Back
Home » ಇತ್ತೀಚಿನ
ಮತ್ತೊಂದು ಅಗ್ಗದ ಸ್ಮಾರ್ಟ್‌ಫೋನ್‌ ಬಿಡುಗಡೆಗೆ 'ಇನ್‌ಫಿನಿಕ್ಸ್' ಸಜ್ಜು!
Gizbot | 11th Nov, 2019 04:00 PM
  • ಇನ್‌ಫಿನಿಕ್ಸ್‌

    ಹೌದು, ಇನ್‌ಫಿನಿಕ್ಸ್‌ ಕಂಪನಿಯು ಇದೀಗ 'ಇನ್‌ಫಿನಿಕ್ಸ್‌ ಎಸ್‌5 ಲೈಟ್‌'(Infinix S5 Lite) ಸ್ಮಾರ್ಟ್‌ಫೋನ್‌ ಲಾಂಚ್‌ ಮಾಡಲು ತಯಾರಾಗಿದ್ದು, ಇ-ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಟೀಸರ್‌ ನೀಡಿದೆ. ಈ ಸ್ಮಾರ್ಟ್‌ಫೋನ್‌ 7,999ರೂ. ಪ್ರೈಸ್‌ಟ್ಯಾಗ್‌ ಹೊಂದಿದ್ದು, ಆದರೆ ಕಂಪನಿಯು ಅಧಿಕೃತವಾಗಿ ಯಾವ ದಿನಾಂಕದಂದು ಲಾಂಚ್ ಮಾಡಲಿದೆ ಎನ್ನುವ ಬಗ್ಗೆ ಮಾಹಿತಿ ಮಾಹಿತಿ ಹೊರಹಾಕಿಲ್ಲ. ಹಾಗಾದರೇ ಇನ್‌ಫಿನಿಕ್ಸ್‌ ಎಸ್‌5 ಲೈಟ್‌ ಸ್ಮಾರ್ಟ್‌ಫೋನ್‌ ಹೊಂದಿರುವ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.


  • ಡಿಸ್‌ಪ್ಲೇ ವಿನ್ಯಾಸ

    ಇನ್‌ಫಿನಿಕ್ಸ್‌ ಎಸ್‌5 ಲೈಟ್‌ ಸ್ಮಾರ್ಟ್‌ಫೋನ್‌ 1600 x 720 ಪಿಕ್ಸಲ್ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ 6.6 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಹಾಗೆಯೇ ಇನ್‌ಫಿನಿಟಿ O ಮಾದರಿಯ ಡಿಸ್‌ಪ್ಲೇ ಇದಾಗಿದ್ದು, ಡಿಸ್‌ಪ್ಲೇಯು 20:9 ಅನುಪಾತದಲ್ಲಿದೆ. ಹಾಗೆಯೇ ಸ್ಕ್ರೀನ್‌ನಿಂದ ಬಾಹ್ಯ ಬಾಡಿಯ ನಡುವಿನ ಅಂತರವು 90.5% ಪರ್ಸೆಂಟ್‌ ಅಂತರವನ್ನು ಪಡೆದಿದೆ.


  • ಪ್ರೊಸೆಸರ್‌ ಸಾಮರ್ಥ್ಯ

    ಇನ್‌ಫಿನಿಕ್ಸ್‌ ಎಸ್‌5 ಲೈಟ್‌ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್‌ ಹಿಲಿಯೊ ಪಿ22 ಪ್ರೊಸೆಸರ್‌ ಸಾಮರ್ಥ್ಯವನ್ನು ಒಳಗೊಂಡಿದ್ದು, ಇದರೊಂದಿಗೆ ಆಂಡ್ರಾಯ್ಡ್‌ 9 ಪೈ ಓಎಸ್‌ ಬೆಂಬಲ ಪಡೆದಿದೆ. 4GB RAM ಮತ್ತು 64GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಯನ್ನು ಹೊಂದಿದ್ದು, ಇದರೊಂದಿಗೆ ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿಯನ್ನು 256GB ವರೆಗೂ ವಿಸ್ತರಿಸಿಕೊಳ್ಳಬಹುದಾಗಿದೆ.


  • ಕ್ಯಾಮೆರಾ ವಿಶೇಷ

    ಇನ್‌ಫಿನಿಕ್ಸ್‌ ಎಸ್‌5 ಲೈಟ್‌ ಸ್ಮಾರ್ಟ್‌ಫೋನ್‌ ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು, ಮುಖ್ಯ ಕ್ಯಾಮೆರಾವು f/2.0 ಅಪರ್ಚರ್ನೊಂದಿಗೆ 16ಎಂಪಿ ಸೆನ್ಸಾರ್‌ನಲ್ಲಿದೆ. ಇನ್ನು ಸೆಕೆಂಡರಿ ಕ್ಯಾಮೆರಾವು 2ಎಂಪಿ ಸೆನ್ಸಾರ್‌ ಮತ್ತು ತೃತೀಯ ಕ್ಯಾಮೆರಾವು QVGA ಮಾದರಿಯಲ್ಲಿದೆ. ಹಾಗೆಯೇ ಸೆಲ್ಫಿಗಾಗಿ 16ಎಂಪಿ ಸೆನ್ಸಾರ್‌ ಪಡೆದಿದ್ದು, 4-ಇನ್‌-1 ಸೂಪರ್‌ ಪಿಕ್ಸಲ್‌ ತಂತ್ರಜ್ಞಾನದೊಂದಿಗೆ 3D ಫೇಸ್‌ ಬ್ಯೂಟಿ, AR ಇಮೋಜಿ ಆಯ್ಕೆಗಳಿವೆ.


  • ಬ್ಯಾಟರಿ ಲೈಫ್

    ಇನ್‌ಫಿನಿಕ್ಸ್‌ ಎಸ್‌5 ಲೈಟ್‌ ಸ್ಮಾರ್ಟ್‌ಫೋನ್‌ 4,000mAh ಬ್ಯಾಟರಿ ಬಾಳಿಕೆಯನ್ನು ಪಡೆದುಕೊಂಡಿದೆ. ಇದರೊಂದಿಗೆ ಎಕ್ಸ್‌ಚಾರ್ಜ್‌ ಫಾಸ್ಟ್‌ ಚಾರ್ಜಿಂಗ್ ತಂತ್ರಜ್ಞಾನವನ್ನು ಸಹ ಪಡೆದಿದೆ. ಹಾಗೆಯೇ ಈ ಫೋನ್‌ ಮೈಕ್ರೋ ಯುಎಸ್‌ಬಿ ಪೋರ್ಟ್‌, ವೈಫೈ, ಬ್ಲೂಟೂತ್, 3.5ಎಂಎಂ ಆಡಿಯೊ ಜಾಕ್‌ ಸೇರಿದಂತೆ ಅಗತ್ಯ ಸೌಲಭ್ಯಗಳು ಹೊಂದಿದೆ.


  • ಬೆಲೆ ಮತ್ತು ಲಭ್ಯತೆ

    ಇನ್‌ಫಿನಿಕ್ಸ್‌ ಎಸ್‌5 ಲೈಟ್‌ ಸ್ಮಾರ್ಟ್‌ಫೋನ್‌ 4GB RAM ಮತ್ತು 64GB ಸ್ಟೋರೇಜ್‌ ಒಂದೇ ವೇರಿಯಂಟ್ ಆಯ್ಕೆ ಹೊಂದಿದ್ದು, ಬೆಲೆಯು 7,999ರೂ.ಗಳ ಆಗಿದೆ. ಸದ್ಯದಲ್ಲಿಯೇ ಈ ಸ್ಮಾರ್ಟ್‌ಫೋನ್‌ ಇ-ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಲಾಂಚ್‌ ಆಗಲಿದೆ. ಆ ಬಳಿಕವೇ ಸೇಲ್‌ ಆರಂಭವಾಗಲಿದೆ. ಸದ್ಯ ನೋಟಿಫೈ ಫ್ಲಿಪ್‌ಕಾರ್ಟ್‌ನಲ್ಲಿ ಆಯ್ಕೆ ಮಾತ್ರ ಕಾಣಸಿಲಿದೆ.




ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳಿಂದ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿರುವ 'ಇನ್‌ಫಿನಿಕ್ಸ್‌' ಮೊಬೈಲ್‌ ಕಂಪನಿಯು 'ಇನ್‌ಫಿನಿಕ್ಸ್‌ ಹಾಟ್‌ 8' ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿತ್ತು. ಇದರ ಬೆನ್ನಲ್ಲೇ ಈಗ ಮತ್ತೊಂದು ಅಗ್ಗದ ಬೆಲೆಯ ಸ್ಮಾರ್ಟ್‌ಫೋನ್‌ ಬಿಡುಗಡೆಗೆ ಸಜ್ಜಾಗಿದೆ. ಈ ಹೊಸ ಸ್ಮಾರ್ಟ್‌ಫೋನ್‌ ಪಂಚ್‌ಹೋಲ್ ಡಿಸ್‌ಪ್ಲೇ ಮಾದರಿಯನ್ನು ಒಳಗೊಂಡಿದ್ದು, ಜೊತೆಗೆ ಬಿಗ ಬ್ಯಾಟರಿ, ಸ್ಪೀಡ್‌ ಪ್ರೊಸೆಸರ್‌ ಸೌಲಭ್ಯಗಳಿರಲಿವೆ.

   
 
ಹೆಲ್ತ್