Back
Home » ಇತ್ತೀಚಿನ
ಶಾಶ್ವತವಾಗಿ ಬೆಲೆ ಇಳಿಕೆ ಕಂಡ 'ಗ್ಯಾಲ್ಯಾಕ್ಸಿ A50s' ಮತ್ತು 'ಗ್ಯಾಲ್ಯಾಕ್ಸಿ A30s'!
Gizbot | 12th Nov, 2019 09:02 AM
 • ಸ್ಯಾಮ್‌ಸಂಗ್‌ ಕಂಪನಿ

  ಹೌದು, ಸ್ಯಾಮ್‌ಸಂಗ್‌ ಕಂಪನಿಯು ಇತ್ತೀಚಿಗೆ ಬಿಡುಗಡೆ ಆಗಿರುವ 'ಗ್ಯಾಲ್ಯಾಕ್ಸಿ A50s' ಮತ್ತು 'ಗ್ಯಾಲ್ಯಾಕ್ಸಿ A30s' ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಕ್ರಮವಾಗಿ 3,000ರೂ. ಮತ್ತು 1,000ರೂ.ಗಳನ್ನು ಕಡಿತ ಮಾಡಿದೆ. ಹೀಗಾಗಿ 'ಗ್ಯಾಲ್ಯಾಕ್ಸಿ A50s' 4GB+128GB ವೇರಿಯಂಟ್ 22,999ರೂ.ಗಳಿಗೆ ಮತ್ತು 6GB+128GB ವೇರಿಯಂಟ್‌ 24,999ರೂ.ಗಳಿಗೆ ಲಭ್ಯವಾಗುವುದು. ಹಾಗೆಯೇ 4GB RAM + 64GB ವೇರಿಯಂಟ್‌ನ ಗ್ಯಾಲ್ಯಾಕ್ಸಿ A30s' ಸ್ಮಾರ್ಟ್‌ಫೋನ್‌ 16,999ರೂ.ಗೆ ಸಿಗಲಿದೆ.


 • ಗ್ಯಾಲ್ಯಾಕ್ಸಿ

  'ಗ್ಯಾಲ್ಯಾಕ್ಸಿ A50s' ಸ್ಮಾರ್ಟ್‌ಫೋನ್ Exynos 9611 ಆಕ್ಟಾಕೋರ್ ಪ್ರೊಸೆಸರ್‌ ಹೊಂದಿದ್ದು, ಹಾಗೆಯೇ 'ಗ್ಯಾಲ್ಯಾಕ್ಸಿ A30s' Exynos 7904 ಆಕ್ಟಾಕೋರ್ ಪ್ರೊಸೆಸರ್‌ ಪಡೆದಿದೆ. ಈ ಎರಡು ಸ್ಮಾರ್ಟ್‌ಫೋನ್‌ ತ್ರಿವಳಿ ಕ್ಯಾಮೆರಾ ಸೌಲಭ್ಯವನ್ನು ಒಳಗೊಂಡಿದ್ದು, 'ಗ್ಯಾಲ್ಯಾಕ್ಸಿ A50s' ಫೋನಿನ ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್‌ ಪಡೆದಿದೆ ಹಾಗೂ 'ಗ್ಯಾಲ್ಯಾಕ್ಸಿ A30s' ಫೋನ್‌ ಪ್ರಮುಖ ಕ್ಯಾಮೆರಾವು 25ಎಂಪಿ ಸೆನ್ಸಾರ್‌ನಲ್ಲಿದೆ. ಹಾಗಾದರೇ ಇನ್ನಿತರೆ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.


 • ಗ್ಯಾಲ್ಯಾಕ್ಸಿ A50s ಡಿಸ್‌ಪ್ಲೇ

  ಗ್ಯಾಲ್ಯಾಕ್ಸಿ A50s ಸ್ಮಾರ್ಟ್‌ಫೋನ್ 1080x2340 ಪಿಕ್ಸಲ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಒಳಗೊಂಡ 6.4 ಇಂಚಿನ ಫುಲ್‌ ಹೆಚ್‌ಡಿ ಸೂಪರ್‌ AMOLED ಇನ್‌ಫಿನಿಟಿ ಡಿಸ್‌ಪ್ಲೇಯನ್ನು ಹೊಂದಿದೆ. ಫೋನಿನ್ ಬಾಹ್ಯ ಬಾಡಿಯಿಂದ ಸ್ಕ್ರೀನ್ ನಡುವಿನ ಅಂತರದ ಅನುಪಾತ 91.6 ರಷ್ಟಾಗಿದ್ದು, ಹಾಗೆಯೇ 158.5 mm x 74.5 mm x 7.7 mm ಸುತ್ತಳತೆಯನ್ನು ಪಡೆದಿದೆ.


 • ಗ್ಯಾಲ್ಯಾಕ್ಸಿ A50s ಪ್ರೊಸೆಸರ್

  ಗ್ಯಾಲ್ಯಾಕ್ಸಿ ಎ50 ಸ್ಮಾರ್ಟ್‌ಫೋನ್ ಆಕ್ಟಾಕೋರ್‌ Exynos 9611 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ 9 ಪೈ ಓಎಸ್‌ ಬೆಂಬಲ ಪಡೆದಿದೆ. ಇದರೊಂದಿಗೆ 4GB+128GB ಮತ್ತು 6GB+128GB ಸಾಮರ್ಥ್ಯದ ಎರಡು ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿದೆ. ಹಾಗೆಯೇ ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿ ವಿಸ್ತರಿಸುವ ಅವಕಾಶ ಸಹ ಇದೆ.


 • ಗ್ಯಾಲ್ಯಾಕ್ಸಿ A50s ಕ್ಯಾಮೆರಾ

  ಗ್ಯಾಲ್ಯಾಕ್ಸಿ A50s ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಮೂರು ಕ್ಯಾಮೆರಾಗಳನ್ನು ಒಳಗೊಂಡಿದ್ದು, ಅವುಗಳು ಮುಖ್ಯ ಕ್ಯಾಮೆರಾವು 48MP ಸೆನ್ಸಾರ್‌ನಲ್ಲಿದೆ. ಹಾಗೆಯೇ ಉಳಿದೆರಡು ಕ್ಯಾಮೆರಾಗಳು 5MP+8MP ಸೆನ್ಸಾರ್‌ ಸಾಮರ್ಥ್ಯದಲ್ಲಿವೆ. ಇನ್ನೂ ಸೆಲ್ಫಿಗಾಗಿ ಮುಂಭಾಗದಲ್ಲಿ 32 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾವನ್ನು ಒದಗಿಸಲಾಗಿದೆ.


 • ಗ್ಯಾಲ್ಯಾಕ್ಸಿ A50s ಬ್ಯಾಟರಿ

  ಗ್ಯಾಲ್ಯಾಕ್ಸಿ A50s ಸ್ಮಾರ್ಟ್‌ಫೋನಿನಲ್ಲಿ 4,000mAh ಸಾಮರ್ಥ್ಯದ ದೀರ್ಘಕಾಲದ ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಇನ್ನೂ ಇದರೊಂದಿಗೆ 15W ಫಾಸ್ಟ್‌ ಚಾರ್ಜರ್‌ ಅನ್ನು ಒದಗಿಸಲಾಗಿದೆ. ಇದರ ನೆರವಿನಿಂದ ಸ್ಮಾರ್ಟ್‌ಫೋನ್ ಬೇಗನೇ ಚಾರ್ಜ್‌ ಪಡೆದುಕೊಳ್ಳುತ್ತದೆ. ಹಾಗೆಯೇ ವೈಫೈ, ಬ್ಲೂಟೂತ್, ಜಿಪಿಎಸ್‌, ಫಿಂಗರ್‌ಪ್ರಿಂಟ್ ಸೆನ್ಸಾರ್ ಸೌಲಭ್ಯಗಳನ್ನು ಒಳಗೊಂಡಿದೆ.


 • ಗ್ಯಾಲ್ಯಾಕ್ಸಿ A30s ಡಿಸ್‌ಪ್ಲೇ

  ಗ್ಯಾಲ್ಯಾಕ್ಸಿ A30s ಸ್ಮಾರ್ಟ್‌ಫೋನ್ 720 x 1560 ಪಿಕ್ಸಲ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಒಳಗೊಂಡ 6.4 ಇಂಚಿನ ಫುಲ್‌ ಹೆಚ್‌ಡಿ ಸೂಪರ್‌ AMOLED ಇನ್‌ಫಿನಿಟಿ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 268 ppi ಆಗಿದ್ದು, ಹಾಗೆಯೇ ಡಿಸ್‌ಪ್ಲೇಯು 158.5 mm x 74.7 mm x 7.8 mm ಸುತ್ತಳತೆಯನ್ನು ಹೊಂದಿದೆ.


 • ಗ್ಯಾಲ್ಯಾಕ್ಸಿ A30s ಪ್ರೊಸೆಸರ್

  ಗ್ಯಾಲ್ಯಾಕ್ಸಿ A30s ಸ್ಮಾರ್ಟ್‌ಫೋನ್ ಆಕ್ಟಾಕೋರ್‌ Exynos 7904 SoC ಪ್ರೊಸೆಸರ್‌ ಅನ್ನು ಹೊಂದಿದ್ದು, ಆಂಡ್ರಾಯ್ಡ್ 9 ಪೈ ಓಎಸ್‌ ಬೆಂಬಲ ಪಡೆದಿದೆ. 4GB RAM ಸಾಮರ್ಥ್ಯದೊಂದಿಗೆ 64GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಒಳಗೊಂಡಿದೆ. ಇದರೊಂದಿಗೆ ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಸಂಗ್ರಹವನ್ನು 512GB ವರೆಗೂ ವಿಸ್ತರಿಸಿಕೊಳ್ಳುವ ಅವಕಾಶ ನೀಡಲಾಗಿದೆ.


 • ಗ್ಯಾಲ್ಯಾಕ್ಸಿ A30s ಕ್ಯಾಮೆರಾ

  ಗ್ಯಾಲ್ಯಾಕ್ಸಿ A30s ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಮೂರು ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು, ಮುಖ್ಯ ಕ್ಯಾಮೆರಾವು 25ಮೆಗಾಪಿಕ್ಸಲ್ ಸೆನ್ಸಾರ್‌ನಲ್ಲಿದೆ. ಹಾಗೆಯೇ ಸೆಕೆಂಡ್‌ ಮತ್ತು ಮೂರನೇ ಕ್ಯಾಮೆರಾಗಳು 8 ಮೆಗಾಪಿಕ್ಸಲ್ ಮತ್ತು 5 ಮೆಗಾಪಿಕ್ಸಲ್ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇವೆ. ಮುಂಭಾಗದಲ್ಲಿ ಫಿಕ್ಸಡ್‌ ಫೋಕಲ್ f/2.0 ಲೆನ್ಸ್‌ನೊಂದಿಗೆ 16 ಮೆಗಾಪಿಕ್ಸಲ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒದಗಿಸಲಾಗಿದೆ.


 • ಗ್ಯಾಲ್ಯಾಕ್ಸಿ A30s ಬ್ಯಾಟರಿ

  ಗ್ಯಾಲ್ಯಾಕ್ಸಿ A30s ಸ್ಮಾರ್ಟ್‌ಫೋನಿನಲ್ಲಿ 4,000mAh ಸಾಮರ್ಥ್ಯದ ದೀರ್ಘಕಾಲದ ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಇನ್ನೂ ಇದರೊಂದಿಗೆ 15W ಫಾಸ್ಟ್‌ ಚಾರ್ಜರ್‌ ಅನ್ನು ಒದಗಿಸಲಾಗಿದೆ. ಇದರ ನೆರವಿನಿಂದ ಸ್ಮಾರ್ಟ್‌ಫೋನ್ ಬೇಗನೇ ಚಾರ್ಜ್‌ ಪಡೆದುಕೊಳ್ಳುತ್ತದೆ. ಹಾಗೆಯೇ ವೈಫೈ, ಬ್ಲೂಟೂತ್, ಜಿಪಿಎಸ್‌, ಫಿಂಗರ್‌ಪ್ರಿಂಟ್ ಸೆನ್ಸಾರ್ ಸೌಲಭ್ಯಗಳನ್ನು ಒಳಗೊಂಡಿದೆ.
ಜನಪ್ರಿಯ ಸ್ಮಾರ್ಟ್‌ಫೋನ್ ಕಂಪನಿ ಸ್ಯಾಮ್‌ಸಂಗ್‌ ಇತ್ತೀಚಿಗೆ 'ಗ್ಯಾಲ್ಯಾಕ್ಸಿ A' ಮತ್ತು 'ಗ್ಯಾಲ್ಯಾಕ್ಸಿ M' ಸರಣಿಯ ಸ್ಮಾರ್ಟ್‌ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದೀಗ ಕಂಪನಿಯು 'ಗ್ಯಾಲ್ಯಾಕ್ಸಿ A50s' ಮತ್ತು 'ಗ್ಯಾಲ್ಯಾಕ್ಸಿ A30s' ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಭರ್ಜರಿ ಇಳಿಕೆ ಮಾಡಿದ್ದು, ಮತ್ತಷ್ಟು ಅಬ್ಬರಿಸುವ ಸೂಚನೆಯನ್ನು ನೀಡಿದೆ. ಈ ಸ್ಮಾರ್ಟ್‌ಫೋನ್‌ಗಳು ಈಗಾಗಲೇ ತ್ರಿವಳಿ ಕ್ಯಾಮೆರಾದಿಂದ ಗ್ರಾಹಕರನ್ನು ಆಕರ್ಷಿಸಿವೆ.

   
 
ಹೆಲ್ತ್