ಹೌದು ಟಿಕ್ಟಾಕ್ ಮೂಲಕವೂ ಇ-ಕಾಮರ್ಸ್ ಗೆ ಎಂಟ್ರಿ ನೀಡುವುದಕ್ಕೆ ಅವಕಾಶ ಕಲ್ಪಿಸುವ ಪ್ರಯತ್ನ ಈಗಾಗ್ಲೆ ಸಾಗ್ತಾ ಇದೆ. ಟಿಕ್ಟಾಕ್ ನಲ್ಲಿ ಇ-ಕಾಮರ್ಸ್ ನ ಕೆಲ ಕಿರು ವಿಡಿಯೋಗಳನ್ಮ ಬಿಡಲಾಗ್ತಿದ್ದು ಈ ವಿಡಿಯೋಗಳಲ್ಲಿರೋ ಲಿಂಕ್ ಅನ್ನ ಬಳಸಿ ನೇರವಾಗಿ ಇ-ಕಾಮರ್ಸ್ ಮಾಡಬಹುದಾಗಿದೆ. ಸಧ್ಯ ಇಂತಹದ್ದೇ ವಿಡಿಯೋದ ಲಿಂಕ್ ಬಳಸಿ ಫ್ಯಾಭಿಯನ್ ಬರ್ನ್ ಎಂಬಾತ ಇ-ಕಾಮರ್ಸ್ ಮಾಡಬಹುದು ಅನ್ನೊದನ್ನ ತೋರಿಸಿ ಕೊಟ್ಟಿದ್ದಾನೆ.
ಈ ಮೂಲಕ ಟಿಕ್ಟಾಕ್ ಆಪ್ಲೀಕೇಶನ್ ಶೀಘ್ರದಲ್ಲೇ ಇ-ಕಾಮರ್ಸ್ ಕ್ಷೇತ್ರಕ್ಕೂ ಲಗ್ಗೆ ಇಡಲಿದೆ ಅನ್ನೊ ಸೂಚನೆ ಸಿಕ್ಕಿದೆ. ಈಗಾಗ್ಲೆ ಟಿಕ್ಟಾಕ್ ನಲ್ಲಿ ಕೆಲ ಉತ್ಪನ್ನಗಳಿಗೆ ಸಂಬಂಧಿಸಿದ ಕಿರು ವಿಡಿಯೋಗಳನ್ನ ಹರಿ ಬಿಡಲಾಗಿದ್ದು ಇದರ ಮೂಲಕ ಗ್ರಾಹಕರನ್ನ ಆಕರ್ಷಿಸುವ ಕೆಲಸ ಮಾಡಲಾಗ್ತಿದೆ. ಅಷ್ಟೇ ಅಲ್ಲ ಹೊಸ ಹೊಸ ಬಗೆಯ ಪೋಸ್ಟ್ಗಳ ಮೂಲಕ ಇ-ಕಾಮರ್ಸ್ ಸೈಟ್ಗಳಿಗೆ ಸಂಬಂಧಿಸಿದ ಲಿಂಕ್ಗಳನ್ನ ಸೇರಿಸಲು ಅವಕಾಶ ಮಾಡಿಕೊಡಲಾಗಿದೆ.
ಸೋಶಿಯಲ್ ಆಪ್ಲೀಕೇಶನ್ ಗಳ ಮೂಲಕ ಇ- ಕಾಮರ್ಸ್ ಮಾಡೋ ವಿಚಾರ ಹೊಸದೇನೂ ಅಲ್ಲ ಈಗಾಗ್ಲೆ ಇನ್ಸ್ಟಾಗ್ರಾಮ್ ನಲ್ಲಿ ಈ ಸೇವೆ ಸಿಗ್ತಾ ಇದೆ. ಆದ್ರೆ ಇದೀಗ ಟಿಕ್ ಟಾಕ್ ಕೂಡ ಇದೇ ಪ್ರಯತ್ನ ಮಾಡಿದ್ರೆ ಮುಂದಿನ ದಿನಗಳಲ್ಲಿ ಟಿಕ್ಟಾಕ್ ಹಾಗೂ ಇನ್ಸ್ಟಾಗ್ರಾಮ್ ನಡುವೆ ಪೈಪೋಟಿ ತಪ್ಪಿದ್ದಲ್ಲ. ಹಾಗೇ ನೋಡಿದ್ರೆ ಟಿಕ್ಟಾಕ್ ಬಂದ ಮೇಲೆ ಫೇಸ್ಬುಕ್ಗಿಂತ ಹೆಚ್ಚಿನ ಜನರ ಒಲವು ಟಿಕ್ಟಾಕ್ ಕಡೆ ವಾಲುತ್ತಿದೆ. ಇನ್ನು ಟಿಕ್ಟಾಕ್ ಚೀನಾದ ಆಪ್ಲೀಕೇಶನ್ ಪ್ರಪಂಚದಾದ್ಯಂತ ವೇಗವಾಗಿ ಬೆಳೆಯುತ್ತಿರೋದು ಅಘಾತಕಾರಿಯಾಗಿದೆ ಅನ್ನೋ ಆರೊಪವನ್ನ ಪೇಸ್ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಮಾಡಿದ್ರು.
ಆದ್ರೆ ಇದನ್ನ ಟಿಕ್ಟಾಕ್ ಅಲ್ಲಗೆಳೆದಿತ್ತು ಅಲ್ಲದೆ ಯುಎಸ್ನಲ್ಲೂ ತನ್ನ ಪ್ರಸಿದ್ದಿಯನ್ನ ವಿಸ್ತಾರ ಮಾಡಿಕೊಂಡಿದ್ದು ಸುಳ್ಳಲ್ಲ. ಇನ್ನು ಇನ್ಸ್ಟಾ ಗ್ರಾಮ್ ಸಹ ಈಗಾಗ್ಲೆ ಟಿಕ್ಟಾಕ್ ನಂತೆ ತನ್ನ ಬಳಕೆದಾರರಿಗೆ ಹದಿನೈದು ಸೆಕೆಂಡ್ಗಳ ಮ್ಯೂಸಿಕ್ ಶೇರ್ ಮಾಡುವ ಅವಕಾಶವನ್ನ ನೀಡಿದೆ. ಈ ಮೂಲಕ ತನ್ನ ಬಳಕೆದಾರರಿಗೆ ಸೃಜನಶೀಲತೆಯ ಹಾಗೂ ಅವರ ಭಾವನೆಗಳನ್ನ ಹಂಚಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದೇವೆ. ಅವರ ಸಂತೋಷಯುತವಾದ ಘಳಿಗೆಗೆಳನ್ನ ಕಳೆಯಲು ನಾವು ಕೂಡ ಗುಣವರ್ಧಿತ ಸೇವೆ ನೀಡುವತ್ತ ಗುರಿ ಕೇಂಧ್ರಿಕರಿಸಿದ್ದೇವೆ ಅನ್ನೊ ಮಾತನ್ನ ಹೇಳಿಕೊಂಡಿತ್ತು.
ಸದ್ಯ ಟಿಕ್ ಟಾಕ್ ದಿನದಿಂದ ದಿನಕ್ಕೆ ತನ್ನ ಪ್ರಸಿದ್ದಿಯನ್ನ ಹೆಚ್ಚಿಸಿಕೊಳ್ಳುತ್ತಲೇ ಇದೆ. ಇದೇ ಪ್ರಸಿದ್ದಿಯನ್ನ ಬಳಸಿಕೊಂಡು ಇ-ಕಾಮರ್ಸ್ ಲೋಕಕ್ಕೆ ಕಾಲಿಟ್ಟರೆ ಖಂಡಿತ ಇನ್ನುಳಿದ ಇ-ಕಾಮರ್ಸ ಆಪಗಳ ನಡುವೆ ಸ್ಫರ್ಧೆ ತಪ್ಪಿದಲ್ಲ. ಟಿಕ್ಟಾಕ್ ಆಪ್ಲೀಕೇಶನ್ ಜಗತ್ತಿನ ಎಲ್ಲೆಡೆ ಗೂಗಲ್ ಪ್ಲೇ ಸ್ಟೋರ್ನಲ್ಲಿ ೧.೫ ಬಿಲಿಯನ್ ಡೌನ್ಲೋಡ್ ಆಗಿದೆ. ಭಾರತ ದೇಶವೊಂದಲರಲ್ಲೇ ೬೬.೮ ಮಿಲಿಯನ್ ಮಂದಿ ಟಿಕ್ಟಾಕ್ ಆಪ್ ಅನ್ನ ಬಳಸುತ್ತಿದ್ದಾರೆ.
ಇತ್ತಿಚೀನ ದಿನಗಳಲ್ಲಿ ಜಗತ್ತಿನ ಎಲ್ಲೆಡೆ ಜನಪ್ರಿಯತೆಯನ್ನ ಪಡೆದುಕೊಂಡಿರುವ ಸಾಮಾಜಿಕ ಜಾಲತಾಣ ಅಂದ್ರೆ ಅದು ಟಿಕಾಟಾಕ್ ಆಪ್. ವಿಶ್ವದ ಎಲ್ಲಾ ಕಡೆ ಪ್ರಸಿದ್ದಿ ಪಡೆದಿರೋ ಟಿಕ್ ಟಾಕ್ ಇನ್ನು ಮುಂದಿನ ದಿನಗಳಲ್ಲಿ ಆನ್ಲೈನ್ ಶಾಪಿಂಗ್ಗೆ ಅವಕಾಶ ಮಾಡಿಕೊಡೋ ಸಾಧ್ಯತೆ ಕಂಡು ಬರುತ್ತಿದೆ. ಟಿಕ್ಟಾಕ್ ಆಪ್ನಲ್ಲಿ ಮ್ಯೂಸಿಕ್ ಪೋಸ್ಟ್ಗಳ ನಡುವೆ ಕೆಲ ಇ-ಕಾಮರ್ಸ್ ಸಂಬಂಧಿಸಿದ ಲಿಂಕ್ಗಳು ಟಿಕ್ಟಾಕ್ ಇ-ಕಾಮರ್ಸ್ ಲೋಕಕ್ಕೆ ಹೆಜ್ಜೆ ಇಡುತ್ತಿರುವುದಕ್ಕೆ ಪುಷ್ಠಿ ನೀಡುವಂತಾಗಿದೆ.