Back
Home » ಇತ್ತೀಚಿನ
ಫ್ಲಿಪ್‌ಕಾರ್ಟ್‌ ಸಹಭಾಗಿತ್ವದಲ್ಲಿ ನೋಕಿಯಾ ಹೊಸ ಉತ್ಪನ್ನ..! ಟಿವಿ ಮಾರುಕಟ್ಟೆಯಲ್ಲಿ ನಡುಕ..!
Gizbot | 8th Nov, 2019 03:01 PM
 • ಜೆಬಿಎಲ್‌ ಆಡಿಯೋ

  ನೋಕಿಯಾ ಬ್ರಾಂಡ್‌ನ ಮೊದಲ ಟಿವಿಯು ಧ್ವನಿ ಫೀಚರ್‌ ವಿಶ್ವದ ಪ್ರಮುಖ ಆಡಿಯೋ ಬ್ರಾಂಡ್ ಜೆಬಿಎಲ್‌ನೊಂದಿಗೆ ಬರುತ್ತಿದೆ. ಇದು ಫ್ಲಿಪ್‌ಕಾರ್ಟ್‌ ಗ್ರಾಹಕ ಒಳನೋಟಗಳನ್ನು ಬೆಂಬಲಿಸುತ್ತಿದ್ದು, ಟೆಲಿವಿಷನ್‌ಗಳನ್ನು ಖರೀದಿಸುವ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಧ್ವನಿಯನ್ನು ಅನುಭವಿಸುವ ಅವಕಾಶ ನೀಡುತ್ತದೆ.


 • ನೋಕಿಯಾಗೆ ಭಾರತವೇ ಬೆಸ್ಟ್

  ದೇಶದ ಪ್ರಮುಖ ಇ-ಕಾಮರ್ಸ್ ಕಂಪನಿಯಾದ ಫ್ಲಿಪ್‌ಕಾರ್ಟ್ ಮೊಟ್ಟಮೊದಲ ಬಾರಿಗೆ ನೋಕಿಯಾ ಬ್ರಾಂಡ್ ಸ್ಮಾರ್ಟ್ ಟಿವಿಗಳನ್ನು ಭಾರತಕ್ಕೆ ತರುತ್ತಿರುವುದು ಖುಷಿ ತಂದಿದೆ. ಹೊಸ ವಿಭಾಗದಲ್ಲಿ ನೋಕಿಯಾ ಬ್ರ್ಯಾಂಡ್‌ನ ಅತ್ಯಾಕರ್ಷಕ ಹೊಸ ಅಧ್ಯಾಯದ ಆರಂಭವನ್ನು ಇದು ಸೂಚಿಸುತ್ತದೆ. ಸ್ಮಾರ್ಟ್‌ ಟಿವಿ ಬಿಡುಗಡೆಗೆ ಗುಣಮಟ್ಟ, ವಿನ್ಯಾಸ ಮತ್ತು ವಿಶ್ವಾಸಾರ್ಹತೆಗಾಗಿ ನಮ್ಮ ಬ್ರ್ಯಾಂಡ್ ನಂಬಿರುವ ಭಾರತಕ್ಕಿಂತ ಮತ್ತೊಂದು ಜಾಗವಿಲ್ಲ, ಭಾರತೀಯ ಗ್ರಾಹಕರ ಅಗತ್ಯತೆಗಳು ಮತ್ತು ನಡವಳಿಕೆಗಳ ಬಗ್ಗೆ ಫ್ಲಿಪ್‌ಕಾರ್ಟ್‌ ಹೊಂದಿರುವ ತಿಳುವಳಿಕೆ ಮತ್ತು ಅದರ ಕಾರ್ಯ ವ್ಯಾಪ್ತಿಯು ನೋಕಿಯಾ ಬ್ರಾಂಡ್ ಸ್ಮಾರ್ಟ್ ಟಿವಿಗಳು ಮಾರುಕಟ್ಟೆಯನ್ನು ಪ್ರವೇಶಿಸಲು ಮತ್ತು ಗ್ರಾಹಕರ ಕೈಗೆಟುಕಲು ಸಹಾಯ ಮಾಡುತ್ತದೆ ಎಂದು ನೋಕಿಯಾ ಬ್ರಾಂಡ್ ಪಾಲುದಾರಿಕೆಯ ಉಪಾಧ್ಯಕ್ಷ ವಿಪುಲ್ ಮೆಹ್ರೋತ್ರಾ ಹೇಳಿದ್ದಾರೆ.


 • ಪಾಲುದಾರಿಕೆಯ ಖುಷಿ

  ಭಾರತೀಯ ಗ್ರಾಹಕರಿಗೆ ಉತ್ತಮ ಗುಣಮಟ್ಟದ, ತಾಂತ್ರಿಕವಾಗಿ ಸುಧಾರಿತ ಉತ್ಪನ್ನಗಳ ಆಯ್ಕೆಯನ್ನು ಇನ್ನಷ್ಟು ವಿಸ್ತರಿಸಲು ನೋಕಿಯಾದೊಂದಿಗಿನ ಕಾರ್ಯಚಟುವಟಿಕೆ ಅವಕಾಶ ನೀಡುತ್ತದೆ. ಜಾಗತಿಕವಾಗಿ ನೋಕಿಯಾ ಜನಪ್ರಿಯ ತಂತ್ರಜ್ಞಾನ ಬ್ರಾಂಡ್ ಆಗಿದ್ದು, ಅಪಾರ ಬ್ರಾಂಡ್ ರಿಕಾಲ್‌ ಹೊಂದಿದೆ, ಆದ್ದರಿಂದ ನೋಕಿಯಾವನ್ನು ವೇಗವಾಗಿ ಬೆಳೆಯುತ್ತಿರುವ ಉತ್ಪನ್ನ ವಿಭಾಗಕ್ಕೆ ವಿಸ್ತರಿಸಲು ಈ ಪ್ರಯಾಣ ಆರಂಭಿಸಲು ನಾವು ಉತ್ಸುಕರಾಗಿದ್ದೇವೆ. ಮುಂದಿನ 200 ಮಿಲಿಯನ್ ಗ್ರಾಹಕರನ್ನು ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಸ್ವಾಗತಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದು, ಉತ್ತಮ ಬ್ರಾಂಡ್‌ ಮತ್ತು ತಂತ್ರಜ್ಞಾನವನ್ನು ಒಟ್ಟಿಗೆ ತರಲು ನಾವು ಯಾವಾಗಲೂ ಬದ್ಧರಾಗಿದ್ದೇವೆ ಎಂದು ಫ್ಲಿಪ್‌ಕಾರ್ಟ್‌ನ ಹಿರಿಯ ಉಪಾಧ್ಯಕ್ಷ ಮತ್ತು ಖಾಸಗಿ ಬ್ರಾಂಡ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಪೀಠೋಪಕರಣಗಳ ಮುಖ್ಯಸ್ಥ ಆದರ್ಶ್ ಮೆನನ್ ಹೇಳಿದ್ದಾರೆ.


 • ಟಿವಿಯಲ್ಲಿ ಹರ್ಮನ್‌ ಧ್ವನಿ

  ಫ್ಲಿಪ್‌ಕಾರ್ಟ್‌ನೊಂದಿಗಿನ ಸಹಭಾಗಿತ್ವದ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ, ಇದು ನೋಕಿಯಾ ಸ್ಮಾರ್ಟ್ ಟಿವಿಗೆ ಉತ್ತಮ ಬಲ ನೀಡುತ್ತದೆ. ಗ್ರಾಹಕರು ಆಡಿಯೋವನ್ನು ಅನುಭವಿಸುವ ವಿಧಾನದ ಮೇಲೆ ಪರಿಣಾಮ ಬೀರಲು ಹರ್ಮನ್‌ ಕಂಪನಿ ಸಮರ್ಪಿತರಾಗಿದ್ದೇವೆ ಎಂಬುದಕ್ಕೆ ಇದು ಉತ್ತಮ ಉದಾಹರಣೆಯಾಗಿದೆ. ಜೆಬಿಎಲ್‌ನ ಅಪ್ರತಿಮ ಧ್ವನಿಯನ್ನು ಲಕ್ಷಾಂತರ ಭಾರತೀಯರು ಆರಾಧಿಸುತ್ತಾರೆ. ಈಗ ದೇಶದಲ್ಲಿ ಮೊದಲ ಬಾರಿಗೆ ಟಿವಿಯಲ್ಲಿ ಜೆಬಿಎಲ್‌ನ ಆಕರ್ಷಣೀಯ ಗುಣವನ್ನು ತರಲು ನಾವು ರೋಮಾಂಚನಗೊಂಡಿದ್ದೇವೆ ಎಂದು

  ಹರ್ಮನ್ ಇಂಡಿಯಾದ ರಾಷ್ಟ್ರೀಯ ಮ್ಯಾನೇಜರ್ ಪ್ರದೀಪ್ ಚೌಧರಿ ಹೇಳಿದ್ದಾರೆ.

  ಗ್ರಾಹಕರಿಗೆ ಅದ್ಭುತ ಫೀಚರ್ಸ್‌

  ಪ್ರಪಂಚದಾದ್ಯಂತ ಯಶಸ್ವಿ ಸಹಯೋಗವನ್ನು ಹೊಂದಿರುವ ನಮ್ಮ ಪಥದಲ್ಲಿ ಗ್ರಾಹಕರು ಧ್ವನಿಯೊಂದಿಗೆ ಟಿವಿಯನ್ನು ಆನಂದಿಸಲು ಸಾಧ್ಯವಾಗುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ, ಅದು, ನಿಜವಾಗಿಯೂ ಗ್ರಾಹಕರನ್ನು ತಲ್ಲೀನಗೊಳಿಸುತ್ತದೆ. ಅದು ಜೆಬಿಎಲ್ ಧ್ವನಿ ಭರವಸೆಯಾಗಿದೆ, ಮತ್ತು ಟಿವಿ ಮಾರುಕಟ್ಟೆಯಲ್ಲಿ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನೋಡಲು ನಾವು ಎದುರು ನೋಡುತ್ತಿದ್ದೇವೆ ಎಂದು ಪ್ರದೀಪ್‌ ಚೌಧರಿ ಹೇಳಿದ್ದಾರೆ.
ಪ್ರಮುಖ ಇ-ಕಾಮರ್ಸ್ ವೇದಿಕೆ ಫ್ಲಿಫ್‌ಕಾರ್ಟ್ ನೋಕಿಯಾ ಜೊತೆಗೂಡಿ ನೋಕಿಯಾ ಬ್ರಾಂಡ್ ಸ್ಮಾರ್ಟ್ ಟಿವಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡುತ್ತಿದೆ. ಇದರೊಂದಿಗೆ ಭಾರತೀಯ ಟಿವಿ ಮಾರುಕಟ್ಟೆಗೆ ನೋಕಿಯಾ ಭರ್ಜರಿಯಾಗಿ ಪ್ರವೇಶಿಸುತ್ತಿದೆ. ಪಾಲುದಾರಿಕೆಯಡಿಯಲ್ಲಿ, ಇ-ಟೈಲರ್ ನೋಕಿಯಾ-ಬ್ರಾಂಡ್ ಟಿವಿಯ ಉತ್ಪಾದನೆ ಮತ್ತು ಎಂಡ್‌ ಟು ಎಂಡ್‌ ಮಾರಾಟಕ್ಕೆ ಅನುಕೂಲ ಮಾಡಿಕೊಡಲಿದೆ. ಈ ಸಹಭಾಗಿತ್ವದಿಂದ ದೇಶಾದ್ಯಂತ ಸಾವಿರಾರು ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತವೆ.

 
ಹೆಲ್ತ್