Back
Home » ಸುದ್ದಿ
ಅಯೋಧ್ಯೆ ವಿವಾದ; ಅಲಹಾಬಾದ್ ಕೋರ್ಟ್ ತೀರ್ಪು ಏನಾಗಿತ್ತು?
Oneindia | 9th Nov, 2019 11:08 AM

ನವದೆಹಲಿ, ನವೆಂಬರ್ 09 : ಅಯೋಧ್ಯೆಯ 2.77 ಎಕರೆ ಜಾಗ ದಶಕಗಳ ಕಾಲದಿಂದ ವಿವಾದಕ್ಕೆ ಕಾರಣವಾಗಿತ್ತು. 2010ರಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.

ಶನಿವಾರ ಸುಪ್ರೀಂಕೋರ್ಟ್ ಮುಖ್ಯ ನ್ಯಾಯೂರ್ತಿ ರಂಜಯ್ ಗೋಗಾಯ್ ನೇತೃತ್ವದ ಸಂವಿಧಾನಿಕ ಪೀಠದ ಅಯೋಧ್ಯೆ ಭೂ ವಿವಾದದ ತೀರ್ಪು ನೀಡಿದೆ. 2010ರಲ್ಲಿ ಅಲಹಾಬಾದ್ ನ್ಯಾಯಾಲಯ 2:1ರ ಅನುಪಾತದಲ್ಲಿ ವಿವಾದಿತ ಭೂಮಿಯನ್ನು ಹಂಚಿಕೆ ಮಾಡಿತ್ತು.

ಅಯೋಧ್ಯಾ ಅಂತಿಮ ತೀರ್ಪು: ಹಿಂದೂ, ಮುಸ್ಲಿಮರಿಗೆ ಒಪ್ಪಿಗೆಯಾಗದಿದ್ದರೆ...?

2010ರ ಸೆಪ್ಟೆಂಬರ್‌ನಲ್ಲಿ ಮೂವರು ನ್ಯಾಯಮೂರ್ತಿಗಳ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಅರ್ಜಿದಾರರು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಐವರು ನ್ಯಾಯೂರ್ತಿಗಳ ಸಂವಿಧಾನಿಕ ಪೀಠ ಶನಿವಾರ ತೀರ್ಪು ನಿಡಿದೆ.

ಅಯೋಧ್ಯೆ ತೀರ್ಪು; ಐವರು ನ್ಯಾಯಮೂರ್ತಿಗಳ ಪರಿಚಯ

ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಎಸ್‌. ಯು. ಖನ್ನಾ, ನ್ಯಾಯಮೂರ್ತಿ ಸುಧೀರ್ ಅಗರ್‌ವಾಲ್ ಮತ್ತು ನ್ಯಾಯಮೂರ್ತಿ ಡಿ. ವಿ. ಶರ್ಮಾ 2:1ರ ಅನುಪಾತದಲ್ಲಿ 2.77 ಎಕರೆ ಜಾಗವನ್ನು ಹಂಚಿಕೆ ಮಾಡಿತ್ತು. ಮೇ 9, 2011ರಲ್ಲಿ ಈ ಆದೇಶವನ್ನು ಪ್ರಶ್ನೆ ಮಾಡಲಾಯಿತು.

ಅಯೋಧ್ಯೆ ತೀರ್ಪು: ಸೋಲೂ ಅಲ್ಲ, ಗೆಲುವೂ ಅಲ್ಲ ಎಂದ ಮೋದಿ

ಸುಮಾರು 6 ಸಾವಿರ ಪುಟಗಳ ತೀರ್ಪನ್ನು 5 ಭಾಗವಾಗಿ ಮಾಡಿ ಅಲಹಾಬಾದ್ ಹೈಕೋರ್ಟ್ ನೀಡಿತ್ತು. 1961ರಲ್ಲಿ ಸುನ್ನಿ ಬೋರ್ಡ್, 1989ರಲ್ಲಿ ಸಲ್ಲಿಕೆಯಾಗಿದ್ದ ಎರಡು ಅರ್ಜಿಗಳನ್ನು ನ್ಯಾಯಾಲಯ ತೀರ್ಪು ನೀಡುವಾಗ ಕೈ ಬಿಟ್ಟಿತ್ತು.

ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಸಂವಿಧಾನಿಕ ಪೀಠ ತೀರ್ಪನ್ನು ಕಾಯ್ದಿರಿಸಿತ್ತು. ನವೆಂಬರ್ 9ರ ಶನಿವಾರ ತೀರ್ಪನ್ನು ಪ್ರಕಟಿಸಲಾಗಿದೆ.

   
 
ಹೆಲ್ತ್