Back
Home » Car News
ಟೋಲ್‌ಗೇಟ್‌ಗಳಲ್ಲಿ ಫಾಸ್ಟ್‌ಟ್ಯಾಗ್ ಲೈನ್ ಹೆಚ್ಚಳ- ಇನ್ಮುಂದೆ ಶುಲ್ಕ ಪಾವತಿಗೆ ಹೆಚ್ಚು ಕಾಯಬೇಕಿಲ್ಲ..!
DriveSpark | 8th Nov, 2019 05:41 PM
 • ಟೋಲ್‌ಗೇಟ್‌ಗಳಲ್ಲಿ ಫಾಸ್ಟ್‌ಟ್ಯಾಗ್ ಲೈನ್ ಹೆಚ್ಚಳ- ಇನ್ಮುಂದೆ ಶುಲ್ಕ ಪಾವತಿಗೆ ಹೆಚ್ಚು ಕಾಯಬೇಕಿಲ್ಲ..!

  ಹೊಸ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದಂತೆ ರಾಷ್ಟ್ರೀಯ ಹೆದ್ದಾರಿಗಳಲ್ಲಿಯೂ ಸಹ ಟ್ರಾಫಿಕ್ ದಟ್ಟಣೆ ಸಮಸ್ಯೆ ಹೆಚ್ಚುತ್ತಿದೆ. ಇದರಿಂದ ಕೆಲವು ಟೋಲ್‌ಗಳಲ್ಲಿ ಶುಲ್ಕ ಪಾವತಿಸಲು ವಾಹನ ಸವಾರರು ಗಂಟೆಗಟ್ಟಲೇ ಕಾಯಬೇಕಾದ ಪರಿಸ್ಥಿತಿ ಎದುರಾಗಿದ್ದು, ಸದ್ಯ ಕಾರ್ಯನಿರ್ವಹಣೆಯಲ್ಲಿರುವ ಫಾಸ್ಟ್‌ಟ್ಯಾಗ್ ಲೈನ್‌ಗಳನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ಮಹತ್ವದ ಕಾರ್ಯಯೋಜನೆಯನ್ನು ಜಾರಿಗೆ ತಂದಿರುವುದು ಭಾರೀ ಬದಲಾವಣೆ ಕಾರಣವಾಗಿದೆ.

 • ಟೋಲ್‌ಗೇಟ್‌ಗಳಲ್ಲಿ ಫಾಸ್ಟ್‌ಟ್ಯಾಗ್ ಲೈನ್ ಹೆಚ್ಚಳ- ಇನ್ಮುಂದೆ ಶುಲ್ಕ ಪಾವತಿಗೆ ಹೆಚ್ಚು ಕಾಯಬೇಕಿಲ್ಲ..!

  ಟೋಲ್ ಪಾವತಿಗಾಗಿ ಕಾಯುವುದನ್ನು ತಪ್ಪಿಸಲು ಈ ಹಿಂದೆ 2014ರಲ್ಲೇ ಫಾಸ್ಟ್‌ಟ್ಯಾಗ್ ಸೌಲಭ್ಯವನ್ನು ಪರಿಚಯಿಸಿದ್ದ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರವು ಇದೀಗ ಫಾಸ್ಟ್‌ಟ್ಯಾಗ್ ಸೌಲಭ್ಯವನ್ನು ಡಿಸೆಂಬರ್ 1ರಿಂದಲೇ ಕಡ್ಡಾಯಗೊಳಿಸುತ್ತಿದ್ದು, ಹೊಸ ನಿಯಮ ಜಾರಿಗೂ ಮುನ್ನ ಫಾಸ್ಟ್‌ಟ್ಯಾಗ್ ಲೈನ್‌ಗಳನ್ನು ವಿಸ್ತರಣೆ ಮಾಡುತ್ತಿದೆ.

 • ಟೋಲ್‌ಗೇಟ್‌ಗಳಲ್ಲಿ ಫಾಸ್ಟ್‌ಟ್ಯಾಗ್ ಲೈನ್ ಹೆಚ್ಚಳ- ಇನ್ಮುಂದೆ ಶುಲ್ಕ ಪಾವತಿಗೆ ಹೆಚ್ಚು ಕಾಯಬೇಕಿಲ್ಲ..!

  ಮೊದಮೊದಲು ಹೊಸ ಟೋಲ್ ಪಾವತಿ ಸೌಲಭ್ಯವಾದ ಫಾಸ್ಟ್‌ಟ್ಯಾಗ್ ಪರಿಚಯಿಸಿದ್ದ ಸಂದರ್ಭದಲ್ಲಿ ಪ್ರತಿ ಟೋಲ್‌ಗಳಲ್ಲೂ ಒಂದು ಅಥವಾ ಎರಡು ಲೈನ್‌ಗಳಲ್ಲಿ ಮಾತ್ರವೇ ಈ ಸೌಲಭ್ಯವನ್ನು ನೀಡಲಾಗಿತ್ತು. ಇದೀಗ ಕಡ್ಡಾಯವಾಗಿ ಜಾರಿಗೆ ತರುತ್ತಿರುವ ಹಿನ್ನಲೆಯಲ್ಲಿ ಪ್ರತಿ ಟೋಲ್ ‌ಕೇಂದ್ರಗಳಲ್ಲೂ ಶೇ.100ರಷ್ಟು ಫಾಸ್ಟ್‌ಟ್ಯಾಗ್ ಸೌಲಭ್ಯವನ್ನು ಅಳವಡಿಕೆ ಮಾಡಲಾಗುತ್ತಿದೆ.

 • ಟೋಲ್‌ಗೇಟ್‌ಗಳಲ್ಲಿ ಫಾಸ್ಟ್‌ಟ್ಯಾಗ್ ಲೈನ್ ಹೆಚ್ಚಳ- ಇನ್ಮುಂದೆ ಶುಲ್ಕ ಪಾವತಿಗೆ ಹೆಚ್ಚು ಕಾಯಬೇಕಿಲ್ಲ..!

  ಮಾಹಿತಿಗಳ ಪ್ರಕಾರ, ಈಗಾಗಲೇ ಶೇ.85ರಷ್ಟು ಫಾಸ್ಟ್‌ಟ್ಯಾಗ್ ಮೂಲಕ ಶುಲ್ಕ ವಸೂಲಿ ಸೌಲಭ್ಯವನ್ನು ಜೋಡಣೆ ಪೂರ್ಣಗೊಳಿಸಲಾಗಿದ್ದು, ಇನ್ನುಳಿದ ಶೇ.15ರಷ್ಟು ಫಾಸ್ಟ್‌ಟ್ಯಾಗ್ ಸೌಲಭ್ಯ ಅಳವಡಿಕೆಯನ್ನು ನವೆಂಬರ್ ಅಂತ್ಯಕ್ಕೆ ಪೂರ್ಣಗೊಳಿಸುವುದಾಗಿ ಹೇಳಲಾಗಿದೆ. ಇದರಿಂದ ಗಂಟೆಗಟ್ಟಲೇ ಕ್ಯೂ ನಿಂತು ಟೋಲ್‌ ಕಟ್ಟುವ ತಾಪತ್ರಯ ಇನ್ಮುಂದೆ ಕಡಿಮೆಯಾಗಲಿದ್ದು, ವಾಹನಗಳ ಮಾಲೀಕರಿಗೆ ಫಾಸ್ಟ್‌ಟ್ಯಾಗ್ ಖರೀದಿಗೂ ಸಹ ಸರಳವಾಗುವಂತೆ ಹಲವು ಸೌಲಭ್ಯಗಳನ್ನು ತೆರೆಯಲಾಗಿದೆ.

 • ಟೋಲ್‌ಗೇಟ್‌ಗಳಲ್ಲಿ ಫಾಸ್ಟ್‌ಟ್ಯಾಗ್ ಲೈನ್ ಹೆಚ್ಚಳ- ಇನ್ಮುಂದೆ ಶುಲ್ಕ ಪಾವತಿಗೆ ಹೆಚ್ಚು ಕಾಯಬೇಕಿಲ್ಲ..!

  ಫಾಸ್ಟ್‌ಟ್ಯಾಗ್ ಸೌಲಭ್ಯದಿಂದಾಗಿ ವಾಹನ ಮಾಲೀಕರಿಗೆ ಸಾಕಷ್ಟು ಅನುಕೂಲತೆಗಳಿದ್ದು, ಫಾಸ್ಟ್‌ಟ್ಯಾಗ್ ಖರೀದಿಸಲೂ ಗ್ರಾಹಕರಿಗೆ ಸುಲಭವಾಗುವಂತೆ ಅಮೆಜಾನ್‌ ಡಾಟ್‌ ಕಾಮ್‌ನಲ್ಲೂ ಸಹ ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ.

 • ಟೋಲ್‌ಗೇಟ್‌ಗಳಲ್ಲಿ ಫಾಸ್ಟ್‌ಟ್ಯಾಗ್ ಲೈನ್ ಹೆಚ್ಚಳ- ಇನ್ಮುಂದೆ ಶುಲ್ಕ ಪಾವತಿಗೆ ಹೆಚ್ಚು ಕಾಯಬೇಕಿಲ್ಲ..!

  ಆದರೆ ಫಾಸ್ಟ್‌ಟ್ಯಾಗ್ ಖರೀದಿ ಸುಲಭವಾಗಿಸಲು ಆನ್‌ಲೈನ್ ಮೂಲಕವೇ ಮಾರಾಟಕ್ಕೆ ಚಾಲನೆ ನೀಡಲಾಗಿದ್ದು, ಅಮೆಜಾನ್‌ನಲ್ಲಿ ಆಸಕ್ತ ವಾಹನ ಮಾಲೀಕರು ಅಗತ್ಯ ದಾಖಲೆಗಳನ್ನು ಪೂರೈಸುವ ಮೂಲಕ ಸುಲಭವಾಗಿ ಫಾಸ್ಟ್‌ಟ್ಯಾಗ್ ಸೌಲಭ್ಯವನ್ನು ಅಳವಡಿಸಿಕೊಳ್ಳಬಹುದಾಗಿದೆ.

  MOST READ: ನಟಿ ಊರ್ವಶಿ ರೌಟೇಲಾ ದುಬಾರಿ ಬೈಕ್ ಖರೀದಿಸಿದ್ದು ಯಾರಿಗಾಗಿ ಗೊತ್ತಾ?

 • ಟೋಲ್‌ಗೇಟ್‌ಗಳಲ್ಲಿ ಫಾಸ್ಟ್‌ಟ್ಯಾಗ್ ಲೈನ್ ಹೆಚ್ಚಳ- ಇನ್ಮುಂದೆ ಶುಲ್ಕ ಪಾವತಿಗೆ ಹೆಚ್ಚು ಕಾಯಬೇಕಿಲ್ಲ..!

  ಎಲ್ಲೆಲ್ಲಿ ಫಾಸ್ಟ್‌ಟ್ಯಾಗ್ ಖರೀದಿಗೆ ಲಭ್ಯ?
  ಟೋಲ್ ಪ್ಲಾಜ್‌ಗಳಲ್ಲೇ ಫಾಸ್ಟ್ ಟ್ಯಾಗ್ ಖರೀದಿ ಮಾಡಬಹುದಾಗಿದ್ದು, ಇಲ್ಲವೇ ಫಾಸ್ಟ್ ಟ್ಯಾಗ್ ಮಾರಾಟ ಮಾಡುವ ಖಾಸಗಿ ಏಜೆನ್ಸಿಗಳಿಂದಲೂ ಖರೀದಿ ಮಾಡಬಹುದು. ಜೊತೆಗೆ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‌ಗಳಲ್ಲೂ ಫಾಸ್ಟ್‌ಟ್ಯಾಗ್ ವಿತರಣೆಗೆ ಅವಕಾಶ ಕಲ್ಪಿಸಲಾಗಿದ್ದು, ಅಮೆಜಾನ್ ಡಾಟ್ ಕಾಮ್‌ ಮೂಲಕ ಫಾಸ್ಟ್‌ಟ್ಯಾಗ್ ಪಡೆಯಬಹುದಾಗಿದೆ.

  MOST READ: ಸ್ಟಾರ್ ನಟಿಗೆ ಸಿಕ್ತು ಬರೋಬ್ಬರಿ 11 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಕಾರ್ ಗಿಫ್ಟ್

 • ಟೋಲ್‌ಗೇಟ್‌ಗಳಲ್ಲಿ ಫಾಸ್ಟ್‌ಟ್ಯಾಗ್ ಲೈನ್ ಹೆಚ್ಚಳ- ಇನ್ಮುಂದೆ ಶುಲ್ಕ ಪಾವತಿಗೆ ಹೆಚ್ಚು ಕಾಯಬೇಕಿಲ್ಲ..!

  ಫಾಸ್ಟ್ ಟ್ಯಾಗ್‌ನಿಂದ ಏನು ಪ್ರಯೋಜನ?
  ಹೆದ್ದಾರಿಯಲ್ಲಿ ಪ್ರಯಾಣಿಸುವಾಗ ಫಾಸ್ಟ್‌ಟ್ಯಾಗ್ ಹೊಂದಿದ್ದರೆ ಹಲವು ಪ್ರಯೋಜನಗಳಿದ್ದು, ಸುಲಭವಾಗಿ ಟೋಲ್ ಶುಲ್ಕ ಪಾವತಿ ಮಾಡಬಹುದಲ್ಲದೇ ಆನ್‌ಲೈನ್ ರೀಚಾರ್ಜಿಂಗ್, ಎಸ್ಎಂಎಸ್ ಅಲರ್ಟ್ ಸೌಲಭ್ಯವಿರುತ್ತದೆ. ಇದರಿಂದ ನಿಮ್ಮ ಫಾಸ್ಟ್‌ಟ್ಯಾಗ್‌ನಲ್ಲಿರುವ ಮೊತ್ತ ಮತ್ತು ನೀವು ಹೊರಟಿರುವ ಸ್ಥಳಗಳಲ್ಲಿನ ಟೋಲ್ ಸಂಗ್ರಹ ಕೇಂದ್ರಗಳ ಮಾಹಿತಿ ಜೊತೆ ಶುಲ್ಕುಗಳ ಮಾಹಿತಿ ಸಂದೇಶಗಳನ್ನು ಪಡೆಯಬಹುದಾಗಿದ್ದು, ವಿಶೇಷ ಸಂದರ್ಭಗಳಲ್ಲಿ ನೀವು ಕ್ಯಾಶ್ ಬ್ಯಾಕ್ ಆಫರ್‌ಗಳನ್ನು ಸಹ ಪಡೆಯುವ ಅವಕಾಶವಿರುತ್ತೆ.

  MOST READ: ಪ್ರಧಾನಿ ಮೋದಿ ಪ್ರಯಾಣಕ್ಕೆ ಮತ್ತೊಂದು ದುಬಾರಿ ಕಾರು ಖರೀದಿ..!

 • ಟೋಲ್‌ಗೇಟ್‌ಗಳಲ್ಲಿ ಫಾಸ್ಟ್‌ಟ್ಯಾಗ್ ಲೈನ್ ಹೆಚ್ಚಳ- ಇನ್ಮುಂದೆ ಶುಲ್ಕ ಪಾವತಿಗೆ ಹೆಚ್ಚು ಕಾಯಬೇಕಿಲ್ಲ..!

  ಫಾಸ್ಟ್‌ಟ್ಯಾಗ್ ರೀಚಾರ್ಜ್ ಹೇಗೆ?
  ಕ್ರೇಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್ ಬ್ಯಾಕಿಂಗ್ ಇಲ್ಲವೇ ಚೆಕ್ ಪಾವತಿಸಿಯೂ ರೀಚಾರ್ಜ್ ಮಾಡಿಕೊಳ್ಳಬಹುದಾಗಿದ್ದು, ಕನಿಷ್ಠ ರೂ.100 ರಿಂದ ಗರಿಷ್ಠ 1 ಲಕ್ಷ ತನಕ ರೀಚಾರ್ಜ್ ಮಿತಿ ಹೊಂದಿರುತ್ತೆ.

 • ಟೋಲ್‌ಗೇಟ್‌ಗಳಲ್ಲಿ ಫಾಸ್ಟ್‌ಟ್ಯಾಗ್ ಲೈನ್ ಹೆಚ್ಚಳ- ಇನ್ಮುಂದೆ ಶುಲ್ಕ ಪಾವತಿಗೆ ಹೆಚ್ಚು ಕಾಯಬೇಕಿಲ್ಲ..!

  ಫ್ಯಾಸ್ಟ್ ಟ್ಯಾಗ್ ಹೇಗೆ ಕಾರ್ಯನಿರ್ವಹಿಸುತ್ತೆ?
  ಆರ್‌ಎಫ್ಐಡಿ ಎನ್ನುವ ತಂತ್ರಜ್ಞಾನ ಸಹಾಯದೊಂದಿಗೆ ಕಾರ್ಯನಿರ್ವಹಿಸುವ ಫಾಸ್ಟ್‌ಟ್ಯಾಗ್ ಸೌಲಭ್ಯವು ಕಾರಿನ ವಿಂಡ್‌ಶೀಲ್ಡ್ ಬಳಿ ಅಳವಡಿಸಲಾಗಿರುತ್ತದೆ. ಇದು ಟೋಲ್ ಪ್ಲಾಜಾನಲ್ಲಿರುವ ಫಾಸ್ಟ್ ಟ್ಯಾಗ್ ಲೈನ್ ಮೂಲಕ ಹಾಯ್ದುಹೋಗುವಾಗ ಆಟೋಮ್ಯಾಟಿಕ್ ಆಗಿ ನಿಮ್ಮ ಫಾಸ್ಟ್‌ಟ್ಯಾಗ್ ಖಾತೆ ಮೂಲಕ ಶುಲ್ಕ ಸಂದಾಯವಾಗುತ್ತೆ. ಶುಲ್ಕ ಸಂದಾಯವಾದ ಕೆಲವೇ ಸೇಕೆಂಡುಗಳಲ್ಲಿ ಶುಲ್ಕ ಪಾವತಿಯಾದ ಸಂದೇಶವು ನಿಮ್ಮ ನೋಂದಣಿಯಾದ ಮೊಬೈಲ್ ಸಂಖ್ಯೆಗೆ ಬರಲಿದ್ದು, ಟ್ರೋಲ್ ಪ್ಲಾಜಾ ಮಾಹಿತಿ ಮತ್ತು ಕಡಿತವಾದ ಶುಲ್ಕದ ಮೊತ್ತ ಮತ್ತು ಉಳಿದ ಕರೆನ್ಸಿ ಮಾಹಿತಿಯೂ ನಿಮಗೆ ಲಭ್ಯವಾಗಲಿದೆ.

 • ಟೋಲ್‌ಗೇಟ್‌ಗಳಲ್ಲಿ ಫಾಸ್ಟ್‌ಟ್ಯಾಗ್ ಲೈನ್ ಹೆಚ್ಚಳ- ಇನ್ಮುಂದೆ ಶುಲ್ಕ ಪಾವತಿಗೆ ಹೆಚ್ಚು ಕಾಯಬೇಕಿಲ್ಲ..!

  ಇದಕ್ಕಾಗಿಯೇ ಫಾಸ್ಟ್‌ಟ್ಯಾಗ್ ಆಪ್ ಕೂಡಾ ಲಭ್ಯವಿದ್ದು, ಈ ಮೂಲಕವು ನೀವು ಮತ್ತಷ್ಟು ಮಾಹಿತಿ ಪಡೆಯಬಹದು. ಫಾಸ್ಟ್ ಟ್ಯಾಗ್ ನೋಂದಣಿ ಮಾಡುವಾಗ ಆ್ಯಪ್‌ಗೆ ಸಂಬಂಧಿಸಿದಂತೆ ನಿಮಗೆ ಕೆಲವು ಪಾಸ್‌ವರ್ಡ್ ನೀಡಲಾಗುತ್ತೆ. ಆ್ಯಪ್ ಬಳಸುವಾಗ ನೀವು ನಿಮ್ಮ ಪರ್ಸನಲ್ ಪಾಸ್‌ವರ್ಡ್ ಬಳಕೆ ಮಾಡಬೇಕಾಗುತ್ತೆ. ಯಾಕೆಂದ್ರೆ ಇದರಲ್ಲಿ ವ್ಯಯಕ್ತಿಕ ಮಾಹಿತಿ ನೀಡಬೇಕಾಗುತ್ತೆ.

 • ಟೋಲ್‌ಗೇಟ್‌ಗಳಲ್ಲಿ ಫಾಸ್ಟ್‌ಟ್ಯಾಗ್ ಲೈನ್ ಹೆಚ್ಚಳ- ಇನ್ಮುಂದೆ ಶುಲ್ಕ ಪಾವತಿಗೆ ಹೆಚ್ಚು ಕಾಯಬೇಕಿಲ್ಲ..!

  ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಒಂದು ಫಾಸ್ಟ್ ಟ್ಯಾಗ್ ಅನ್ನು ಮತ್ತೊಂದು ವಾಹನಕ್ಕೆ ಬಳಕೆ ಮಾಡಲು ಯಾವುದೇ ಅವಕಾಶವಿಲ್ಲ. ಹೀಗಾಗಿ ಫಾಸ್ಟ್‍‌ಟ್ಯಾಗ್ ಬೇಡ ಎನ್ನಿಸಿದಲ್ಲಿ ವಾಹನ ಮಾಲೀಕರು ಕಸ್ಟಮರ್ ಕೇರ್ ಮೂಲಕ ಸ್ಥಗಿತಗೊಳಿಸಬಹುದಾದ ಸೌಲಭ್ಯವಿದೆ.
ಕೇಂದ್ರ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರವು ಡಿಸೆಂಬರ್ 1ರಿಂದಲೇ ಫಾಸ್ಟ್‌ಟ್ಯಾಗ್ ಮೂಲಕ ಶುಲ್ಕ ವಸೂಲಿ ಸೌಲಭ್ಯವನ್ನು ಕಡ್ಡಾಯವಾಗಿ ಜಾರಿಗೆ ತರುತ್ತಿದೆ. ಈ ಹಿನ್ನಲೆಯಲ್ಲಿ ಹೊಸ ನಿಯಮ ಜಾರಿಗೊಳಿಸುವುದಕ್ಕೂ ಮುನ್ನ ಪ್ರತಿ ಟೋಲ್ ವಸೂಲಿ ಕೇಂದ್ರಗಳಲ್ಲೂ ಫಾಸ್ಟ್‌ಟ್ಯಾಗ್ ಸೌಲಭ್ಯವನ್ನು ತ್ವರಿತಗತಿಯಲ್ಲಿ ಅಳವಡಿಕೆ ಮಾಡುತ್ತಿದ್ದು, ವರ್ಷಾಂತ್ಯಕ್ಕೆ ಪೂರ್ಣಪ್ರಮಾಣದಲ್ಲಿ ಫಾಸ್ಟ್‌ಟ್ಯಾಗ್ ಮೂಲಕವೇ ಶುಲ್ಕ ವಸೂಲಿ ಮಾಡಲು ಸಿದ್ದತೆ ನಡೆಸಿದೆ.

ಹೆಲ್ತ್