Back
Home » ಸುದ್ದಿ
ಗಾಂಧಿ ಕುಟುಂಬ ಇಷ್ಟೊಂದು ಬಾರಿ ಎಸ್‌ಪಿಜಿ ನಿಯಮ ಉಲ್ಲಂಘಿಸಿತ್ತಾ!
Oneindia | 9th Nov, 2019 10:58 AM
 • 2017ರಲ್ಲಿ ಎಸ್‌ಪಿಜಿ ನಿಯಮ ಉಲ್ಲಂಘನೆ

  2017ರ ಆಗಸ್ಟ್ 4ರಂದು ಎಸ್‌ಪಿಜಿ ಸೂಚನೆಯನ್ನು ಧಿಕ್ಕರಿಸಿ ಬುಲೆಟ್ ಪ್ರೂಫ್ ಇಲ್ಲದೆ ಕಾರಿನಲ್ಲಿ ಸಂಚರಿಸಿದ್ದರು. ಅಂದು ರಾಹುಲ್ ಗಾಂಧಿ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರು. ರಾಹುಲ್ ಗಾಂಧಿ ಬುಲೆಟ್ ಪ್ರೂಫ್ ಕಾರನ್ನು ನಿರಾಕರಿಸಿದ್ದಕ್ಕೆ ಇಂತಹ ಘಟನೆ ನಡೆಯಿತು ಎಂದು ಲೋಕಸಭೆಯಲ್ಲಿ ಕಾಂಗ್ರೆಸ್‌ನವರೇ ಧ್ವನಿ ಎತ್ತಿದ್ದರು.


 • ಎಸ್‌ಪಿಜಿ ಅಧಿಕಾರಿ ಇಲ್ಲದೆ ವಿದೇಶ ಪ್ರಯಾಣ

  1991ರಿಂದ ಇಲ್ಲಿಯವರೆಗೆ 121 ಬಾರಿ ರಾಹುಲ್ ಗಾಂಧಿ ವಿದೇಶ ಪ್ರವಾಸ ಕೈಗೊಂಡಿದ್ದರೂ ಕೂಡ ಅದರಲ್ಲಿ 100 ಬಾರಿ ಎಸ್‌ಪಿಜಿ ಅಧಿಕಾರಿ ಇಲ್ಲದೆ ಅವರೊಬ್ಬರೆ ತೆರಳಿದ್ದರು.

  ಗಾಂಧಿ ಕುಟುಂಬ ಎಷ್ಟು ಬಾರಿ ಎಸ್‌ಪಿಜಿ ನಿಯಮ ಉಲ್ಲಂಘಿಸಿತ್ತು: ಪೂರ್ಣ ಮಾಹಿತಿ


 • ಸೋನಿಯಾರಿಂದ ಕೂಡ ಎಸ್‌ಪಿಜಿ ಉಲ್ಲಂಘನೆ

  ಸೋನಿಯಾ ಗಾಂಧಿ 2015ರಿಂದ ಇಲ್ಲಿಯವರೆಗೆ ದೆಹಲಿಯಲ್ಲಿ 50 ಬಾರಿ ಎಸ್ಪಿಜಿ ಸೂಚಿಸಿರುವ ವಾಹನದಲ್ಲಿ ತೆರಳದೆ ನಿಯಮ ಉಲ್ಲಂಘಿಸಿದ್ದಾರೆ. ಹಾಗಯೇ 13 ಬಾರಿ ದೆಹಲಿಯಿಂದಾಚೆಗೆ ಬುಲೆಟ್ ಪ್ರೂಫ್ ಕಾರಿನಲ್ಲಿ ತೆರಳದೆ ನಿಯಮ ಉಲ್ಲಂಘಿಸಿದ್ದಾರೆ. ಎಸ್‌ಪಿಜಿ ಅಧಿಕಾರಿ ಇಲ್ಲದೆ 24 ಬಾರಿ ವಿದೇಶ ಪ್ರವಾಸ ಕೈಗೊಂಡಿದ್ದಾರೆ.


 • ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಂದಲೂ ಎಸ್‌ಪಿಜಿ ಸೇವೆ ನಿರಾಕರಣೆ

  ದೆಹಲಿಯಾದ್ಯಂದ ಪ್ರಿಯಾಂಕಾ ಗಾಂಧಿ 339 ಬಾರಿ ಎಸ್‌ಪಿಜಿ ಸೂಚಿಸಿರುವ ವಾಹನದಲ್ಲಿ ತೆರಳಿಲ್ಲ. 64 ಬಾರಿ ದೆಹಲಿಯನ್ನು ಬಿಟ್ಟು ಹೊರಗಡೆ ಸಂಚರಿಸಿದ್ದಾರೆ. 1991ರಿಂದ 99 ಬಾರಿ ಎಸ್‌ಪಿಜಿ ಅಧಿಕಾರಿ ವಿದೇಶ ಪ್ರಯಾಣ ಮಾಡಿದ್ದಾರೆ. ಕೇವಲ 21 ಬಾರಿ ಮಾತ್ರ ಎಸ್‌ಪಿಜಿ ಸೌಲಭ್ಯ ಬಳಸಿದ್ದಾರೆ.
ನವದೆಹಲಿ, ನವೆಂಬರ್ 9: ಗಾಂಧಿ ಕುಟುಂಬದ ಮೂವರು ನಾಯಕರು ಎಸ್‌ಪಿಜಿ ಭದ್ರತಾ ಸಲಹೆಗಳನ್ನು ಉಲ್ಲಂಘಿಸಿದ್ದಾರೆ ಎನ್ನುವ ಕಾರಣಕ್ಕೆ ಅವರಿಗೆ ನೀಡಲಾಗಿದ್ದ ಎಸ್‌ಪಿಜಿ ಹಿಂಪಡೆದಿರುವುದು ಎಲ್ಲರಿಗೂ ತಿಳಿಸಿದೆ.

ಹಾಗಾದರೆ ರಾಹುಲ್ ಗಾಂಧಿ ಯಾವ್ಯಾವ ನಿಯಮಗಳನ್ನು ಉಲ್ಲಂಘಿಸಿದ್ದರು, ಯಾಕಾಗಿ ಅವರು ಎಸ್‌ಪಿಜಿ ಸೌಲಭ್ಯವನ್ನು ಕಳೆದುಕೊಂಡಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ ಓದಿ...

-2015ರಿಂದ ಎಸ್‌ಪಿಜಿ ಸೂಚಿಸಿರುವ ಬುಲೆಟ್ ಪ್ರೂಫ್ ವಾಹನದಲ್ಲಿ ತೆರಳಲು ನಿರಾಕರಿಸಿ ದೆಹಲಿಯಲ್ಲಿ 1,832 ಬಾರಿ ನಿಯಮ ಉಲ್ಲಂಘಿಸಿದ್ದಾರೆ.

-2005-2014ರ ನಡುವೆ ದೆಹಲಿಯಿಂದ ಹೊರಗೆ ಪ್ರಯಾಣಿಸುವಾಗ 247 ಬಾರಿ ಬುಲೆಟ್ ಪ್ರೂಫ್ ರಹಿತ ವಾಹನವನ್ನು ಬಳಕೆ ಮಾಡಿದ್ದಾರೆ.

-ರಾಹುಲ್ ಗಾಂಧಿ ಹಲವು ಬಾರಿ ವಾಹನದ ಮೇಲೆ ಕುಳಿತು ಸಂಚಾರ ಮಾಡಿದ್ದಾರೆ ಇದು ಮೋಟಾರು ವಾಹನ ಕಾಯಿದೆಯನ್ನು ಉಲ್ಲಂಘಿಸಿದ್ದಾರೆ ಎನ್ನುವ ವಿಚಾರವನ್ನು ಮುಂದಿಟ್ಟುಕೊಂಡು ಅವರಿಗೆ ನೀಡಿದ್ದ ಎಸ್‌ಪಿಜಿ ಭದ್ರತೆಯನ್ನು ಹಿಂಪಡೆಯಲಾಗಿದೆ.

ಗಾಂಧಿ ಕುಟುಂಬದ ಎಸ್‌ಪಿಜಿ ಭದ್ರತೆ ಹಿಂಪಡೆಯಲು ಕಾರಣವೇನು?

1984ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಅಂಗರಕ್ಷಕರಿಂದಲೇ ಹತ್ಯೆಯಾದ ಬಳಿಕ ಪ್ರಧಾನಿಗಳ ರಕ್ಷಣೆಗಾಗಿ 1995ರಲ್ಲಿ ಎಸ್‌ಪಿಜಿ ಭದ್ರತಾ ಕಾಯ್ದೆ ಜಾರಿಗೆ ತರಲಾಗಿತ್ತು.

ರಾಜೀವ್ ಗಾಂಧಿ ಅವರ ಹತ್ಯೆಯ ಬಳಿಕ 1991ರಲ್ಲಿ ಎಸ್‌ಪಿಜಿ ಭದ್ರತೆಯನ್ನು ಮಾಜಿ ಪ್ರಧಾನಿ ಮತ್ತು ಅವರ ಕುಟುಂಬದವರಿಗೆ ಹತ್ತು ವರ್ಷಗಳವರೆಗೆ ವಿಸ್ತರಿಸುವಂತೆ ಕಾಯ್ದೆಯಲ್ಲಿ ತಿದ್ದುಪಡಿ ಮಾಡಲಾಗಿತ್ತು.

2003ರಲ್ಲಿ ಈ ಕಾಯ್ದೆಗೆ ತಿದ್ದುಪಡಿ ತಂದಿದ್ದ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ, ಈ ಸ್ವಯಂಚಾಲಿತ ಭದ್ರತೆ ವಿಸ್ತರಣೆಯ ಅವಧಿಯನ್ನು ಹತ್ತು ವರ್ಷದಿಂದ ಒಂದು ವರ್ಷಕ್ಕೆ ಇಳಿಸಲಾಗಿತ್ತು. ಮಾಜಿ ಪ್ರಧಾನಿ ಮತ್ತು ಅವರ ಕುಟುಂಬದವರಿಗೆ ಇರುವ ಬೆದರಿಕೆಯ ಮಟ್ಟವನ್ನು ಪರಿಶೀಲಿಸಿ ಎಸ್‌ಪಿಜಿ ವಿಸ್ತರಿಸುವಂತೆ ತಿದ್ದುಪಡಿ ಮಾಡಲಾಗಿತ್ತು.

   
 
ಹೆಲ್ತ್