Back
Home » ಆರೋಗ್ಯ
ಮಹಿಳೆಯರೇ ನಾಳೆಯ ಆರೋಗ್ಯಕ್ಕಾಗಿ ಇಂದಿನಿಂದಲೇ 'ನಿಮ್ಮ ಸಮಯ' ಮೀಸಲಿಡಿ
Boldsky | 15th Nov, 2019 03:19 PM
 • ನಿಮಗಾಗಿ ಸಮಯ ಏಕೆ ಮುಖ್ಯ

  ಸಾಮಾನ್ಯವಾಗಿ ಮಹಿಳೆಯರು ಮಕ್ಕಳಾದ ನಂತರ ಅದರ ಪೋಷಣೆಯಲ್ಲೇ ಹಲವು ವರ್ಷಗಳನ್ನು ಕಳೆದುಬಿಡುತ್ತಾರೆ. ಇದರ ನಡುವೆ ಮನೆಯ ಕೆಲಸ ಮತ್ತು ಉದ್ಯೋಗಿಯಾಗಿದ್ದರೆ ಕಚೇರಿಯ ಕೆಲಸಗಳಲ್ಲೇ ಅರ್ಧ ಜೀವನ ಕಳೆದುಹೋಗಿರುತ್ತದೆ. ಇದರ ನಡುವೆ ಅವರ ದೈಹಿಕ ಫಿಟ್ ನೆಸ್ ಬಗ್ಗೆ ಗಮನವನ್ನೇ ಹರಿಸಿರುವುದಿಲ್ಲ, ಇದರಿಂದ ಚಿಕ್ಕ ವಯಸ್ಸಿಗೇ ಥೈರಾಯ್ಡ್, ಮಧುಮೇಹದಂಥ ಕಾಯಿಲೆಗಳನ್ನು ತಂದುಕೊಂಡಿರುತ್ತಾರೆ. ಈ ಎಲ್ಲಾ ಕಾರಣಗಳಿಗಾಗಿ ಯಾವುದೇ ಪಾರ್ಟಿ, ಕಾರ್ಯಕ್ರಮಗಳಿಗೂ ಹಾಜರಾಗಲು ಹಿಂಜರಿಯುತ್ತಾರೆ.

  ಇದಕ್ಕಾಗಿ 'ನಿಮ್ಮ ಸಮಯ' ಅತೀ ಮುಖ್ಯ. ವೈವಾಹಿಕ ಜೀವನದ ಆರಂಭದಿದಂಲೇ ನಿಮಗಾಗಿ ಸ್ವಲ್ಪ ಸಮಯವನ್ನು ಇಟ್ಟುಕೊಳ್ಳಿ. ಈ ಸಮಯದಲ್ಲಿ ನಿಮಗೆ ಇಷ್ಟವಾದ, ಮನಸ್ಸಿಗೆ ಖುಷಿಯಾಗುವ ಕೆಲಸಗಳನ್ನು ಮಾಡಿ. ಸ್ನೇಹಿತರೊಂದಿಗೆ ಹೊರಗೆ ಹೋಗುವುದು, ಪತಿಯ ಜೊತೆ ಸಮಯ ಕಳೆಯುವುದು, ನಿತ್ಯ ವಾಕ್ ಮಾಡುವುದು ಹೀಗೆ ನಿಮ್ಮಿಷ್ಟದಂತೆ ಸಮಯ ಕಳೆಯಿರಿ. ಹಾಗಂತ ಕುಟುಂಬವನ್ನು ನಿರ್ಲಕ್ಷಿಸುವುದಲ್ಲ, ಕುಟುಂಬ ಎಷ್ಟು ಮುಖ್ಯವೋ ನಿಮಗಾಗಿ ಸಮಯವನ್ನು ಮೀಡಲಿಡುವುದು ಸಹ ಅಷ್ಟೇ ಮುಖ್ಯ ಎಂಬುದನ್ನು ನೆನಪಿನಲ್ಲಿಡಿ.

  ನಿಮ್ಮ ಸಮಯ ಕಳೆಯುವುದು ಹೇಗೆ?

  ನಿಮಗಾಗಿ ಮೀಸಲಿರುವ ಸಮಯ ಬಹಳ ಅಮೂಲ್ಯವಾದದ್ದು, ಕಳೆಯುವ ಅವಧಿಗಿಂತಲೂ ಪ್ರತಿ ನಿಮಿಷವನ್ನು ಸವಿಯಲು ಆರಂಭಿಸಿ. ನಿಮ್ಮ ಸಮಯವನ್ನು ಹೇಗೆಲ್ಲಾ ಕಳೆಯಬಹುದು ಎಂಬ ಗೊಂದಲವೇ, ನಾವಿಲ್ಲಿ ಕೆಲವು ಸಲಹೆಗಳನ್ನು ನೀಡಿಲಿದ್ದೇವೆ ಮುಂದೆ ಓದಿ.


 • 1. ನಿಮ್ಮ ಬಗ್ಗೆ ಕಾಳಜಿ ವಹಿಸಿ

  ತಾಯಿಯಾಗಿ, ಪತ್ನಿಯಾಗಿ, ಸೊಸೆಯಾಗಿ ಒಂದು ಕುಟುಂಬದ ಜಬಾಬ್ದಾರಿ ಹೊರುವುದು ಅಷ್ಟು ಸುಲಭದ ಮಾತಲ್ಲ. ಈ ಎಲ್ಲದರ ನಡುವೆ ನಿಮ್ಮ ಸಮಯದಲ್ಲಿ ಬ್ಯೂಟಿ ಪಾರ್ಲರ್ ಗೆ ಹೋಗಿ, ಹೇರ್ ಕಟ್, ಪೆಡಿಕ್ಯೂರ್, ಹೇರ್ ಮಸಾಜ್ ಮಾಡಿಸಿ ನಿಮ್ಮ ಸೌಂದರ್ಯವನ್ನು ವೃದ್ಧಿಸಿಕೊಳ್ಳಿ, ಇದು ನಿಮಗೇ ಗೊತ್ತಿಲ್ಲದ ಹಾಗೆ ನಿಮಲ್ಲಿ ಆತ್ಮವಿಶ್ವಾಸ ತುಂಬುತ್ತದೆ. ನಿಮ್ಮ ಪತಿ ಎಂದಿಗೂ ನೀವು ಅಂದವಾಗಿ ಕಾಣಬೇಕು ಎಂದೇ ಬಯಸುವುದು ಈ ಬಗ್ಗೆ ನಿಮ್ಮ ಗಮನವಿರಲಿ.


 • 2. ದೈಹಿಕವಾಗಿ ಫಿಟ್ ಆಗಿರಿ

  ಮನೆಯ ಕೆಲಸಗಳ ನಡುವೆ ನಿಮ್ಮ ದೈಹಿಕ ಫಿಟ್ ನೆಸ್ ಬಗ್ಗೆ ಕಾಳಜಿ ವಹಿಸಲು ಆಗುವುದಿಲ್ಲ. ಇನ್ನು ಮುಂದೆ ಆರೋಗ್ಯಕರ ಆಹಾರಗಳ ಬಗ್ಗೆ ಹೆಚ್ಚು ಕಾಳಜಿವಹಿಸಿ, ಅನಗತ್ಯ ಉಳಿದ ಆಹಾರಗಳನ್ನು ಸೇವಿಸಬೇಡಿ. ನಿಮ್ಮ ಸಮಯದಲ್ಲಿ ಸ್ವಲ್ಪಸಮಯ ವ್ಯಾಯಾಮ, ನಡಿಗೆ ಮಾಡಿ. ಸಾಮಾಜಿಕ ಜಾಲತಾಣಗಳು ನಿಮ್ಮ ಅಂಗೈನಲ್ಲಿದೆ ಅದರ ಸಹಯಾದಿಂದ ನಿಮ್ಮ ದೇಹದ ಫಿಟ್ನೆಸ್ ಕಾಪಾಡಲು ಅಗತ್ಯವಾದ ವ್ಯಾಯಾಮಗಳನ್ನು ಮಾಡಿ, ಸಾಧ್ಯವಾದರೆ ಜಿಮ್ ಗೆ ಹೋಗಿ. ನಿಮ್ಮನ್ನು ನೀವೆ ಕಂಫರ್ಟ್ ಜೋನ್ ಗೆ ಪುಶ್ ಮಾಡಿಕೊಳ್ಳುವ ಪ್ರಯತ್ನ ಮಾಡಬೇಕು.


 • 3. ಸ್ವಲ್ಪ ಸಮಯ ನಿದ್ರೆ ಮಾಡಿ

  ಮಕ್ಕಳನ್ನು ನೋಡಿಕೊಳ್ಳುತ್ತಿರುವ ತಾಯಂದಿರಿಗೆ ಇದು ಅತೀ ಮುಖ್ಯವಾದ ವಿಷಯವಾಗುತ್ತದೆ. ಮಾತೃತ್ವವು ನಮ್ಮ ದೇಹದಿಂದ ಎಲ್ಲಾ ಶಕ್ತಿಯನ್ನು ಹೊರಹಾಕುತ್ತದೆ. ಸ್ವಲ್ಪ ನಿದ್ರೆ ಪಡೆಯುವುದರ ಮೂಲಕ ನಮ್ಮಲ್ಲಿ ಪುನಃ ಚೈತನ್ಯ, ಶಕ್ತಿಯನ್ನು ತುಂಬಿಸಿಕೊಳ್ಳುವ ಅತ್ಯುತ್ತಮ ಮಾರ್ಗ. ಮಗು ಎಚ್ಚರವಾಗಿರುವ ಸಂಪೂರ್ಣ ಸಮಯ ಮಗುವಿನ ಕಡೆಯೇ ತಾಯಿ ಗಮಹರಿಸಬೇಕಾಗುತ್ತದೆ. ಮಗು ಮಲಗಿದಾಗ ಜತೆಯಲ್ಲೆ ಮಲಗುವುದು ಅಥವಾ ಮಗು ಸರಿಯಾದ ನಿದ್ರೆ ಮಾಡದೇ ಇರುವಾಗ ಪತಿ ಅಥವಾ ಕುಟುಂಬದವರ ಬಳಿ ಮಗುವನ್ನು ಕೊಟ್ಟು ಸ್ವಲ್ಪ ಸಮಯ ಏಕಾಂಗಿಯಾಗಿ, ಯಾವುದೇ ಅಡೆತಡೆಗಳಿಲ್ಲದೆ ನಿದ್ದೆ ಮಾಡಿ. ಗೃಹಿಣಿಯರೂ ಸಹ ನಿತ್ಯದ ಎಲ್ಲಾ ಕೆಲಸಗಳ ನಡುವೆ ಸ್ವಲ್ಪ ವಿರಾಮ ಪಡೆಯುವುದು ಅತ್ಯಗತ್ಯ.


 • 4. ಪತಿಯೊಂದಿಗೆ ಪ್ರವಾಸಕ್ಕೆ ಹೋಗಿ

  ಕುಟುಂಬದ ಎಲ್ಲಾ ಜಂಜಡಗಳ ನಡುವೆ ನಿಮಗಾಗಿ ಸಮಯವನ್ನಿಟ್ಟು ಒಂದೆರಡು ದಿನ ಪ್ರವಾಸಕ್ಕೆ ಹೋಗಿ. ನಿತ್ಯ ಕುಟುಂಬ ಅಥವಾ ಮಗುವಿಗಾಗಿ ಹೆಚ್ಚು ಸಮಯ ಕಳೆಯುತ್ತಿರುತ್ತೇವೆ, ಈ ನಡುವೆ ಪತಿಗೆ ಅಮೂಲ್ಯ ಸಮಯ ನೀಡಲು ಸಾಧ್ಯವಾಗಿರುವುದಿಲ್ಲ, ಇಂಥಾ ಪ್ರವಾಸದಲ್ಲಿ ಗುಣಮಟ್ಟದ ಸಮಯವನ್ನು ಕಳೆಯುವುದರಿಂದ ನಿಮ್ಮಿಬ್ಬರ ಬಾಂಧವ್ಯವನ್ನು ವೃದ್ಧಿಸುತ್ತದೆ. ಹೆಚ್ಚಿನ ದಿನಗಳ ಪ್ರವಾಸ ಸಾಧ್ಯವಾಗದಿದ್ದರೆ ಕನಿಷ್ಠ ಬೆಳಗಿನಿಂದ ಸಂಜೆಯೆವರೆಗೆ ಏಕಾಂತದ ಸಮಯ ಕಳೆಯಲು ಪ್ರಯತ್ನಿಸಿ.


 • 5. ಅಡುಗೆ ಮಾಡಲು ಇಷ್ಟವಾದರೆ ರುಚಿಕರ ಖಾದ್ಯ ತಯಾರಿಸಿ

  ನೀವು ಆಹಾರ ಪ್ರಿಯರು ಅಥವಾ ಅಡುಗೆ ಮಾಡಲು ಇಷ್ಟಪಟ್ಟರೆ ನಿಮ್ಮ ಕುಟುಂಬಕ್ಕಾಗಿ ಉತ್ತಮವಾದ, ವಿಭಿನ್ನವಾದ ಖಾದ್ಯವನ್ನು ತಯಾರಿಸಿ ಉಣಬಡಿಸಿ. ಅಡುಗೆ ಮಾಡುವ ಪ್ರಕ್ರಿಯೆಯನ್ನು ನೀವು ಇಷ್ಟಪಡುವುದಾದರೆ ಮಾನಸಿಕವಾಗಿ ಇದು ಬಹಳ ಚಿಕಿತ್ಸಕವಾಗಬಹುದು ಮತ್ತು ಒತ್ತಡ, ಆಯಾಸವನ್ನು ನಿವಾರಿಸಲು ಸಹಾಯ ಮಾಡುತ್ತದೆ.


 • 6. ಸ್ನೇಹಿತರೊಂದಿಗೆ ಹೊರಗೆ ಹೋಗಿ

  ಸ್ನೇಹಿತರೊಂದಿಗೆ ಸಮಯ ಕಳೆಯುವುದು ಬಹುತೇಕರ ನೆಚ್ಚಿನ ವಿಷಯ. ನೀವು ಹಾಗೂ ನಿಮ್ಮ ಸ್ನೇಹಿತರು ಒಂದೊಳ್ಳೆ ಸಮಯವನ್ನು ನಿಗದಿಮಾಡಿಕೊಂಡು ಅವರನ್ನು ಭೇಟಿಯಾಗಿ. ಚಲನಚಿತ್ರ ಅಥವಾ ಹೊಟೇಲ್ ಗಳಿಗೆ ಹೋಗಿ ಅತ್ಯತ್ತಮ ಮೋಜಿನ ಸಮಯವನ್ನು ಕಳೆಯಿರಿ. ಈ ಮೂಲಕ ಸಾಮಾಜಿಕ ವಲಯದಲ್ಲಿರಲು ಸಮಯವನ್ನು ಮಾಡಿ. ನಿಮಗೆ ಆಪ್ತರೆನಿಸುವ ಗೆಳತಿಯರೊಂದಿಗೆ ಕೌಟುಂಬಿಕ ವಿಷಯಗಳನ್ನು ಮುಕ್ತವಾಗಿ ಚರ್ಚಿಸಿ, ಅವರ ಸಮ್ಯಸಗಳಿದ್ದರೆ ಸಾಧ್ಯವಾದರೆ ಪರಿಹಾರ ನೀಡಿ.


 • 7. ಅತ್ಯುತ್ತಮ ಪುಸ್ತಕಗಳನ್ನು ಓದಿ

  ನಿಮ್ಮ ನೆಚ್ಚಿನ ಪುಸ್ತಕಗಳ ಮೇಲೆ ಕೈ ಹಾಕಲು ನಿಮಗೆ ಸಾಧ್ಯವಾಗದಿದ್ದರೆ ಇಂದಿನಿಂದಲೇ ಪ್ರಾರಂಭಿಸಿ. ನಿಮ್ಮ ನೆಚ್ಚಿನ ಕಾದಂಬರಿ, ಪುಸ್ತಕಗಳ ಓದುವಿಕೆ ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ನಿಮ್ಮ ಸಮಯವನ್ನು ನಿರಾಳವಾಗಿ ಕಳೆದ ನಂತರ ನೀವು ನಿಮ್ಮ ಕರ್ತವ್ಯಗಳನ್ನು ಹೆಚ್ಚು ಸುಲಭವಾಗಿ ನಿರ್ವಹಿಸಬಹುದು.


 • 8. ಹವ್ಯಾಸಗಳನ್ನು ಮತ್ತೆ ಆರಂಭಿಸಿ

  ನಿಮ್ಮನ್ನು ನೀವೆ ರೀಚಾರ್ಜ್ ಮಾಡಿಕೊಳ್ಳಬೇಕೆಂದರೆ ಅತ್ಯುತ್ತಮ ವಿಧಾನ ನಿಮ್ಮ ಹವ್ಯಾಸಗಳನ್ನು ಮುಂದುವರೆಸಿ. ನೃತ್ಯ, ಸಂಗೀತ, ಕರಕುಶಲ, ಹಾಡುಗಾರಿಕೆ, ತೋಟಗಾರಿಕೆ, ಬರವಣಿಗೆ, ಹೊಲಿಗೆ ಅಥವಾ ಛಾಯಾಗ್ರಹಣ ಇಂಥಾ ಯಾವುದೇ ಹವ್ಯಾಸಗಳಿದ್ದರೂ ಅದನ್ನು ಮತ್ತೆ ಆರಂಭಿಸಿ. ಇದು ನಿಮ್ಮಲ್ಲಿರುವ ಸೃಜನಶೀಲತೆಯನ್ನು ಹೊರತೆಗೆಯುತ್ತದೆ ಹಾಗೂ ಸದಾ ಕ್ರಿಯಾತ್ಮಕವಾಗಿರಲು ಪ್ರೇರಣೆ ನೀಡುತ್ತದೆ.


 • ನೆನಪಿಡಿ

  * ನೀವು ನಿಮ್ಮ ಸಮಯವನ್ನು ಕಳೆಯುತ್ತಿದ್ದೀರಿ ಎಂದಾದರೆ ನಿಮ್ಮ ಕುಟುಂಬ ಅಥವಾ ಮಕ್ಕಳನ್ನು ನಿರ್ಲಕ್ಷಿಸುವುದಲ್ಲ.

  * ಕುಟುಂಬದ ಎಲ್ಲರ ಸಹಮತದಲ್ಲಿ ನಿಮ್ಮ ಸಮಯ ಕಳೆಯುವುದು ಉತ್ತಮ.

  * ಗುಣಮಟ್ಟದ ನಿಮ್ಮ ಸಮಯವನ್ನು ಕಳೆಯುವುದರಿಂದ ಮಾನಸಿಕವಾಗಿ ಸಂತೋಷ, ನೆಮ್ಮದಿ ಸಿಗುತ್ತದೆ ಹಾಗೂ ದೈಹಿಕ ಕೆಲಸಗಳ ಮೂಲಕ ಫಿಟ್ ಆಗಿಯೂ ಇರಬಹುದು.

  * ನಿಮ್ಮ ಸಮಯದಿಂದ ನಿಮಗೇ ಗೊತ್ತಿಲ್ಲದಂತೆ ನಿಮ್ಮಲ್ಲಿ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ.

  * ಇಂದಿನ ನಿಮ್ಮ ಅನುತ್ಪಾದಕ ಸಮಯ ನಾಳಿನ ನಿಮ್ಮ ಮಾಸಿಕ ಹಾಗೂ ದೈಹಿಕ ಕಾಯಿಲೆಗಳಿಗೆ ದಾರಿಯಾಗಬಹುದು ಎಚ್ಚರ.
ಪ್ರೀತಿಯ ಅಮ್ಮಂದಿರೇ ನೀವು ನಿತ್ಯ ನಿಮಗಾಗಿ ಎಷ್ಟು ಸಮಯ ಮೀಸಲಿಡುತ್ತೀರಾ?, ಆ ಸಮಯದಲ್ಲಿ ನಿಮ್ಮಿಷ್ಟದ ಏನನ್ನು ಮಾಡುತ್ತೀರಾ ಎಂದು ಕೇಳಿದರೇ ಬಹುತೇಕ ಮಹಿಳೆಯರ ಉತ್ತರ ನಾವು ಆ ಬಗ್ಗೆ ಚಿಂತೆಯನ್ನೇ ಮಾಡಿಲ್ಲ ಅಥವಾ ನಮಗಾಗಿ ಸಮಯವೇ ಇಲ್ಲ ಎಂಬುದಾಗಿರುತ್ತದೆ.

ಹೌದು, ಇದು ಕೇವಲ ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಮಾತ್ರವಲ್ಲ, ಮನೆಯಲ್ಲೇ ಇರುವ ಗೃಹಿಣಿಯರ ಪಾಡೂ ಇದೇ ಆಗಿದೆ. ತಮಗಾಗಿ ದಿನದ ಅರ್ಧ ಗಂಟೆಯನ್ನೂ ಅನುಭವಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಮಹಿಳೆಯರಿದ್ದಾರೆ. ಇನ್ನು ಚಿಕ್ಕ ಮಕ್ಕಳು ಅಥವಾ ತುಂಬು ಕುಟುಂಬವಾಗಿದ್ದರೆ ಮುಗಿದೇ ಹೋಯಿತು, ಈ ಬಗ್ಗೆ ಆಕೆ ಚಿಂತಿಸುವಂತೆಯೂ ಇಲ್ಲ.

ಬೆಳಗಿನಿಂದ ರಾತ್ರಿ ಮಲಗುವವರೆಗೆ ದಿನ ಎಂದಿನಂತೆ ದಿನ ಕಳದೇ ಹೋಗಿರುತ್ತದೆ. ಹಾಗೆ ನೋಡಿದರೆ ತಮಗಾಗಿಯೂ ಸಮಯ ಮೀಸಲಿಟ್ಟಿಲ್ಲ, ವಿಶೇಷವಾದ ಏನನ್ನೂ ಮಾಡಿರುವುದಿಲ್ಲ ಎಂಬುದು ಎಲ್ಲ ಮಹಿಳೆಯರ ನೋವಿನ ವಿಷಯವಾಗಿರುತ್ತೆ.

 
ಹೆಲ್ತ್