Back
Home » ಇತ್ತೀಚಿನ
ಶುದ್ಧ ಗಾಳಿಗಾಗಿ ಏರ್‌ ಪ್ಯೂರಿಫೈಯರ್‌ ಬಳಸಿ..! ಕಾಯಿಲೆಗಳಿಂದ ಪಾರಾಗಿ..!
Gizbot | 8th Nov, 2019 06:35 PM
 • ಎಕ್ಯೂಐ ಇಂಡಿಯಾದ ಸಂಸ್ಥಾಪಕ

  ಆದರೆ, ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹ ಪ್ರಾಮುಖ್ಯತೆಯನ್ನು ಪಡೆದಿದೆ. ಫ್ಯೂರ್‌ಲಾಜಿಕ್‌ ಲ್ಯಾಬ್ಸ್‌ ಇಂಡಿಯಾ ಮತ್ತು ಎಕ್ಯೂಐ ಇಂಡಿಯಾದ ಸಂಸ್ಥಾಪಕ ಮತ್ತು ಶಾರ್ಪ್‌ನ ಬಿ2ಬಿ ಮಾರುಕಟ್ಟೆ ಮುಖ್ಯಸ್ಥ ಆಶಿಶ್ ಗುಪ್ತಾರೊಂದಿಗಿನ ಸಂವಾದದಲ್ಲಿ ಏರ್‌ ಪ್ಯೂರಿಫೈಯರ್‌ಗಳ ಬಗ್ಗೆ ಹರಡಿರುವ ಸುಳ್ಳುಗಳಿಗೆ ಉತ್ತರ ಕಂಡುಕೊಂಡಿದ್ದಾರೆ.


 • ಏರ್‌ ಪ್ಯೂರಿಫೈಯರ್‌ಗಳು ಉಪಯುಕ್ತ

  ಹೆಚ್ಚಿನ ಮಟ್ಟದ ಹೊರಾಂಗಣ ಮಾಲಿನ್ಯದಿಂದಾಗಿ, ನಿಮ್ಮ ಕೋಣೆಯೊಳಗೆ ಶುದ್ಧ ಗಾಳಿಯನ್ನು ನೀಡಲು ಏರ್ ಪ್ಯೂರಿಫೈಯರ್‌ಗಳು ಸಹಾಯ ಮಾಡುತ್ತವೆ. ಇದು ಹೊರಗಿನ ಕಲುಷಿತ ಗಾಳಿಯಿಂದ ನಿಮ್ಮನ್ನು ರಕ್ಷಿಸುತ್ತದೆ ಮತ್ತು ಇದು ಪರಿಣಾಮಕಾರಿ ಎಂಬುದು ಸಾಬೀತಾಗಿದೆ ಎಂದು ಪ್ಯೂರ್ಲಾಜಿಕ್ ಲ್ಯಾಬ್ಸ್ ಇಂಡಿಯಾ ಮತ್ತು ಎಕ್ಯೂಐ ಇಂಡಿಯಾದ ಸಂಸ್ಥಾಪಕ ರೋಹಿತ್ ಬನ್ಸಾಲ್ ಹೇಳಿದ್ದಾರೆ. ಏರ್ ಪ್ಯೂರಿಫೈಯರ್‌ಗಳು ಸಂಪೂರ್ಣವಾಗಿ ಅರ್ಥಪೂರ್ಣವಾಗಿದ್ದು, ಅವುಗಳ ಪರಿಣಾಮಕಾರಿತ್ವದ ಬಗ್ಗೆ ಯಾವುದೇ ಸಂದೇಹವಿಲ್ಲ ಎಂದು ಶಾರ್ಪ್‌ನ ಬಿ2ಬಿ ಮಾರಾಟ ವಿಭಾಗದ ಆಶಿಶ್ ಗುಪ್ತಾ ಹೇಳಿದ್ದಾರೆ.


 • ಬಾಗಿಲು, ಕಿಟಕಿ ತರೆದಿಡುವುದು ಉತ್ತಮ

  ಏರ್‌ ಪ್ಯೂರಿಫೈಯರ್‌ನ ಪರಿಣಾಮಕಾರಿ ಬಳಕೆ ಸಂಪೂರ್ಣ ಹೊರಗಿನ ಗಾಳಿಯ ಗುಣಮಟ್ಟವನ್ನು ಅವಲಂಬಿಸಿರುತ್ತದೆ. ಹೊರಗಿನ ಗಾಳಿಯು ಹೆಚ್ಚು ಕಳಪೆಯಾಗಿದ್ದರೆ, ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚಿಡುವುದು ಒಳ್ಳೆಯದು. ಅಡುಗೆ ಮಾಡುವಾಗ, ಧೂಳು ಇದ್ದಾಗ, ಸಿಗರೇಟ್‌ ಹೊಗೆ ಇದ್ದಾಗ ಕಿಟಕಿಗಳನ್ನು ತೆರೆದಿಡುವುದರಿಂದ ಏರ್‌ ಪ್ಯೂರಿಫಯರ್‌ ಪರಿಣಾಮಕಾರಿತ್ವವನ್ನು ಹೆಚ್ಚಿಸುತ್ತದೆ. ದೀರ್ಘಕಾಲದವರೆಗೆ ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚುವುದರಿಂದ ಕಾರ್ಬನ್ ಡೈಆಕ್ಸೈಡ್ ಹೆಚ್ಚಾಗುತ್ತದೆ. ಏರ್ ಪ್ಯೂರಿಫೈಯರ್ಗಳು ಕಾರ್ಬನ್ ಡೈಆಕ್ಸೈಡ್ ಅನ್ನು ನಾಶಮಾಡದ ಕಾರಣ ಕಿಟಕಿಗಳನ್ನು ತೆರೆದಿಡುವುದು ಉತ್ತಮ ಎಂದು ಬನ್ಸಾಲ್ ಹೇಳಿದರು. ಅದರೆ, ಬಾಗಿಲು ಮತ್ತು ಕಿಟಕಿಗಳನ್ನು ತೆರೆದಿಡುವುದು ವಾಯು ಶುದ್ಧೀಕರಣದ ಪರಿಣಾಮಕಾರಿತ್ವವನ್ನು ಕಡಿಮೆ ಮಾಡುತ್ತದೆ ಎಂಬುದು ಸತ್ಯ ಎಂದು ಗುಪ್ತಾ ಹೇಳಿದ್ದಾರೆ.


 • ವಾಸನೆಗೂ, ಶುದ್ಧಗಾಳಿಗೂ ಸಂಬಂಧವಿಲ್ಲ

  ಹೌದು, ವಾಸನೆಗೂ, ಶುದ್ಧ ಗಾಳಿಗೂ ಯಾವುದೇ ಸಂಬಂಧವಿಲ್ಲ ಇದು ನೀವು ಯಾವ ರೀತಿಯ ಫಿಲ್ಟರ್ ಅನ್ನು ಬಳಸುತ್ತಿರುವಿರಿ ಎಂಬುದರ ಮೇಲೆ ಸಂಪೂರ್ಣ ಅವಲಂಬಿತವಾಗಿರುತ್ತದೆ. ಫಿಲ್ಟರ್‌ನಲ್ಲಿ ಸಕ್ರಿಯ ಇಂಗಾಲವಿದ್ದರೆ, ನೀವು ಸ್ವಲ್ಪ ವ್ಯತ್ಯಾಸ ನಿರೀಕ್ಷಿಸಬಹುದು, ಇಲ್ಲದಿದ್ದರೆ ಸಾಮಾನ್ಯವಾಗಿ, ಗಾಳಿಯ ಶುದ್ಧೀಕರಣವು ವಾಸನೆಯನ್ನು ಕೊಲ್ಲುವುದಿಲ್ಲ ಎಂದು ಬನ್ಸಾಲ್ ಹೇಳಿದರು. ವಾಸನೆ ಪರೀಕ್ಷೆಗಳಲ್ಲಿ ಒಂದಾಗಿದೆ. ಆದರೆ, ಅದು ಖಂಡಿತವಾಗಿಯೂ ಎಲ್ಲವೂ ಅಲ್ಲ. ನಿಮ್ಮ ಏರ್ ಪ್ಯೂರಿಫೈಯರ್ ಮಾದರಿಯು ಕಾರ್ಬನ್ ಫಿಲ್ಟರ್ ಹೊಂದಿದ್ದರೆ. ಮತ್ತು ಈ ಫೀಚರ್‌ ನೀಡಿದರೆ ಅದು ಆದರ್ಶಪ್ರಾಯವಾಗಿ ಕಾರ್ಯನಿರ್ವಹಿಸಬೇಕು ಎಂದು ಗುಪ್ತಾ ಹೇಳಿದ್ದಾರೆ.


 • ಕ್ಲೀನ್‌ ಏರ್‌ ಡೆಲಿವರಿ ರೇಟ್‌

  ಪ್ರತಿ ಏರ್ ಪ್ಯೂರಿಫೈಯರ್ ಮಾದರಿಯು ಕ್ಲೀನ್ ಏರ್ ಡೆಲಿವರಿ ರೇಟ್ (ಸಿಎಡಿಆರ್) ಹೊಂದಿದ್ದು, ಅದು ನಿರ್ದಿಷ್ಟ ಗಾತ್ರದ ಸಂಪೂರ್ಣ ಕೋಣೆಗೆ ಶುದ್ಧಗಾಳಿಯನ್ನು ಪೂರೈಸುತ್ತದೆ. ಏರ್ ಪ್ಯೂರಿಫೈಯರ್‌ನಿಂದ ಲಾಭ ಪಡೆಯಲು ನೀವು ಆ ಕೋಣೆಯ ಒಳಗೆ ಎಲ್ಲಿಯಾದರೂ ಇರಬಹುದು ಎಂದು ಬನ್ಸಾಲ್ ಹೇಳಿದರು. ಶುದ್ಧ ಗಾಳಿ ಪಡೆಯಲು ನೀವು ಏರ್‌ ಪ್ಯೂರಿಫೈಯರ್‌ಗೆ ಸಮೀಪದಲ್ಲಿದ್ದೀರಾ ಎಂಬುದು ಮುಖ್ಯವಲ್ಲ ಎಂದು ಗುಪ್ತಾ ಹೇಳಿದರು.


 • ಎಸಿ ಇದ್ದರೂ ಇರಬೇಕು ಪ್ಯೂರಿಫೈಯರ್

  ಎಸಿಗಳು ಕೋಣೆಯೊಳಗಿನ ಗಾಳಿಯ ತಾಪಮಾನವನ್ನು ಸರಳವಾಗಿ ನಿಯಂತ್ರಿಸುತ್ತದೆ. ಆದರೆ, ಮಾಲಿನ್ಯಕಾರಕಗಳನ್ನು ತೆಗೆದುಹಾಕುವಲ್ಲಿ ಯಾವುದೇ ಪಾತ್ರವನ್ನು ನಿರ್ವಹಿಸುವುದಿಲ್ಲ ಎಂದು ಬನ್ಸಾಲ್ ಹೇಳಿದರೆ, ಎಸಿ ಕೋಣೆಗಳಿಗೆ ಮಾಲಿನ್ಯಕಾರಕಗಳನ್ನು ಫಿಲ್ಟರ್ ಮಾಡಲು ಗಾಳಿ ಶುದ್ಧೀಕರಿಸುವ ಯಂತ್ರಗಳು ಬೇಕಾಗುತ್ತವೆ ಎಂದು ಗುಪ್ತಾ ಹೇಳಿದರು.


 • ಫಿಲ್ಟರ್‌ ಸ್ವಚ್ಛಗೊಳಿಸಿ

  ಹೆಚ್‌ಪಿಎ ಫಿಲ್ಟರ್‌ಗಳು ತಮ್ಮದೇ ಆದ ಸಾಮರ್ಥ್ಯಗಳನ್ನು ಹೊಂದಿವೆ. ನೀವು ಫಿಲ್ಟರ್‌ನ ಹೊರಗಿನ ಮೇಲ್ಮೈಯನ್ನು ಬ್ರಷ್ ಮಾಡಬಹುದು. ಆದರೆ, ಒಳಗೆ ಸಿಕ್ಕಿಬಿದ್ದ ಕಣಗಳು ಉಳಿಯುತ್ತವೆ ಮತ್ತು ವಾಯು ಶುದ್ಧೀಕರಣದ ದಕ್ಷತೆಯನ್ನು ಕಡಿಮೆ ಮಾಡುತ್ತದೆ ಎಂದು ಬನ್ಸಾಲ್ ಹೇಳಿದರು. ಏರ್ ಫಿಲ್ಟರ್‌ನ್ನು ಬ್ರಷ್‌ ಮಾಡುವುದರಿಂದ ಸ್ವಲ್ಪ ಮಟ್ಟಿಗೆ ಸಹಾಯ ಆಗುತ್ತದೆ. ಆದರೆ. ಇದರಿಂದ ಫಿಲ್ಟರ್‌ನ ಕಾರ್ಯಾವಧಿ ಕಡಿಮೆಯಾಗುತ್ತದೆ ಗುಪ್ತಾ ಹೇಳಿದ್ದಾರೆ.


 • ಫ್ಯಾನ್‌ ಹಾಕದಿರಿ

  ಬಾಗಿಲುಗಳು ಮತ್ತು ಕಿಟಕಿಗಳನ್ನು ಮುಚ್ಚಿದಾಗ ಮತ್ತು ಸೀಲಿಂಗ್ ಫ್ಯಾನ್ ಆನ್ ಮಾಡಿದರೆ, ಧನಾತ್ಮಕ ಒತ್ತಡ ಸೃಷ್ಟಿಯಾಗುತ್ತದೆ, ಅದು ಹೊರಗಿನ ಗಾಳಿ ಮತ್ತು ಮಾಲಿನ್ಯಕಾರಕಗಳನ್ನು ಬಾಗಿಲು ಮತ್ತು ಕಿಟಕಿಗಳ ಅಂತರದಿಂದ ಹೀರಿಕೊಂಡು, ಕೋಣೆಯಲ್ಲಿ ಮಾಲಿನ್ಯಕಾರಕಗಳನ್ನು ಹೆಚ್ಚಿಸುತ್ತದೆ. ಈ ಕಾರಣದಿಂದ ಕೋಣೆಯೊಳಗಿನ ಗಾಳಿಯನ್ನು ಸ್ವಚ್ಛಗೊಳಿಸಲು ಏರ್ ಪ್ಯೂರಿಫೈಯರ್ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ಬನ್ಸಾಲ್ ಹೇಳಿದರೆ, ಸೀಲಿಂಗ್ ಫ್ಯಾನ್‌ಗಳನ್ನು ಆನ್ ಮಾಡಿದಾಗ ಏರ್ ಪ್ಯೂರಿಫೈಯರ್‌ಗಳು ನಿಷ್ಪರಿಣಾಮಕಾರಿಯಾಗುತ್ತವೆ ಎಂದು ಗುಪ್ತಾ ಹೇಳಿದರು.

  ಗುಣಮಟ್ಟಕ್ಕೆ ತಕ್ಕಂತೆ ದರ

  ಏರ್ ಪ್ಯೂರಿಫೈಯರ್‌ಗಳು ವಿಭಿನ್ನ ಸಾಮರ್ಥ್ಯ ಮತ್ತು ಫಿಲ್ಟರ್ ಗುಣಮಟ್ಟದಲ್ಲಿ ಮಾರುಕಟ್ಟೆಗೆ ಬರುತ್ತವೆ. ಸಣ್ಣ ಕೋಣೆಗೆ ತಕ್ಕ ಏರ್ ಪ್ಯೂರಿಫೈಯರ್ ಮಾದರಿ ದೊಡ್ಡ ಕೊಠಡಿಗಳಿಗೆ ಪರಿಣಾಮಕಾರಿಯಾಗುವುದಿಲ್ಲ ಎಂದು ಬನ್ಸಾಲ್ ಹೇಳಿದರೆ, ವಿಶೇಷವಾದ ಏರ್ ಪ್ಯೂರಿಫೈಯರ್‌ಗಳು ಕೂಡ ಇದ್ದು, ಕ್ಷಯರೋಗ ಬ್ಯಾಕ್ಟೀರಿಯಾವನ್ನು ಸಹ ಕೊಲ್ಲುತ್ತವೆ. ಸಹಜವಾಗಿ ಇಂತಹ ಏರ್‌ ಪ್ಯೂರಿಫೈಯರ್‌ಗಳಿಗೆ ಹೆಚ್ಚಿನ ವೆಚ್ಚವಾಗುತ್ತದೆ ಎಂದು ಗುಪ್ತಾ ಹೇಳಿದರು.
ಚಳಿಗಾಲದ ಆರಂಭದೊಂದಿಗೆ ಗಾಳಿಯ ಗುಣಮಟ್ಟದ ಸಮಸ್ಯೆ ಸೃಷ್ಟಿಯಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ವಿಶೇಷವಾಗಿ ಉತ್ತರ ಭಾರತದಲ್ಲಿ ಏರ್‌ ಪ್ಯೂರಿಫೈಯರ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಒಳಾಂಗಣದಲ್ಲಿ ವಾಯುಮಾಲಿನ್ಯಕಾರಕಗಳ ವಿರುದ್ಧ ಹೋರಾಡಲು ಏರ್‌ ಪ್ಯೂರಿಫೈಯರ್‌ಗಳು ಹೆಚ್ಚು ವೆಚ್ಚದಾಯಕ ಪರಿಹಾರವಾಗಿದ್ದರೂ, ಭಾರತದಲ್ಲಿ ಇದರ ಬಳಕೆಯ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿವೆ. ಅಲ್ಲದೆ, ಏರ್ ಪ್ಯೂರಿಫೈಯರ್‌ಗಳ ನಡುವೆ ಭಿನ್ನ ಅಭಿಪ್ರಾಯಗಳು ಏರ್ ಪ್ಯೂರಿಫೈಯರ್‌ಗಳ ಬಳಕೆಯನ್ನು ಕಡಿಮೆ ಮಾಡಿದ್ದು, ಉತ್ಪನ್ನದ ಬಗ್ಗೆ ಹಲವು ಸುಳ್ಳುಗಳು ಸೃಷ್ಟಿಯಾಗಿವೆ.

   
 
ಹೆಲ್ತ್