Back
Home » ಸಿನಿ ಸಮಾಚಾರ
ರಶ್ಮಿಕಾ ಬೆಂಬಲಕ್ಕೆ ನಿಂತ '777 ಚಾರ್ಲಿ' ನಿರ್ದೇಶಕ ಕಿರಣ್ ರಾಜ್ ಮತ್ತು ಕವಿರಾಜ್
Oneindia | 7th Nov, 2019 06:07 PM
 • ರಶ್ಮಿಕಾ ಬೆಂಬಲಕ್ಕೆ '777ಚಾರ್ಲಿ' ನಿರ್ದೇಶಕ

  ರಕ್ಷಿತ್ ಶೆಟ್ಟಿ ಅಭಿನಯದ 777ಚಾರ್ಲಿ ಚಿತ್ರದ ನಿರ್ದೇಶಕ ಕಿರಣ್ ರಾಜ್, ಕೆಟ್ಟದಾಗಿ ಟ್ರೋಲ್ ಮಾಡಿದರವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. "ಕೆಲವು ಟ್ರೋಲ್ ಪೇಜ್ ಗಳು ಎಷ್ಟು ಕೀಳು ಮಟ್ಟಕ್ಕೆ ಇಳಿದಿದೆ ಅಂತ ಈ ಪೋಸ್ಟ್ ನೋಡಿದ್ರೆ ಗೊತ್ತಾಗುತ್ತೆ. ನಿಮ್ಮ ಅಭಿಪ್ರಾಯಗಳು ಏನೇ ಇದ್ರೂ ಅವರ ಸಿನಿಮಾಗಳಿಗೆ ಸೀಮಿತವಾಗಿರಲಿ. ಅದನ್ನು ಬಿಟ್ಟು ಅವರ ವೈಯುಕ್ತಿಕ ಜೀವನವನ್ನು ನಿಂದಿಸುವ, ಅಸಹ್ಯವಾಗಿ ಟ್ರೋಲ್ ಮಾಡೋ ಹಕ್ಕು ಯಾರಿಗು ಇಲ್ಲ. ಕನಿಷ್ಠ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ" ಎಂದು ಹೇಳಿದ್ದಾರೆ.

  ಕೈ ತಪ್ಪಿದ ರಶ್ಮಿಕಾ ಬಾಲಿವುಡ್ ಸಿನಿಮಾ: 'ಜೆರ್ಸಿ'ಗೆ ಬೇರೊಬ್ಬ ನಾಯಕಿ


 • ಸರಿಯಾದ ಕ್ರಮ ಕೈಗೊಳ್ಳಬೇಕು

  ಕೀಳುಮಟ್ಟದ ಟ್ರೋಲ್ ಮಾಡುವವರ ವಿರುದ್ಧ ಚಿತ್ರಸಾಹಿತಿ ಮತ್ತು ನಿರ್ದೇಶಕ ಕವಿರಾಜ್ ಕೂಡ ರೊಚ್ಚಿಗೆದಿದ್ದಾರೆ. "ಬರೀ ರಶ್ಮಿಕಾ ಅಲ್ಲ, ಟಿಕ್ ಟಾಕ್ ಮಾಡೋ ಹುಡುಗೀಯರು ಸೇರಿದಂತೆ ಯಾರನ್ನೇ ಆದರೂ ಕೀಳು ಅಭಿರುಚಿಯಿಂದ ಟ್ರೋಲ್ ಮಾಡುವ ಎಲ್ಲರ ಮೇಲು ಕ್ರಮ ಕೈಗೊಳ್ಳಬೇಕು" ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.


 • #saynotosocialmediaharassment

  #saynotosocialmediaharassment ಸೇ ನೋ ಟು ಸೋಷಿಯಲ್ ಮೀಡಿಯಾ ಹರಾಸ್ಮೆಂಟ್ ಎನ್ನುವ ಹ್ಯಾಶ್ ಮೂಲಕ ಈ ರೀತಿ ಟ್ರೋಲ್ ಮಾಡುವವರ ವಿರುದ್ಧ ರಶ್ಮಿಕಾ ಮಂದಣ್ಣ ಧ್ವನಿ ಎತ್ತಿದ್ದಾರೆ. ಚಿತ್ರರಂಗದ ನಟ, ನಟಿಯರ ಮೇಲೆ ಚಿಕ್ಕಪುಟ್ಟ ವಿಷಯಗಳಿಗೆ ಟ್ರೋಲ್ ಮಾಡುವುದನ್ನು ವಿರೋಧ ಮಾಡಿ ಎಂದು ಕೇಳಿದ್ದಾರೆ. ಜೊತೆಗೆ ಅನೇಕರು #SupportRashmikaMandanna ಹ್ಯಾಶ್ ಟ್ಯಾಗ್ ಬಳಸಿ ರಶ್ಮಿಕಾ ಬೆಂಬಲಕ್ಕೆ ನಿಂತಿದ್ದಾರೆ.

  ಅಲ್ಲು ಅರ್ಜುನ್ ಮತ್ತು ತಂಡಕ್ಕೆ ಕ್ಷಮೆ ಕೇಳಿದ ರಶ್ಮಿಕಾ ಮಂದಣ್ಣ


 • ರಶ್ಮಿಕಾ ಪ್ರತಿಕ್ರಿಯೆ

  ''ಕಲಾವಿದರಿಗೆ ಹೀಗೆ ಮಾಡುವುದರಿಂದ ನಿಮಗೆ ಏನು ಸಿಗುತ್ತದೆ ತಿಳಿಯುತ್ತಿಲ್ಲ. ನಮ್ಮನ್ನು ಸುಲಭವಾಗಿ ಟಾರ್ಗೆಟ್ ಮಾಡಬಹುದು ಅಂತಲೋ. ಸಾರ್ವಜನಿಕ ವ್ಯಕ್ತಿಯಾದ ಕಾರಣ ನೀವು ನಮ್ಮನ್ನು ನಿರ್ದಯವಾಗಿ ಟಾರ್ಗೆಟ್ ಮಾಡಬಹುದೇ. ಅನೇಕರು ಇಂತಹ ಕೆಟ್ಟ ಕಾಮೆಂಟ್ಸ್ ಗಳನ್ನು ನಿರ್ಲಕ್ಷಿಸಿ ಎಂದು ಹೇಳುತ್ತಿದ್ದೀರಿ. ನಾನು ಕೂಡ ಇಷ್ಟು ದಿನ ಅದನ್ನೇ ಮಾಡುತ್ತಾ ಬಂದಿದ್ದೇನೆ. ನಮ್ಮ ಕೆಲಸದ ಬಗ್ಗೆ ನಿಮಗೆ ಏನು ಹೇಳಬೇಕು ಅನಿಸುತ್ತದೆ ಹೇಳಿ. ನಿಮಗೆ ಅದನ್ನು ಹೇಳಲು ಹಕ್ಕಿದೆ. ಆದರೆ, ನಮ್ಮ ವೈಯಕ್ತಿಕ ಜೀವನ ಹಾಗೂ ಕುಟುಂಬದ ಬಗ್ಗೆ ಮಾತನಾಡಲು ಯಾರಿಗೂ ಅಧಿಕಾರ ಇಲ್ಲ. ಈ ರೀತಿ ಯಾವ ಕಲಾವಿದರಿಗೆ ಮಾಡಬಾರದು. ಯಾಕೆಂದರೆ, ಒಬ್ಬ ಕಲಾವಿದೆಯಾಗುವುದು ಅಷ್ಟು ಸುಲಭ ಅಲ್ಲ. ಪ್ರತಿ ವೃತ್ತಿಗೂ ಒಂದು ಗೌರವ ಇದೆ. ಎಂದು ಹೇಳಿದ್ದಾರೆ.
ರಶ್ಮಿಕಾ ಮಂದಣ್ಣ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಅತೀ ಹೆಚ್ಚು ಸುದ್ದಿಯಲ್ಲಿರುವ ನಟಿ ಅಂದರೆ ತಪ್ಪಾಗಲ್ಲ. ಹಾಗೆ ಅತೀ ಹೆಚ್ಚು ಟ್ರೋಲ್ ಗೆ ಗುರಿಯಾದ ನಟಿ ರಶ್ಮಿಕಾ. ಕಿರಿಕ್ ಸುಂದರಿ ಏನೆ ಮಾಡಿದರು ಟ್ರೋಲ್ ಗೆ ಗುರಿಯಾಗುತ್ತಾರೆ. ಇತ್ತೀಚಿಗಷ್ಟೆ ಪೊಗರು ಸಿನಿಮಾ ಟ್ರೈಲರ್ ರಿಲೀಸ್ ಆದ ಸಮಯದಲ್ಲಿ ಡೈಲಾಗ್ ವಿಚಾರಕ್ಕೆ ಅತಿ ಹೆಚ್ಚು ಟ್ರೋಲ್ ಆಗಿದ್ದರು. ಇನ್ನೇನು ತಣ್ಣಗಾಯಿತು ಎನ್ನುವಷ್ಟೊತ್ತಿಗೆ ರಶ್ಮಿಕಾ ಬಗ್ಗೆ ಮತ್ತೊಂದು ಟ್ರೋಲ್ ವೈರಲ್ ಆಗಿದೆ.

ರಶ್ಮಿಕಾ ಬಾಲ್ಯದ ಫೋಟೋಗೆ ಕೆಟ್ಟ ಪದ ಬಳಸಿ ಟ್ರೋಲ್: ಬೇಸರಗೊಂಡ ನಟಿ

ರಶ್ಮಿಕಾ ತನ್ನ ಬಾಲ್ಯದ ಮುದ್ದಾದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಕಿಡಿಗೇಡಿಗಳು ಈ ಫೋಟೋಗಳಿಗೆ ಕೆಟ್ಟ ಪದಗಳನ್ನು ಬಳಸಿ ತೀರ ಕೀಳುಮಟ್ಟದಲ್ಲಿ ಟ್ರೋಲ್ ಮಾಡಿದ್ದಾರೆ. ಇದೂವರೆಗೂ ರಶ್ಮಿಕಾ ಯಾವುದೆ ಟ್ರೋಲ್ ಗಳಿಗೂ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಈ ಬಾರಿ ಟ್ರೋಲಿಗರ ವಿರುದ್ಧ ಗರಂ ಆಗಿದ್ದಾರೆ. ಇದರ ಬೆನ್ನಲ್ಲೆ ಈಗ ನಿರ್ದೇಶಕ ಮತ್ತು ಸಾಹಿತಿ ಕವಿರಾಜ್ ಮತ್ತು ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಚಿತ್ರದ ನಿರ್ದೇಶಕ ಕಿರಣ್ ರಾಜ್, ರಶ್ಮಿಕಾ ಬೆಂಬಲಕ್ಕೆ ನಿಂತಿದ್ದಾರೆ.

   
 
ಹೆಲ್ತ್