Back
Home » Bike News
1290 ಸೂಪರ್ ಬೈಕ್ ಅನಾವರಣಗೊಳಿಸಿದ ಕೆಟಿ‍ಎಂ
DriveSpark | 8th Nov, 2019 02:05 PM
 • 1290 ಸೂಪರ್ ಬೈಕ್ ಅನಾವರಣಗೊಳಿಸಿದ ಕೆಟಿ‍ಎಂ

  ಈ ಶೋದಲ್ಲಿ ಭಾಗವಹಿಸಿರುವ ಆಸ್ಟ್ರಿಯಾ ಮೂಲದ ಕೆಟಿ‍ಎಂ ಕಂಪನಿಯು ತನ್ನ ಬಹುನಿರೀಕ್ಷಿತ 2020ರ ಕೆಟಿಎಂ 1290 ಸೂಪರ್ ಡ್ಯೂಕ್ ಆರ್ ಬೈಕ್ ಅನ್ನು ಪ್ರದರ್ಶಿಸಿದೆ. ಸ್ಟೈಲಿಂಗ್ ವಿಷಯದಲ್ಲಿ, 2020ರ ಕೆಟಿಎಂ 1290 ಸೂಪರ್ ಡ್ಯೂಕ್ ಆರ್ ಮಾರುಕಟ್ಟೆಯಲ್ಲಿರುವ ಬೈಕಿನಲ್ಲಿರುವ ಹೆಡ್‍‍ಲೈಟ್ ವಿನ್ಯಾಸ ಹಾಗೂ ಸಿಲೂಯೆಟ್ ಅನ್ನು ಹಾಗೆಯೇ ಉಳಿಸಿಕೊಂಡಿದೆ.


 • 1290 ಸೂಪರ್ ಬೈಕ್ ಅನಾವರಣಗೊಳಿಸಿದ ಕೆಟಿ‍ಎಂ

  ಆದರೆ, ಅಂಡರ್‌ಪಿನ್ನಿಂಗ್‌ಗಳನ್ನು ಹೆಚ್ಚು ಪರಿಷ್ಕರಿಸಲಾಗಿದೆ. 2020ರ ಮಾದರಿಯ ಬೈಕ್ ಹೊಸ ಸ್ಟೀಲ್ ಟ್ರೆಲ್ಲಿಸ್ ಫ್ರೇಂ ಅನ್ನು ಹೊಂದಿದ್ದು, ಇದು ಎಂಜಿನ್ ಮೇಲೆ ಬೀಳುವ ಒತ್ತಡವನ್ನು ಕಡಿಮೆ ಮಾಡುತ್ತದೆ. ಪ್ರೈಮರಿ ಫ್ರೇಮ್ ಅನ್ನು ಅಲ್ಯೂಮಿನಿಯಂ ಸಬ್ ಫ್ರೇಮ್‌ಗೆ ಬೋಲ್ಟ್ ಮಾಡಲಾಗಿದೆ.


 • 1290 ಸೂಪರ್ ಬೈಕ್ ಅನಾವರಣಗೊಳಿಸಿದ ಕೆಟಿ‍ಎಂ

  ಎಂವೈ 2020 ಅಪ್‌ಗ್ರೇಡ್‌ನ ಭಾಗವಾಗಿ ಮುಂಭಾಗದಲ್ಲಿರುವ ಫಾಸ್ಕಿಯಾವನ್ನು ಸ್ಮೋಕ್ಡ್ ಫ್ಲೈಸ್ಕ್ರೀನ್ ರೂಪದಲ್ಲಿ ಪರಿಷ್ಕರಿಸಲಾಗಿದೆ. ಹೊಸ ಮಾದರಿಯಲ್ಲಿರುವ ಫ್ಯೂಯಲ್ ಟ್ಯಾಂಕ್ ಮಾರುಕಟ್ಟೆಯಲ್ಲಿರುವ ಬೈಕಿನಲ್ಲಿರುವುದಕ್ಕಿಂತ ವಿಭಿನ್ನವಾಗಿದೆ.


 • 1290 ಸೂಪರ್ ಬೈಕ್ ಅನಾವರಣಗೊಳಿಸಿದ ಕೆಟಿ‍ಎಂ

  ಫ್ಯೂಯಲ್ ಟ್ಯಾಂಕ್ ಅನ್ನು ಯುರೋ 5 ನಿಯಮಗಳಿಗೆ ಅನುಸಾರವಾಗಿ ಬದಲಾವಣೆ ಮಾಡಲಾಗಿದೆ. ಹೊಸ ಟ್ಯಾಂಕ್ ಅನ್ನು ಗಮನಿಸಿದಾಗ ಹೆಚ್ಚಿನ ಬದಲಾವಣೆಗಳು ಗಮನಕ್ಕೆ ಬರಲಿವೆ. ನವೀಕರಿಸಲಾದ ಸ್ಯಾಡಲ್ ಹಿಂದಿನ ಮಾದರಿಗಿಂತ ಸಾಕಷ್ಟು ಭಿನ್ನವಾಗಿದೆ.


 • 1290 ಸೂಪರ್ ಬೈಕ್ ಅನಾವರಣಗೊಳಿಸಿದ ಕೆಟಿ‍ಎಂ

  ರೈಡರ್ ಸೀಟ್ ಇನ್ನು ಮುಂದೆ ಫ್ಯೂಯಲ್ ಟ್ಯಾಂಕ್ ಕೆಳಗೆ ಹೋಗುವುದಿಲ್ಲ. ಎಂಜಿನ್‍‍ನಲ್ಲಿ ಭಾರೀ ಬದಲಾವಣೆಗಳನ್ನು ಮಾಡಲಾಗಿದ್ದು, ಹೊಸ ಯುರೋ 5 ನಿಯಮಗಳಿಗೆ ಅನುಸಾರವಾಗಿ ಅಪ್‍‍ಡೇಟ್ ಮಾಡಲಾಗಿದೆ.


 • 1290 ಸೂಪರ್ ಬೈಕ್ ಅನಾವರಣಗೊಳಿಸಿದ ಕೆಟಿ‍ಎಂ

  1,301 ಸಿಸಿಯ 75 ಡಿಗ್ರಿ ವಿ-ಟ್ವಿನ್ ಸಿಲಿಂಡರ್, ಲಿಕ್ವಿಡ್-ಕೂಲ್ಡ್, 8-ವಾಲ್ವ್ (ಪ್ರತಿ ಸಿಲಿಂಡರ್‌ಗೆ 4-ವಾಲ್ವ್ಸ್), ಡಿಒಹೆಚ್‌ಸಿ ಎಂಜಿನ್ ಅನ್ನು ಹೊಂದಿದೆ. 2020ರ ಕೆಟಿಎಂ 1290 ಸೂಪರ್ ಡ್ಯೂಕ್ 200 ಬಿ‍‍ಹೆಚ್‌ಪಿ ಪವರ್ ಅನ್ನು ಉತ್ಪಾದಿಸದೇ ಇದ್ದರೂ, 9,500 ಆರ್‌ಪಿಎಂನಲ್ಲಿ 180 ಬಿ‍‍ಹೆಚ್‌ಪಿ ಪವರ್ ಹಾಗೂ 8,000 ಆರ್‌ಪಿಎಂನಲ್ಲಿ 140 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

  MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್


 • 1290 ಸೂಪರ್ ಬೈಕ್ ಅನಾವರಣಗೊಳಿಸಿದ ಕೆಟಿ‍ಎಂ

  ಮಾರುಕಟ್ಟೆಯಲ್ಲಿರುವ ಯುರೋ4 ಎಂಜಿನ್ ಹೊಂದಿರುವ ಬೈಕ್ 173.5 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಎಂಜಿನ್‌ನಲ್ಲಿರುವ ಮಾಡಲಾಗಿರುವ ಇತರ ಬದಲಾವಣೆಗಳೆಂದರೆ ರಿ-ರೂಟ್ ಮಾಡಲಾದ ಎಕ್ಸಾಸ್ಟ್ ಪೈಪ್‍‍ಗಳನ್ನು ನೀಡಲಾಗಿದೆ.

  MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?


 • 1290 ಸೂಪರ್ ಬೈಕ್ ಅನಾವರಣಗೊಳಿಸಿದ ಕೆಟಿ‍ಎಂ

  ಅದು ದೊಡ್ಡ ರೇಡಿಯೇಟರ್‌ಗೆ ಸ್ಥಳಾವಕಾಶ ನೀಡುತ್ತದೆ. ಎಕ್ಸಾಸ್ಟ್ ಸಿಸ್ಟಂ ಎರಡು ಕ್ಯಾಟಲಿಕ್ಟ್ ಕನ್ವರ್ಟರ್‍‍ಗಳ ಜೊತೆಗೆ ಸ್ಟೇನ್‌ಲೆಸ್ ಸ್ಟೀಲ್ ಪ್ರೈಮರಿ ಹಾಗೂ ಸೆಕೆಂಡರಿ ಸೈಲೆನ್ಸರ್‍‍ಗಳನ್ನು ಹೊಂದಿದೆ.

  MOST READ: ಕೈಕೊಟ್ಟ ದುಬಾರಿ ಬೆಲೆಯ ಕಾರಿನ ಬ್ರೇಕ್..!


 • 1290 ಸೂಪರ್ ಬೈಕ್ ಅನಾವರಣಗೊಳಿಸಿದ ಕೆಟಿ‍ಎಂ

  ಶಾಕ್ ಅಬ್ಸರ್ಷನ್ ಹಾರ್ಡ್‍‍ವೇರ್ ಮುಂಭಾಗದಲ್ಲಿ 48 ಎಂಎಂ ಇನ್ವರ್ಟೆಡ್ ಫೋರ್ಕ್‌ ಹಾಗೂ ಹಿಂಭಾಗದಲ್ಲಿ ಮೊನೊ ಶಾಕ್‍‍ಗಳನ್ನು ಒಳಗೊಂಡಿದೆ. ಇವೆರಡೂ ಡಬ್ಲ್ಯುಪಿ ಅಪೆಕ್ಸ್ ಬ್ರಾಂಡ್‍‍ಗಳಾಗಿದ್ದು, ಫುಲಿ ಅಡ್ಜಸ್ಟಬಲ್ ಆಗಿವೆ.


 • 1290 ಸೂಪರ್ ಬೈಕ್ ಅನಾವರಣಗೊಳಿಸಿದ ಕೆಟಿ‍ಎಂ

  ಬ್ರೇಕಿಂಗ್‍‍ಗಳಿಗಾಗಿ ಬ್ರೆಂಬೊ ಸ್ಟೈಲ್‌ಮಾ ಫೋರ್ ಪಿಸ್ಟನ್ ಟ್ವಿನ್ 320 ಎಂಎಂ ರೋಟರ್‌ಗಳು, ಮುಂಭಾಗದಲ್ಲಿ ರೇಡಿಯಲ್ ಆಗಿ ಮೌಂಟ್ ಮಾಡಲಾದ ಕ್ಯಾಲಿಪರ್‌ ಹಾಗೂ ಹಿಂಭಾಗದಲ್ಲಿ ಬ್ರೆಂಬೊ ಟು ಪಿಸ್ಟನ್, ಫಿಕ್ಸೆಡ್ ಕಾಲಿಪರ್‌ ಹೊಂದಿರುವ 240 ಎಂಎಂ ಸಿಂಗಲ್ ಡಿಸ್ಕ್ ಗಳಿವೆ.


 • 1290 ಸೂಪರ್ ಬೈಕ್ ಅನಾವರಣಗೊಳಿಸಿದ ಕೆಟಿ‍ಎಂ

  ಎಲೆಕ್ಟ್ರಾನಿಕ್ ರೈಡರ್‍‍ಗಳಲ್ಲಿ ಬಾಷ್ 9.1 ಎಂಪಿ 2.0 ಎಬಿಎಸ್ (ಕಾರ್ನರಿಂಗ್ ಎಬಿಎಸ್ ಹಾಗೂ ಸೂಪರ್‌ಮೊಟೊ ಎಬಿಎಸ್), ಲೀನ್ ಟ್ರಾಕ್ಷನ್ ಕಂಟ್ರೋಲ್, ಅಪ್ ಅಂಡ್ ಡೌನ್ ಕ್ವಿಕ್‌ಶಿಫ್ಟರ್, ಆ್ಯಂಟಿ ವ್ಹೀಲಿ ಹಾಗೂ ಕ್ರೂಸ್ ಕಂಟ್ರೋಲ್‍‍ಗಳಿವೆ.


 • 1290 ಸೂಪರ್ ಬೈಕ್ ಅನಾವರಣಗೊಳಿಸಿದ ಕೆಟಿ‍ಎಂ

  ರೇನ್, ಸ್ಟ್ರೀಟ್ ಹಾಗೂ ಸ್ಪೋರ್ಟ್ ಎಂಬ ಮೂರು ಮೋಡ್‍‍ಗಳನ್ನು ಸ್ಟಾಂಡರ್ಡ್ ಆಗಿ ನೀಡಲಾಗುವುದು. ಟ್ರ್ಯಾಕ್ ಹಾಗೂ ಪರ್ಫಾಮೆನ್ಸ್ ಮೋಡ್‍‍ಗಳನ್ನು ಹೆಚ್ಚುವರಿ ಆಯ್ಕೆಯಾಗಿ ನೀಡಲಾಗುವುದು. ಟ್ರ್ಯಾಕ್ ಮೋಡ್ ಒಂಬತ್ತು ಲೆವೆಲ್‍‍ನ ಮೋಟಾರ್ ಸ್ಲಿಪ್ ನಿಯಂತ್ರಣಕ್ಕೆ ಆಕ್ಸೆಸ್ ನೀಡುತ್ತದೆ.


 • 1290 ಸೂಪರ್ ಬೈಕ್ ಅನಾವರಣಗೊಳಿಸಿದ ಕೆಟಿ‍ಎಂ

  ಈ ಮೋಡ್‌ನಲ್ಲಿ ಆ್ಯಂಟಿ ವ್ಹೀಲಿ ಫಂಕ್ಷನ್ ಅನ್ನು ಸಹ ಆಫ್ ಮಾಡಬಹುದು. ಕ್ರೂಸ್ ಕಂಟ್ರೋಲ್ ಹಾಗೂ ಕೆಟಿಎಂ ಮೈ ರೈಡ್‍‍ನಂತಹ ಸ್ಟ್ರೀಟ್ ಫಂಕ್ಷನ್‍‍ಗಳನ್ನು ಉಳಿಸಿಕೊಂಡು ಪರ್ಫಾರ್ಮೆನ್ಸ್ ಮೋಡ್ ಹೊಂದಾಣಿಕೆ ಥ್ರಾಟಲ್ ರೆಸ್ಪಾನ್ಸ್, ವ್ಹೀಲ್ ಸ್ಲಿಪ್ ಹಾಗೂ ಆ್ಯಂಟಿ ವ್ಹೀಲಿ ಫಂಕ್ಷನ್‍‍ಗಳನ್ನು ಒದಗಿಸುತ್ತದೆ.


 • 1290 ಸೂಪರ್ ಬೈಕ್ ಅನಾವರಣಗೊಳಿಸಿದ ಕೆಟಿ‍ಎಂ

  ಅಪ್‍‍ಡೇಟೆಡ್ ಕಾಕ್‌ಪಿಟ್ ಹೊಸ, ಆ್ಯಂಗಲ್ ಅಡ್ಜಸ್ಟಬಲ್ 5 ಇಂಚಿನ ಟಿಎಫ್‌ಟಿ ಸ್ಕ್ರೀನ್ ಅನ್ನು ಹೊಂದಿದೆ. ಕೆಟಿಎಂ ವಿವಿಧ ಫೀಚರ್‍‍ಗಳಿಗೆ ವೇಗವಾಗಿ ಆಕ್ಸೆಸ್ ನೀಡುವ ಕಾರಣಕ್ಕೆ ಮೆನು ರಚನೆಯನ್ನು ನವೀಕರಿಸಿದೆ.
2019ರ ಇ‍ಐ‍‍ಸಿ‍ಎಂ‍ಎ ಮೋಟಾರ್ ಶೋ ಇಟಲಿಯ ಮಿಲಾನ್‍‍ನಲ್ಲಿ ನಡೆಯುತ್ತಿದೆ. ಈ ಮೋಟಾರ್ ಶೋದಲ್ಲಿ ಪ್ರಪಂಚದ ದೊಡ್ಡ ದೊಡ್ಡ ಆಟೋ ಮೊಬೈಲ್ ಕಂಪನಿಗಳು ಭಾಗವಹಿಸಿವೆ. ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ತಮ್ಮ ಹೊಸ ವಾಹನಗಳನ್ನು ಈ ಶೋದಲ್ಲಿ ಪ್ರದರ್ಶಿಸುತ್ತಿವೆ.

   
 
ಹೆಲ್ತ್