Back
Home » ಇತ್ತೀಚಿನ
ಸಿಸ್ಕಾದಿಂದ ಹೊಸ ಪವರ್‌ಬ್ಯಾಂಕ್ ಬಿಡುಗಡೆ!..ಬೆಲೆ 1,599 ರೂ.!
Gizbot | 20th Nov, 2019 12:31 PM
 • ಸಿಸ್ಕಾ ಕಂಪನಿ

  ಸಿಸ್ಕಾ ಕಂಪನಿಯು ಈಗ ಭಾರತದಲ್ಲಿ ಹೊಸದಾಗಿ P1017B Power Gain 100 ಪವರ್ ಬ್ಯಾಂಕ್ ಅನ್ನು ಪರಿಚಯಿಸಿದೆ. ಈ ಪವರ್‌ ಬ್ಯಾಂಕ್‌ 10,000mAh ಸಾಮರ್ಥ್ಯ ಪಡೆದಿದೆ. ಈಗಾಗಲೇ ವೈರ್‌ಲೆಸ್ ಸ್ಪೀಕರ್‌ಗಳು, ವೈರ್‌ಲೆಸ್ ಹೆಡ್‌ಸೆಟ್‌ಗಳು, ಬ್ಲೂಟೂತ್ ಇಯರ್ ಫೋನ್‌ಗಳು, ಕಾರ್ ಚಾರ್ಜರ್ ಗಳನ್ನು ಮಾರುಕಟ್ಟೆಯಲ್ಲಿ ಬಿಟ್ಟು ಜನಪ್ರಿಯತೆ ಪಡೆದಿದೆ. ಕಂಪನಿಯ ಪ್ರಕಾರ ಈ ಹೊಸ ಪವರ್ ಬ್ಯಾಂಕ್ 5X ನಷ್ಟು ವೇಗವಾಗಿ ಚಾರ್ಜಿಂಗ್ ನೀಡುತ್ತದೆ.


 • ಪವರ್‌ ಬ್ಯಾಂಕ್‌

  ಕಂಪನಿಯ ಹೊಸ ಪವರ್‌ ಬ್ಯಾಂಕ್‌ ಅನ್ನು ಪಾಲಿಮರ್ ಸೇಲ್‌ನಿಂದ ತಯಾರಿಸಲಾಗಿದ್ದು, ಡಿಸ್ಚಾರ್ಜ್ ಮತ್ತು ಓವರ್‌ಚಾರ್ಜ್ ನಿಂದ ರಕ್ಷಣೆ ನೀಡಲಿದೆ. 10,000mAh ಸಾಮರ್ಥ್ಯ ಈ ಪವರ್‌ ಬ್ಯಾಂಕ್‌ output ಪೋರ್ಟ್‌ನೊಂದಿಗೆ ಮಾರುಕಟ್ಟೆಗೆ ಬರುತ್ತಿದೆ. ಸಿಸ್ಕಾದ ಹೊಸ ಪವರ್‌ ಬ್ಯಾಂಕ್ ಬಿಳಿ, ಕಪ್ಪು ಮತ್ತು ನೀಲಿ ಸೇರಿದಂತೆ ಅನೇಕ ಬಣ್ಣಗಳಲ್ಲಿ ಲಭ್ಯವಿದೆ. ಇದರ ಬೆಲೆ 1,599 ರೂ.ಆಗಿದ್ದು ದೇಶದ ಎಲ್ಲಾ ಪ್ರಮುಖ ಮಾರಾಟ ಮಳಿಗೆಗಳಲ್ಲಿ ಖರೀದಿಗೆ ಲಭ್ಯವಿದೆ.


 • ಸ್ಮಾರ್ಟ್‌ಪೋನ್‌

  ಈಗಾಗ್ಲೆ ಸ್ಮಾರ್ಟ್‌ಪೋನ್‌ ಪ್ರಿಯರು ಹೆಚ್ಚಾದಂತೆ ಪವರ್‌ ಬ್ಯಾಂಕ್‌ ಮಾರುಕಟ್ಟೆ ಕೂಡ ವಿಸ್ತಾರವಾಗುತ್ತಿದೆ. ಪೋನ್‌ಗಳ ಬ್ಯಾಟರಿ ದಾಹವನ್ನ ನೀಗಿಸೋಕೆ ಅಂತಾನೆ ಹೊಸ ಹೊಸ ಬಗೆಯ ಪವರ್‌ ಬ್ಯಾಂಕ್‌ಗಳು ಮಾರುಕಟ್ಟೆಗ ಬರುತ್ತಿವೆ. ಒಂದೇ ಬಾರಿಗೆ ಎರಡು-ಮೂರು ಮೊಬೈಲ್‌ಗಳನ್ನ ಚಾರ್ಜಿಂಗ್ ಮಾಡಬಹುದಾದ ಪವರ್‌ ಬ್ಯಾಂಕ್‌ಗಳು ಮಾರುಕಟ್ಟೆಗ ಬಂದಿವೆ. ಸಧ್ಯ ರಿಸರ್ಚ್ ಅಂಡ್ ಮಾರ್ಕೆಟ್ಸ್‌ನ ವರದಿಯ ಪ್ರಕಾರ, ಜಾಗತಿಕ ಪವರ್‌ ಬ್ಯಾಂಕ್ ಮಾರುಕಟ್ಟೆ ಮೌಲ್ಯವು 2024 ರ ವೇಳೆಗೆ 29.5 ಬಿಲಿಯನ್ ಡಾಲರ್‌ಗಳನ್ನು ಮುಟ್ಟಲಿದೆ ಎಂದು ಅಂದಾಜಿಸಲಾಗಿದೆ.


 • ಜ್ಯೋತ್ಸ್ನಾ ಉತ್ತಮ್‌ ಚಂದಾನಿ

  ಪವರ್ ಬ್ಯಾಂಕುಗಳು ಗ್ರಾಹಕರಿಗೆ ಅತ್ಯಗತ್ಯ ಮೊಬೈಲ್ ಪರಿಕರಗಳಾಗಿ ಮಾರ್ಪಟ್ಟಿರುವುದರಿಂದ, ಸಿಸ್ಕಾ ಪಿ 1017 ಬಿ ಪವರ್ ಗೇನ್ 100 ಪವರ್ ಬ್ಯಾಂಕ್ ಅನ್ನು ತಯಾರಿಸಲಾಗುತ್ತದೆ, ಇದು ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುತ್ತದೆ. "ಅಂತಾ ಸಿಸ್ಕಾ ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕ ಜ್ಯೋತ್ಸ್ನಾ ಉತ್ತಮ್‌ ಚಂದಾನಿ ಹೇಳಿದ್ದಾರೆ.
ಸ್ಮಾರ್ಟ್ ಪೋನ್‌ ಜಗತ್ತಿನಲ್ಲಿ ದಿನೇ ದಿನೇ ಹೊಸ ಹೊಸ ಪೋನ್‌ಗಳು ಮಾರುಕಟ್ಟೆಗೆ ಲಗ್ಗೆ ಹಾಕೋದ್ರಲ್ಲಿ ಕಡಿಮೆಯೇನು ಇಲ್ಲ. ಆದ್ರೆ ಮೊಬೈಲ್ ಬಳಕೆದಾರರಿಗೆ ಪೋನ್‌ ಎಷ್ಟು ಮುಖ್ಯವೋ ಪವರ್‌ ಬ್ಯಾಂಕ್‌ ಬಳಕೆ ಕೂಡ ಅಷ್ಟೇ ಪ್ರಾಮುಖ್ಯತೆಯನ್ನ ಪಡೆದುಕೊಳ್ತಿದೆ. ಅದ್ರಲ್ಲೂ ಸ್ಮಾರ್ಟ್ ಪೋನ್‌ ಪ್ರಿಯರು ದಿನವಿಡೀ ಪೋನ್‌ ಬಳಕೆಯಲ್ಲಿಯೇ ಕಾಲಕಳೆಯೋದ್ರಿಂದ ಪೋನ್‌ ಬ್ಯಾಟರಿಗೆ ಪವರ್‌ ಸಾಮರ್ಥ್ಯ ನೀಡಬೇಕಾಗುತ್ತೆ. ಸದ್ಯ ಸಿಸ್ಕಾ ಕಂಪೆನಿ ಕೂಡ ತನ್ನ ಹೊಸ ಪವರ್‌ ಬ್ಯಾಂಕ್‌ ಅನ್ನು ಪರಿಚಯಿಸಿದೆ.

 
ಹೆಲ್ತ್