Back
Home » ಸಿನಿ ಸಮಾಚಾರ
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟಿಕ್ ಟಾಕ್ ಸ್ಟಾರ್ಸ್: ಧ್ರುವ ಶುಭಾಶಯ
Oneindia | 7th Nov, 2019 05:25 PM

ಟಿಕ್ ಟಾಕ್ ಸ್ಟಾರ್ಸ್ ಆಗಿ ಫೇಮಸ್ ಆದ ಜೋಡಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಲ್ಲು ರಘು ಹಾಗೂ ಸುಷ್ಮಿತಾ ಶೇಷಗಿರಿ ವಿವಾಹ ಆಗಿದ್ದಾರೆ.

ನಟ ಧ್ರುವ ಸರ್ಜಾ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ನವ ಜೋಡಿ ಶುಭಾಶಯ ತಿಳಿಸಿದ್ದಾರೆ. ಧ್ರುವ ಸರ್ಜಾ ಅಭಿಮಾನಿಯಾಗಿ ಅಲ್ಲು ರಘು ಗುರುತಿಸಿಕೊಂಡಿದ್ದರು. ಅಲ್ಲು ರಘು ಆಹ್ವಾನಕ್ಕೆ ಸ್ವೀಕರಿಸಿದ ಧ್ರುವ ಮದುವೆಗೆ ಹೋಗಿ ಬಂದರು.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡ ರಾಪರ್ ಅಲೋಕ್

ಧ್ರುವ ಸರ್ಜಾ ಆಗಮನ ಅಲ್ಲು ರಘು ಹಾಗೂ ಸುಷ್ಮಿತಾ ಶೇಷಗಿರಿ ಮುಖದಲ್ಲಿ ನಗು ಮೂಡಿಸಿತು. ಕುಟುಂಬದವರು ಕೂಡ ಖುಷಿಯಾದರು. ಅಂದಹಾಗೆ, ಮದುವೆ ವಿಡಿಯೋವನ್ನು ಧ್ರುವ ಸರ್ಜಾ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಗೆಳೆಯ ಗೆಳತಿಯರಾಗಿದ್ದ, ಅಲ್ಲು ರಘು ಹಾಗೂ ಸುಷ್ಮಿತಾ ಶೇಷಗಿರಿ ಡಬ್ ಸ್ಮಾಶ್ ಮಾಡಲು ಶುರು ಮಾಡಿದರು. ಆ ವಿಡಿಯೋಗಳು ವೈರಲ್ ಆಯ್ತು. ಫಾಲೋವರ್ಸ್ ಗಳ ಸಂಖ್ಯೆ ಜಾಸ್ತಿಯಾಯ್ತು. ಇದರಿಂದ ಈ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಪಡೆದರು.

ಧ್ರುವ ಸರ್ಜಾ ಮದುವೆ ಆಮಂತ್ರಣ ಪತ್ರಿಕೆಯ ವಿಶೇಷತೆ ಏನು ಗೊತ್ತಾ?

'ಒಂದೊಪ್ಪತ್ತು' ಎಂಬ ಕಿರುಚಿತ್ರದಲ್ಲಿ ಅಲ್ಲು ರಘು ನಟಿಸಿದ್ದಾರೆ. ಇದರ ನಂತರ 'ಆರ್ಯ ಶಿವ' ಎಂಬ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಈ ಸಿನಿಮಾ ಇನ್ನು ಬಿಡುಗಡೆ ಆಗಿಲ್ಲ. ಸುಷ್ಮಿತಾ ಶೇಷಗಿರಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಈಗಾಗಲೇ ನಟಿಸಿದ್ದಾರೆ.

   
 
ಹೆಲ್ತ್