ಹೌದು, ಸ್ಮಾರ್ಟ್ಫೋನ್ ಅನ್ಲಾಕ್ಗೆ ಇರುವ ಫಿಂಗರ್ಪ್ರಿಂಟ್ ಫೀಚರ್ ಅನ್ನು ಇನ್ಮುಂದೆ ವಾಟ್ಸ್ಆಪ್ ಆಪ್ ಅನ್ನು ಲಾಕ್ ಮಾಡಲು ಬಳಸಿಕೊಳ್ಳಬಹುದಾಗಿದೆ. ಇದರಿಂದ ಥರ್ಡ್ ಪಾರ್ಟಿ ಆಪ್ಗಳನ್ನು ಇನ್ಸ್ಟಾಲ್ ಮಾಡದೆಯೇ ವಾಟ್ಸ್ಆಪ್ ಸಂದೇಶಗಳನ್ನು ಬಳಕೆದಾರರು ಲಾಕ್ ಮಾಡಬಹುದು. ಇದರಿಂದ ನೀವು ಇತರರಿಗೆ ಮೊಬೈಲ್ ನೀಡಿದರೂ ಸಹ ಅವರು ನಿಮ್ಮ ವಾಟ್ಸ್ಆಪ್ ಖಾತೆಯನ್ನು ತೆರೆದು ಯಾವುದೇ ಸಂದೇಶಗಳನ್ನು ಓದಲು ಸಾಧ್ಯವಿಲ್ಲ. ಇನ್ನು ಮಕ್ಕಳ ಕೈಗೆ ಮೊಬೈಲ್ ಕೊಡುವವರಿಗೆ ಇಂತಹ ಸೌಲಭ್ಯದ ಅಗತ್ಯ ಬಹಳವೇ ಇತ್ತು.
ಹಾಗಾದರೆ ಲಾಕ್ ಸಕ್ರಿಯಗೊಳಿಸುವುದು ಹೇಗೆ? ಎಂಬುದು ನಿಮ್ಮ ಪಶ್ನೆಯಾಗಿದ್ದರೆ, ಮೊದಲಿಗೆ ಗೂಗಲ್ ಪ್ಲೇ ಸ್ಟೋರ್ಗೆ ಹೋಗಿ ವಾಟ್ಸ್ಆಪ್ ಅಪ್ಡೇಟ್ ಆಗಿದೆಯೇ ಪರಿಶೀಲಿಸಿ. ಆಗದೇ ಇದ್ದರೆ ಅಪ್ಡೇಟ್ ಮಾಡಿ. ಬಳಿಕ ನಿಮ್ಮ ವಾಟ್ಸ್ಆಪ್ ಅನ್ನು ತೆರೆದಿ ಈ ಕೆಳಗಿನ ಕ್ರಮ ಅನುಸರಿಸಿ. ವಾಟ್ಸ್ಆಪ್ ತೆರದಾಗ ನಿಮ್ಮ ಬಲತುದಿಗೆ ಕಾಣುವ ಮೂರು ಡಾಟ್ಗಳ ( ಮೆನು ಡಾಟ್) ಮೇಲೆ ಕ್ಲಿಕ್ ಮಾಡಿ. ನಂತರ Settings> Account> Privacy>Fingerprint lock ಮೇಲೆ ಕ್ಲಿಕ್ ಮಾಡಿದರೆ ಅಲ್ಲಿ ಮೂರು ಆಯ್ಕೆಗಳು ತೆರೆದುಕೊಳ್ಳುತ್ತವೆ.
Settings> Account> Privacy>Fingerprint lock ಮೇಲೆ ಕ್ಲಿಕ್ ಮಾಡಿದ ನಂತರ immediately, After 1 minute, After 30 minutes ಅದರಲ್ಲಿ ಸೂಕ್ತ ಎನ್ನಿಸುವುದನ್ನು ಬಳಸಬಹುದು. immediately ಎಂದು ಕ್ಲಿಕ್ ಮಾಡಿದರೆ ನೀವು ವಾಟ್ಸ್ಆಪ್ ಅನ್ನು ಕ್ಲೋಸ್ ಮಾಡಿದ ತಕ್ಷಣವೇ ಲಾಕ್ ಆಗುತ್ತದೆ. ಹಾಗೆಯೇ ಅದಕ್ಕೆ ಸಮಯವನ್ನು ನಿಗದಿ ಮಾಡಬಹುದು. ಇನ್ನು ಈಗಾಗಲೇ ಐಫೋನ್ನಲ್ಲಿ ಈ ಸೌಲಭ್ಯ ಇದೆ. ಐಫೋನಿನಲ್ಲಿ ಬಯೊಮೆಟ್ರಿಕ್ ಲಾಕ್ ಸಕ್ರಿಯಗೊಳಿಸಲು Settings > Account > Privacy > Screen Lockv ಕ್ಲಿಕ್ ಮಾಡಿ.
ಒಂದು ತಿಳಿಯುವ ವಿಷಯವಿದೆ. ನೀವು ಈ ಫಿಂಗರ್ಪ್ರಿಂಟ್ ಅನ್ಲಾಕ್ ಸೌಲಭ್ಯದಿಂದ ವಾಟ್ಸ್ಆಪ್ ಪೂರ್ಣ ಪ್ರಮಾಣದ ಸುರಕ್ಷತೆ ಸಿಗುತ್ತದೆ ಎಂದು ಕೇಳಿದರೆ ಹೌದು ಎನ್ನಲಾಗದು. ಏಕೆಂದರೆ, ನಮ್ಮದು ಎಂಡ್-ಟು-ಎಂಡ್ ಎನ್ಕ್ರಿಪ್ಷನ್ ಸುರಕ್ಷತೆ ಎಂದು ಬೀಗುತ್ತಿದ್ದ ವಾಟ್ಸ್ಆಪ್ಗೂ ಮಾಹಿತಿ ಚೋರರು ದಾಳಿ ನಡೆಸಿದ್ದಾರೆ. ಗೂಢಚರ್ಯೆ ತಂತ್ರಾಂಶ 'ಪೆಗಾಸಸ್' ವಾಟ್ಸ್ಆಪ್ ಅನ್ನು ಹ್ಯಾಕ್ ಮಾಡಲಾಗಿತ್ತು. ವಾಟ್ಸ್ಆಪ್ ವಿಡಿಯೋ ಕಾಲ್ ರಿಸೀವ್ ಮಾಡಿದರೆ ಅದರ ಸಹಾಯದಿಂದ ಈ ಪೆಗಾಸಸ್ ವಾಟ್ಸ್ಆಪ್ ಮೇಲೆ ದಾಳಿ ಮಾಡಿತ್ತು.
ವಿಶ್ವದಲ್ಲೇ ಅತ್ಯಂತ ಹೆಚ್ಚು ಬಳಕೆದಾರರನ್ನು ಹೊಂದಿರುವ ಜನಪ್ರಿಯ ಮೆಸೇಂಜಿಂಗ್ ಆಪ್ 'ವಾಟ್ಸ್ಆಪ್' ಇದೀಗ ಫಿಂಗರ್ಪ್ರಿಂಟ್ ಅನ್ಲಾಕ್ ಸೌಲಭ್ಯ ಕಲ್ಪಿಸಿರುವುದು ನಿಮಗೆಲ್ಲಾ ತಿಳಿದಿದೆ ಎನ್ನಬಹುದು. ಈ ಡಿಜಿಟಲ್ ಯುಗದಲ್ಲಿ ಜನರ ಖಾಸಗೀತನದ ರಕ್ಷಣೆ ಬಹಳ ಕಷ್ಟ ಎನ್ನುವುದು ಪದೇ ಪದೇ ಸಾಬೀತಾಗುತ್ತಲೇ ಇರುವುದರಿಂದ ಜನಪ್ರಿಯ ಮಾಧ್ಯಮ ವಾಟ್ಸ್ಆಪ್ನಲ್ಲಿ ತಡವಾಗಿಯಾದರೂ ಫಿಂಗರ್ಪ್ರಿಂಟ್ ಅನ್ಲಾಕ್ ಸೌಲಭ್ಯ ಕಲ್ಪಿಸಿಸಲಾಗಿದೆ. ಇದರಿಂದ ಥರ್ಡ್ ಪಾರ್ಟಿ ಆಪ್ಗಳಿಂದ ಎದುರಾಗುತ್ತಿದ್ದ ಸಮಸ್ಯೆಯೊಂದು ತಪ್ಪಿದೆ.