ'ಯ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಿಗೆ ಬಿಗ್ ರಿಯಾಯಿತಿ ನೀಡಲಾಗುತ್ತಿದೆ. ಗ್ರಾಹಕರು 'ರಿಯಲ್‌ ಮಿ' ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿಯೂ ಖರೀದಿಸಬಹುದಾಗಿದೆ.


 • ರಿಯಲ್‌ ಮಿ ಡೇಸ್‌

  ಸದ್ಯ ಚಾಲ್ತಿಯಲ್ಲಿರುವ ರಿಯಲ್‌ ಮಿ ಡೇಸ್‌ ಸೇಲ್ ಮೇಳದಲ್ಲಿ ರಿಯಲ್‌ ಮಿ XT, 'ರಿಯಲ್ ಮಿ 5', 'ರಿಯಲ್‌ ಮಿ 5 ಪ್ರೊ', ರಿಯಲ್‌ ಮಿ C2, ರಿಯಲ್‌ ಮಿ 3 ಮತ್ತು 'ರಿಯಲ್‌ ಮಿ 3 ಪ್ರೊ' ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚಿನ ಡಿಸ್ಕೌಂಟ್‌ ದೊರೆಯುತ್ತಿದೆ. ಹಾಗಾದರೇ 'ರಿಯಲ್‌ ಮಿ ಡೇಸ್‌' ಸೇಲ್‌ ಮೇಳದಲ್ಲಿ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳಿಗೆ ಎಷ್ಟು ಡಿಸ್ಕೌಂಟ್‌ ನೀಡಲಾಗಿದೆ ಎನ್ನುವುದನ್ನು ಮುಂದೆ ನೋಡೋಣ ಬನ್ನಿರಿ.


 • ರಿಯಲ್‌ ಮಿ C2

  ಸಂಸ್ಥೆಯ ಜನಪ್ರಿಯ ರಿಯಲ್‌ ಮಿ C2 ಸ್ಮಾರ್ಟ್‌ಫೋನ್ 1,000ರೂ. ಡಿಸ್ಕೌಂಟ್‌ ಪಡೆದಿದ್ದು, 2GB + 32GB ವೇರಿಯಂಟ್‌ ಸ್ಮಾರ್ಟ್‌ಫೋನ್ ಸದ್ಯ 5,999ರೂ.ಗಳಿಗೆ ಲಭ್ಯವಾಗಲಿದೆ. ಹಾಗೆಯೇ 3GB + 32GB ವೇರಿಯಂಟ್‌ ಸ್ಮಾರ್ಟ್‌ಫೋನ್ 6,999ರೂ.ಗಳಿಗೆ ಸಿಗಲಿದೆ. ಗ್ರಾಹಕರು ಫ್ಲಿಪ್‌ಕಾರ್ಟ್‌ ಅಥವಾ ರಿಯಲ್‌ ಮಿ ವೆಬ್‌ಸೈಟ್‌ ಮೂಲಕ ಖರೀದಿಸಬಹುದಾಗಿದೆ.


 • ರಿಯಲ್‌ ಮಿ 3

  ರಿಯಲ್‌ ಮಿ 3 ಸ್ಮಾರ್ಟ್‌ಫೋನ್ 3GB + 64GB ಮತ್ತು 4GB + 64GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಹೊಂದಿದ್ದು, 'ರಿಯಲ್‌ ಮಿ ಡೇಸ್‌' ಸೇಲ್‌ ಪ್ರಯುಕ್ತ ಈ ಎರಡು ವೇರಿಯಂಟ್‌ಗಳಿಗೆ 1,000ರೂ. ಕಡಿತ ಮಾಡಲಾಗಿದೆ. ಹೀಗಾಗಿ 3GB + 64GB ವೇರಿಯಂಟ್ 8,999ರೂ.ಗಳಿಗೆ ಮತ್ತು 4GB + 64GB ವೇರಿಯಂಟ್ 9,999ರೂ.ಗಳಿಗೆ ಲಭ್ಯ ಇವೆ.


 • ರಿಯಲ್‌ ಮಿ 3 ಪ್ರೊ

  ರಿಯಲ್‌ ಮಿ ಡೇಸ್‌' ಸೇಲ್‌ ಪ್ರಯುಕ್ತ ಇತ್ತೀಚಿನ 'ರಿಯಲ್‌ ಮಿ 3 ಪ್ರೊ ಸ್ಮಾರ್ಟ್‌ಫೋನ್‌ ಸಹ ಡಿಸ್ಕೌಂಟ್‌ ಬೆಲೆ ಪಡೆದಿದೆ. ಸದ್ಯ ಮೇಳದಲ್ಲಿ 4GB + 64GB ವೇರಿಯಂಟ್‌ ಸ್ಮಾರ್ಟ್‌ಫೋನ್ 9,999ರೂ.ಗೆ ಲಭ್ಯವಿದ್ದು, ಹಾಗೆಯೇ 6GB + 64GB ವೇರಯಂಟ್‌ ಫೋನ್ 11,999ರೂ.ಗಳ ಪ್ರೈಸ್‌ಟ್ಯಾಗ್‌ ಹೊಂದಿದೆ ಮತ್ತು 6GB + 128GB ವೇರಿಯಂಟ್‌ 12,999ರೂ.ಗಳಿಗೆ ದೊರೆಯಲಿದೆ.


 • ರಿಯಲ್ ಮಿ 5

  ರಿಯಲ್‌ ಮಿ ಸಂಸ್ಥೆಯ ಹೊಸ 'ರಿಯಲ್ ಮಿ 5' ಸ್ಮಾರ್ಟ್‌ಫೋನ್ ಆರಂಭಿಕ 3GB + 32GB ವೇರಿಯಂಟ್‌ ಬೆಲೆಯು 8,999ರೂ.ಗಳಾಗಿದ್ದು, 4GB + 64GB ವೇರಿಯಂಟ್‌ ಬೆಲೆಯು 9,999ರೂ.ಗಳಾಗಿದೆ. ಹಾಗೆಯೇ 4GB + 128GB ಸ್ಟೋರೇಜ್ ವೇರಿಯಂಟ್‌ ಅನ್ನು ಗ್ರಾಹಕರು 10,999ರೂ.ಗಳಿಗೆ ಖರೀದಿಸಬಹುದಾಗಿದೆ.


 • ರಿಯಲ್‌ ಮಿ 5 ಪ್ರೊ

  ಇತ್ತೀಚಿಗಷ್ಟೆ ಮಾರುಕಟ್ಟೆಗೆ ಬಿಡುಗಡೆ ಆಗಿರುವ 'ರಿಯಲ್‌ ಮಿ 5 ಪ್ರೊ' ಸ್ಮಾರ್ಟ್‌ಫೋನ್ ಇದೀಗ 'ರಿಯಲ್‌ ಮಿ ಡೇಸ್' ಮೇಳದಲ್ಲಿ ಡಿಸ್ಕೌಂಟ್‌ ಕಂಡಿದೆ. ಹೀಗಾಗಿ 4GB + 64GB ವೇರಿಯಂಟ್‌ ಸ್ಮಾರ್ಟ್‌ಫೋನ್ 12,999ರೂ.ಗಳಿಗೆ ಲಭ್ಯ. ಹಾಗೆಯೇ 8GB + 128GB ವೇರಿಯಂಟ್‌ ಸ್ಮಾರ್ಟ್‌ಫೋನ್ 15,999ರೂ.ಗಳಿಗೆ ಸಿಗಲಿದೆ.


 • ರಿಯಲ್‌ ಮಿ XT

  ಸದ್ಯ ಮಾರುಕಟ್ಟೆಯಲ್ಲಿ ಟ್ರೆಂಡಿಂಗ್‌ನಲ್ಲಿರುವ ಸ್ಮಾರ್ಟ್‌ಫೋನ್‌ಗಳ ಪೈಕಿ 'ರಿಯಲ್‌ ಮಿ XT' ಸಹ ಒಂದಾಗಿದೆ. 4GB RAM ಮತ್ತು 64GB ವೇರಿಯಂಟ್‌ ಬೆಲೆಯು 16,999ರೂ.ಆಗಿದ್ದು, ರಿಯಲ್‌ ಮಿ ಡೇಸ್‌' ಪ್ರಯುಕ್ತ ಬೆಲೆಯಲ್ಲಿ 1,000ರೂ. ಡಿಸ್ಕೌಂಟ್‌ ಪಡೆದಿದೆ. ಹೀಗಾಗಿ 15,999ರೂ.ಗೆ ಸಿಗಲಿದೆ. ಇನ್ನು 6GB RAM+64GB ವೇರಿಯಂಟ್‌ 16,999ರೂ.ಗಳಿಗೆ ಮತ್ತು 8GB+128GB ವೇರಿಯಂಟ್‌ 18,999ರೂ.ಗಳಿಗೆ ಲಭ್ಯ ಇದೆ.
ಅಮೆಜಾನ, ಫ್ಲಿಪ್‌ಕಾರ್ಟ್‌ ಇ-ಕಾಮರ್ಸ್‌ ತಾಣಗಳು ಗ್ಯಾಡ್ಜೆಟ್ಸ್‌ ಉತ್ಪನ್ನಗಳಿಗೆ ಸದಾ ಒಂದಿಲ್ಲೊಂದು ಡಿಸ್ಕೌಂಟ್‌ ಅಥವಾ ಆಫರ್‌ ನೀಡುತ್ತಲೇ ಇರುತ್ತವೆ. ಹೀಗಾಗಿ ಬಹುತೇಕ ಗ್ರಾಹಕರು ಹೊಸ ಸ್ಮಾರ್ಟ್‌ಫೋನ್ ಖರೀದಿಸುವ ಇ-ಕಾಮರ್ಸ್‌ ತಾಣಗಳಲ್ಲಿ ಜಾಲಡದೇ ಇರರು. ಪ್ರಸ್ತುತ ನೀವೆನಾದರೂ ಸ್ಮಾರ್ಟ್‌ಫೋನ್ ಖರೀದಿಸುವ ಆಲೋಚನೆಯಲ್ಲಿದ್ದರೇ ತಡ ಮಾಡದೇ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಮುಂದಾಗಿ. ಏಕೆಂದರೇ ರಿಯಲ್‌ ಮಿ ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ಡಿಸ್ಕೌಂಟ್ ಲಭ್ಯ ಇದೆ.

   
 
ಹೆಲ್ತ್