Back
Home » ಇತ್ತೀಚಿನ
ಶೀಘ್ರದಲ್ಲಿಯೇ ಭಾರತಕ್ಕೆ ಫೇಸ್‌ಬುಕ್‌ ಪೇ..! ಗೂಗಲ್‌, ಫೋನ್‌ ಪೇಗೆ ನೀಡುತ್ತಾ ಟಕ್ಕರ್..?
Gizbot | 14th Nov, 2019 03:00 PM
 • ಶೀಘ್ರ ವಿಸ್ತರಣೆ

  ಶೀಘ್ರದಲ್ಲಿಯೇ ಫೇಸ್‌ಬುಕ್ ಪೇಯನ್ನು ಇನ್‌ಸ್ಟಾಗ್ರಾಂ ಮತ್ತು ವಾಟ್ಸ್‌ಆಪ್‌ನಲ್ಲಿ ತರಲು ಯೋಚಿಸುತ್ತಿದ್ದು, ಹೆಚ್ಚಿನ ಜನರು ಹಾಗೂ ಸ್ಥಳಗಳಿಗೆ ಫೇಸ್‌ಬುಕ್‌ ಪೇಯನ್ನು ತಲುಪಿಸುತ್ತೇವೆ ಎಂದು ಫೇಸ್‌ಬುಕ್‌ನ ಮಾರುಕಟ್ಟೆ ಮತ್ತು ವಾಣಿಜ್ಯ ಉಪಾಧ್ಯಕ್ಷ ಡೆಬೊರಾ ಲಿಯು ಹೇಳಿದ್ದಾರೆ.


 • ಲಿಬ್ರಾದಿಂದ ಪ್ರತ್ಯೇಕ

  ಫೇಸ್‌ಬುಕ್ ಪೇ ಪ್ರಮುಖ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಹಾಗೂ ಪೇಪಾಲ್ ಪಾವತಿ ವ್ಯವಸ್ಥೆಯನ್ನು ಬೆಂಬಲಿಸುತ್ತದೆ. ಫೇಸ್‌ಬುಕ್ ಪೇಯನ್ನು ಅಸ್ತಿತ್ವದಲ್ಲಿರುವ ಹಣಕಾಸು ಮೂಲಸೌಕರ್ಯ ಮತ್ತು ಪಾಲುದಾರಿಕೆಗಳ ಮೇಲೆ ನಿರ್ಮಿಸಲಾಗಿದೆ. ಇದು ಕಂಪನಿಯ ಡಿಜಿಟಲ್ ಕರೆನ್ಸಿಯಾದ ಲಿಬ್ರಾ ನೆಟ್‌ವರ್ಕ್‌ನಲ್ಲಿ ಕಾರ್ಯನಿರ್ವಹಿಸುವ ಕ್ಯಾಲಿಬ್ರಾ ವ್ಯಾಲೆಟ್‌ನಿಂದ ಪ್ರತ್ಯೇಕವಾಗಿದೆ.


 • ಸರಳ ಸಂಯೋಜನೆ

  ನೀವು ಕೆಲವೇ ಟ್ಯಾಪ್‌ಗಳಲ್ಲಿ ಫೇಸ್‌ಬುಕ್ ಅಥವಾ ಮೆಸೆಂಜರ್‌ನಲ್ಲಿ ಫೇಸ್‌ಬುಕ್ ಪೇ ಅನ್ನು ಬಳಸಬಹುದು. ಫೇಸ್‌ಬುಕ್ ಆಪ್‌ ಅಥವಾ ವೆಬ್‌ಸೈಟ್‌ನಲ್ಲಿ ಸೆಟ್ಟಿಂಗ್‌ಗಳಿಗೆ ತೆರಳಿ, ನಂತರ ಫೇಸ್‌ಬುಕ್ ಪೇ ಆಯ್ಕೆ ಮಾಡಬೇಕು. ಬಳಿಕ ಪಾವತಿ ವಿಧಾನ ಸೇರಿಸಿ ಹಾಗೂ ಮುಂದಿನ ಪಾವತಿಗೆ ಫೇಸ್‌ಬುಕ್ ಪೇ ಬಳಸಿ.

  ವಾಟ್ಸ್‌ಆಪ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಲಭ್ಯವಾದ ನಂತರ ಪ್ರತಿ ಅಪ್ಲಿಕೇಶನ್‌ನಲ್ಲಿಯೂ ನೇರವಾಗಿ ಹೊಂದಿಸಲು ಸಾಧ್ಯವಾಗುತ್ತದೆ.


 • ಹೆಚ್ಚುವರಿ ಭದ್ರತೆ

  ಬಳಕೆದಾರರು ಹಣ ಕಳುಹಿಸುವಾಗ ಅಥವಾ ಪಾವತಿಸುವಾಗ ಹೆಚ್ಚುವರಿ ಭದ್ರತೆಗಾಗಿ ಪಿನ್ ಸೇರಿಸಬಹುದು ಹಾಗೂ ಟಚ್ ಅಥವಾ ಫೇಸ್ ಐಡಿ ಗುರುತಿಸುವಂತಹ ಸಾಧನಗಳಾದ ಬಯೋಮೆಟ್ರಿಕ್‌ ಬಳಸಬಹುದು. ಇದರಿಂದ ಪಾವತಿ ವ್ಯವಸ್ಥೆಗೆ ರಕ್ಷಣೆ ದೊರೆಯಲಿದೆ.


 • ಆದಷ್ಟು ಬೇಗ ಭಾರತಕ್ಕೆ

  ಕಳೆದ ತಿಂಗಳು, ಫೇಸ್‌ಬುಕ್‌ನ ಸಿಇಒ ಮಾರ್ಕ್ ಜುಕರ್‌ಬರ್ಗ್, ವಾಟ್ಸ್‌ಆಪ್ ಶೀಘ್ರದಲ್ಲೇ ಭಾರತದಲ್ಲಿಯೂ ತನ್ನ ಪಾವತಿ ಸೇವೆ ಪ್ರಾರಂಭಿಸಲಿದೆ ಎಂದು ಹೇಳಿದರು. ಡೇಟಾ ಅನುಸರಣೆ ಸಮಸ್ಯೆ ಮತ್ತು ನಿಬಂಧನೆಗಳಿಂದ ವಾಟ್ಸ್‌ಆಪ್‌ ಪೇ ಬಿಡುಗಡೆ ತಡವಾಗುತ್ತಿದ್ದು, ದೇಶದಲ್ಲಿ ಈಗಾಗಲೇ ಒಂದು ಮಿಲಿಯನ್ ಬಳಕೆದಾರರೊಂದಿಗೆ ಪಾವತಿ ಸೇವೆಯ ಯಶಸ್ವಿ ಪರೀಕ್ಷೆಯನ್ನು ವಾಟ್ಸ್‌ಆಪ್‌ ನಡೆಸಿದೆ.
ಸಾಮಾಜಿಕ ಜಾಲತಾಣ ದೈತ್ಯ ಫೇಸ್‌ಬುಕ್ ಹೊಸ ಪಾವತಿ ಸೇವೆಯನ್ನು ಪ್ರಾರಂಭಿಸಿದ್ದು, ಈ ವ್ಯವಸ್ಥೆ ಫೇಸ್‌ಬುಕ್, ಮೆಸೆಂಜರ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸ್‌ಆಪ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಫೀಚರ್‌ಗೆ ಫೇಸ್‌ಬುಕ್ ಪೇ ಎಂದು ಹೆಸರಿಸಲಾಗಿದ್ದು, ಈ ವಾರ ಅಮೆರಿಕದಲ್ಲಿನ ನಿಧಿಸಂಗ್ರಹಣೆದಾರರು, ಇನ್‌-ಗೇಮ್‌ ಖರೀದಿಗಳು, ಕಾರ್ಯಕ್ರಮದ ಟಿಕೆಟ್‌ಗಳು, ಮೆಸೆಂಜರ್‌ನಲ್ಲಿ ವ್ಯಕ್ತಿಯಿಂದ ವ್ಯಕ್ತಿಗಳಿಗೆ ಪಾವತಿ ಮತ್ತು ಫೇಸ್‌ಬುಕ್ ಮಾರ್ಕೆಟ್‌ಪ್ಲೇಸ್‌ನ ಆಯ್ದ ಪುಟಗಳು ಮತ್ತು ವ್ಯವಹಾರಗಳ ಖರೀದಿಗಳಿಗಾಗಿ ಫೇಸ್‌ಬುಕ್ ಮತ್ತು ಮೆಸೆಂಜರ್‌ನಲ್ಲಿ ಲಭ್ಯವಾಗಿದೆ.

 
ಹೆಲ್ತ್