Back
Home » ಇತ್ತೀಚಿನ
ಮಾರುಕಟ್ಟೆಗೆ ಬಂದಿದೆ 'ಹೈ ಫ್ಯೂಚರ್'ನ ಹೊಸ ಇಯರ್‌ಬಡ್ಸ್‌!
Gizbot | 3rd Dec, 2019 02:25 PM
 • ಇಯರ್‌ಬಡ್ಸ್‌

  ಹೌದು, ಸಧ್ಯ ಇಯರ್‌ಬಡ್ಸ್‌ಗಳಲ್ಲೂ ಬದಲಾವಣೆಯಾಗ್ತಿದ್ದು ಎಲ್ಲವೂ ಸಖತ್‌ ಸ್ಮಾರ್ಟ್‌ ಆಗ್ತಿವೆ. ಇದೀಗ ಹೈಪ್ಯೂಚರ್‌ನ ಟ್ರೂಲಿ ವೈಯರ್‌ಲೆಸ್‌ ಇಯರ್‌ಬಡ್ಸ್‌ ಪ್ರೊ ಸಖತ್‌ ಸೌಂಡ್‌ ಮಾಡ್ತಿದೆ. ಅದ್ರಲ್ಲೂ ತನ್ನ ಬ್ಯಾಟರಿ ವಿಶೇಷತೆಯಿಂದಲೇ ಗಮನಸೆಳೆಯುತ್ತಿರೋ ಹೈ ಪ್ಯೂಚರ್‌ ಟ್ರೂಲಿ ವೈರ್‌ಲೆಸ್ ಇಯರ್‌ಬಡ್‌ ಪ್ರಿಯರ ಉತ್ತಮ ಆಯ್ಕೆಯಾಗುವ ಸಾಧ್ಯತೆ ಇದೆ.


 • ಹೈಫ್ಯೂಚರ್‌

  ಹೈಫ್ಯೂಚರ್‌ ಟಿಡಿಬಡ್ಸ್ ಪ್ರೊ(TidyBuds Pro) ವಿಶಿಷ್ಟ ಬ್ಯಾಟರಿ ವ್ಯವಸ್ಥೆ ಮತ್ತು ಚಾರ್ಜಿಂಗ್ ಬಾಳಿಕೆಯನ್ನು ಹೊಂದಿದೆ. ಇದು 3,000mAh ಬ್ಯಾಟರಿ ಪ್ಯಾಕ್ ಆಪ್‌ ಹೊಂದಿದ್ದು ಮಿನಿ ಪವರ್ ಬ್ಯಾಂಕ್ ಆಗಿ ಕೂಡ ಬಳಸಲು ಅನುಕೂಲವಾಗಿದೆ. ಬೇರೆ ಕಂಪೆನಿಯ ಟ್ರೂಲಿ ವೈರ್‌ಲೆಸ್‌ ಇಯರ್‌ಬಡ್‌ಗಳು 300 ರಿಂದ 400 ಎಮ್‌ಎಹೆಚ್ ಬ್ಯಾಟರಿ ಸಾಮರ್ಥ್ಯವನ್ನ ಮಾತ್ರ ಹೊಂದಿವೆ. ಆದ್ರೆ ಹೈಪ್ಯೂಚರ್‌ ಇಯರ್‌ಬಡ್‌ಗಳನ್ನ ಒಮ್ಮೆ ಚಾರ್ಜ್‌ ಮಾಡಿದ್ರೆ 8 ಗಂಟೆಗಳ ಪ್ಲೇಬ್ಯಾಕ್ ಸಿಗಲಿದೆ.


 • ಚಾರ್ಜ್

  ಇನ್ನು ಸಂಪೂರ್ಣ ಚಾರ್ಜ್ ಮಾಡಿದ ನಂತರವೂ ತಮ್ಮ ಇಯರ್‌ಬಡ್‌ಗಳನ್ನು 10-12 ಬಾರಿ ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳಿಕೊಂಡಿದೆ. ಅಲ್ಲದೆ ಇಯರ್‌ಬಡ್ಸ್‌ನ ಮುಂಭಾಗದಲ್ಲಿ ನಾಲ್ಕು ಎಲ್ಇಡಿ ಸೂಚಕಗಳಿದ್ದು ಇದರಲ್ಲಿ ಬ್ಯಾಟರಿ ಸಾಮರ್ಥ್ಯದ ಮಾಹಿತಿಯನ್ನ ಕಾಣಬಹುದಾಗಿರುತ್ತದೆ. ಜೊತೆಗೆ ಇವುಗಳನ್ನ ಚಾರ್ಜ್ ಮಾಡಲು ಇಯರ್‌ ಬಡ್‌ ಹಿಂಭಾಗದಲ್ಲಿ ಮೈಕ್ರೊಯುಎಸ್ಬಿ ಪೋರ್ಟ್ ವ್ಯವಸ್ಥೆ ಮಾಡಲಾಗಿದೆ.

  ಶಿಯೋಮಿಯಿಂದ ಪವರ್‌ ಬ್ಯಾಂಕ್‌ ಎಫ್‌ಎಂ ರೆಡಿಯೋ ಬಿಡುಗಡೆ


 • ರಿಯಲ್‌ಟೆಕ್‌

  ಅಲ್ಲದೆ ಟಿಡಿಬಡ್ಸ್ ಪ್ರೊ ರಿಯಲ್‌ಟೆಕ್‌ ಚಿಪ್‌ಸೆಟ್ ಅನ್ನು ಹೊಂದಿದ್ದು ಬ್ಲೂಟೂತ್ 5.0 ತಂತ್ರಜ್ಞಾನವನ್ನು ಬೆಂಬಲಿಸುತ್ತದೆ. ಅಲ್ಲದೆ ತನ್ನ ಸಂಪರ್ಕದ ಡಿವೈಸ್‌ನಿಂದ 10 ಮೀಟರ್ ದೂರದಲ್ಲಿಯೂ ಸಹ ಇಯರ್‌ಬಡ್‌ತನ್ನ ಕಾರ್ಯನಿರ್ವಹಿಸಲಿದೆ. ಟೆಡಿಬಡ್ಸ್ ಪ್ರೊ ಟಚ್‌ಪ್ಯಾಡ್ ತಂತ್ರಜ್ಞಾನವನ್ನು ಸಹ ಹೊಂದಿದ್ದು , ಇದು ಸಂಗೀತ, ಕರೆಗಳು ಮತ್ತು ಧ್ವನಿ ಸಹಾಯಕವನ್ನು ನಿಯಂತ್ರಿಸಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ.


 • ಟ್ರೂಲಿ ವೈಯರ್‌

  ಅಲ್ಲದೆ ಹೈಪ್ಯೂಚರ್‌ ಟೆಡಿಬಡ್ಸ ಟ್ರೂಲಿ ವೈಯರ್‌ ಲೆಸ್‌ ಇಯರ್‌ಬಡ್ಸ್‌ ಪ್ರೊ ಆಂಡ್ರಾಯ್ಡ್ ಐಒಎಸ್ ನಿಂದ ಕಾರ್ಯನಿರ್ವಹಿಸುತ್ತದೆ. ಇನ್ನು ಮಾರುಕಟ್ಟೆಯಲ್ಲಿ ಬಿಳಿ ಮತ್ತು ಕಪ್ಪು ಬಣ್ಣಗಳಲ್ಲಿ ಸಿಗಲಿದ್ದು ಒಂದು ವರ್ಷದ ಖಾತರಿಯನ್ನು ಸಹ ನೀಡಲಾಗಿದೆ. ಈ ಮಾದರಿಯ ಇಯರ್‌ ಬಡ್‌ ಪ್ರೋ ಅಮೆಜಾನ್ ಇಂಡಿಯಾದಲ್ಲಿ 4,199 ರೂ ಹಾಗೂ ಫ್ಲಿಪ್‌ಕಾರ್ಟ್‌ನಲ್ಲಿ 4,499 ರೂಗಳಿಗೆ ಲಭ್ಯವಿದೆ.

  ಬರಲಿದೆ 'ವಿವೋ ಯು20' 8GB RAM ಸ್ಮಾರ್ಟ್‌ಫೋನ್‌!
ಸ್ಮಾರ್ಟ್‌ಫೊನ್‌ ಬಳಕೆದಾರರು ಹೆಚ್ಚಿನ ಪ್ರಮಾಣದಲ್ಲಿ ವೈರ್‌ಲೆಸ್ ಇಯರ್‌ಬಡ್‌ಗಳನ್ನ ಬಳಕೆ ಮಾಡ್ತಿರೋದು ಗೊತ್ತೆ ಇದೆ. ತಂತ್ರಜ್ಞಾನದಲ್ಲಿ ಎಲ್ಲವೂ ಸ್ಮಾರ್ಟ್‌ ಆದಂತೆ ಇಯರ್‌ಬಡ್ಸ್‌ಗಳು ಕೂಡ ಸ್ಮಾರ್ಟ್‌ ಆಗಿ ಬದಲಾಗುತ್ತಿವೆ. ಈಗಾಗ್ಲೆ ಫ್ಯೂಚರ್‌ಬಡ್ಸ್ ಮತ್ತು ನೆಕ್ಲೆಸ್ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಯಶಸ್ಸು ಸಾಧಿಸಿರೋ ಹೈ ಪ್ಯೂಚರ್ ಯುವಪೀಳಿಗೆಯ ಬೇಡಿಕೆಗೆ ತಕ್ಕಂತೆ ಹೊಸ ವಿನ್ಯಾಸದ ಹಲವು ವೈಶಿಷ್ಟ್ಯಗಳನ್ನ ಹೊಂದಿರೋ ಇಯರ್‌ಬಡ್ಸ್‌ಗಳನ್ನ ಮಾರುಕಟ್ಟೆಗೆ ಪರಿಚಯಿಸಿದೆ. ಈ ಇಯರ್‌ಬಡ್ಸ್‌ ಪ್ರೊ ಬ್ಯಾಟರಿ ಹೆಚ್ಚಿನಸಾಮರ್ಥ್ಯ ಹೊಂದಿರುವುದು ವಿಶೇಷವಾಗಿದೆ.

 
ಹೆಲ್ತ್