ಹೌದು, ಟಿಕ್ಟಾಕ್ ಆಪ್ ಬಳಕೆದಾರರಲ್ಲಿ ಶಾರ್ಟ್ ವಿಡಿಯೊ ಕ್ರಿಯೆಟ್ ಮಾಡಲು ಪ್ರೇರೆಪಿಸುವಂತಿದ್ದು, ಈಗಾಗಲೇ ಅನೇಕರು ಟಿಕ್ಟಾಕ್ ಮೂಲಕವೇ ಜನಪ್ರಿಯರಾಗಿದ್ದಾರೆ. ಬಹುತೇಕರು ಟಿಕ್ಟಾಕ್ ಆಪ್ನಲ್ಲಿಯೇ ವಿಡಿಯೊ ಮೇಕಿಂಗ್ ಮಾಡಿ ಅಪ್ಲೋಡ್ ಮಾಡುತ್ತಾರೆ. ಆದರೆ ಇನ್ನು ಕೆಲವರು ವಿಡಿಯೊಗಳನ್ನು ಕ್ರಿಯೆಟ್ ಮಾಡಿ ನಂತರ ವಿಡಿಯೊ ಎಡಿಟಿಂಗ್ ಆಪ್ಸ್ಗಳಲ್ಲಿ ಎಡಿಟ್ ಮಾಡಿ ಅಪ್ಲೋಡ್ ಮಾಡುತ್ತಾರೆ. ಟಿಕ್ಟಾಕ್ ಮಾಡುವವರು ವಿಡಿಯೊ ಎಡಿಟ್ ಆಪ್ಸ್ಗಳನ್ನು ಬಳಕೆಮಾಡಬಹುದು. ಹೀಗಾಗಿ ಇಂದಿನ ಈ ಲೇಖನದಲ್ಲಿ ಟಿಕ್ಟಾಕ್ ವಿಡಿಯೊ ಎಡಿಟ್ ಮಾಡಲು ಕೆಲವು ಬೆಸ್ಟ್ ವಿಡಿಯೊ ಎಡಿಟ್ ಆಪ್ಸ್ಗಳ ಬಗ್ಗೆ ತಿಳಿಸಲಾಗಿದೆ. ಮುಂದೆ ಓದಿರಿ.
ಇನ್ಶಾಟ್ ಆಪ್ ಜನಪ್ರಿಯತೆ ಪಡೆದ ವಿಡಿಯೊ ಅಪ್ಲಿಕೇಶನ್ ಆಗಿದ್ದು, ಹಲವು ಆಯ್ಕೆಗಳ ಸಿಗಲಿವೆ. ಈ ಆಪ್ನಲ್ಲಿ ಅಗತ್ಯ ಬೇಸಿಕ್ ಎಡಿಟಿಂಗ್ ಆಯ್ಕೆಗಳೊಂದಿಗೆ ವಿಡಿಯೊ ವೇಗದ ಏರಿಳಿತ ಮಾಡುವ ಆಯ್ಕೆ, ಮ್ಯೂಸಿಕ್ ಸೇರಿಸುವ ಆಯ್ಕೆ ನೀಡಲಾಗಿದೆ. ಹಾಗೆಯೇ ಸಾಫ್ಟ್ ಟ್ಯೂನ್, ಕಲರ್ ಫೀಲ್ಟರ್ ಆಯ್ಕೆ, ವಿಡಿಯೊ ಟ್ರಿಮ್, ಸ್ಟಿಕ್ಕರ್ಸ್, ಕ್ರೇಜಿ ಮೀರರ್, ಸೇರಿದಂತೆ ಟೆಕ್ಟ್ಸ್ ಸೇರಿಸಬಹುದಾಗಿದೆ.
ಈ ಟಿಂಬ್ರ ವಿಡಿಯೊ ಎಡಿಟಿಂಗ್ ಆಪ್ ಸಹ ಹಲವು ಅಗತ್ಯ ಸೌಲಬ್ಯಗಳನ್ನು ಒಳಗೊಂಡಿದ್ದು, ವಿಡಿಯೊ ಮರ್ಜ್, ಕಟ್, ಕನವರ್ಟ್, ಸ್ಪ್ಲಿಟ್, ವಿಡಿಯೊ ಸ್ಪೀಡ್, ರಿವರ್ಸ್ ಆಯ್ಕೆಗಳು ಇವೆ. ಜೊತೆಗೆ ಬೇಸಿಕ್ ಎಡಿಟಿಂಗ್ ಆಯ್ಕೆಗಳಿದ್ದು, ವಿಡಿಯೊಗೆ ಮ್ಯೂಸಿಕ್ ಸೇರಿಸುವ ಆಯ್ಕೆ ನೀಡಲಾಗಿದೆ. ಹಾಗೆಯೇ ಕಲರ್ ಫೀಲ್ಟರ್ ಆಯ್ಕೆ, ವಿಡಿಯೊ ಟ್ರಿಮ್, ಸ್ಟಿಕ್ಕರ್ಸ್, ಜಿಐಎಫ್, ಸೇರಿದಂತೆ ಟೆಕ್ಟ್ಸ್ ಸೌಲಭ್ಯ ಇದೆ.
ಟಿಕ್ಟಾಕ್ ವಿಡಿಯೊ ಎಡಿಟ್ಗೆ ಫ್ಯೂನಿಮೇಟ್ ಕೂಲ್ ಆಪ್ ಎಂದೆನ್ನಬಹುದಾಗಿದೆ. ಈ ಆಪ್ನಲ್ಲಿ ಸಾಕಷ್ಟು ಎಫೆಕ್ಟ್ ಮತ್ತು ಮ್ಯೂಸಿಕ್ ಲಭ್ಯವಾಗಲಿವೆ. ಇವುಗಳೊಂದಿಗೆ ಆಕರ್ಷಕ ಸ್ಟಿಕರ್ಸ್ಗಳಿವೆ. ಉಳಿದಂತೆ ಬೇಸಿಕ್ ಎಡಿಟಿಂಗ್ ಆಯ್ಕೆಗಳಿದ್ದು, ಕಲರ್ ಫೀಲ್ಟರ್ ಆಯ್ಕೆ, ವಿಡಿಯೊ ಟ್ರಿಮ್, ಜಿಐಎಫ್, ಹಲವು ಎಫೆಕ್ಟ್ಗಳ ಕಲೆಕ್ಷನ್ಗಳಿವೆ.
ವಿಜ್ಮೇಟೊ ವಿಡಿಯೊ ಆಪ್ ಸಹ ಉತ್ತಮವಾಗಿದ್ದು, ವಿಡಿಯೊಗಳನ್ನು ಟ್ರಿಮ್ ಕಟ್ ಮಾಡುವುದರ ಜೊತೆಗೆ ಇನ್ನೊಂದು ವಿಡಿಯೊ ಸೇರಿಸಬಹುದಾದ ಆಯ್ಕೆ ಇದೆ. ವಿಡಿಯೊ ಸೇರಿಸಿದಮೇಲೆ ಮತ್ತೆ ಎಡಿಟ್ ಮಾಡಬಹುದಾಗಿದೆ. ಹಾಗೆಯೇ ಫಿಲ್ಟರ್, ಸ್ಲೈಡ್ಶೋ, ಸೌಂಡ್, ವಿಡಿಯೊ ಸ್ಪೀಡ್ ಸೇರಿದಂತೆ ಅಗತ್ಯ ಇರುವ ಬೇಸಿಕ್ ಸೌಲಭ್ಯಗಳು ಲಭ್ಯ ಇವೆ.
ಶಾರ್ಟ್ ವಿಡಿಯೊ ಅಪ್ಲಿಕೇಶನ್ 'ಟಿಕ್ಟಾಕ್' ಸದ್ಯ ಬಳಕೆದಾರರಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟುಹಾಕಿದ್ದು, ಅನೇಕರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಟಿಕ್ಟಾಕೇ ವೇದಿಕೆಯಾಗಿದೆ. ಈ ಆಪ್ನಲ್ಲಿ ವಿಡಿಯೊ ಮಾಡುವವರ ಸಂಖ್ಯೆಯ ಜೊತೆಗೆ ಟಿಕ್ಟಾಕ್ ವಿಡಿಯೊ ವೀಕ್ಷಿಸುವ ಬಳಕೆದಾರರ ಸಂಖ್ಯೆಯು ಅಧಿಕವಾಗಿದೆ. ಆದರೆ ಟಿಕ್ಟಾಕ್ ಕ್ರಮೇಣ ಬಳಕೆದಾರರಲ್ಲಿ ವಿಡಿಯೊ ಮೇಕಿಂಗ್ ಆಸಕ್ತಿ ಮೂಡಿಸುವುದಂತು ಸುಳ್ಳಲ್ಲ ಎನ್ನಬಹುದಾಗಿದೆ.