Back
Home » ಸುದ್ದಿ
ಸುಪ್ರೀಂ ತೀರ್ಪಿನ ಬಳಿಕವೂ, ಮೋದಿ ಸರ್ಕಾರ ಸುಗ್ರಿವಾಜ್ಞೆ ಬಳಸಬಹುದೆ?
Oneindia | 9th Nov, 2019 10:06 AM
 • ತೀರ್ಪು ಯಾರಿಗೂ ಒಪ್ಪಿಗೆ ಆಗದಿದ್ದರೆ?

  ಒಂದು ವೇಳೆ ನವೆಂಬರ್ 17ರಂದು ಈ ನ್ಯಾಯಪೀಠದಿಂದ ತೀರ್ಪು ಸಿಗದಿದ್ದರೆ ಮತ್ತೊಂದು ನ್ಯಾಯಪೀಠಕ್ಕೆ ಪ್ರಕರಣ ವರ್ಗಾವಣೆಯಾಗಲಿದೆ. ಆದರೆ, ಅಂತಿಮ ತೀರ್ಪು ಎರಡು ಕಡೆ ಅರ್ಜಿದಾರರಿಗೆ ಒಪ್ಪಿಗೆಯಾಗದಿದ್ದರೆ, ಕೇಂದ್ರ ಸರ್ಕಾರ ತನ್ನ ಪರಮಾಧಿಕಾರ ಬಳಸಿ, ವಿವಾದ ಇತ್ಯರ್ಥಕ್ಕೆ ಮುಂದಾಗಬಹುದು. ಸುಗ್ರಿವಾಜ್ಞೆ ಹೊರಡಿಸಿ ರಾಮ ಮಂದಿರ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬಹುದು. ಇದರ ಪರಿಣಾಮವೇನು? ಅಥವಾ ಐವರು ನ್ಯಾಯಮೂರ್ತಿಗಳಿಂದ 5:0, 3:2, 4:1 ಹೀಗೆ ಒಮ್ಮತ ತೀರ್ಪು ಬಂದ ಬಳಿಕವೂ ಸುಗ್ರಿವಾಜ್ಞೆ ಬಳಸುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ.


 • ರಾಮಜನ್ಮ ಭೂಮಿ ಆಸ್ತಿ ಹಕ್ಕು ಪ್ರಕರಣ

  ಏನಿದು ಪ್ರಕರಣ?: 1992 ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಸಮಯದಲ್ಲಿ ಒಟ್ಟು 67 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿತ್ತು. ಅದರಲ್ಲಿ ಕೇವಲ 2.7 ಎಕರೆ ಭೂಮಿಯಷ್ಟೇ ವಿವಾದಾತ್ಮಕ ಸ್ಥಳವಾಗಿದ್ದು, ಉಳಿದವು ವಿವಾದಮುಕ್ತವಾಗಿವೆ. ಆದ್ದರಿಂದ ಈ ಭೂಮಿಯ ವಾರಸುದಾರರಾದ ರಾಮ ಜನ್ಮಭೂಮಿ ನ್ಯಾಸ್ ಟ್ರಸ್ಟ್ ಗೆ ಅದನ್ನು ಹಿಂದಿರುಗಿಸಬೇಕು ಎಂದು ಕೇಂದ್ರ ಸರ್ಕಾರ ಮನವಿ ಮಾಡಿತ್ತು. 2.77 ಎಕರೆ ವಿಸ್ತೀರ್ಣದ ಭೂಮಿಯನ್ನು ಸದ್ಯಕ್ಕೆ ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾರ ಹಾಗು ರಾಮ್ ಲಲ್ಲಾ ಸಮಾನಾಗಿ ಹೊಂದಿವೆ. 2010ರ ಅಲಹಾಬಾದ್ ಹೈಕೋರ್ಟ್ ಆದೇಶದ ವಿರುದ್ಧ 14ಕ್ಕೂ ಅಧಿಕ ಮೇಲ್ಮನವಿಯನ್ನು ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಲಾಗಿತ್ತು. ಈ ಅರ್ಜಿ ವಿಚಾರಣೆ ಅಂತಿಮ ಹಂತ ತಲುಪಿದ್ದು, ತೀರ್ಪು ಹೊರಬೀಳಬೇಕಿದೆ.

  ಅಯೋಧ್ಯೆ ತೀರ್ಪು; ನ್ಯಾಯಮೂರ್ತಿಗಳ ಪರಿಚಯ


 • ಅಲಹಾಬಾದ್ ಹೈಕೋರ್ಟ್ 2010ರಲ್ಲಿ ಆದೇಶ

  ವಿವಾದಿತ ತಾಣ ಹಂಚಿಕೆ ಮಾಡಿಕೊಳ್ಳುವಂತೆ ಅಲಹಾಬಾದ್ ಹೈಕೋರ್ಟ್ 2010ರಲ್ಲಿ ಆದೇಶ ನೀಡಿತ್ತು. ತಲಾ ಮೂರನೇ ಒಂದು ಭಾಗ ಮುಸ್ಲಿಂ ಸಮುದಾಯ, ಹಿಂದೂಗಳಿಗೆ ಹಂಚಿಕೆ. ನಿರ್ಮೋಹಿ ಅಖಾರಕ್ಕೆ ಮುಖ್ಯ ವಿವಾದಿತ ಭಾಗ ಎಂದು ಆದೇಶ ನೀಡಿತ್ತು. ಇದಾದ ಬಳಿಕ ಮೇ 2011ರಲ್ಲಿ 2010ರ ಹೈಕೋರ್ಟ್ ತೀರ್ಪಿನ ವಿರುದ್ಧ ಹಿಂದೂ ಹಾಗೂ ಮುಸ್ಲಿಂ ಸಮುದಾಯದಿಂದ ಮೇಲ್ಮನವಿ ಸಲ್ಲಿಸಲಾಯಿತು. ನಂತರ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿತು.


 • ತ್ರಿಸದಸ್ಯ ಪೀಠದಲ್ಲಿ 2:1 ರ ಫಲಿತಾಂಶ ಬಂದಿದೆ

  ವಿಸ್ತೃತ ಸಂವಿಧಾನ ಪೀಠ ರಚನೆಗೆ ಆಗ್ರಹಿಸಿದ್ದ ಮುಸ್ಲಿಂ ಸಂಘಟನೆಗಳ ಮನವಿಯನ್ನು ನ್ಯಾ. ನಜೀರ್ ಪುರಸ್ಕರಿಸಿದರು. ಆದರೆ, ಇದರ ವಿರುದ್ಧ ತ್ರಿಸದಸ್ಯ ಪೀಠದಲ್ಲಿ 2:1 ರ ಫಲಿತಾಂಶ ಬಂದಿದೆ. ಸಿಜೆಐ ದೀಪಕ್ ಮಿಶ್ರಾ ಹಾಗೂ ನ್ಯಾ ಅಶೋಕ್ ಭೂಷಣ್ ಎತ್ತಿ ಹಿಡಿದರೆ, ನ್ಯಾ ಅಬ್ದುಲ್ ನಜೀರ್ ಅಸಮ್ಮತಿ ವ್ಯಕ್ತಪಡಿಸಿದರು. ಇದಾದ ಬಳಿಕವೇ ಜಸ್ಟಿಸ್ ಬೊಬ್ಡೆ, ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ಜಸ್ಟೀಸ್ ಚಂದ್ರಚೂಡ್, ಜಸ್ಟೀಸ್ ಭೂಷಣ್, ಜಸ್ಟೀಸ್ ಅಬ್ದುಲ್ ನಜೀರ್ ನ್ಯಾಯಪೀಠದಿಂದ ತ್ವರಿತಗತಿಯಲ್ಲಿ ವಿಚಾರಣೆ ಮುಂದುವರೆಯಿತು. ಕೋರ್ಟ್ ಮೇಲ್ವಿಚಾರಣೆಯಲ್ಲಿ ರಾಮಜನ್ಮಭೂಮಿ ವಿವಾದವನ್ನು ಸಂಧಾನದ ಮೂಲಕ ಬಗೆಹರಿಸುವ ಪ್ರಯತ್ನವೂ ವಿಫಲವಾಯಿತು. ಮೂವರು ಸಂಧಾನಕಾರರು ನೀಡಿದ ವರದಿ


 • ಸರ್ಕಾರದ ನಡೆಯನ್ನು ಪ್ರಶ್ನಿಸಬಹುದು

  ಸುಗ್ರಿವಾಜ್ಞೆ ಹೊರಡಿಸಿ ಮಂದಿರ ನಿರ್ಮಾಣಕ್ಕೆ ಚಾಲನೆ ನೀಡಬಹುದು ಧಾರ್ಮಿಕ ಮುಖಂಡರ ಸಲಹೆಯಂತೆ ಅಗಮ ಶಾಸ್ತ್ರ ಬಲ್ಲವಂಥರನ್ನು ನೇಮಿಸಬಹುದು. ಮೋದಿ ಸರ್ಕಾರ ಈ ಮಾರ್ಗ ಹಿಡಿದರೆ ಸುಪ್ರೀಂಕೋರ್ಟ್ ಏನೇ ತೀರ್ಪು ನೀಡಿದರೂ ಅದು ಜಾರಿಗೆ ಬರುವುದಿಲ್ಲ. ಆದರೆ ಸರ್ಕಾರದ ನಡೆಯನ್ನು ಪ್ರಶ್ನಿಸಬಹುದು. ಸರ್ಕಾರಕ್ಕೆ ಸುಗ್ರಿವಾಜ್ಞೆ ಹೊರಡಿಸುವ ಎಲ್ಲಾ ಹಕ್ಕನ್ನು ಸಂವಿಧಾನ ನೀಡಿದೆ. ಆಸ್ತಿ ಹಕ್ಕು ಕ್ಲೇಮ್ ಮಾಡುವವರಿಗೆ ಪರಿಹಾರ ಒದಗಿಸಿ ವ್ಯಾಜ್ಯ ಇತ್ಯರ್ಥ ಮಾಡಿಕೊಳ್ಳಬಹುದು ಎಂದು ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

  ಅಯೋಧ್ಯೆ ತೀರ್ಪು: ಸೋಲೂ ಅಲ್ಲ, ಗೆಲುವೂ ಅಲ್ಲ ಎಂದ ಮೋದಿ


 • ಸಂವಿಧಾನದ ಆರ್ಟಿಕಲ್ 123 ಪ್ರಕಾರ

  ಸಂವಿಧಾನದ ಆರ್ಟಿಕಲ್ 123 ಪ್ರಕಾರ, ಸುಗ್ರಿವಾಜ್ಞೆ ಹೊರಡಿಸುವುದು ಅಷ್ಟು ಸುಲಭವ ಕೆಲಸವಲ್ಲ. ಹಾಗು ಅದಕ್ಕೆ ಸೂಕ್ತ ಪರಿಸ್ಥಿತಿ ಇದೆಯೇ ಎಂಬುದು ಸಾಬೀತಾಗಬೇಕು. ಸಂಸತ್ತಿನ ಉಭಯ ಸದನ, ರಾಷ್ಟ್ರಪತಿಗಳಿಗೆ ಈ ಪರಿಸ್ಥಿತಿಯಲ್ಲಿ ಸುಗ್ರಿವಾಜ್ಞೆ ಹೊರಡಿಸುವುದೊಂದೇ ಮಾರ್ಗ ಎಂಬುದು ಮನವರಿಕೆಯಾದರೆ ಮಾತ್ರ ಸರ್ಕಾರ ಇಂಥ ಕ್ರಮಕ್ಕೆ ಮುಂದಾಗಬಹುದು.
ನವದೆಹಲಿ, ನವೆಂಬರ್ 09: ಅಯೋಧ್ಯಾ ಭೂ ವಿವಾದ ಪ್ರಕರಣದ ಅಂತಿಮ ತೀರ್ಪು ನೀಡುವ ದಿನ, ಸಮಯ ನಿಗದಿಯಾಗಿದ್ದು, ಸಾಂವಿಧಾನಿಕ ಪೀಠವು ಶನಿವಾರ(ನವೆಂಬರ್ 09) ಬೆಳಗ್ಗೆ 10.30ಕ್ಕೆ ನೀಡಲಿರುವ ಅಂತಿಮ ತೀರ್ಪಿನ ಬಗ್ಗೆ ಎಲ್ಲೆಡೆ ಕುತೂಹಲ ಮೂಡಿದೆ.

ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗಾಯ್ ನೇತೃತ್ವದ ಐವರು ಜಸ್ಟೀಸ್ ಗಳಿರುವ ನ್ಯಾಯಪೀಠವು ಐತಿಹಾಸಿಕ ತೀರ್ಪು ನೀಡಿದ ಬಳಿಕವೂ ಮೋದಿ ಸರ್ಕಾರವು ಈ ವಿವಾದಕ್ಕೆ ಸಂಬಂಧಿಸಿದಂತೆ ತನ್ನ ಸುಗ್ರಿವಾಜ್ಞೆ ಹೊರಡಿಸಿ ತನ್ನ ಪರಮಾಧಿಕಾರ ಬಳಸಬಹುದೇ? ಎಂಬ ಚರ್ಚೆ ನಡೆಯುತ್ತಿದೆ.

ಅಯೋಧ್ಯಾ ಪ್ರಕರಣ Timeline : 1528 ರಿಂದ 2019ರ ತನಕ

ಅಯೋಧ್ಯೆಯಲ್ಲಿರುವ ರಾಮಜನ್ಮ ಭೂಮಿ ಆಸ್ತಿ ಹಕ್ಕು ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ ತಿಂಗಳಿನಲ್ಲಿ 40 ದಿನಗಳ ನಡೆದ ಪ್ರತಿದಿನ ವಿಚಾರಣೆ ಅಕ್ಟೋಬರ್ 16ರಂದು ಅಂತ್ಯ ಕಂಡಿದೆ. ನವೆಂಬರ್ 17 ರೊಳಗೆ ತೀರ್ಪು ನೀಡುವ ನಿರೀಕ್ಷೆಯಿತ್ತು.

ಜಸ್ಟೀಸ್ ಬೊಬ್ಡೆ ಅವರಲ್ಲದೆ, ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ಜಸ್ಟೀಸ್ ಚಂದ್ರಚೂಡ್, ಜಸ್ಟೀಸ್ ಭೂಷಣ್, ಜಸ್ಟೀಸ್ ಅಬ್ದುಲ್ ನಜೀರ್ ಅವರನ್ನೊಳಗೊಂಡ ನ್ಯಾಯಪೀಠವು, ಶನಿವಾರ(ನವೆಂಬರ್ 09)ದಂದು ನ್ಯಾಯಾಲಯಕ್ಕೆ ರಜೆ ಇದ್ದರೂ ಕಾರ್ಯ ನಿರ್ವಹಿಸಲು ಮುಂದಾಗಿದೆ.

   
 
ಹೆಲ್ತ್