Back
Home » ಇತ್ತೀಚಿನ
ನಿಮ್ಮ ವೆಹಿಕಲ್ ಗೆ ಎಷ್ಟು ದಂಡ ಬಿದ್ದಿದೆ ಗೊತ್ತಾ? – ಆನ್ ಲೈನ್ ನಲ್ಲಿ ನೋಡಿ ಪಾವತಿಸಿ ಬಿಡಿ!
Gizbot | 10th Nov, 2019 01:50 PM
 • ಸಂಚಾರಿ ನಿಯಮ

  ಸಂಚಾರಿ ನಿಯಮಗಳ ಉಲ್ಲಂಘನೆಗಾಗಿ ಇದೀಗ ಭಾರತೀಯ ರಸ್ತೆಗಳಲ್ಲಿ ಅಲಲ್ಲಿ ಕ್ಯಾಮರಾವನ್ನು ಅಳವಡಿಸಲಾಗಿದೆ. ಟ್ರಾಫಿಕ್ ಪೋಲೀಸರಿಲ್ಲ ಎಂದು ನೀವೇನಾದರೂ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದರೆ ಖಂಡಿತ ನಿಮಗೆ ಫೈನ್ ಬಿದ್ದಿರುತ್ತದೆ. ಹೀಗೆ ಸಂಚಾರಿ ನಿಯಮಗಳನ್ನು ನೀವು ಉಲ್ಲಂಘಿಸಿ ದಂಡ ಪಾವತಿ ಮಾಡುವಂತಾಗಿದೆಯೇ ಎಂಬುದನ್ನು ನೀವೀಗ ಆನ್ ಲೈನ್ ನಲ್ಲಿ ತಿಳಿದುಕೊಳ್ಳಬಹುದು. ಇ-ಚಲನ್ ನ್ನು ಟ್ರಾಫಿಕ್ ಪೋಲೀಸರು ಜನರೇಟ್ ಮಾಡಿರುತ್ತಾರೆ. ಅದನ್ನು ನೀವು ಆನ್ ಲೈನ್ ನಲ್ಲಿಯೇ ಪಾವತಿ ಮಾಡುವುದಕ್ಕೆ ಅವಕಾಶವಿರುತ್ತದೆ.


 • ಸಂಚಾರಿ ಉಲ್ಲಂಘನೆಯ ದಂಡವನ್ನು ಆನ್ ಲೈನ್ ನಲ್ಲಿ ಪರಿಶೀಲಿಸಿ ಪಾವತಿಸುವುದು ಹೇಗೆ?

  ಹಂತ 1: ನಿಮ್ಮ ಲ್ಯಾಪ್ ಟಾಪ್ ಅಥವಾ ಮೊಬೈಲ್ ಮೂಲಕ ಇ-ಚಲನ್ ವೆಬ್ ಸೈಟ್ ಗೆ ತೆರಳಿ.ಇದು 'ಒನ್ ನೇಷನ್ ಒನ್ ಚಲನ್' ಉಪಕ್ರಮವಾಗಿರುತ್ತದೆ.ಈ ಪೇಜ್ ನಲ್ಲಿ ನಿಮಗೆ "ಚೆಕ್ ಚಲನ್ ಸ್ಟೇಟಸ್" ಅನ್ನೋ ಆಯ್ಕೆ ಸಿಗುತ್ತದೆ.

  ಹಂತ 2: ನಿಮ್ಮ ಲೈಸನ್ಸ್ ನಂಬರ್ ಅಥವಾ ಚಲನ್ ನಂಬರ್ ಅಥಾ ವೆಹಿಕಲ್ ರಿಜಿಸ್ಟ್ರೇಷನ್ ಸಂಖ್ಯೆಯನ್ನು ಬಳಸಿ ನೀವು ಚಲನ್ ನ್ನು ಹುಡುಕಾಡುವುದಕ್ಕೆ ಆಯ್ಕೆಯಿರುತ್ತದೆ. ಇದರಲ್ಲಿ ಯಾವುದೇ ವಿವರವನ್ನು ನೀವು ಆಯ್ಕೆ ಮಾಡಿಕೊಂಡು ಕ್ಯಾಪ್ಚಾ ಎಂಟರ್ ಮಾಡಿ ಮುಂದುವರಿಯಬಹುದು.


 • ಆಯ್ಕೆಯನ್ನು ಸೆಲೆಕ್ಟ್ ಮಾಡಿ

  ಹಂತ 3: ನೀವು ಮೇಲೆ ತಿಳಿಸಿರುವ ಯಾವುದೇ ಆಯ್ಕೆಯನ್ನು ಸೆಲೆಕ್ಟ್ ಮಾಡಿ ವಿವರವನ್ನು ಎಂಟರ್ ಮಾಡಿದ ಕೂಡಲೇ ಚಲನ್ ವಿವರಗಳನ್ನು ಡಿಸ್ಪ್ಲೇ ಆಗುತ್ತದೆ. ಕೆಲವೊಮ್ಮೆ ವೆಹಿಕಲ್ ನಂಬರ್ ಮತ್ತು ಲೈಸನ್ಸ್ ನಂಬರ್ ನಲ್ಲಿ ಸಪರೇಟ್ ಆಗಿ ಎರಡು ವಿವಿಧ ಚಲನ್ ಗಳನ್ನು ಕಾಣುವುದಕ್ಕೂ ಸಾಧ್ಯತೆಗಳಿರುತ್ತದೆ. ಒಂದು ವೇಳೆ ನಿಮ್ಮ ವೆಹಿಕಲ್ ವಿರುದ್ಧ ಪ್ರಕಟವಾಗಿರುವ ಎಲ್ಲಾ ಚಲನ್ ಗಳ ಬಗ್ಗೆ ತಿಳಿದುಕೊಳ್ಳುವುದಕ್ಕೆ ನೀವು ಬಯಸಿದ್ದೇ ಆದಲ್ಲಿ ಎರಡೂ ವಿಧಾನದಲ್ಲೂ ಕೂಡ ನೀವು ಹುಡುಕಾಟವನ್ನು ನಡೆಸಬೇಕಾಗುತ್ತದೆ.

  ಹಂತ 4: ಚಲನ್ ವಿವರಗಳು ಜನರೇಟ್ ಆದ ನಂತರ "ಪೇ ನೌ" ಆಯ್ಕೆಯನ್ನು ಹಿಟ್ ಮಾಡಿ ಆನ್ ಲೈನ್ ಪಾವತಿ ಮಾಡಿ.


 • ಮೊಬೈಲ್ ನಂಬರ್

  ಹಂತ 5: ಪಾವತಿ ಮಾಡುವುದಕ್ಕಾಗಿ ನಿಮ್ಮ ಮೊಬೈಲ್ ನಂಬರ್ ನ್ನು ಪರಿಶೀಲನೆ ಮಾಡಲಾಗುತ್ತದೆ. ಅದಕ್ಕಾಗಿ ನಿಮ್ಮ ಮೊಬೈಲ್ ಗೆ ಒಂದು ಓಟಿಪಿಯನ್ನು ಕಳುಹಿಸಲಾಗುತ್ತದೆ. ನಂತರ ನೀವು ಆಯಾ ರಾಜ್ಯದ ಇ-ಚಲನ್ ಪಾವತಿ ವೆಬ್ ಸೈಟ್ ಗೆ ರಿಡೈರೆಕ್ಟ್ ಆಗುತ್ತೀರಿ.

  ಹಂತ 6: ಪಾವತಿ ಕಾನ್ಫಿಗರೇಷನ್ ಪೇಜ್ ಗೆ ನೀವು ತೆರಳುತ್ತೀರಿ. ಇಲ್ಲಿ ನೀವು 'ಪ್ರೊಸೀಡ್ ವಿತ್ ನೆಟ್ ಪೇಮೆಂಟ್' ಆಯ್ಕೆಯನ್ನು ಸೆಲೆಕ್ಟ್ ಮಾಡಿ ಮತ್ತು ನೆಟ್ ಬ್ಯಾಂಕಿಂಗ್, ಕಾರ್ಡ್ ಪೇಮೆಂಟ್ ಇತ್ಯಾದಿ ಯಾವುದೇ ರೀತಿಯ ಪಾವತಿ ಗೇಟ್ ವೇಯನ್ನು ಬಳಸಿ ನೀವು ಪಾವತಿಯನ್ನು ಪೂರ್ಣಗೊಳಿಸಬಹುದು.


 • ಸೂಚನೆ:

  ನಮಗೆ ಚಲನ್ ಲಭ್ಯವಾಗಿಲ್ಲ ಯಾಕೆಂದರೆ ವೆಬ್ ಸೈಟ್ ನಲ್ಲಿ "ಚಲನ್ ಸ್ಟೇಟಸ್ ನಾಟ್ ಫೌಂಡ್" ಅನ್ನೋ ಪಾಪ್ ಅಪ್ ಲಭ್ಯವಾಗಿದೆ.ಒಂದು ವೇಳೆ ನೀವು ಕೂಡ ಇದನ್ನು ಪ್ರಯತ್ನಿಸುವುದಾದರೆ ಥರ್ಡ್ ಪಾರ್ಟಿ ಫ್ಲ್ಯಾಟ್ ಫಾರ್ಮ್ ಗಳು ಕೂಡ ಲಭ್ಯವಿದೆ."ಪೇ ಫಾರ್ ಟ್ರಾಫಿಕ್ ವಯಲೇಷನ್" ಎಂಬ ಥರ್ಡ್ ಪಾರ್ಟಿ ಫ್ಲ್ಯಾಟ್ ಫಾರ್ಮ್ ಗಳು ನಿಮ್ಮ ರಾಜ್ಯಕ್ಕೆ ಸಂಬಂಧಿಸಿದಂತೆ ಲಭ್ಯವಾಗಲಿದೆ.
ನಾಯಿ ಬಾಲ ಎಷ್ಟಂದ್ರೂ ಡೊಂಕು ಅನ್ನೋ ಗಾದೆ ಹಾಗೆ ಎಷ್ಟೇ ನಿಯಮಗಳನ್ನು ಜಾರಿಗೆ ತಂದರೂ ಸಂಚಾರಿ ಉಲ್ಲಂಘನೆ ಮಾಡುವವರ ಸಂಖ್ಯೆ ಕಡಿಮೆಯಾಗುವುದೇ ಇಲ್ಲ. ಇತ್ತೀಚೆಗಷ್ಟೇ ಮೋಟಾರ್ ವೆಹಿಕಲ್ ಆಕ್ಟ್ ನ್ನು ಸರ್ಕಾರ ಪರಿಚಯಿಸಿ ಸಂಚಾರಿ ಉಲ್ಲಂಘನೆಯ ದಂಡದಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿದೆ. ಈ ಹೊಸ ಆಕ್ಟ್ ಪ್ರಕಾರ ಯಾರು ಸಂಚಾರಿ ನಿಯಮಗಳನ್ನು ಪಾಲಿಸುವುದಿಲ್ಲವೋ ಅವರಿಗೆ ದಂಡದ ಮೊತ್ತ ಗರಿಷ್ಟವಾಗಿದೆ. ಜೀವ ಉಳಿಸುವ, ಅಪಘಾತ ನಿಯಂತ್ರಣ ಮಾಡುವ ಸಲುವಾಗಿ ಹೊಸ ನಿಯಮಾವಳಿಗಳನ್ನು ಜಾರಿಗೆ ತರಲಾಗಿದೆ. ಪ್ರತಿ ವರ್ಷ ಅಪಘಾತಗಳ ಸಂಖ್ಯೆ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿಯಮಗಳನ್ನು ಜಾರಿಗೆ ತರಲಾಗಿದೆ. ಆದರೂ ಕೂಡ ಸಂಚಾರಿ ನಿಮಯಗಳನ್ನು ಉಲ್ಲಂಘನೆ ಮಾಡುವವರು ಇದ್ದೇ ಇದ್ದಾರೆ.

   
 
ಹೆಲ್ತ್