Back
Home » ಇತ್ತೀಚಿನ
ಯೂಟ್ಯೂಬ್‌ ಸರ್ಚ್ ಹಿಸ್ಟರಿ ಡಿಲೀಟ್ ಮಾಡಲು ಹೀಗೆ ಮಾಡಿರಿ!
Gizbot | 11th Nov, 2019 09:00 AM
 • ಯೂಟ್ಯೂಬ್‌

  ಯೂಟ್ಯೂಬ್‌ನಲ್ಲಿ ಫುಡ್‌, ಹೆಲ್ತ್, ನ್ಯೂಸ್‌, ಲೈಫ್‌ಸ್ಟೈಲ್‌, ತಂತ್ರಜ್ಞಾನ್, ವಿಜ್ಞಾನ, ಶಿಕ್ಷಣ ಹೀಗೆ ಎಲ್ಲ ವಿಷಯದ ವಿಡಿಯೊಗಳ ಹೂರಣವನ್ನು ತುಂಬಿಕೊಂಡಿದೆ. ಬಳಕೆದಾರರು ಅವರಿಗೆ ಅಗತ್ಯವಾಗಿರುವ ವಿಷಯವನ್ನು ವೀಕ್ಷಿಸುತ್ತಾರೆ. ಆದರೆ ಬಳಕೆದಾರರು ಯೂಟ್ಯೂಬ್‌ನಲ್ಲಿ ಸರ್ಚ್ ಮಾಡಿರುವ ಕೀ ವರ್ಡ್‌ಗಳ ಮಾಹಿತಿ ಸರ್ಚ್ ಹಿಸ್ಟರಿಯಲ್ಲಿ ಹಾಗೆಯೇ ಉಳಿದಿರುತ್ತವೆ. ಒಂದು ವೇಳೆ ಅಚಾನಕ್‌ ಆಗಿ ಯಾರಾದರೂ ಸರ್ಚ್ ಹಿಸ್ಟರಿ ನೋಡಿದರೇ.?


 • ಹಿಸ್ಟರಿ ಡಿಲೀಟ್

  ಬಳಕೆದಾರರಿಗೆ ಅನುಕೂಲವಾಗಲಿ ಎಂದೇ ಯೂಟ್ಯೂಬ್‌ನಲ್ಲಿ ಸರ್ಚ್ ಹಿಸ್ಟರಿ ಡಿಲೀಟ್‌ ಮಾಡಲು ಅವಕಾಶ ನೀಡಿದೆ. ಬಳಕೆದಾರರು ಮೇಲಿಂದ ಮೇಲೆ ಯೂಟ್ಯೂಬ್ ಸರ್ಚ್ ಹಿಸ್ಟರಿ ಡಿಲೀಟ್ ಮಾಡಬಹುದಾಗಿದೆ. ಜೊತೆಗೆ incognito ಮೋಡ್ ಆಯ್ಕೆ ಇದೆ ಆದರೆ ಬಹುತೇಕರು incognito ಮೋಡ್‌ ಸೌಲಭ್ಯವನ್ನು ಬಳಸುವುದಿಲ್ಲ. ಹೀಗಾಗಿ ಸರ್ಚ್ ಹಿಸ್ಟರಿ ಡಿಲೀಟ್‌ ಮಾಡುವುದು ಉತ್ತಮ. ಡಿಲೀಟ್ ಮಾಡಲು ಅನುಸರಿಸಬೇಕಾದ ಹಂತಗಳ ಬಗ್ಗೆ ಮುಂದೆ ಓದಿ.


 • ಯೂಟ್ಯೂಬ್ ಆಪ್‌ನಲ್ಲಿ ಈ ಹಂತ ಅನುಸರಿಸಿ

  * ಯೂಟ್ಯೂಬ್ ಆಪ್ ತೆರೆದು, ಪ್ರೋಫೈಲ್‌ ಇಮೇಜ್‌ ಟಚ್‌ ಮಾಡಿ.
  * ನಂತರ ಸೆಟ್ಟಿಂಗ್ ಆಯ್ಕೆಯನ್ನು ಟ್ಯಾಪ್ ಮಾಡಿರಿ.
  * ಆನಂತರ ಸ್ಕ್ರಾಲ್ ಡೌನ್ ಮಾಡಿ ಹಿಸ್ಟರಿ ಮತ್ತು ಪ್ರೈವೆಸಿ ಸೆಕ್ಷನ್‌ ಸೆಲೆಕ್ಟ್ ಮಾಡಿ.
  * ವಾಚ್ ಹಿಸ್ಟರಿ ಕ್ಲಿಯರ್ ಆಯ್ಕೆಯನ್ನು ಟ್ಯಾಪ್‌ ಮಾಡಿರಿ.
  * ಕ್ಲಿಯರ್‌ ಸರ್ಚ್ ಹಿಸ್ಟರಿ ಆಯ್ಕೆ ಒತ್ತಿರಿ.


 • ವೆಬ್‌ನಲ್ಲಿ ಈ ಹಂತ ಅನುಸರಿಸಿ

  * ಯೂಟ್ಯೂಬ್‌ ವೆಬ್ ತೆರೆಯಿರಿ (Youtube.com)
  * ಎಡಭಾಗದಲ್ಲಿರುವ ಮೆನುನಲ್ಲಿ ಹಿಸ್ಟರಿ ಆಯ್ಕೆ ಸೆಲೆಕ್ಟ್ ಮಾಡಿರಿ.
  * ವಾಚ್‌ ಹಿಸ್ಟರಿ ಕ್ಲಿಯರ್‌ ಆಯ್ಕೆಯನ್ನು ಕ್ಲಿಕ್ಕ್ ಮಾಡಿರಿ.
  * ಎಡಭಾಗದಲ್ಲಿನ ಸರ್ಚ್ ಹಿಸ್ಟರಿ ಆಯ್ಕೆಯನ್ನು ಸೆಲೆಕ್ಟ್ ಮಾಡಿ.
  * ಕ್ಲಿಯರ್‌ ಆಲ್‌ ಸರ್ಚ್ ಹಿಸ್ಟರಿ ಆಯ್ಕೆ ಒತ್ತಿರಿ.
ಗೂಗಲ್ ಒಡೆತನದ ಯೂಟ್ಯೂಬ್‌ ಒಂದು ಅತ್ಯುತ್ತಮ ವಿಡಿಯೊ ಪ್ಲಾಟ್‌ಫಾರ್ಮ್‌ ಆಗಿದ್ದು, ಯಾವುದೇ ವಿಷಯದ ಕುರಿತು ವಿಡಿಯೊ ಮಾಹಿತಿ ಪಡೆಯಬಹುದಾಗಿದೆ. ಯೂಟ್ಯೂಬ್‌ ತಾಣದಲ್ಲಿ ಬಳಕೆದಾರರು ಮ್ಯೂಸಿಕ್, ಲೈವ್‌ ನ್ಯೂಸ್‌, ಯೂಟ್ಯೂಬ್ ಚಾನೆಲ್ಸ್, ಸೇರಿದಂತೆ ಹಲವು ಬಗೆಯ ವಿಡಿಯೊಗಳನ್ನು ವೀಕ್ಷಿಸುತ್ತಾರೆ. ಹಾಗೆಯೇ ಯೂಟ್ಯೂಬ್‌ನಲ್ಲಿರುವ ಸರ್ಚ್ ಆಯ್ಕೆಯಲ್ಲಿ ತಮಗೆ ಬೇಕಾದ ವಿಡಿಯೊಗಳನ್ನು ಸರ್ಚ್ ಮಾಡಿ ಪಡೆಯುತ್ತಾರೆ.

   
 
ಹೆಲ್ತ್