Back
Home » ಸುದ್ದಿ
'ಗಜ' ಸೈಕ್ಲೋನ್ ಅಪ್ಪಳಿಸಿದ್ದ ಪ್ರದೇಶಗಳಲ್ಲೇ 'ಬುಲ್‌ಬುಲ್' ಅಬ್ಬರ
Oneindia | 9th Nov, 2019 11:41 AM
 • ಯಾವ್ಯಾವ ರಾಜ್ಯಗಳಲ್ಲಿ ಮಳೆ

  ಭದ್ರಕ್, ಒಡಿಶಾ, ಕೇಂದ್ರ ಪರಾ, ಜಗತ್‌ಸಿಂಗ್‌ಪುರ, ಪುರಿ, ಖುದ್ರ, ಮಯ್ಯೂರಭಂಜ್ ಜಾಜ್‌ಪುರ್ ನಲ್ಲಿ ನವೆಂಬರ್ 9ರಿಂದ ಹೆಚ್ಚಿನ ಮಳೆಯಾಗಲಿದೆ. ಓಡಿಆರ್‌ಎಎಫ್ ಹಾಗೂ ಎನ್‌ಡಿಆರ್‌ಎಫ್ ತಂಡವು ಸಿದ್ಧವಾಗಿದೆ. ಒಡಿಶಾದ 9 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.


 • 9 ಜಿಲ್ಲೆಯ ಸರ್ಕಾರಿ ಅಧಿಕಾರಿಗಳಿಗೆ ರಜೆ ಇಲ್ಲ

  ಒಡಿಶಾದಲ್ಲಿ ಬುಲ್ ಬುಲ್ ಚಂಡಮಾರುತ ಪ್ರಭಾವ ತೀವ್ರವಾಗಲಿರುವ ಹಿನ್ನೆಲೆಯಲ್ಲೆ ಒಡಿಶಾದ 9 ಜಿಲ್ಲೆಗಳ ಸರ್ಕಾರಿ ಅಧಿಕಾರಿಗಳಿಗೆ ರಜೆ ಇಲ್ಲ ಎಂದು ಸರ್ಕಾರ ತಿಳಿಸಿದೆ. ಪುರಿ, ಕೇಂದ್ರಪರದಲ್ಲಿ ಇಂದು ಎಲ್ಲಾ ಶಾಲಾ ಕಾಲೇಜುಗಳಿಗೆ ಘೋಷಿಸಲಾಗಿದೆ.


 • ಮುಂದಿನ ಆರು ತಾಸುಗಳಲ್ಲಿ ಭಾರಿ ಮಳೆ

  ಮುಂದಿನ ಆರು ತಾಸುಗಳಲ್ಲಿ ಒಡಿಶಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಈಗಾಗಲೇ ಚಂಡಮಾರುತದ ಗಾಳಿ ಬಂಗಾಳಕೊಲ್ಲಿಯಿಂದ ಒಡಿಶಾದ ಕಡೆಗೆ ಚಲಿಸುತ್ತಿದೆ. ನವೆಂಬರ್ 9 ಹಾಗೂ 10ರಂದು ಭಾರಿ ಮಳೆಯಾಗಲಿದೆ.


 • ಮುಂದಿನ ನಾಲ್ಕು ದಿನ ಮಳೆ

  ಮುಂದಿನ ಮೂರರಿಂದ ನಾಲ್ಕು ದಿನ ಹೆಚ್ಚಿನ ಮಲೆಯಾಗಲಿದೆ. ನವೆಂಬರ್ 10ರಂದು ಬಾಂಗ್ಲಾದೇಶದಲ್ಲಿ ಭೂಕುಸಿತ ಉಂಟಾಗಲಿದೆ. ಪಶ್ಚಿಮ ಬಂಗಾಳ, ಒಡಿಶಾದಲ್ಲಿ ಅತಿ ಹೆಚ್ಚು ಮಳೆಯಾಗಲಿದೆ. ಕರ್ನಾಟಕದ ಕರಾವಳಿ ಭಾಗ, ಉತ್ತರ ಕನ್ನಡ, ಕೊಡಗಿನಲ್ಲಿ ಸ್ವಲ್ಪ ಪ್ರಮಾಣದ ಮಳೆಯಾಗಲಿದೆ.
ಬೆಂಗಳೂರು, ನವೆಂಬರ್ 9: ಸೈಕ್ಲೋನ್ ಬುಲ್‌ಬುಲ್ ತೀವ್ರ ಸ್ವರೂಪ ಪಡೆದುಕೊಂಡು ಬಂಗಾಳಕೊಲ್ಲಿಯಿಂದ ಹೊರಟಿದೆ.

ಗಜ ಸೈಕ್ಲೋನ್ ಅಪ್ಪಳಿಸಿದ್ದ ಪ್ರದೇಶಗಳಲ್ಲೇ ಇದೀಗ ಬುಲ್‌ಬುಲ್ ಚಂಡಮಾರುತ ತನ್ನ ಪ್ರಭಾವವನ್ನು ತೋರಿಸಲಿದೆ.20.4 ಡಿಗ್ರಿ ಉತ್ತರ ಹಾಗೂ 88.0 ಡಿಗ್ರಿ ಪೂರ್ವದಿಂದ ಗಾಳಿ ಪ್ರತಿ ಗಂಟೆಗೆ 285 ಕಿ.ಮೀ ವೇಗದಲ್ಲಿ ಬೀಸುತ್ತಿದೆ. ಪರಿಣಾಮ ಕೊಲ್ಕತ್ತದಲ್ಲಿ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಕರ್ನಾಟಕಕ್ಕೂ ಕಾಲಿಟ್ಟ ಬುಲ್‌ಬುಲ್: 4 ರಾಜ್ಯಗಳಿಗೆ ಹೈ ಅಲರ್ಟ್

ಚಂಡಮಾರುತದ ಪ್ರಭಾವ ಈಶಾನ್ಯ ಭಾಗದಲ್ಲಿ ಹೆಚ್ಚಾಗಲಿದೆ. ಪಶ್ಚಿಮ ಬಂಗಾಳ ಬಾಂಗ್ಲಾದೇಶದಲ್ಲಿರುವ ಸಾಗರ್ , ಕೇಪುಪಾರಾದಲ್ಲಿ ನವೆಂಬರ್ 9ರಿಂದ ಮಳೆ ಸುರಿಯಲಿದೆ. ಗಾಳಿಯು ಪ್ರತಿ ಗಂಟೆಗೆ 110-120 ಕಿ.ಮೀ ವೇಗದಲ್ಲಿ ಬೀಸಲಿದೆ. ಅರಬ್ಬಿ ಸಮುದ್ರದಲ್ಲಿ ಮಹಾ ಹೆಸರಿನ ಚಂಡಮಾರುತ ಸಕ್ರಿಯವಾಗಿದೆ.

ಇನ್ನೊಂದೆಡೆ ಬಂಗಾಳಕೊಲ್ಲಿಯಲ್ಲಿ ಬುಲ್‍ಬುಲ್ ಹೆಸರಿನ ಸಮುದ್ರ ಸುಂಟರಗಾಳಿ(ಸೈಕ್ಲೋನ್) ತೀವ್ರ ಸ್ವರೂಪ ಪಡೆಯುತ್ತಿದೆ. ಈ ಎರಡೂ ಚಂಡಮಾರುತಗಳಿಂದ ಪಶ್ಚಿಮ ಮತ್ತು ಪೂರ್ವ ಕರಾವಳಿಯ ತಲಾ ಎರಡೆರಡು ರಾಜ್ಯಗಳಲ್ಲಿ ಭಾರೀ ಬಿರುಗಾಳಿಯಿಂದ ಕೂಡಿದ ಧಾರಾಕಾರ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ.

ಬುಲ್‌ಬುಲ್ ಪ್ರಭಾವ, ಕರ್ನಾಟಕದಲ್ಲಿ ಮತ್ತೆ ಮಳೆ ಆರಂಭ

ಇದಕ್ಕೆ ಮುನ್ಸೂಚನೆಯಾಗಿ ಗುಜರಾತ್ ಮತ್ತು ಮಹಾರಾಷ್ಟ್ರ ಹಾಗೂ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಮೋಡ ಕವಿದ ವಾತಾವರಣವಿದ್ದು, ತುಂತುರು ಮಳೆಯಾಗುತ್ತಿದೆ. ಇಂದು ಸಂಜೆ ವೇಳೆಗೆ ಸೈಕ್ಲೋನ್ ತೀವ್ರ ಸ್ವರೂಪ ಪಡೆಯಲಿದೆ.

ಚಂಡಮಾರುತದ ರೌದ್ರಾವತಾರದ ಪರಿಣಾಮಗಳನ್ನು ಹೆದರಿಸಲು ಈ ನಾಲ್ಕೂ ರಾಜ್ಯಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

   
 
ಹೆಲ್ತ್