Back
Home » ಆರೋಗ್ಯ
ಕೈ ಕಾಲುಗಳಲ್ಲಿ ಊತ: ಕಾರಣ, ಲಕ್ಷಣಗಳು, ಚಿಕಿತ್ಸೆ
Boldsky | 27th Nov, 2019 04:22 PM

ಕೆಲವರಿಗೆ ಕೈ ಕಾಲುಗಳಲ್ಲಿ ಊತ ಕಂಡು ಬರುತ್ತದೆ. ಅದರಲ್ಲೂ ವಯಸ್ಸಾದವರಿಗೆ, ಕ್ಯಾನ್ಸರ್‌ ಚಿಕಿತ್ಸೆ, ಕೀಮೋ ಚಿಕಿತ್ಸೆ ಪಡೆದುಕೊಳ್ಳುವವರಲ್ಲಿ ಕೈ ಕಾಲು ಹಾಗೂ ಬೆರಳುಗಳಲ್ಲಿ ಊತ ಕಂಡು ಬರುತ್ತದೆ. ಇದು ದುಗ್ಥರಸಗಳ ಗ್ರಂಥಿಗಳಿಗೆ ಹಾನಿಯುಂಟಾದಾಗ ಅಥವಾ ದುಗ್ಧರಸ ಗ್ರಂಥಿಯ ಕಾರ್ಯಕ್ಕೆ ಅಡಚಣೆ ಉಂಟಾದಾಗ ದೇಹದಲ್ಲಿ ಊತ ಕಂಡು ಬಂದು ನೋವು ಉಂಟಾಗುವುದು. ಇದನ್ನು ವೈದ್ಯಕೀಯ ಭಾಷೆಯಲ್ಲಿ ಲಿಂಫೆಡೆಮಾ ಅಥವಾ ಲಿಂಫಾಟಿಕ್ ಡೈಸ್‌ಫಂಕ್ಷನ್‌ ಎಂದು ಕರೆಯುತ್ತಾರೆ.

ಸಾಮಾನ್ಯವಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾದಾಗ ಜಹಾಗೂ ಕ್ಯಾನ್ಸರ್‌ ಚಿಕಿತ್ಸೆ ಪಡೆಯುವವರಲ್ಲಿ ಈ ಸಮಸ್ಯೆ ಕಂಡು ಬರುತ್ತದೆ. ಇನ್ನು ಕೆಲವೊಮ್ಮೆ ದುಗ್ಧರಸ ಗ್ರಂಥಿಗೆ ಯಾವುದೇ ವಿಷಾಣು ಸೋಂಕಿದಾಗ ಊತ ಕಂಡು ಬರುವುದು. ದುಗ್ಧರಸ ಗ್ರಂಥಿ ಎನ್ನುವುದು ಪ್ರತಿರಕ್ಷಣಾ ವ್ಯವಸ್ಥೆಯ ಸಣ್ಣ ಗೋಲಾಕಾರದ ಅಂಗವಾಗಿದೆ. ಇದು ಶರೀರದಾದ್ಯಂತ ವ್ಯಾಪಕವಾಗಿ ಹರಡಿದ್ದು ದುಗ್ಧರಸ ನಾಳಗಳ ಮೂಲಕ ಒಂದಕ್ಕೊಂದು ಸಂಪರ್ಕದಲ್ಲಿರುತ್ತದೆ. ಈ ದುಗ್ಧರಸ ಗ್ರಂಥಿಗೆ ಅಡಚಣೆ ಉಂಟಾದಾಗ ಊತ ಉಂಟಾಗಿ ನೋವು ಕಂಡು ಬರುವುದು.

ದುಗ್ಧರಸ ಗ್ರಂಥಿಗಳು ವೈದ್ಯಕೀಯವಾಗಿಯೂ ಪ್ರಾಮುಖ್ಯತೆ ಹೊಂದಿವೆ. ಗಂಟಲಿನ ಸೋಂಕಿನಂತಹ ಕ್ಷುಲ್ಲಕ ಸ್ಥಿತಿಗಳಿಂದ ಹಿಡಿದು, ಜೀವಕ್ಕೇ ಅಪಾಯವಾಗುವಂತಹ ಕ್ಯಾನ್ಸರ್‌ ರೋಗಗಳ ವರೆಗೆ ವಿವಿಧ ಸ್ಥಿತಿಗಳಲ್ಲಿ ಈ ಗ್ರಂಥಿಗಳ ಊತ ಅಥವಾ ಉಬ್ಬುವಿಕೆ ಸ್ಥಿತಿಯುಂಟಾಗುತ್ತದೆ. ಕ್ಯಾನ್ಸರ್‌ ವಿಚಾರದಲ್ಲಿ, ದುಗ್ಧರಸ ಗ್ರಂಥಿಗಳ ಸ್ಥಿತಿ ಅದೆಷ್ಟು ಗಮನಾರ್ಹವಾಗಿ ಬದಲಾಗಿರುತ್ತದೆ ಎಂದರೆ, ಕ್ಯಾನ್ಸರ್‌ ಹಂತಗಳನ್ನು ಗುರುತಿಸಲು ಈ ದುಗ್ಧರಸ ಗ್ರಂಥಿಗಳ ಸ್ಥಿತಿಯನ್ನು ಬಳಸಲಾಗುತ್ತದೆ. ಇದನ್ನು ಆಧರಿಸಿ, ನೀಡಬೇಕಾದ ಚಿಕಿತ್ಸಾ ಕ್ರಮ ಮತ್ತು ವ್ಯಾಧಿಯ ಗತಿಯನ್ನು ನಿರ್ಣಯಿಸಬಹುದಾಗಿದೆ.

ದುಗ್ಧರಸ ಗ್ರಂಥಿಗಳ ಊತಗಳಲ್ಲಿ ಎರಡು ವಿಧ

1. ವಂಶಪಾರಂಪರ್ಯವಾಗಿ ಬರುತ್ತದೆ

2. ಶಸ್ತ್ರ ಚಿಕಿತ್ಸೆ,ಕ್ಯಾನ್ಸರ್ ಚಿಕಿತ್ಸೆಗೆ ಒಳಗಾದರೆ, ದುಗ್ಧರಸಗಳಿಗೆ ಸೋಂಕು ಉಂಟಾದಾಗ ಉಂಟಾಗುತ್ತದೆ.

ದುಗ್ಧರಸ ಗ್ರಂಥಿಗಳ ಊತದ ಪ್ರಯೋಜನಗಳು:

* ಕೈ, ಕಾಲುಗಳು, ಉಗುರುಗಳಲ್ಲಿ ಊತ ಕಂಡು ಬರುವುದು

* ಊತ ಇರುವವಲ್ಲಿ ತ್ವಚೆ ಬಿಗಿಯಾಗಿರುತ್ತದೆ

* ನೋವು ಇರುತ್ತದೆ

* ಸೋಂಕು ಹೆಚ್ಚಾಗುವುದು

* ಕೈ ಕಾಲುಗಳು ಅಲ್ಲಾಡಿಸಲು ಕಷ್ಟವಾಗುವುದು

* ಕಾಲು ಹಾಗೂ ಕೈಗಳು ಭಾರವಾದ ಅನುಭವ ಉಂಟಾಗುತ್ತದೆ.

* ತ್ವಚೆ ಬಣ್ಣ ಬದಲಾಗುತ್ತದೆ

* ಕೀವು ನೋವು

ಈ ರೀತಿಯ ಸಮಸ್ಯೆಗಳೂ ಕಂಡು ಬರಬಹುದು

* ಉಸಿರಾಟದ ತೊಂದರೆ

* ಆಹಾರ ನುಂಗಲು ತೊಂದರೆ

* ಮಾತನಾಡಲು ಕಷ್ಟವಾಗುವುದು

* ದೃಷ್ಟಿ ಮಂಜಾಗುವುದು

ಯಾರಲ್ಲಿ ಗುಗ್ಧರಸ ಗ್ರಂಥಿಗಳ ಊತ ಕಂಡು ಬರುತ್ತದೆ

* ಅತ್ಯಧಿಕ ಮೈ ಬೊಜ್ಜು ಅಥವಾ ಒಬೆಸಿಟಿ ಸಮಸ್ಯೆ

* ಮೂಳೆ ಸಂಬಂಧಿತ ಸಮಸ್ಯೆ ಇದ್ದರೆ

* ವಯಸ್ಸಾದವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಮಡು ಬರುತ್ತದೆ.

ಗುಗ್ಧರಸ ಗ್ರಂಥಿಗಳ ಊತ ಪತ್ತೆ ಹೇಗೆ?

ಕೈ ಕಾಲುಗಳಲ್ಲಿ ಊತ ಉಂಟಾದಾಗ ವೈದ್ಯರಿಗೆ ಸಂಶಯ ಬಂದರೆ ಈ ಕೆಳಗಿನ ಪರೀಕ್ಷೆ ಮಾಡಿಸಿ ಖಚಿತ ಮಾಡಿಕೊಳ್ಳುತ್ತಾರೆ.

* ಎಂಆರ್‌ಐ ಸ್ಕ್ಯಾನ್

* ಸಿಟಿ ಸ್ಕ್ಯಾನ್

* ಡೋಪ್ಲರ್ ಅಲ್ಟ್ರಾಸೌಂಡ್

ತೊಂದರೆಗಳು

ದುಗ್ಧರಸ ಗ್ರಂಥಿಗಳ ಊತ ಉಂಟಾದಾಗ ಚಿಕಿತ್ಸೆ ದೊರೆಯದಿದ್ದರೆ ಲಿಂಫಾಂಜಿಯೊಸಾರ್ಕೊಮಾ ಎಂಬ ಒಂದು ರೀತಿಯ ನರಗಳ ಕ್ಯಾನ್ಸರ್ ಉಂಟಾಗುವ ಸಾಧ್ಯತೆ ಇದೆ.

ಚಿಕಿತ್ಸೆ

* ನ್ಯೂಮಾಟಿಕ್ ಕಂಪ್ರೆಷನ್

* ಕಂಪ್ರೆಷನ್ ಗಾರ್ಮೆಂಟ್ಸ್

* ಕಂಪ್ಲೀಟ್‌ ಡಿಕಾಗ್ನಿಸ್ಟಿವ್ ಥೆರಪಿ

* ವ್ಯಾಯಾಮ

* ಮಸಾಜ್

ಇವುಗಳ ಮೂಲಕ ಕೈ ಕಾಲುಗಳನ್ನು ಮೊದಲಿನ ಸ್ಥಿತಿಗೆ ತರಲಾಗುವುದು.

 
ಹೆಲ್ತ್