ಗುತ್ತಿಗೆ ನೌಕರರ ಪ್ರಕಾರ, ಕಂಪನಿಯು ತಿಳಿಸಿರುವುದು ಘಟಕದಲ್ಲಿ ಸದ್ಯದ ಐಆರ್ ಪರಿಸ್ಥಿತಿಯಿಂದಾಗಿ, ನಿಮಗೆ ಹೆಚ್ಚಿನ ಮಾಹಿತಿ ನೀಡುವವರೆಗೆ ಕಾ...ರ್ಯಚರಣೆಯನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ತಿಳಿಸಿದೆ. ಕಾರ್ಮಿಕರು ಕಂಪನಿಯ ವಿರುದ್ದ ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ ಮಂಗಳವಾರದಂದು ಕಾರ್ಮಿಕರು ಪ್ರತಿಭಟನೆಯನ್ನು ಪ್ರಾರಂಭಿಸಿದ್ದರು, ಹೆಚ್ಎಂಎಸ್ಐ ಸುಮಾರು 650 ಗುತ್ತಿಗೆ ಕಾರ್ಮಿಕರನ್ನು ಅನಿರ್ದಿಷ್ಟ ರಜೆ ಮೇಲೆ ಕಳುಹಿಸಬೇಕಾಗಿತ್ತು. ಆದರೆ 1,800 ಗುತ್ತಿಗೆ ಕಾರ್ಮಿಕರನ್ನು ಹೆಸರಿಸಿದ್ದಾರೆ. ಇದರಿಂದ ಈ ಕಾರ್ಮಿಕರು ಸ್ಥಾವರವನ್ನು ಬಿಡಲು ನಿರಾಕರಿಸಿದರು ಮತ್ತು ಹೆಚ್ಚುವರಿ 200 ಮಂದಿ ಘಟಕದ ಮುಂದೆ ಪ್ರತಿಭಟನೆಯನ್ನು ನಡೆಸಿದರು.
ಕಾರ್ಮಿಕರು ಕಂಪನಿಗೆ ಕೆಲವು ಬೇಡಿಕೆಗಳನ್ನು ಇಟ್ಟಿದ್ದಾರೆ. ಪ್ರಮುಖವಾಗಿ ಕೆಲಸ ಮಾಡುವ ಪ್ರತಿ ಕಾರ್ಮಿಕನಿಗೆ ರೂ.1 ಲಕ್ಷ ನೀಡಬೇಕು. ಕೆಲಸದ ವಾತಾವರಣ ಸುಧಾರಿಸಬೇಕು ಮತ್ತು ಸರಿಯಾದ ಆಹಾರವನ್ನು ನೀಡಬೇಕು ಎಂದು ಕಾರ್ಮಿಕರು ಒತ್ತಾಯಿಸುತ್ತಿದ್ದಾರೆ. ಮ್ಯಾನೇಜ್ಮೆಂಟ್ನಿಂದಾಗಿ ಅವರ ಜೀವನವು ಕಷ್ಟಕರವಾಗಿಸುತ್ತಿದೆ ಎಂದು ಅವರು ಭಾವಿಸಿದ್ದಾರೆ.
ಗುತ್ತಿಗೆ ಕಾರ್ಮಿಕರು, ಮ್ಯಾನೇಜ್ಮೆಂಟ್ ಮತ್ತು ಕಾರ್ಮಿಕ ಇಲಾಖೆಯ ನಡುವಿನ ಚರ್ಚೆಗಳು ಕೊನೆಗೊಂಡಿವೆ ಮತ್ತು ಯಾವುದೇ ಪರಿಹಾರ ದೂರಕಿಲ್ಲವೆಂದು ಅನಿಸುತ್ತದೆ. ಪರಿಹಾರದ ಎಲ್ಲಾ ಪ್ರಯತ್ನಗಳು ವ್ಯರ್ಥವೆಂದು ಕಂಪನಿಯು ಭಾವಿಸಿದೆ.
ಪಾವತಿಸಬೇಕಾದ ಮೊತ್ತ ದೊಡ್ಡ ಪ್ರಮಾಣದಲ್ಲಿದೆ ಮತ್ತು ಪ್ರಸ್ತುತ ಆಟೋಕ್ಷೇತ್ರದಲ್ಲಿನ ಕುಸಿತದಿಂದ ಉಂಟಾದ ನಷ್ಟದಿಂದಾಗಿ ಕಂಪನಿಯು ಹಣಕಾಸು ಸಹಾಯ ನೀಡುವುದಿಲ್ಲ ಎಂದು ಕಾರ್ಮಿಕ ಇಲಾಖೆ ಭಾವಿಸಿದೆ.
MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!
ವಾಹನ ಉದ್ಯಮದಲ್ಲಿನ ಮಂದಗತಿಯಿಂದಾಗಿ ಒಂದು ಲಕ್ಷಕ್ಕೂ ಹೆಚ್ಚು ಉದ್ಯೋಗಗಳ ಮೇಲೆ ನೇರವಾಗಿ ಮತ್ತು ಪರೋಕ್ಷವಾಗಿ ಪರಿಣಾಮ ಬೀರಿವೆ. ಗುತ್ತಿಗೆ ಕೆಲಸಗಾರನು ಹೋಂಡಾದ ಉತ್ಪಾದನಾ ಸೌಲಭ್ಯಗಳು ಕಾರ್ಯನಿರ್ವಹಿಸುತ್ತಿವೆ ಮತ್ತು ಮಾನೇಸರ್ ಘಟಕದಲ್ಲಿ ಮಾತ್ರ ಪರಿಣಾಮ ಬೀರುತ್ತದೆ ಎಂದು ವಾದಿಸುತ್ತದೆ. (ಎಐಟಿಯುಸಿ) ಅಖಿಲ ಭಾರತ ಟ್ರೇಡ್ ಯುನಿಯನ್ ಕೌನ್ಸಿಲ್ ಪ್ರತಿನಿಧಿಗಳು ಮಂಗಳವಾರ ಹೋಂಡಾದ ಮಾನೇಸರ್ ಘಟಕಕ್ಕೆ ಭೇಟಿ ನೀಡಿ ಕಾರ್ಮಿಕರಿಗೆ ಬೆಂಬಲ ವ್ಯಕ್ತಪಡಿಸಿದರು. ಎಐಟಿಯುಸಿಯವರು ಸರ್ಕಾರವು ಹಸ್ತಕ್ಷೇಪವನ್ನು ಮಾಡಬೇಕು ಎಂದು ಕೇಳಿದ್ದಾರೆ ಮತ್ತು ಪರಿಹಾರದ ಬಗ್ಗೆ ಚರ್ಚಿಸಲು ಅಧಿಕಾರಗಳನ್ನು ಭೇಟಿ ಮಾಡಿದ್ದಾರೆ ಎಂದು ಹೇಳಿದರು.
MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!
ಕಾರ್ಮಿಕರು ಹಾಗೂ ಎಚ್ಎಂಎಸ್ಐ ಸಂಸ್ಥೆಯ ಹಗ್ಗಜಗ್ಗಾಟ ಮುಂದುವರೆದಿದೆ. ಘಟಕವನ್ನು ಸಂಪೂರ್ಣವಾಗಿ ಮುಚ್ಚಿದಾಗ ಕಾರ್ಮಿಕರಿಗೂ ಯಾವುದೇ ಆಯ್ಕೆ ಇರುವುದಿಲ್ಲ. ಅಂತಹ ಸಂದರ್ಭ ಬಂದರೆ ಕಾರ್ಮಿಕರಿಗೆ ಯಾವುದೇ ಪರಿಹಾರವು ಲಭಿಸುವುದು ಕಷ್ಟಕರವಾಗಿದೆ.
ಹೋಂಡಾ ಮೋಟಾರ್ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (ಹೆಚ್ಎಂಎಸ್ಐ) ಮುಂದಿನ ಸೂಚನೆ ಬರುವವರೆಗೂ ತನ್ನ ಮನೇಸರ್ನಲ್ಲಿನ ಘಟಕವನ್ನು ಸ್ಥಗಿತಗೊಳಿಸುತ್ತಿದೆ. ಮ್ಯಾನೇಜ್ಮೆಂಟ್ ಮತ್ತು 2,000 ಗುತ್ತಿಗೆ ಕಾರ್ಮಿಕರ ನಡುವೆ ನಡೆಯುತ್ತಿರುವ ಹಗ್ಗಜಗ್ಗಾಟವು ಆರನೇ ದಿನಕ್ಕೆ ಕಾಲಿಟ್ಟಿದೆ. ಸದ್ಯಕ್ಕೆ ಕಾರ್ಯಚರಣೆಯನ್ನು ಸ್ಥಗಿತಗೊಳಿಸಲಾಗುವುದೆಂದು ಎಚ್ಎಂಎಸ್ಐ ಸಂಸ್ಥೆಯು ತಿಳಿಸಿದೆ.