Back
Home » Bike News
ಆಕರ್ಷಕ ಬೆಲೆಯಲ್ಲಿ ಒಕಿನಾವ ಲೈಟ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ
DriveSpark | 9th Nov, 2019 10:08 AM
 • ಆಕರ್ಷಕ ಬೆಲೆಯಲ್ಲಿ ಒಕಿನಾವ ಲೈಟ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

  ಒಕಿನಾವ ಸಂಸ್ಥೆಯು ಬಿಡುಗಡೆ ಮಾಡಲಿರುವ ಲೈಟ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿರುವ ರಿಡ್ಜ್ ಪ್ಲಸ್ ಮತ್ತು ರಿಡ್ಜ್ ಸ್ಕೂಟರ್‌ಗಳ ಮಧ್ಯಮ ಸ್ಥಾನವನ್ನು ಪಡೆದಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.59,990 ಬೆಲೆ ಪಡೆದುಕೊಂಡಿದೆ. ನಗರಪ್ರದೇಶದಲ್ಲಿನ ಓಡಾಟಕ್ಕೆ ಇದೊಂದು ಅತ್ಯತ್ತಮ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯಾಗಿದ್ದು, ಅತಿ ಕಡಿಮೆ ಬೆಲೆಯಲ್ಲಿ ಹಲವು ಹೊಸ ಪ್ರೀಮಿಯಂ ಫೀಚರ್ಸ್‌ಗಳನ್ನು ನೀಡಲಾಗಿದೆ.


 • ಆಕರ್ಷಕ ಬೆಲೆಯಲ್ಲಿ ಒಕಿನಾವ ಲೈಟ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

  ಲೈಟ್ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್ಸ್, ಎಲ್ಇಡಿ ಟೈಲ್‌ಲೈಟ್ಸ್, ಎಲ್ಇಡಿ ಸ್ಪೀಡೋಮೀಟರ್, ಸ್ಟಾಪ್/ಸ್ಟಾರ್ಟ್ ಪುಶ್ ಬಟನ್, ಆಟೋಮ್ಯಾಟಿಕ್ ಎಲೆಕ್ಟ್ರಾನಿಕ್ ಹ್ಯಾಂಡಲ್ ಮತ್ತು ವಿಸ್ತರಿತ ಹಿಂಬದಿ ಸವಾರರ ಆಸನ ಸೌಲಭ್ಯವು ಹೊಸ ಸ್ಕೂಟರ್‌ಗೆ ಮತ್ತಷ್ಟು ಮೆರಗು ನೀಡಿವೆ.


 • ಆಕರ್ಷಕ ಬೆಲೆಯಲ್ಲಿ ಒಕಿನಾವ ಲೈಟ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

  ಬ್ಯಾಟರಿ ವೈಶಿಷ್ಟ್ಯತೆ ಮತ್ತು ಮೈಲೇಜ್
  ಲೈಟ್ ಸ್ಕೂಟರ್‌ನಲ್ಲಿ ಒಕಿನಾವ ಸಂಸ್ಥೆಯು 1.25kWh ಲಿಥೀಯಂ ಅಯಾನ್ ಬ್ಯಾಟರಿಯೊಂದಿಗೆ 250W ಬಿಎಲ್‌ಡಿಸಿ ಎಲೆಕ್ಟ್ರಿಕ್ ಮೋಟಾರ್ ಬಳಕೆ ಮಾಡಿದ್ದು, ಹೊಸ ಸ್ಕೂಟರ್ ಪ್ರತಿ ಚಾರ್ಜ್‌ಗೆ 50 ಕಿ.ಮೀ ನಿಂದ ಗರಿಷ್ಠ 60 ಕಿ.ಮೀ ನಷ್ಟು ಮೈಲೇಜ್ ಹಿಂದಿರುಗಿಸಲಿದೆ.


 • ಆಕರ್ಷಕ ಬೆಲೆಯಲ್ಲಿ ಒಕಿನಾವ ಲೈಟ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

  ನಗರಪ್ರದೇಶದಲ್ಲಿ ಓಡಾಟಕ್ಕಾಗಿಯೇ ವಿಶೇಷವಾಗಿ ಸಿದ್ದಗೊಂಡಿರುವ ಲೈಟ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಪ್ರತಿ ಗಂಟೆಗೆ ಕೇವಲ 25 ಕಿ.ಮೀ ಗರಿಷ್ಠ ವೇಗದ ಮಿತಿ ಹೊಂದಿದ್ದು, ಇದರೊಂದಿಗೆ ಪೂರ್ಣ ಪ್ರಮಾಣದ ಬ್ಯಾಟರಿ ಚಾರ್ಜಿಂಗ್‌ಗಾಗಿ ಗರಿಷ್ಠ 5 ಗಂಟೆಗಳ ಕಾಲ ಸಮಯಾವಕಾಶ ತೆಗೆದುಕೊಳ್ಳಲಿದೆ. ಇದರೊಂದಿಗೆ ಬ್ಯಾಟರಿ ಮೇಲೆ ಒಕಿನಾವ ಸಂಸ್ಥೆಯು ಬರೋಬ್ಬರಿ 3 ವರ್ಷಗಳ ವಾರಂಟಿ ಘೋಷಣೆ ಮಾಡಿದ್ದು, ಹೊಸ ಸ್ಕೂಟರ್‌ನಲ್ಲಿ ತೆಗೆದುಹಾಕಬಹುದಾದ ಡೆಟಾಚೆಬಲ್ ಬ್ಯಾಟರಿ ಜೋಡಣೆ ಮಾಡಲಾಗಿದೆ.


 • ಆಕರ್ಷಕ ಬೆಲೆಯಲ್ಲಿ ಒಕಿನಾವ ಲೈಟ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

  ಹೊಸ ಸ್ಕೂಟರ್‌ನಲ್ಲಿ ಪ್ರೀಮಿಯಂ ಫೀಚರ್ಸ್‌ಗಳು ಮಾತ್ರವಲ್ಲದೇ ಸವಾರರ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ರೀಜನರೇಟಿವ್ ಬ್ರೇಕಿಂಗ್ ಸಿಸ್ಟಂ, ಮುಂಭಾಗದ ಚಕ್ರದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್, ಹಿಂಭಾಗದ ಚಕ್ರದಲ್ಲಿ ಡ್ಯುಯಲ್ ಸ್ಪ್ರಿಂಗ್ ಹೈಡ್ರಾಲಿಕ್ ಶಾಕ್ ಅಬ್ಸಾರ್ವರ್, ಫ್ರಂಟ್ ಡಿಸ್ಕ್ ಬ್ರೇಕ್ ಮತ್ತು ರಿಯರ್ ಡ್ರಮ್ ಬ್ರೇಕ್ ಫೀಚರ್ಸ್ ಹೊಂದಿದೆ.


 • ಆಕರ್ಷಕ ಬೆಲೆಯಲ್ಲಿ ಒಕಿನಾವ ಲೈಟ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

  ಹೊಸ ಸ್ಕೂಟರ್ ಬಿಡುಗಡೆಯ ಕುರಿತು ಮಾತನಾಡಿರುವ ಒಕಿನಾವ ಆಟೋಟೆಕ್ ಎಂಡಿ ಜೀತೆಂದ್ರ ಶರ್ಮಾ ಅವರು, ಹೊಸ ಲೈಟ್ ಸ್ಕೂಟರ್ ಮೂಲಕ ಮಧ್ಯಮ ವರ್ಗದ ಮಹಿಳಾ ಸ್ಕೂಟರ್ ಖರೀದಿದಾರರನ್ನು ಸೆಳೆಯುವ ಉದ್ದೇಶದೊಂದಿಗೆ ಲೈಟ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಲಾಗಿದ್ದು, ನಗರಪ್ರದೇಶಗಳಲ್ಲಿ ಹೆಚ್ಚುತ್ತಿರುವ ಮಾಲಿನ್ಯ ತಡೆಯುವಲ್ಲಿ ಹೊಸ ಸ್ಕೂಟರ್ ಪ್ರಮುಖ ಪಾತ್ರವಹಿಸುವ ಬಗ್ಗೆ ವಿಶ್ವಾಸವಿದೆ ಎಂದಿದ್ದಾರೆ.


 • ಆಕರ್ಷಕ ಬೆಲೆಯಲ್ಲಿ ಒಕಿನಾವ ಲೈಟ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

  ಒಕಿನವಾ ಸಂಸ್ಥೆಯು ಸದ್ಯ ಮಾರುಕಟ್ಟೆಯಲ್ಲಿ ಪ್ರೈಸ್, ಪ್ರೈಸ್‌ಪ್ರೊ, ಐ-ಪ್ರೈಸ್ ಪ್ಲಸ್, ರಿಡ್ಜ್, ರಿಡ್ಜ್ ಪ್ಲಸ್, ರಿಡ್ಜ್ 30 ಮತ್ತು ಆರ್‌ಡೈಸ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದ್ದು, ಇದೀಗ ಬಿಡುಗಡೆ ಮಾಡಿರುವ ಲೈಟ್ ಎಲೆಕ್ಟ್ರಿಕ್ ಸ್ಕೂಟರ್ ರಿಡ್ಜ್ ಮತ್ತು ರಿಡ್ಜ್ ಪ್ಲಸ್ ನಡುವಿನ ಸ್ಥಾನ ಪಡೆದಿದೆ.


 • ಆಕರ್ಷಕ ಬೆಲೆಯಲ್ಲಿ ಒಕಿನಾವ ಲೈಟ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

  ಇನ್ನು ಒಕಿನಾವ ಸಂಸ್ಥೆಯು ಎಲೆಕ್ಟ್ರಿಕ್ ಸ್ಕೂಟರ್‌ಗಳ ಉತ್ಪಾದನಾ ಘಟಕದ ಸಾಮರ್ಥ್ಯವನ್ನು ಹೆಚ್ಚಿಸಲು ಬರೋಬ್ಬರಿ ರೂ.200 ಬಂಡವಾಳ ಹೂಡಿಕೆಯೊಂದಿಗೆ ವಾರ್ಷಿಕವಾಗಿ 10 ಲಕ್ಷ ಸ್ಕೂಟರ್ ಉತ್ಪಾದನಾ ಗುರಿಹೊಂದಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಮಾತ್ರವಲ್ಲದೇ ವಿದೇಶಿ ಮಾರುಕಟ್ಟೆಗಳಿಗೂ ರಫ್ತು ಮಾಡುವ ಯೋಜನೆಗೆ ಚಾಲನೆ ನೀಡಿದೆ.


 • ಆಕರ್ಷಕ ಬೆಲೆಯಲ್ಲಿ ಒಕಿನಾವ ಲೈಟ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

  ಅತ್ಯುತ್ತಮ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಪರಿಚಯಿಸಿ ಸದ್ಯ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿರುವ ಒಕಿನಾವ ಸಂಸ್ಥೆಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಎಲೆಕ್ಟ್ರಿಕ್ ಬೈಕ್ಉತ್ಪನ್ನಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದು, 2020ರ ಫೆಬ್ರುವರಿಯಲ್ಲಿ ನಡೆಯಲಿರುವ ದೆಹಲಿ ಆಟೋ ಪ್ರದರ್ಶನದಲ್ಲಿ ಹೊಸ ಕಾನ್ಸೆಪ್ಟ್ ಮಾದರಿಗಳು ಪ್ರದರ್ಶನಗೊಳ್ಳಲಿವೆ.
ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿರುವ ಒಕಿನಾವ ಸಂಸ್ಥೆಯು ವಿನೂತ ವಿನ್ಯಾಸದ ಮತ್ತೊಂದು ಹೊಸ ಲೈಟ್ ಎಲೆಕ್ಟ್ರಿಕ್ ಸ್ಕೂಟರ್ ಉತ್ಪನ್ನವನ್ನು ಬಿಡುಗಡೆ ಮಾಡಿದೆ.

   
 
ಹೆಲ್ತ್