Back
Home » ಆರೋಗ್ಯ
ದೇಹದಲ್ಲಿ ಈ ಅಪಾಯಕರ ಲಕ್ಷಣ ಕಂಡು ಬಂದರೆ ನಿಮ್ಮ ಆಹಾರಶೈಲಿಯೇ ಕಾರಣ
Boldsky | 27th Nov, 2019 11:31 AM
 • ದಿನಕ್ಕೆ ಎಷ್ಟು ಪ್ರಮಾಣದಲ್ಲಿ ತರಕಾರಿ ಸೇವಿಸಬೇಕು?

  ದಿನದಲ್ಲಿ ದೇಹಕ್ಕೆ ಬೇಕಾಗಿರುವಷ್ಟು ತರಕಾರಿಯನ್ನು ನೀವು ಸೇವಿಸಿದ್ದೀರಿ ಎಂದು ನೀವು ಭಾವಿಸಿರಬಹುದು, ಆದರೆ ಖಂಡಿತವಾಗಿಯೂ ಹಾಗಲ್ಲ. ಸರಾಸರಿಯಾಗಿ ಪ್ರತಿನಿತ್ಯವು ಎರಡು ಸಲ ಮಾತ್ರ ತರಕಾರಿ ಸೇವಿಸುತ್ತೇವೆ. ಆದರೆ, ದೊಡ್ಡವರು ಪ್ರತಿನಿತ್ಯವೂ ಐದು ಕಪ್ (ಸುಮಾರು 75 ಗ್ರಾಂ ತರಕಾರಿ ಸೇವಿಸಬೇಕು. ಇದರಲ್ಲಿ ಅರ್ಧ ಕಪ್ ಬೇಯಿಸಿರುವುದು ಮತ್ತು ಒಂದು ಕಪ್ ಸಲಾಡ್ ರೂಪದಲ್ಲಿ ಸೇವಿಸಬೇಕು.) ಎರಡು ಕಪ್ ಹಣ್ಣುಗಳು (ಒಂದು ಕಪ್ 150 ಗ್ರಾಂ ಇರಬೇಕು, ಒಂದು ಸೇಬು ಅಥವಾ ಆಪ್ರಿಕಾಟ್) ಸೇವಿಸಬೇಕು. ಪೋಷಕಾಂಶಗಳನ್ನು ತಪ್ಪಿಸಿಕೊಂಡರೆ ಆಗ ಖಂಡಿತವಾಗಿಯೂ ಸಂಪೂರ್ಣ ಆರೋಗ್ಯದ ಮೇಲೆ ಪರಿಣಾಮ ಬೀರುವುದು.


 • ಬೇಗನೆ ಗಾಯವಾಗುವುದು

  ವಿಟಮಿನ್ ಸಿ ಪೋಷಕಾಂಶವನ್ನು ಕಡಿಮೆ ಸೇವಿಸುವುದರಿಂದ ಬೇಗನೆ ಗಾಯವಾಗುತ್ತದೆ, ಒಸಡುಗಳ ಸುತ್ತಲು ರಕ್ತಸ್ರಾವ ಹೆಚ್ಚಾಗುವುದು ಮತ್ತು ಗಾಯ ಒಣಗಲು ತುಂಬಾ ಸಮಯ ಬೇಕಾಗುವುದು. ಕೆಂಪು ಕ್ಯಾಪ್ಸಿಕಂ, ಕೇಲ್, ಕೆಂಪು ಮೆಣಸು, ಕಡು ಹಸಿರು ತರಕಾರಿಗಳು, ಬ್ರಾಕೋಲಿ, ಟೊಮೆಟೊ ಇತ್ಯಾದಿಗಳಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ.


 • ಬಳಲಿಕೆ ಹೆಚ್ಚುತ್ತದೆ

  ಫಾಲೆಟ್ (ಫಾಲಿಕಾಮ್ಲ) ಅಂಶವು ದೇಹದಲ್ಲಿ ಕಡಿಮೆ ಆದರೆ ಅದರಿಂದ ಯಾವಾಗಲೂ ನಿಶ್ಯಕ್ತಿ ಹಾಗೂ ಬಳಲಿಕೆ ಕಂಡುಬರುವುದು. ಹಸಿರೆಲೆ ತರಕಾರಿಗಳು, ದ್ವಿದಳ ಧಾನ್ಯಗಳು ಮತ್ತು ಪಿಷ್ಠ ತರಕಾರಿಗಳಾಗಿರುವಂತಹ ಬ್ಲ್ಯಾಕ್ ಐ ಪೀಸ್, ಕಿಡ್ನಿ ಬೀನ್ಸ್, ಲಿಮಾ ಬೀನ್ಸ್, ನೇವಿ ಬೀನ್ಸ್, ಶತಾವರಿ ಮತ್ತು ಮಸೂರದಲ್ಲಿ ಫಾಲೆಟ್ ಹೇರಳವಾಗಿರುತ್ತದೆ. ಆದ್ದರಿಂದ ಈ ತರಕಾರಿಗಳನ್ನು ನಿತ್ಯ ಆಹಾರದಲ್ಲಿ ಸೇವಿಸಬೇಕು.


 • ಶೀತ ಶೀಘ್ರ ಗುಣಮುಖವಾಗಲ್ಲ

  ಆಹಾರ ಕ್ರಮದಲ್ಲಿ ತರಕಾರಿ ಕಡಿಮೆ ಆದರೆ ಮತ್ತು ಪ್ರಮುಖ ವಿಟಮಿನ್ ಗಳು ದೇಹಕ್ಕೆ ಲಭ್ಯವಾಗದೆ ಇದ್ದರೆ ಆಗ ಫ್ರೀ ರ‍್ಯಾಡಿಕಲ್ ವಿರುದ್ಧ ಹೋರಾಡುವಂತಹ ಶಕ್ತಿಯು ದೇಹದಲ್ಲಿ ಇರುವುದಿಲ್ಲ, ಇದರಿಂದ ಶೀತ ಬರುತ್ತದೆ ಹಾಗೂ ಮತ್ತೆ ಶೀಘ್ರ ಗುಣಮುಖವಾಗದೇ ಕಾಡುತ್ತದೆ. ಆದ್ದರಿಂದ ನಿತ್ಯ ಆಹಾರ ಪಥ್ಯದಲ್ಲಿ ಹಸಿರೆಲೆ ತರಕಾರಿಗಳನ್ನುಸೇವಿಸಿ, ಇದರಲ್ಲಿ ಉನ್ನತ ಮಟ್ಟದ ವಿಟಮಿನ್ ಸಿ ಇದೆ ಮತ್ತು ಇದು ಪ್ರತಿರೋಧಕ ಶಕ್ತಿಯನ್ನು ಹೆಚ್ಚು ಮಾಡುವುದು ಮತ್ತು ಚೇತರಿಕೆಗೆ ಹೆಚ್ಚು ನೆರವಾಗುವುದು.


 • ನೆನಪು ಮಂಕು ಕವಿದಂತೆ ಆಗುವುದು

  ಯಾವಾಗಲೊಮ್ಮೆ ನೆನಪು ಬರದೆ ಇರುವುದು ಎಲ್ಲಾ ವಯಸ್ಸಿನವರಲ್ಲಿ ಸಾಮಾನ್ಯ ಸಂಗತಿಯಾಗಿದೆ. ಆದರೆ ನಿಮಗೆ ವಯಸ್ಸಾಗುತ್ತಾ ಇರುವಂತೆ ಮೆದುಳಿನ ಪ್ರತಿಕ್ರಿಯೆ ವೇಗ ಮತ್ತು ಕಾರ್ಯಕ್ಷಮತೆಯು ಮಂಕಾಗುತ್ತಿದೆ ಎಂದು ನಿಮಗನಿಸಿದರೆ ಆಗ ಖಂಡಿತವಾಗಿಯೂ ಪೋಷಕಾಂಶಗಳ ಕೊರತೆಯು ಇದಕ್ಕೆ ಕಾರಣವಾಗಿದೆ. ಕಲಿಯುವುದು ಮತ್ತು ನೆನಪಿನ ಶಕ್ತಿ ಹೆಚ್ಚು ಮಾಡುವಂತಹ ಲುಟೇನ್ ಎನ್ನುವ ಪೋಷಕಾಂಶವು ಹಸಿರೆಲೆ ತರಕಾರಿಗಳು, ಕ್ಯಾರೆಟ್, ಬ್ರಾಕೋಲಿ, ಜೋಳ ಮತ್ತು ಟೊಮೆಟೊದಲ್ಲಿ ಇದೆ. ಈ ತರಕಾರಿಗಳನ್ನು ವಾರಕ್ಕೊಂದು ಸಲವಾದರೂ ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ಆಗ ಖಂಡಿತವಾಗಿಯೂ ಮೆದುಳಿನ ಶಕ್ತಿಯು ಹೆಚ್ಚಾಗುವುದು.


 • ಒತ್ತಡ ನಿಭಾಯಿಸಲು ಕಷ್ಟಪಡುವುದು

  ಒತ್ತಡ ಎನ್ನುವುದು ನಾವು ಕರೆಯದೆ ಬರುವಂತಹ ಅತಿಥಿ. ಆದರೆ ಈ ಅತಿಥಿ ಜತೆಗೆ ನಾವು ಯಾವ ರೀತಿ ವರ್ತಿಸುತ್ತೇವೆ ಎನ್ನುವುದರ ಮೇಲೆ ದೇಹದ ಪ್ರತಿಕ್ರಿಯೆಯು ಅವಲಂಬಿಸಿದೆ. ದೇಹದಲ್ಲಿ ಒತ್ತಡವು ಹೆಚ್ಚಾದ ಕೂಡಲೇ ಉರಿಯೂತವು ಆರಂಭವಾಗುವುದು. ಇದರಿಂದ ಒತ್ತಡವನ್ನು ಸರಿಯಾಗಿ ನಿಭಾಯಿಸದೆ ಇದ್ದರೆ ಆಗ ಖಂಡಿತವಾಗಿಯೂ ಉರಿಯೂತದಿಂದಾಗಿ ದೇಹದ ಮೇಲೆ ಪರಿಣಾಮ ಬೀರುವುದು.

  ಉರಿಯೂತ ಶಮನಕಾರಿ ಅತಿಯಾಗಿರುವಂತಹ ಅಪರ್ಯಾಪ್ತ ಕೊಬ್ಬಿನಾಮ್ಲ (ಸಾಲ್ಮನ್ ಮತ್ತು ಟ್ಯೂನಾ), ಆಂಟಿಆಕ್ಸಿಡೆಂಟ್ ಗಳು, ಪಾಲಿಫೆನಾಲ್ ಗಳು ಮತ್ತು ಕ್ಯಾರೋಟಿನಾಯ್ಡ್ ಗಳು(ಹಸಿರೆಲೆ ತರಕಾರಿಗಳು ಮತ್ತು ಕಡು ಬಣ್ಣ ಹೊಂದಿರುವ ಕ್ಯಾಪ್ಸಿಕಂ) ದೇಹದಲ್ಲಿ ಉರಿಯೂತ ಕಡಿಮೆ ಮಾಡಲು ನೆರವಾಗುವುದು ಮತ್ತು ಒತ್ತಡವನ್ನು ನಿಭಾಯಿಸಲು ಸಹಕರಿಸುವುದು.


 • ಸ್ನಾಯು ಸೆಳೆತ ಕಾಡುವುದು

  ತರಕಾರಿ ಹಾಗೂ ಹಣ್ಣುಗಳಲ್ಲಿ ಉನ್ನತ ಮಟ್ಟದ ಪೊಟಾಶಿಯಂ ಇದ್ದು, ಇದು ನೀವು ಅತಿಯಾಗಿ ವ್ಯಾಯಾಮ ಮಾಡುತ್ತಲಿದ್ದರೆ ಅಥವಾ ಹೆಚ್ಚಿನ ಸಮಯ ಬಿಸಿಲಿನಲ್ಲಿ ಕಳೆಯುತ್ತಿದ್ದರೆ ಆಗ ಸ್ನಾಯು ಸೆಳೆತ ಉಂಟಾಗುವುದು. ಒಂದು ಮಧ್ಯಮ ಗಾತ್ರದ ಬಾಳೆಹಣ್ಣಿನಲ್ಲಿ ಸುಮಾರು 422 ಮಿ.ಗ್ರಾಂ ಪೊಟಾಶಿಯಂ ಇದೆ ಎಂಬುದು ನಿಮಗೆ ಗೊತ್ತಿರಲಿ.


 • ತೂಕ ಇಳಿಸುವುದು

  ಹಣ್ಣುಗಳು ಹಾಗೂ ತರಕಾರಿಯಲ್ಲಿ ಉನ್ನತ ಮಟ್ಟದ ನಾರಿನಾಂಶವಿದೆ ಮತ್ತು ಇದು ಯಾವಾಗಲೂ ಹೊಟ್ಟೆ ತುಂಬಿರುವಂತೆ ಮಾಡುವುದು. ಹೆಚ್ಚಿನ ಹಣ್ಣುಗಳು ಮತ್ತು ತರಕಾರಿಗಳಲ್ಲಿ ಕಿಲೋಔಲ್ಸ್ ಕಡಿಮೆ ಇದೆ. ಸಿಹಿ ತಿನ್ನುವ ಬಯಕೆಯನ್ನು ಹಣ್ಣುಗಳು ಕಡಿಮೆ ಮಾಡುವುದು. ಐಸ್ ಕ್ರೀಮ್ ತಿನ್ನುವ ಬದಲು ನೀವು ಒಂದು ಬಟ್ಟಲು ಸ್ಟ್ರಾಬೆರಿ ತಿಂದರೆ ಆಗ 800 ಕಿಲೋಔಲ್ಸ್ ಉಳಿಸಬಹುದು.


 • ದ್ರವಾಹಾರ ಸೇವನೆ ಬಗ್ಗೆ ಗಮನಹರಿಸಿದ್ದೀರಾ?

  ಪ್ರತಿ ಭಾನುವಾರ ನೀವು ನಿಮ್ಮ ನೆಚ್ಚಿನ ತರಕಾರಿಗಳನ್ನು ಗ್ರಿಲ್ ಮಾಡಿಟ್ಟುಕೊಳ್ಳಿ, ಇದನ್ನು ನೀವು ಬೇಕೆಂದಾಗ ಸಲಾಡ್ ಅಥವಾ ಲಂಚ್ ಬಾಕ್ಸ್ ಗೆ ಬಳಸಿಕೊಳ್ಳಬಹುದು. ಇದು ದೇಹದ ಉತ್ತಮ ಕಾರ್ಯಕ್ಷಮತೆ ಹಾಗೂ ಅಗತ್ಯ ವಿಟಮಿನ್‌ಗಳು ದೇಹ ಸೇರಲು ಸಹಾಯ ಮಾಡುತ್ತದೆ.


 • ಪ್ರತೀ ಊಟಕ್ಕೆ ಒಂದು ಕಪ್ ತರಕಾರಿ ಸೇವಿಸಿ

  ಪ್ರತಿನಿತ್ಯವು ನಿಮ್ಮ ಆಹಾರ ಕ್ರಮದಲ್ಲಿ ಬಣ್ಣ ಬಣ್ಣದ ಹಾಗೂ ಪೋಷಕಾಂಶಗಳು ಇರುವಂತಹ ತರಕಾರಿ ಹಾಗೂ ಹಣ್ಣುಗಳನ್ನು ಬಳಸಿಕೊಳ್ಳಬೇಕು. ಇದಕ್ಕಾಗಿ ನೀವು ಬಟಾಣಿ, ಸೇಬು ಅಥವಾ ಬಣ್ಣ ಬಣ್ಣದ ಬೆರ್ರಿಗಳನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬೇಕು.


 • ಸಂಸ್ಕರಿಸಿದ ತರಕಾರಿ

  ಹೆಚ್ಚಿನವರು ತಾಜಾ ತರಕಾರಿ ಸೇವನೆ ಮಾಡಲು ಹಿಂಜರಿಯುವರು. ಆದರೆ ಮಾರುಕಟ್ಟೆಯಿಂದ ಮನೆಗೆ ತಂದು ಸ್ವಲ್ಪ ಸಮಯ ಇಟ್ಟರೆ ಅದು ಬಾಡಿ ಹೋಗುವುದು. ಇದಕ್ಕಾಗಿ ಶೀತಲೀಕರಿಸಿದ ತರಕಾರಿಗಳನ್ನು ಖರೀದಿ ಮಾಡುವುದು ಅತ್ಯುತ್ತಮ ವಿಧಾನ. ತರಕಾರಿ ಕತ್ತರಿಸಲು ನಿಮಗೆ ಸಮಸ್ಯೆಯಾಗುತ್ತಿದ್ದರೆ ಮಾರುಕಟ್ಟೆಯಲ್ಲಿ ಕತ್ತರಿಸಿ, ಶೀತಲೀಕರಿಸಿದ ತರಕಾರಿಗಳು ಲಭ್ಯವಿದೆ.

  ಈಗಲೂ ನಿಮಗೆ ತರಕಾರಿ ಸೇವಿಸಲು ಹಿಂಜರಿಯಾಗುತ್ತಿದ್ದರೆ ಇವುಗಳನ್ನು ರುಬ್ಬಿಕೊಂಡು ಸ್ಮೂಥಿ ಅಥವಾ ಶೇಕ್ ಮಾಡಬಹುದು. ಹಣ್ಣುಗಳು ಮತ್ತು ಹಣ್ಣಿನ ಜ್ಯೂಸ್ ಬಳಕೆ ಮಾಡುವ ಕಾರಣದಿಂದಾಗಿ ತರಕಾರಿಗಳ ವಾಸನೆಯು ಸ್ಮೂಥಿಯಲ್ಲಿ ಮಾಯವಾಗುವುದು. ಅತ್ಯುತ್ತಮ ದೈಹಿಕ ಸಾಮರ್ಥ್ಯಕ್ಕಾಗಿ ನಿತ್ಯ ಮೇಲೆ ಹೇಳಿದ ತರಕಾರಿಗಳನ್ನು ಸೇವಿಸಿ ಸ್ವಾಸ್ಥ್ಯ ಕಾಪಾಡಿಕೊಳ್ಳಿ.
ಆರೋಗ್ಯದ ದೃಷ್ಟಿಯಿಂದ ಮಾಂಸಾಹಾರಕ್ಕಿಂತಲೂ ಸಸ್ಯಾಹಾರವು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಅತಿಯಾಗಿ ಮಾಂಸಾಹಾರ ಸೇವಿಸುವ ಕೆಲವು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಜನರು ಈಗ ಸಸ್ಯಾಹಾರಿಗಳಾಗುತ್ತಿದ್ದಾರೆ. ಅದರಲ್ಲೂ ತರಕಾರಿಯು ನಮ್ಮ ಆರೋಗ್ಯದ ರಕ್ಷಣೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದು. ತರಕಾರಿ ಹಾಗೂ ಹಣ್ಣುಗಳಲ್ಲಿ ಉನ್ನತ ಮಟ್ಟದ ಪೋಷಕಾಂಶಗಳು ಇರುವ ಕಾರಣದಿಂದಾಗಿ ಇದನ್ನು ನಮ್ಮ ಆಹಾರ ಕ್ರಮದಲ್ಲಿ ನಿಯಮಿತವಾಗಿ ಬಳಸಿಕೊಳ್ಳಬೇಕು. ಆದರೆ ಇಂದಿನ ದಿನಗಳಲ್ಲಿ ಹೆಚ್ಚಾಗಿ ಮಾಂಸಾಹಾರಕ್ಕೆ ಒತ್ತು ನೀಡುವ ಕಾರಣದಿಂದಾಗಿ ತರಕಾರಿ ಸೇವನೆ ಕಡಿಮೆ ಆಗುತ್ತಲಿದೆ. ನಮ್ಮ ದೇಹಕ್ಕೆ ಬೇಕಾದಷ್ಟು ಹಣ್ಣುಗಳು ಹಾಗೂ ತರಕಾರಿ ಸೇವನೆ ಮಾಡುತ್ತೇವೆ ಎಂದು ನಾವು ಭಾವಿಸಿದ್ದೇವೆ. ಆದರೆ ನಮ್ಮ ದೇಹವು ಇನ್ನಷ್ಟು ತರಕಾರಿ ಹಾಗೂ ಹಣ್ಣುಗಳು ಬೇಕು ಎನ್ನುವ ಸುಳಿವನ್ನು ನಮಗೆ ನೀಡುವುದು. ಯಾಕೆಂದರೆ ಪೋಷಕಾಂಶಗಳ ಕೊರತೆ ಆದ ವೇಳೆ ಖಂಡಿತವಾಗಿಯೂ ಹಣ್ಣು ಹಾಗೂ ತರಕಾರಿಗಳು ಪ್ರಮುಖ ಪಾತ್ರ ವಹಿಸುವುದು. ಹೀಗಾಗಿ ಎಷ್ಟು ಪ್ರಮಾಣದಲ್ಲಿ ತರಕಾರಿ ಸೇವನೆ ಮಾಡಬೇಕು ಎಂದು ನಾವು ಈ ಲೇಖನದ ಮೂಲಕ ತಿಳಿಯುವ....

 
ಹೆಲ್ತ್