Back
Home » Bike News
ವಿತರಣೆಯಾಯ್ತು ಭಾರತದ ಮೊದಲ ಮೋಟೋ ಗುಜಿ ವಿ85 ಟಿಟಿ ಬೈಕ್‍
DriveSpark | 8th Nov, 2019 12:37 PM
 • ವಿತರಣೆಯಾಯ್ತು ಭಾರತದ ಮೊದಲ ಮೋಟೋ ಗುಜಿ ವಿ85 ಟಿಟಿ ಬೈಕ್‍

  ಬೆಂಗಳೂರಿನ ಅವಂತ್ ಗಾರ್ಡೆ ಮೋಟಾರ್ಸ್, ಬೈಕ್ ಅನ್ನು ಸೈನಿ ಅವರಿಗೆ ವಿತರಿಸಿದೆ. ಬೆಂಗಳೂರಿನಲ್ಲಿರುವ ಈ ಡೀಲರ್‍‍ಗಳು ವಿವಿಧ ಜನಪ್ರಿಯ ಕಂಪನಿಗಳ ಬೈಕುಗಳನ್ನು ಮತ್ತು ಸ್ಕೂಟರ್‍‍ಗಳನ್ನು ಮಾರಾಟ ಮಾಡುತ್ತದೆ. ಮೋಟೋ ಗುಜಿ ವಿ85ಟಿಟಿ ಬೈಕಿನ ಬೆಲೆಯು ಬೆಂಗಳೂರಿನ ಆನ್-ರೋಡ್ ದರದಂತೆ ರೂ.17.5 ಲಕ್ಷಗಳಾಗಿವೆ. ಈ ಬೈಕ್ ಯುವಜನತೆಯನ್ನು ಸೆಳೆಯುವ ರೀತಿಯಲ್ಲಿ ಆಕರ್ಷಕ ಲುಕ್ ಅನ್ನು ಹೊಂದಿದೆ.


 • ವಿತರಣೆಯಾಯ್ತು ಭಾರತದ ಮೊದಲ ಮೋಟೋ ಗುಜಿ ವಿ85 ಟಿಟಿ ಬೈಕ್‍

  ಈ ಅಡ್ವೆಂಚರ್ ಬೈಕ್ ಅನ್ನು ಸ್ಟೀಲ್ ಟ್ಯೂಬ್ಯುಲರ್ ಚಾಸಿಸ್ ಯುರೋ 4 , 853 ಸಿಸಿ ವಿ-ಟ್ವಿನ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 7,750 ಆರ್‍‍ಪಿಎಂನಲ್ಲಿ 79.1 ಬಿಹೆ‍ಚ್‍‍ಪಿ ಪವರ್ ಮತ್ತು 5,000 ಆರ್‍‍ಪಿಎಂನಲ್ಲಿ 80 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍‍ನೊಂದಿಗೆ ಸ್ಟ್ಯಾಂಡರ್ಡ್ 6 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.


 • ವಿತರಣೆಯಾಯ್ತು ಭಾರತದ ಮೊದಲ ಮೋಟೋ ಗುಜಿ ವಿ85 ಟಿಟಿ ಬೈಕ್‍

  ಈ ಎಂಜಿನ್‍‍ನಲ್ಲಿ ವಿ-ಟ್ವಿನ್ ಎಂಜಿನ್ ಅಳವಡಿಸಲಾಗಿದೆ. ಚೈನ್ ಅಥವಾ ಬೆಲ್ಟ್ ಡ್ರೈವ್‍‍ಗೆ ಬದಲಿಗೆ ಪವರ್ ಅನ್ನು ಶಾಪ್ಟ್ ಮೂಲಕ ಹಿಂದಿನ ಟಯರ್‍‍ಗಳಿಗೆ ಕಳುಹಿಸಲಾಗುತ್ತದೆ.


 • ವಿತರಣೆಯಾಯ್ತು ಭಾರತದ ಮೊದಲ ಮೋಟೋ ಗುಜಿ ವಿ85 ಟಿಟಿ ಬೈಕ್‍

  ಮೋಟೋ ಗುಜಿ ಬೈಕ್ ಲೋಗೊವನ್ನು ಹೋಲುವಂತೆ ಮಧ್ಯದಲ್ಲಿ ಎಲ್‍‍ಇಡಿ ಡಿಆ‍ರ್ಎಲ್‍ಗಳೊಂದಿಗೆ ರೆಟ್ರೊ-ಲುಕಿಂಗ್ ಹೆಡ್‍‍ಲ್ಯಾಂ‍ಪ್‍ಗಳನ್ನು ಹೊಂದಿದೆ. ಬೈಕಿನ ಇತರ ವೈಶಿಷ್ಟ್ಯಗಳೆಂದರೆ ಅಪ್-ಸ್ವಿಪ್ಟ್ ಎಕ್ಸಾಸ್ಟ್, ಎಲ್‍ಇಡಿ ಟೇಲ್ ಲ್ಯಾಂಪ್‍ ಮತ್ತು ಟರ್ನ್ ಇಂಡಿಕೇಟರ್, ದೊಡ್ಡ ಸ್ಪ್ಲಿಟ್ ಸೀಟ್, ರೆಟ್ರೋ ಲುಕಿಂಗ್ ಟ್ಯಾಂಕ್, ಗ್ರ್ಯಾಬ್ ರೈಲ್, ಹ್ಯಾಂಡ್ ಗಾರ್ಡ್ ಮತ್ತು ಎಕ್ಸ್ ಟೆಂಡೆಡ್ ಮಿರರ್ ಅನ್ನು ಹೊಂದಿದೆ.


 • ವಿತರಣೆಯಾಯ್ತು ಭಾರತದ ಮೊದಲ ಮೋಟೋ ಗುಜಿ ವಿ85 ಟಿಟಿ ಬೈಕ್‍

  ಈ ಬೈಕಿನಲ್ಲಿ ಇನ್ಸ್ ಟ್ರೂಮೆಂಟ್ ಕನ್ಸೋಲ್‍‍ಗಾಗಿ 4.3 ಇಂಚಿನ ಟಿಎ‍ಫ್‍ಟಿ ಡಿಸ್‍‍ಪ್ಲೇಯನ್ನು ನೀಡಲಾಗಿದೆ. ಇನ್ಸ್ ಟ್ರೂಮೆಂಟ್ ಡಿಸ್‍ಪ್ಲೇಯನ್ನು ಸಕ್ರಿಯಗೊಳಿಸಲು ಖರೀದಿದಾರರು ಬೈಕಿನ ಬಿಡಿಭಾಗಗಳ ಪಟ್ಟಿಯಲ್ಲಿ ಇಸಿಯುವನ್ನು ಸೇರಿಸಬಹುದು. ಮೋಟೊ ಗುಜಿ ಎಂಐಎ ಮಲ್ಟಿಮೀಡಿಯಾ ಪ್ಲಾಟ್‍‍ಫಾರ್ಮ್ ಮೂಲಕ ಮ್ಯೂಸಿಕ್ ಕಂಟ್ರೂಲ್, ಕರೆಗಳನ್ನು ಸ್ವೀಕರಿಸಲು, ನ್ಯಾವಿಗೇಷನ್ ಮತ್ತು ಹೆಚ್ಚಿನ ವೈಶಿಷ್ಟ್ಯಗಳನ್ನು ನಿಯಂತ್ರಿಸಬಹುದು.


 • ವಿತರಣೆಯಾಯ್ತು ಭಾರತದ ಮೊದಲ ಮೋಟೋ ಗುಜಿ ವಿ85 ಟಿಟಿ ಬೈಕ್‍

  ಅಡ್ವೆಂಚರ್ ಬೈಕ್ ಸಸ್ಪೆಂಕ್ಷನ್ ಅನ್ನು ಹೊಂದಿದ್ದು, ಮುಂಭಾಗದಲ್ಲಿ 41 ಎಂಎಂ ಅಪ್‍ಸೈಡ್-ಡೌನ್ ಫೋರ್ಕ್‍ ಹಾಗೂ ಹಿಂಭಾಗದಲ್ಲಿ ಮೊನೊಶಾಕ್ ಅನ್ನು ಅಳವಡಿಸಲಾಗಿದೆ. ಗುಜಿ ವಿ85ಟಿಟಿ ಬೈಕ್ ಬ್ರೇಕಿಂಗ್‍‍ಗಾಗಿ ಮುಂಭಾಗದಲ್ಲಿ ಡ್ಯುಯಲ್-ಫ್ಲೋಟಿಂಗ್ 320 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 260 ಎಂಎಂ ಸಿಂಗಲ್ ರೋಟರ್ ಅನ್ನು ಹೊಂದಿದೆ. ಬೈಕು ಹಿಂಭಾಗದಲ್ಲಿ 17 ಇಂಚಿನ ಸ್ಪೋಕ್ ಟಯರ್‍ ಮತ್ತು ಮುಂಭಾಗದಲ್ಲಿ 19 ಇಂಚಿನ ಟಯರ್ ಅನ್ನು ಹೊಂದಿದೆ.

  MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!


 • ವಿತರಣೆಯಾಯ್ತು ಭಾರತದ ಮೊದಲ ಮೋಟೋ ಗುಜಿ ವಿ85 ಟಿಟಿ ಬೈಕ್‍

  ಈ ಬೈಕು ಡಿ ಟ್ರಾಜಿಯೋನ್ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ ಅನ್ನು ಹೊಂದಿದೆ. ಈ ಸಿಸ್ಟಂ ಮೂರು ರೈಡಿಂಗ್ ಮೋಡ್ ಅನ್ನು ನೀಡುತ್ತದೆ. ಅವುಗಳು ಸ್ಟ್ರೀಟ್, ರೈನ್, ಆಫ್-ರೋಡ್ ಎಂಬ ಮೋಡ್‍ಗಳು ವಿಭಿನ್ನ ಟ್ರಾಕ್ಷನ್ ಕಂಟ್ರೋಲ್ ಅನ್ನು ಹೊಂದಿದೆ. ಈ ಬೈಕಿನಲ್ಲಿ ಡ್ಯುಯಲ್ ಚಾನೆಲ್ ಎಬಿಎಸ್ ಮತ್ತು ಕ್ರೂಸ್ ಕಂಟೋಲ್ ಸಿಸ್ಟಂ ಅನ್ನು ಹೊಂದಿದೆ.

  MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!


 • ವಿತರಣೆಯಾಯ್ತು ಭಾರತದ ಮೊದಲ ಮೋಟೋ ಗುಜಿ ವಿ85 ಟಿಟಿ ಬೈಕ್‍

  ಅವಂತ್ ಗಾರ್ಡೆ ಮೋಟಾರ್ಸ್ ಬೆಂಗಳೂರಿನಲ್ಲಿರುವ ಶೋರೂಂನಲ್ಲಿ, ದೇಶದಲ್ಲಿ ಲಭ್ಯವಿರುವ ಹಲವಾರು ಬ್ರ್ಯಾಂಡ್‍ಗಳ ಬೈಕ್‍‍ಗಳನ್ನು ವಿತರಿಸುತ್ತದೆ. ಇದರಲ್ಲಿ ಮೋಟೊ ಗುಜಿ, ವೆಸ್ಪಾ, ಏಪ್ರಿಲಿಯಾ, ನಾರ್ಟನ್, ಎಫ್.ಬಿ ಮೊಂಡಿಯಲ್, ಎಂ.ವಿ ಅಗುಸ್ಟಾ, ಹ್ಯೊಸಂಗ್ ಮತ್ತು ಎಸ್‍‍ಡಬ್ಲೂ‍ಎಂ ಬ್ರ್ಯಾಂಡ್‍‍ಗಳು ಸೇರಿವೆ.

  MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!


 • ವಿತರಣೆಯಾಯ್ತು ಭಾರತದ ಮೊದಲ ಮೋಟೋ ಗುಜಿ ವಿ85 ಟಿಟಿ ಬೈಕ್‍

  ಗುಜಿ ವಿ85ಟಿಟಿ ಬೈಕ್ ಬೆಲೆಯು ತುಸು ದುಬಾರಿಯಾಗಿದೆ. ಕಂಪನಿಯು ತಯಾರಿಸಿದ ಎಲ್ಲಾ ಯುನಿಟ್‍ಗಳನ್ನು ಭಾರತಕ್ಕೆ ತರಲಾಗಿದೆ. ಇದರಿಂದ ಬೈಕು ಮತ್ತಷ್ಟು ದುಬಾರಿಯಾಗುತ್ತದೆ. ಇದರಲ್ಲಿ ಕಸ್ಟಮ್ಸ್ ಪ್ರೀಮಿಯಂ ಕೂಡ ಸೇರಿದೆ. ಕಡಿಮೆ ಬೆಲೆಗೆ ಹೆಚ್ಚಿನ ಪವರ್ ಅನ್ನು ನೀಡುವ ಬೈಕ್‍‍ಗಳು ಭಾರತದಲ್ಲಿ ಸಾಕಷ್ಟಿವೆ. ಅದರ ನಡುವೆ ಈ ಬೈಕ್ ಮಾರುಕಟ್ಟೆಯಲ್ಲಿ ಯಾವ ರೀತಿ ಗ್ರಾಹಕರನ್ನು ಸೆಳೆಯುತ್ತದೆ ಎಂಬುದನ್ನು ಕಾದು ನೋಡಬೇಕು.
ಇಟಾಲಿಯನ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಮೋಟೋ ಗುಜಿ ತನ್ನ ಮೊದಲ ವಿ85 ಟಿಟಿ ಅಡ್ವೆಂಚರ್ ಬೈಕ್ ಅನ್ನು ಭಾರತದಲ್ಲಿ ವಿತರಿಸಿದೆ. ದೇಶದಲ್ಲಿ ಮೊದಲ ಬಾರಿಗೆ ವಿತರಿಸಿದ ಬೈಕಿನ ಕೀಗಳನ್ನು ನವೆಂಬರ್ 6ರಂದು ಬೆಂಗಳೂರಿನ ಅತುಲ್ ಸೈನಿ ಅವರಿಗೆ ಹಸ್ತಾಂತರಿಸಲಾಯಿತು.

   
 
ಹೆಲ್ತ್