Back
Home » ಸಿನಿ ಸಮಾಚಾರ
'ಜನುಮದ ಜೋಡಿ'ಗೂ 'ಆಯುಷ್ಮಾನ್ ಭವ'ಗೂ ಅನುಬಂಧ: ಇದೆಲ್ಲ ಕೃಷ್ಣನ ಲೀಲೆ
Oneindia | 7th Nov, 2019 06:13 PM

'ಆಯುಷ್ಮಾನ್ ಭವ' ಸಿನಿಮಾ ನವೆಂಬರ್ 1 ರಂದು ಬಿಡುಗಡೆ ಆಗಬೇಕಾಗಿತ್ತು. ಆದರೆ, ಕಾರಣಾಂತರಗಳಿಂದ ಸಿನಿಮಾದ ರಿಲೀಸ್ ಮುಂದಕ್ಕೆ ಹೋಗಿದೆ. ಸಿನಿಮಾ ನವೆಂಬರ್ 15 ರಂದು ಬಿಡುಗಡೆ ಆಗುತ್ತಿದೆ.

ನವೆಂಬರ್ 15 ಬಿಡುಗಡೆ ಆಗುತ್ತಿರುವ ಕಾರಣ ಒಂದು ವಿಶೇಷತೆಗೆ ಕಾರಣವಾಗಿದೆ. ಯಾಕೆಂದರೆ, ಅದೇ ದಿನ ಶಿವರಾಜ್ ಕುಮಾರ್ ಅವರ ಮತ್ತೊಂದು ಸಿನಿಮಾ 'ಜನುಮದ ಜೋಡಿ' ರಿಲೀಸ್ ಆಗಿತ್ತು. ಈ ಬ್ಲಾಕ್ ಬಾಸ್ಟರ್ ಸಿನಿಮಾ ಬಿಡುಗಡೆಯಾದ ದಿನವೇ 23 ವರ್ಷಗಳ ನಂತರ 'ಆಯುಷ್ಮಾನ್ ಭವ' ತೆರೆಗೆ ಬರುತ್ತಿದೆ.

'ಲಾಂಗ್' ಹಿಡಿಯುವ ಸಿನಿಮಾಗಳನ್ನು ಮಾಡುವುದು 'ರಾಂಗ್' ಎಂದ ಭಾಸ್ಕರ್ ರಾವ್

ಮತ್ತೊಂದು ಕಡೆ, 'ಜನುಮದ ಜೋಡಿ' ಸಿನಿಮಾದಲ್ಲಿ ಶಿವರಾಜ್ ಕುಮಾರ್ ಪಾತ್ರದ ಹೆಸರು ಕೃಷ್ಣ ಆಗಿತ್ತು. ಈ ಸಿನಿಮಾದಲ್ಲಿಯೂ ಅವರ ಹೆಸರು ಕೃಷ್ಣ. ಹೀಗಾಗಿ ಈ ಎರಡು ಸಿನಿಮಾಗಳ ನಡುವೆ ಜನುಮ ಜನುಮದ ಅನುಬಂಧ ಬೆಳೆದಿದೆ.

'ಆಯುಷ್ಮಾನ್ ಭವ' ಪಿ ವಾಸು ನಿರ್ದೇಶನದ ಸಿನಿಮಾ. ಮೊದಲ ಬಾರಿಗೆ ದ್ವಾರಕೀಶ್ ಬ್ಯಾನರ್ ನಲ್ಲಿ ಶಿವರಾಜ್ ಕುಮಾರ್ ಸಿನಿಮಾ ಮಾಡಿದ್ದಾರೆ. 'ಆಪ್ತಮಿತ್ರ' ನಂತರ ದ್ವಾರಕೀಶ್ ಹಾಗೂ ಪಿ ವಾಸು ಒಂದಾಗಿದ್ದಾರೆ.

'ಆಪ್ತಮಿತ್ರ' ಚಿತ್ರ ನೆನಪಿಸುವ 'ಆಯುಷ್ಮಾನ್ ಭವ' ಟ್ರೈಲರ್

ರಚಿತಾ ರಾಮ್ ಹಾಗೂ ನಿಧಿ ಸುಬ್ಬಯ್ಯ ಸಿನಿಮಾದ ನಾಯಕಿಯರು. 'ಆಯುಷ್ಮಾನ್ ಭವ' ಗುರುಕಿರಣ್ ಸಂಗೀತ ನಿರ್ದೇಶನದ ನೂರನೇ ಸಿನಿಮಾ.

   
 
ಹೆಲ್ತ್