Back
Home » ಬಾಲಿವುಡ್
ದೀಪಿಕಾ ಪಡುಕೋಣೆ ಈ ಬ್ಯಾಗ್‌ನ ಬೆಲೆಗೆ 30 ಗ್ರಾಂ ಚಿನ್ನ ಕೊಂಡುಕೊಳ್ಳಬಹುದು
Oneindia | 8th Nov, 2019 02:20 PM

ಬಾಲಿವುಡ್ ಡಿಂಪಲ್ ಕ್ವೀನ್ ದೀಪಿಕಾ ಪಡುಕೋಣೆ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ದೀಪಿಕಾ ಅಭಿನಯದ ಸಿನಿಮಾಗಳು ರಿಲೀಸ್ ಆಗದೆ ಸುಮಾರು ಒಂದು ವರ್ಷದ ಮೇಲಾಗಿದೆ. ಆದರೆ ದೀಪಿಕಾ ಹೆಸರು ಮಾತ್ರ ಸದಾ ಸುದ್ದಿಯಲ್ಲಿರುತ್ತದೆ. ದೀಪಿಕಾ ಈಗ ಮತ್ತೆ ಸುದ್ದಿಯಾಗಿರುವುದು ಬ್ಯಾಗ್ ನ ವಿಚಾರಕ್ಕೆ. ಬ್ಯಾಗ್ ನ ವಿಚಾರನಾ ಅಂತ ಅಚ್ಚರಿ ಆಗಬಹುದು.

ಆದರೆ ದೀಪಿಕಾ ಕೈಯಲ್ಲಿ ಹಿಡಿದುಕೊಂಡಿರುವ ಬ್ಯಾಗ್ ನ ಬೆಲೆ ಕೇಳಿದರೆ ನಿಜಕ್ಕು ಅಚ್ಚರಿ ಆಗುತ್ತೆ. ಸ್ಟೈಲ್ ಐಕಾನ್ ದೀಪಿಕಾ ಇತ್ತೀಚಿಗೆ ಮುಂಬೈ ಏರ್ ಪೋರ್ಟ್ ನಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದಾರೆ. ದೀಪಿಕಾ ಜೊತೆ ಇದ್ದ ಮ್ಯಾನೇಜರ್ ಲೂಯಿಸ್ ವಿಟ್ಟನ್ ಬ್ಯಾಗ್ ಹಿಡಿದುಕೊಂಡಿದ್ದರು. ಈ ಬ್ಯಾಕ್ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಈ ಬ್ಯಾಗ್ ನ ಬೆಲೆ ಬರೋಬ್ಬರಿ 1,22,860 ರೂಪಾಯಿ.

ಗುಡ್ ನ್ಯೂಸ್ ಕೊಡ್ತಿದ್ದಾರಾ ದೀಪಿಕಾ ಪಡುಕೋಣೆ.? ಸುರಿಯುತ್ತಿದೆ ಪ್ರಶ್ನೆಗಳ ಸುರಿಮಳೆ.!

ಇಷ್ಟು ದೊಡ್ಡ ಮೊತ್ತದ ಹಣ ಅದೆಷ್ಟೊ ಕುಟುಂಬದ ವಾರ್ಷಿಕ ಆದಾಯ ಆಗಿದೆ. ಆದರೆ ದೀಪಿಕಾ ಪಾಲಿಗೆ ಇದೊಂದು ಬ್ಯಾಗ್ ಅಷ್ಟೆ. ಸ್ಟೈಲೀಶ್ ಲುಕ್ ಮತ್ತು ವಿಭಿನ್ನ ಪರಿಕರಗಳ ಮೂಲಕವೆ ದೀಪಿಕಾ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. ದೀಪಿಕಾ ಸದ್ಯ 'ಚಪಾಕ್' ಮತ್ತು '83' ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ.

'83' ಚಿತ್ರದಲ್ಲಿ ದೀಪಿಕಾ ಪತ್ನಿ ರಣ್ವೀರ್ ಸಿಂಗ್ ಜೊತೆ ಕಾಣಿಸಿಕೊಂಡಿದ್ದಾರೆ. ಇನ್ನು 'ಮಹಾಭಾರತ' ಚಿತ್ರದ ದ್ರೌಪದಿ ಪಾತ್ರಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ ದೀಪಿಕಾ. ಇದರ ಜೊತೆಗೆ ತೆಲುಗಿನ 'ಅರುಧಂತಿ' ಚಿತ್ರದ ಹಿಂದಿ ರಿಮೇಕ್ ನಲ್ಲಿಯು ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಪದ್ಮಾಪತ್ ಚಿತ್ರದ ನಂತರ ದೀಪಿಕಾ ಅಭಿಮಾನಿಗಳ ಮುಂದೆ ಬಂದಿಲ್ಲ. ಆದರೆ ದೀಪಿಕಾ ಬಳಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಚಪಾಕ್ ಮತ್ತು 83 ಸಿನಿಮಾ ಮುಂದಿನ ವರ್ಷ ತೆರೆಗೆ ಬರುವ ಸಾಧ್ಯತೆ ಇದೆ.

   
 
ಹೆಲ್ತ್