ಹೌದು, ವಿವೋ ಯು 20 ಫೋನ್ ಇದೇ ನವೆಂಬರ್ 22ಕ್ಕೆ ಅಮೆಜಾನ್ನಲ್ಲಿ ಲಾಂಚ್ ಆಗಲಿದೆ. ಈ ಕುರಿತು ಟೀಸರ್ ಲೀಕ್ ಆಗಿದೆ. ಈ 'ವಿವೊ ಯು20' ಫೋನ್ ವೈಶಿಷ್ಟ್ಯತೆಯೇನು ಅನ್ನೊದು ಇದೀಗ ಲೀಕ್ ಆಗಿದೆ. ಈ ಟೀಸರ್ನ ಇಮೇಜ್ಗಳೇ ಹೇಳುವಂತೆ ವಿವೊ ಯು20 ಯಲ್ಲಿ ಕ್ಯಾಮೆರಾ ಹಾಗೂ ಬ್ಯಾಟರಿ ಸಾಮರ್ಥ್ಯ ,ಹಾಗೂ ಪ್ರೋಸೆಸರ್ ಪೀಚರ್ ಗಳೇ ಹೈಲೆಟ್ ಆಗಲಿವೆ. ಲೀಕ್ ಮಾಹಿತಿ ಪ್ರಕಾರ ವಿವೋ ಯು20ಯ ವಿಶೇಷತೆಗಳೇನು ಅನ್ನೊದನ್ನ ನೋಡೋಣ ಬನ್ನಿ.
ವಿವೋ ಯು20 ಸ್ಮಾರ್ಟ್ಫೋನ್ 6.53 ಇಂಚಿನ ಫುಲ್ ಹೆಚ್ಡಿ ಡಿಸ್ ಪ್ಲೇ ಆಗಿದ್ದು, ವಾಟರ್ ಪ್ರೂಪ್ ನಾಚ್ ವ್ಯವಸ್ಥೆಯನ್ನ ಹೊಂದಿರಲಿದೆ ಎಂದು ಊಹಿಸಲಾಗಿದೆ. ಹಾಗೆಯೇ 1080x2340 ಪಿಕ್ಸಲ್ ರೆಸಲ್ಯೂಶನ್ ಒಳಗೊಂಡಿರಲಿದೆ. ಫೇಸ್ ಅನ್ಲಾಕ್ ಫೀಚರ್ ಇರುವ ಲಕ್ಷಣಗಳಿವೆ.
ಲೀಕ್ ಮಾಹಿತಿ ಪ್ರಕಾರ ವಿವೊ ಯು20 ಫೋನ್ ಕ್ವಾಲಮ್ ಸ್ನ್ಯಾಪ್ ಡ್ರಾಗನ್ 675E ಆಗಿದ್ದು 6GB RAM ಸಾಮರ್ಥ್ಯ ಹೊಂದಿರಲಿದೆ ಎನ್ನಲಾಗಿದೆ. ಆಂಡ್ರಾಯ್ಡ್ 9 ಓಎಸ್ ಇರಲಿದೆ. ಹಾಗೆಯೇ 6GB RAM ಮತ್ತು 64GB ಸ್ಟೋರೇಜ್ ವೇರಿಯಂಟ್ ಆಯ್ಕೆ ಇರಲಿದೆ ಎನ್ನಲಾಗಿದೆ.
ವಿವೋ ಸ್ಮಾರ್ಟ್ ಪೋನ್ ವಿಶೇಷತೆಯೆ ಕ್ಯಾಮೆರಾ ಫೀಚರ್ ಅಂತಾ ಹೇಳಬಹುದು. ವಿವೋ ಯು ೨೦ಯಲ್ಲಿ ಹಿಂಬಾಗದಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಇರಲಿದೆ,ಇದರಲ್ಲಿ ಮೊದಲನೇ ಕ್ಯಾಮೆರಾ 16 ಮೆಗಾ ಪಿಕ್ಸೆಲ್ ಇರಲಿದ್ದು, ಎರಡನೇ ಕ್ಯಾಮೆರಾ 8ಮೆಗಾ ಪಿಕ್ಸೆಲ್ ಹಾಗೂ ಮೂರನೇ ಕ್ಯಾಮೆರಾ 5ಮೆಗಾ ಪಿಕ್ಸೆಲ್ ಇರಲಿದೆ. ಇನ್ನು 13 ಎಂಪಿ ಫ್ರಂಟ್ ಕ್ಯಾಮೆರಾ ಇರಲಿದೆ.
ವಿವೊ ಯು20 ಪೋನ್ 5000MAH ಬ್ಯಾಟರಿ ಸಾಮರ್ಥ್ಯ ಇರಲಿದ್ದು 18W ಬೆಂಬಲದೊಂದಿಗೆ ಫಾಸ್ಟ್ ಚಾರ್ಜಿಂಗ್ ಆಗಲಿದೆ. ಅಲ್ಲದೆ ಸ್ಟ್ಯಾಂಡ್ ಬೈನಲ್ಲಿ 279 ಗಂಟೆಗಳು,ಇನ್ ಸ್ಟಾಗ್ರಾಮ್ ಬಳಕೆಯಲ್ಲಿ 21 ಗಂಟೆಗಳು, ಫೇಸ್ ಬುಕ್ ಬಳಕೆಯಲ್ಲೂ 17 ಗಂಟೆಗಳು ಮತ್ತು ಯುಟ್ಯೂಬ್ ಬಳಕೆಯಲ್ಲೀ 11ಗಂಟೆಗಳ ವರೆಗೆ ಬಳಸಬಹುದಾದ ಬ್ಯಾಟರಿ ಸಾಮರ್ಥ್ಯವಿರಲಿದೆ.
ಇತ್ತೀಚಿಗೆ ಮಾರುಕಟ್ಟೆಗೆ ಹಲವು ಬಗೆಯ ಸ್ಮಾರ್ಟ್ಫೋನ್ಗಳು ಬಿಡುಗಡೆಯಾಗುತ್ತಲೇ ಇವೆ. ಅವುಗಳ ಪೈಕಿ ವಿವೋ ಸಹ ಹಲವು ಸ್ಮಾರ್ಟ್ಫೋನ್ಗಳನ್ನು ಲಾಂಚ್ ಮಾಡಿದೆ. ಅದೇ ರೀತಿ ವಿವೋ ಇದೀಗ ಮತ್ತೊಂದು ಹೊಸ ಸ್ಮಾರ್ಟ್ಫೋನ್ ಬಿಡುಗಡೆ ಮಾಡಲು ಸಕಲ ತಯಾರಿ ಮಾಡಿಕೊಳ್ಳುತ್ತಿದೆ. 'ವಿವೋ ಯು20' ಹೆಸರಿನ ಸ್ಮಾರ್ಟ್ಫೋನ್ ಅನ್ನು ಕಂಪನಿಯು ಬಿಡುಗಡೆ ಮಾಡಲು ಈಗ ಸಜ್ಜಾಗಿದೆ.