Back
Home » Car News
ಹೊಸ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಹ್ಯುಂಡೈ ಎಕ್ಸೆಂಟ್
DriveSpark | 12th Nov, 2019 07:35 PM
 • ಹೊಸ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಹ್ಯುಂಡೈ ಎಕ್ಸೆಂಟ್

  ಭಾರತದಲ್ಲಿ ಕಾಂಪ್ಯಾಕ್ಟ್ ಸೆಡಾನ್‍ ಸೆಗ್‍‍ಮೆಂಟ್‍‍ನಲ್ಲಿ ಹ್ಯುಂಡೈ ಎಕ್ಸೆಂಟ್ ಸಾಕಷ್ಟು ಜನಪ್ರಿಯತೆಗಳಿಸಿದೆ. ಹ್ಯುಂಡೈ ಎಕ್ಸೆಂಟ್ ಕಾಂಪ್ಯಾಕ್ಟ್ ಸೆಡಾನ್ ವಿಭಾಗದಲ್ಲಿ ಮಾರುತಿ ಸುಜುಕಿ ಡಿಜೈರ್ ಮತ್ತು ಹೋಂಡಾ ಅಮೇಝ್‍ ಕಾರುಗೆ ಪೈಪೋಟಿಯನ್ನು ನೀಡುತ್ತಿದೆ. ಹ್ಯುಂಡೈ ಎಕ್ಸೆಂಟ್ ಹೆಚ್ಚಾಗಿ ಟ್ಯಾಕ್ಸಿ ಕ್ಯಾಬ್ ಆಗಿ ಬಳಸುತ್ತಾರೆ. ಹ್ಯುಂಡೈ ಕಂಪನಿಯು ಮಾರಾಟವನ್ನು ಹೆಚ್ಚಿಸುವ ಪ್ರಯತ್ನದಿಂದ ಈ ಕಾರನ್ನು ಟಾಕ್ಸಿ ವಿಭಾಗದಲ್ಲಿ ಮಾರಾಟ ಮಾಡಲಾಯಿತು. ಈ ಕಾರಣದಿಂದಾಗಿ ವೈಯಕ್ತಿಕ ಬಳಕೆಗೆ ಕಾರು ಖರೀದಿಸುವವರ ಸಂಖ್ಯೆ ಕಡಿಮೆಯಾಯ್ತು.


 • ಹೊಸ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಹ್ಯುಂಡೈ ಎಕ್ಸೆಂಟ್

  ಹೊಸ ಜನರೇಷನ್ ಹ್ಯುಂಡೈ ಎಕ್ಸೆಂಟ್ ಕಾರನ್ನು ಅಭಿವೃದ್ದಿಪಡಿಸಲಾಗುತ್ತಿದೆ. ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲು ಹೊಸ ವೈಶಿಷ್ಟ್ಯಗಳೊಂದಿಗೆ ಪರಿಚಯಿಸಲು ಕಂಪನಿ ಸಜ್ಜಾಗುತ್ತಿದೆ. ಈ ಕಾರನ್ನು ಭಾರತದಲ್ಲಿ ಸ್ಪಾಟ್ ಟೆಸ್ಟ್ ಮಾಡಲಾಗಿದೆ.


 • ಹೊಸ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಹ್ಯುಂಡೈ ಎಕ್ಸೆಂಟ್

  ಕಳೆದ ಬಾರಿ ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್ ಸೆಡಾನ್ ಆವೃತ್ತಿಯಲ್ಲಿ ಬದಲಾವಣೆಯನ್ನು ಮಾಡಿದ್ದರು. ಈ ಬಾರಿ ಕಾಂಪ್ಯಾಕ್ಟ್ ಸೆಡಾನ್‍‍ನಲ್ಲಿ ಬದಲಾವಣೆಗಳನ್ನು ಮಾಡಿದ್ದಾರೆ. ಹೊಸ ಒರಾ ಕಾಂಪ್ಯಾಕ್ಟ್ ಸೆಡಾನ್‍ ಹೊಸ ಗ್ರ್ಯಾಂಡ್ ಐ10 ನಿಯೋಸ್ ಮಾದರಿಯಲ್ಲಿ ಇರಲಿದೆ ಎಂದು ನಿರೀಕ್ಷಿಸಬಹುದು.


 • ಹೊಸ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಹ್ಯುಂಡೈ ಎಕ್ಸೆಂಟ್

  ಹ್ಯುಂಡೈ ಎಲಾಂಟ್ರಾ ಫೇಸ್‍‍ಲಿಫ್ಟ್ ಮಾದರಿಯ ವಿನ್ಯಾಸವನ್ನು ಹೊಂದಿರಲಿದೆ ಎಂದು ನಿರೀಕ್ಷಿಸಬಹುದು. ಗ್ರ್ಯಾಂಡ್ ಐ10 ನಿಯೋಸ್‍‍ನ ಮಾದರಿಯ ಹಾಗೇ ಕ್ಯಾಸ್ಕೇಡಿಂಗ್ ಗ್ರಿಲ್ ಅನ್ನು ಹೊಂದಿರಲಿದೆ. ಒರಾ ಕಾರು ಐ10 ನಿಯೋಸ್‍ನ ಮಾದರಿಯ ಬೂಮರಾಂಗ್ ಆಕಾರದ ಎಲ್ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್ ಅನ್ನು ಹೊಂದಿರಲಿದೆ. ಇದರೊಂದಿಗೆ ಎಲ್‍ಇಡಿ ಟೇಲ್‍‍ಲೈಟ್‍ಗಳ ಕೆಳಗೆ ಎಲ್‍ಇಡಿ ಸ್ಟ್ರಿಪ್‍ಗಳಿವೆ.


 • ಹೊಸ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಹ್ಯುಂಡೈ ಎಕ್ಸೆಂಟ್

  ಹೊಸ ಒರಾ ಕಾಂಪ್ಯಾಕ್ಟ್ ಸೆಡಾನ್ ಇಂಟಿರಿಯರ್‍‍ನಲ್ಲಿ ತನ್ನ ಸರಣಿಯ ಗ್ರ್ಯಾಂಡ್ ಐ10 ನಿಯೋಸ್‍ನ ಮಾದರಿಯ ಆ್ಯಪಲ್ ಕಾರ್‍‍ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಹೊಂದಿರುವ 8.0 ಇಂಚಿನ ಟಚ್‍ಸ್ಕ್ರೀನ್ ಇನ್ಪೋಟೇನ್‍‍ಮೆಂಟ್ ಅನ್ನು ಹೊಂದರಲಿದೆ. ಇದರೊಂದಿಗೆ ಸ್ಮಾರ್ಟ್ ಜಾರ್ಜಿಂಗ್ ಅನ್ನು ಸಹ ನೀಡುವ ಸಾಧ್ಯತೆಗಳಿವೆ.

  MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!


 • ಹೊಸ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಹ್ಯುಂಡೈ ಎಕ್ಸೆಂಟ್

  ಪ್ರಸ್ತುತ ಮಾರುಕಟ್ಟೆಯಲ್ಲಿರುವ ಹ್ಯುಂಡೈ ಎಕ್ಸೆಂಡ್ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಇದರಲ್ಲಿ 1.2 ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ 83 ಬಿಹೆಚ್‍‍ಪಿ ಪವರ್ ಮತ್ತು 114 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನೂ 1.2 ಲೀಟರ್ ಮೂರು-ಸಿಲಿಂಡರ್ ಡೀಸೆಲ್ ಎಂಜಿನ್ 75 ಬಿ‍ಹೆಚ್‍‍ಪಿ ಪವರ್ ಮತ್ತು 190 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍‍ನೊಂದಿಗೆ 5 ಸ್ಪೀಡ್ ಮ್ಯಾನುವಲ್ ಮತ್ತು 4 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

  MOST READ: ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ


 • ಹೊಸ ಹೆಸರಿನಲ್ಲಿ ಬಿಡುಗಡೆಯಾಗಲಿದೆ ಹ್ಯುಂಡೈ ಎಕ್ಸೆಂಟ್

  ಪ್ರಸ್ತುತ ಹ್ಯುಂಡೈ ಎಕ್ಸೆಂಟ್ ಮಾದರಿಯ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.5.81 ಲಕ್ಷಗಳಾಗಿವೆ, ಹೊಸ ಕಾರಿನ ಬೆಲೆಯು ತುಸು ಹೆಚ್ಚಿರಬಹುದು. ದೇಶಿಯ ಮಾರುಕಟ್ಟೆಯಲ್ಲಿ ಹೊಸ ಕಾಂಪ್ಯಾಕ್ಟ್ ಸೆಡಾನ್ ಬಿಡುಗಡೆಯಾದ ಬಳಿಕ ಮಾರುತಿ ಸುಜುಕಿ ಡಿಜೈರ್, ಹೋಂಡಾ ಅಮೆಜ್, ಫೋರ್ಡ್ ಆಸ್ಪೈರ್, ಫೋಕ್ಸ್ ಅಮಿಯೋ ಕಾರುಗಳಿಗೆ ಪೈಪೋಟಿಯನ್ನು ನೀಡಲಿದೆ.
ಹೊಸ ಜನರೇಷನ್ ಹ್ಯುಂಡೈ ಎಕ್ಸೆಂಟ್ ಅನ್ನು ಹೊಸ ಹೆಸರಿನಲ್ಲಿ ಬಿಡುಗಡೆಗೊಳಿಸಲು ಕಂಪನಿಯು ಸಜ್ಜಾಗಿದೆ. ಇಂದು ಕಂಪನಿಯು ಅಧಿಕೃತವಾಗಿ ಬಿಡುಗಡೆಗೊಳಿಸಿದ ಟೇಸರ್ ಮೂಲಕ ಎಕ್ಸೆಂಟ್ ಕಾರನ್ನು ಒರಾ ಎಂಬ ಹೊಸ ಹೆಸರಿನಲ್ಲಿ ಬಿಡುಗಡೆಗೊಳಿಸುತ್ತಿರುವುದು ಖಚಿತವಾಗಿದೆ.

   
 
ಹೆಲ್ತ್