Back
Home » ಬಾಲಿವುಡ್
ಯಾರಿಗಾದರು ಬಾಡಿಗಾರ್ಡ್ ಬೇಕಾ? 'ರಣ ವಿಕ್ರಮ' ನಟಿಯನ್ನು ಸಂಪರ್ಕಿಸಿ
Oneindia | 6th Nov, 2019 03:53 PM

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ 'ರಣ ವಿಕ್ರಮ' ಚಿತ್ರದಲ್ಲಿ ಮಿಂಚಿದ್ದ ಬಾಲಿವುಡ್ ನಟಿ ಅದಾ ಶರ್ಮಾ 'ಯಾರಿಗಾದರು ಬಾಡಿಗಾರ್ಡ್ ಅವಶ್ಯಕತೆ ಇದ್ದರೆ ನನ್ನನ್ನು ಸಂಪರ್ಕಿಸಿ' ಎಂದು ಹೇಳಿದ್ದಾರೆ. ಅದಾ ಶರ್ಮಾ ಮಾತು ಕೇಳಿ ಅಚ್ಚರಿಯಾಗುತ್ತಿದೆಯಾ? ಸಿನಿಮಾಗಳಿಲ್ಲದೆ ಅದಾ ಬಾಡಿಗಾರ್ಡ್ ಆಗಲು ಹೊರಟಿದ್ದಾರಾ ಅಂತ ಅಂದ್ಕೋಬೇಡಿ. ಅದಾ ಈ ಹೀಗೆ ಹೇಳಲು ಕಾರಣ ಮಾರ್ಷಲ್ ಆರ್ಟ್.

ಮಾರ್ಷಲ್ ಆರ್ಟ್ ಗು ಬಾಡಿಗಾರ್ಡ್ ಗೂ ಏನು ಸಂಬಂಧ ಅಂತೀರಾ. ಅದಾ ಶರ್ಮಾ ಮಾರ್ಷಲ್ ಆರ್ಟ್ ಕಲಿತ್ತಿದ್ದಾರೆ. ತಾನು ಕಲಿತಿರುವ ವಿದ್ಯೆಯನ್ನು ಪುಟ್ಟ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅದಾ ಮಾರ್ಷಲ್ ಆರ್ಟ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

ಗುಡ್ ನ್ಯೂಸ್ ಕೊಡ್ತಿದ್ದಾರಾ ದೀಪಿಕಾ ಪಡುಕೋಣೆ.? ಸುರಿಯುತ್ತಿದೆ ಪ್ರಶ್ನೆಗಳ ಸುರಿಮಳೆ.!

ವಿಡಿಯೋ ಜೊತೆಗೆ ಅದಾ ಬಾಡಿಗಾರ್ಡ್ ಬೇಕಾದರೆ ಈಗಾಗಲೆ ಬುಕ್ ಮಾಡಿ ಎಂದು ಬರೆದುಕೊಂಡಿದ್ದಾರೆ. "ಯಾರಿಗೆ ಬಾಡಿಗಾರ್ಡ್ ದೇಸಿ ಬೇಕು? ಈಗಲೆ ನೋಂದಾಯಿಸಿ. ನಾನು ನವೆಂಬರ್ 29ರ ವರೆಗು ಸಿಗುತ್ತೇನೆ. ಅನಂತರ ಕಮಾಂಡೋ-3 ರಿಲೀಸ್ ಆಗುತ್ತೆ. ಭಾವನಾ ರೆಡ್ಡಿ ಫುಲ್ ಬ್ಯುಸಿ ಇರುತ್ತಾಳೆ, ಇದು ಭಾರತದ ಮಾರ್ಷಲ್ ಆರ್ಟ್" ಎಂದು ಹೇಳಿದ್ದಾರೆ.

ಅದಾ ಶರ್ಮಾ ಸದ್ಯ ಕಮಾಂಡೋ-3 ಚಿತ್ರದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಜೊತೆಗೆ ಬೈ ಪಾಸ್ ರೋಡ್ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಅದಾ ಅಭಿನಯಿಸಿದ ಸಿನಿಮಾಗಳ ಸಂಖ್ಯೆ ಕಡಿಮೆ ಆದರು ಉತ್ತಮ ಪಾತ್ರಗಳನ್ನು ನಿಭಾಯಿಸಿಕೊಂಡು ಬಂದಿದ್ದಾರೆ. ಕನ್ನಡ ಸೇರಿದಂತೆ ತಮಿಳು, ತೆಲುಗು, ಹಿಂದಿ ಚಿತ್ರರಂಗದಲ್ಲಿ ಮಿಂಚಿದ್ದಾರೆ.

   
 
ಹೆಲ್ತ್