Back
Home » ಬಾಲಿವುಡ್
ಆಮೀರ್ ಖಾನ್ 'ಲಾಲ್ ಸಿಂಗ್ ಚಡ್ಡಾ' ಟೈಟಲ್ ಪೋಸ್ಟರ್ ಬಿಡುಗಡೆ
Oneindia | 6th Nov, 2019 03:09 PM

ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಈಗ 'ಲಾಲ್ ಸಿಂಗ್ ಚಡ್ಡಾ' ಆಗಿ ಎಂಟ್ರಿ ಕೊಡಲು ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಚಿತ್ರಕ್ಕಾಗಿ ಆಮೀರ್ ಖಾನ್ ಅನೇಕ ತಿಂಗಳಿಂದ ತಯಾರಿ ನಡೆಸಿದ್ದಾರೆ. 'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರದ ನಂತರ ಅಂದರೆ ವರ್ಷದ ಬಳಿಕ ಆಮೀರ್ ಖಾನ್ ಈಗ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

'ಲಾಲ್ ಸಿಂಗ್ ಚಡ್ಡಾ' ಚಿತ್ರದ ಚಿತ್ರೀಕರಣ ಆಕ್ಟೋಬರ್ 31ರಿಂದ ಪ್ರಾರಂಭವಾಗಿದೆ. ಆಮೀರ್ ಖಾನ್ ತಾಯಿ ಝೀನತ್ ಹುಸೇನ್ ಚಿತ್ರಕ್ಕೆ ಕ್ಲಾಪ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದಾರೆ. ಆಮೀರ್ ಖಾನ್ ಅಭಿನಯದ ಈ ಮಹತ್ವಾಕಾಂಕ್ಷೆಯ ಸಿನಿಮಾದ ಟೈಟಲ್ ಪೋಸ್ಟರ್ ಈಗ ರಿಲೀಸ್ ಆಗಿದೆ.

ರೀಮೇಕ್ ಸಿನಿಮಾದಲ್ಲಿ ಅಮೀರ್ ಖಾನ್: ಪಾತ್ರಕ್ಕಾಗಿ 20 ಕೆ.ಜಿ ಇಳಿಸಿಕೊಂಡ ನಟ

ಆಕಾಶದಲ್ಲಿ ಹಾರಾಡುವ ಗರಿ 'ಲಾಲ್ ಸಿಂಗ್ ಚಡ್ಡಾ' ಎಂದು ಬರೆಯುವ ಒಂದು ಪುಟ್ಟ ವಿಡಿಯೋವನ್ನು ಆಮೀರ್ ಖಾನ್ ಶೇರ್ ಮಾಡಿದ್ದಾರೆ. ಚಿತ್ರದ ಪಾತ್ರಕ್ಕಾಗಿ ಆಮೀರ್ ಖಾನ್ ಈಗಾಗಲೆ 20 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಸುಮಾರು ಆರು ತಿಂಗಳುಗಳ ಕಾಲ ತಯಾರಿ ನಡೆಸಿ ಈಗ ಚಿತ್ರೀಕರಣ ಪ್ರಾರಂಭಿಸಿದ್ದಾರೆ.

ವಿಶೇಷ ಅಂದರೆ ಲಾಲ್ ಸಿಂಗ್ ಚಡ್ಡಾ ಹಾಲಿವುಡ್ ಸಿನಿಮಾ ರಿಮೇಕ್. 1994ರಲ್ಲಿ ರೀಲೀಸ್ ಆಗಿದ್ದ ಆಸ್ಕರ್ ಮುಡಿಗೇರಿಸಿಕೊಂಡಿರುವ 'ಫಾರೆಸ್ಟ್ ಗಂಪ್' ಚಿತ್ರದ ರಿಮೇಕ್. ಈ ಸಿನಿಮಾ ಅಮೀರ್ ಖಾನ್ ಅವರನ್ನ ತುಂಬಾ ಕಾಡಿದ ಚಿತ್ರವಂತೆ. ಹಾಗಾಗಿ ಈ ಚಿತ್ರದ ರಿಮೇಕ್ ನಲ್ಲಿ ನಟಿಸಲು ಆಸಕ್ತಿ ತೋರಿದ್ದಾರೆ ಆಮೀರ್ ಖಾನ್.

ಸದ್ಯ ರಿಲೀಸ್ 'ಲಾಲ್ ಸಿಂಗ್ ಚಡ್ಡಾ' ಟೈಟಲ್ ಪೋಸ್ಟರ್ ಮೂಲ ಚಿತ್ರದ ಪೋಸ್ಟರ್ ಹಾಗೆ ಇದೆ. ಫಾರೆಸ್ಟ್ ಗಂಪ್ ಚಿತ್ರದ ಪೋಸ್ಟರ್ ಕೂಡ ಆಕಾಶದಲ್ಲಿ ತೆಲುತ್ತಿರುವ ಗರಿಯಲ್ಲಿ ಟೈಟಲ್ ಮೂಡಿಬರುತ್ತೆ. ಸದ್ಯ ಚಿತ್ರೀಕರಣ ಪ್ರಾರಂಭಿಸಿರುವ ಚಿತ್ರತಂಡ ಮುಂದಿನ ವರ್ಷ ತೆರೆಮೇಲೆ ಬರುತ್ತಿದ್ದಾರೆ.

   
 
ಹೆಲ್ತ್