Back
Home » ಇತ್ತೀಚಿನ
ಅಗ್ಗದ ಬೆಲೆಯ 'Nokia 2.2' ಸ್ಮಾರ್ಟ್‌ಫೋನ್ ಈಗ ಇನ್ನಷ್ಟು ಅಗ್ಗ!
Gizbot | 21st Nov, 2019 04:00 PM
 • ನೋಕಿಯಾ

  ಹೌದು, ನೋಕಿಯಾ ಕಂಪನಿಯ ತನ್ನ 'ನೋಕಿಯಾ 2.2' ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಇಳಿಕೆ ಮಾಡಿದ್ದು, ಇದೀಗ ಕೇವಲ 5,999ರೂ.ಗಳಿಗೆ ಸಿಗಲಿದೆ. ಮಾರುಕಟ್ಟೆಗೆ 7,699ರೂ.ಗಳ ಪ್ರೈಸ್‌ ಟ್ಯಾಗ್‌ ಲಾಂಚ್ ಆಗಿದ್ದ ಈ ಫೋನ್ ಎರಡು ವೇರಿಯಂಟ್ ಮಾದರಿಗಳ ಆಯ್ಕೆಯನ್ನು ಹೊಂದಿದೆ. ಅತ್ಯುತ್ತಮ ಕ್ಯಾಮೆರಾ ಮತ್ತು ಸೆಲ್ಫಿ ಕ್ಯಾಮೆರಾ ಆಯ್ಕೆಯೊಂದಿದೆ 3000mAh ಸಾಮರ್ಥ್ಯದ ಬ್ಯಾಟರಿಯನ್ನು ಸಹ ಒಳಗೊಂಡಿದೆ. ಹಾಗಾದರೇ ನೋಕಿಯಾ 2.2 ಸ್ಮಾರ್ಟ್‌ಫೋನ್ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.


 • ಡಿಸ್‌ಪ್ಲೇ ಹೇಗಿದೆ

  ನೋಕಿಯಾ 2.2 ಸ್ಮಾರ್ಟ್‌ಫೋನ್‌ 5.7 ಇಂಚಿನ LCD ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು 720x1520 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಡಿಸ್‌ಪ್ಲೇಯ ಸುತ್ತಲೂ ಬೆಜಲ್‌ ಮತ್ತು ಡಿಸ್‌ಪ್ಲೇಯ ಮೇಲ್ಭಾಗದಲ್ಲಿ ನಾಚ್‌ ರಚನೆಯನ್ನು ನೀಡಲಾಗಿದ್ದು, ಡಿಸ್‌ಪ್ಲೇಯು ವಿಶಾಲವಾಗಿದ್ದು, ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯ ಅನುಪಾತವು 19:9 ರಷ್ಟಾಗಿದೆ.


 • ಪ್ರೊಸೆಸರ್‌ ಶಕ್ತಿ ಹೇಗಿದೆ

  ನೋಕಿಯಾ 2.2 ಸ್ಮಾರ್ಟ್‌ಫೋನ್ 'ಮೀಡಿಯಾ ಟೆಕ್‌ ಹಿಲಿಯೊ A22' ಪ್ರೊಸೆಸರ್ ಅನ್ನು ಒಳಗೊಂಡಿದೆ. ತನ್ನ ವರ್ಗದಲ್ಲಿಯೇ ಇದು ಅತ್ಯುತ್ತಮ ಪ್ರೊಸೆಸರ್‌ ಆಗಿದ್ದು, ಇದರೊಂದಿಗೆ ಆಂಡ್ರಾಯ್ಡ್‌ ಪೈ ಆಧಾರಿತ ಲೈಟರ್‌ ವರ್ಷನ್ 'ಆಂಡ್ರಾಯ್ಡ್‌ ಒನ್' ಓಎಸ್‌' ಬೆಂಬಲ ಪಡೆದಿದೆ. ಮಲ್ಟಿಟಾಸ್ಕ್‌ ಕೆಲಸಗಳನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದೆ.


 • RAM ಮತ್ತು ಮೆಮೊರಿ

  ನೋಕಿಯಾದ ಈ ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್ 2GB RAM ಮತ್ತು 3GB RAM ಸಾಮರ್ಥ್ಯದ ಎರಡು ವೇರಿಯಂಟ್‌ ಮಾದರಿಗಳ ಆಯ್ಕೆಯನ್ನು ಹೊಂದಿದ್ದು, ಅವು ಕ್ರಮವಾಗಿ 16GB ಮತ್ತು 32GB ಆಂತರಿಕ ಸ್ಟೋರೇಜ್‌ ಸ್ಥಳಾವಕಾಶವನ್ನು ಹೊಂದಿವೆ. ತನ್ನ ವರ್ಗದಲ್ಲಿಯೇ ಇದು ಉತ್ತಮ ಮೆಮೊರಿ ಆಯ್ಕೆಯನ್ನು ಒಳಗೊಂಡಿದೆ.


 • ಕ್ಯಾಮೆರಾ ವಿಶೇಷತೆ

  ನೋಕಿಯಾ 2.2 ಸ್ಮಾರ್ಟ್‌ಫೋನ್‌ ಹಿಂಬದಿಯಲ್ಲಿ ರೇರ್ ಪ್ರಾಥಮಿಕ ಕ್ಯಾಮೆರಾವು 13ಎಂಪಿ ಸಾಮರ್ಥ್ಯದಲ್ಲಿದ್ದು, f/2.2 ಅಪರ್ಚರ್‌ ಸಾಮರ್ಥ್ಯವನ್ನು ಪಡೆದಿದೆ. ಸಿಂಗಲ್‌ ಎಲ್‌ಇಡಿ ಫ್ಲ್ಯಾಶ್ ಲೈಟ್‌ ಸಹ ಇದೆ. ಇನ್ನು ಸೆಲ್ಫಿಗಾಗಿ 5ಎಂಪಿ ಕ್ಯಾಮೆರಾವನ್ನು ನೀಡಲಾಗಿದ್ದು, ಫ್ರಂಟ್‌ ಫೇಸಿಂಗ್ ಆಯ್ಕೆಯನ್ನು ಒಳಗೊಂಡಿದೆ.


 • ಬ್ಯಾಟರಿ ಶಕ್ತಿ

  ನೋಕಿಯಾ 2.2 ಎಂಟ್ರಿ ಲೆವಲ್ ಸ್ಮಾರ್ಟ್‌ಫೋನ್‌ 3,000mAh ಸಾಮರ್ಥ್ಯದ ಬ್ಯಾಟರಿ ಬಲವನ್ನು ಹೊಂದಿದ್ದು, ತನ್ನ ವರ್ಗದಲ್ಲಿಯೇ ಇದು ಅತ್ಯುತ್ತಮ ಬ್ಯಾಟರಿ ಆಗಿದೆ. ಇದರೊಂದಿಗೆ 5W ಶಕ್ತಿ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿದ್ದು, ಚಾರ್ಜಿಂಗ್‌ಗೆ ಉತ್ತಮ ಬೆಂಬಲ ನೀಡಲಿದೆ. ಹಾಗೆಯೇ ಮೈಕ್ರೋ USB, ವೈ ಫೈ ಸೌಲಭ್ಯಗಳನ್ನು ಪಡೆದಿದೆ.


 • ಬೆಲೆ ಮತ್ತು ಲಭ್ಯತೆ

  ದೇಶಿಯ ಮಾರುಕಟ್ಟೆಯಲ್ಲಿ ನೋಕಿಯಾ 2.2 ಸ್ಮಾರ್ಟ್‌ಫೋನ್‌ ಎರಡು ವೇರಿಯಂಟ್‌ಗಳಲ್ಲಿ ಲಭ್ಯವಿದೆ. 2GB + 16GB ಆಂತರಿತ ಸಾಮರ್ಥ್ಯದ ವೇರಿಯಂಟ್ ಬೆಲೆಯು 5,999ರೂ.ಗಳು ಆಗಿದೆ. ಮತ್ತು 3GB + 32GB ವೇರಿಯಂಟ್ ಬೆಲೆಯು 6,599ರೂ.ಆಗಿದೆ. ಗ್ರಾಹಕರು ಇ-ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಮತ್ತು ನೋಕಿಯಾದ ಅಧಿಕೃತ ತಾಣದಲ್ಲಿ ಖರೀದಿಸಬಹುದಾಗಿದೆ.
ಜನಪ್ರಿಯ ನೋಕಿಯಾ ಇತ್ತೀಚಿಗೆ ಹಲವು ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದ್ದು, ಅವುಗಳ ಜೊತೆಗೆ ಕೆಲವು ಜನಪ್ರಿಯ ಸ್ಮಾರ್ಟ್‌ಫೋನ್‌ಗಳ ಬೆಲೆ ಇಳಿಕೆ ಸಹ ಮಾಡಿದೆ. ಅದೇ ರೀತಿ ಮಾರುಕಟ್ಟೆಯಲ್ಲಿ ಅಗ್ಗದ ದರದಲ್ಲಿ ಗುರುತಿಸಿಕೊಂಡಿರುವ 'ನೋಕಿಯಾ 2.2' ಸ್ಮಾರ್ಟ್‌ಫೋನಿನ ಪ್ರೈಸ್‌ನಲ್ಲಿ ಇದೀಗ ಕಂಪನಿಯು ಬೆಲೆ ಕಡಿಮೆ ಮಾಡಿದೆ. ಎಂಟ್ರಿ ಲೆವೆಲ್‌ನಲ್ಲಿ ಸ್ಮಾರ್ಟ್‌ಫೋನ್ ಆಗಿ ಗ್ರಾಹಕರ ಗಮನ ಸೆಳೆದಿದೆ.

 
ಹೆಲ್ತ್