Back
Home » ಇತ್ತೀಚಿನ
ವಾರ್ಷಿಕ ಪ್ರೀಮಿಯಂನಲ್ಲಿ ರಿಯಾಯಿತಿ ನೀಡಿದ ಸ್ಪಾಟಿಫೈ
Gizbot | 4th Dec, 2019 02:00 PM
 • ‘ಸ್ಪಾಟಿಫೈ'

  ಹೌದು ಸ್ಪಾಟಿಫೈ ಮ್ಯೂಸಿಕ್‌ ಸಂಸ್ಥೆ ಭಾರತದಲ್ಲಿ 'ಸ್ಪಾಟಿಫೈ' ಪ್ರೀಮಿಯಂ ಮೂಲಕ ವಾರ್ಷಿಕ ಚಂದಾದಾರಿಕೆಯಲ್ಲಿ ಶೇಖಡ 50% ರಿಯಾಯಿತಿ ನೀಡಿದ್ದು 699 ರೂ.ಗೆ ಪ್ರೀಮಿಯಂ ಲಭ್ಯವಿದೆ.
  ಈ ಪ್ಲ್ಯಾನ್‌ ಒಂದು ತಿಂಗಳ ವಾಯಿದೆಯನ್ನು ಒಳಗೊಂಡಿರುತ್ತದೆ. ಹಾಗಂತ ಇದು ಪ್ಯಾಮಿಲಿ ಪ್ಲಾನ್‌ ಪ್ರೀಮಿಯಂ ಅಲ್ಲ ಬದಲಿಗೆ ಏಕವ್ಯಕ್ತಿ ಗ್ರಾಹಕರಿಗೆ ಮಾತ್ರ ಅನ್ವಯಿಸುತ್ತದೆ. ಹಾಗಾದರೇ ಸ್ಪಾಟಿಫೈ ಮ್ಯೂಸಿಕ್‌ ಆಪ್‌ನ 'ಸ್ಪಾಟಿಫೈ ಪ್ರೀಮಿಯಂ' ಕುರಿತಾದ ಇನ್ನಷ್ಟು ಮಾಹಿತಿಗಳನ್ನು ಮುಂದೆ ನೋಡೋಣ ಬನ್ನಿರಿ.


 • ಮ್ಯೂಸಿಕ್‌

  ಸದ್ಯ ಮ್ಯೂಸಿಕ್‌ ಮಾರುಕಟ್ಟೆಯಲ್ಲಿ ಅಬ್ಬರಿಸುತ್ತಿರೋ ಸ್ಪಾಟಿಫೈ ಏಕ ಮಾತ್ರ ಚಂದದಾರರಿಗೆ ಮ್ಯೂಸಿಕ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ನಲ್ಲಿ ಮಾಸಿಕ 119 ರೂ.ಗೆ ತನ್ನ ಚಂದಾದಾರಿಕೆಯನ್ನು ನೀಡುತ್ತಿದೆ. ಇದರಿಂದ ಏಕವ್ಯಕ್ತಿ ಗ್ರಾಹಕರಿಗೆ ವಾರ್ಷಿಕ ಚಂದಾದಾರಿಕೆ ವೆಚ್ಚ 1,189 ರೂ ಆಗಿದೆ. ಅಲ್ಲದೆ 12 ತಿಂಗಳಿಗೆ 1,428 ರೂ ಆಗಿದ್ದ ವಾರ್ಷಿಕ ಪ್ರೀಮಿಯಂ ಶೇಖಡ 50% ರಿಯಾಯಿತಿ ಗೆ ದೊರೆಯಲಿದ್ದು ಇದೀಗ 699 ರೂ.ನಲ್ಲಿ ಲಭ್ಯವಾಗಲಿದೆ.


 • ಮಾಸಿಕ

  ಇನ್ನು ಮಾಸಿಕ ಚಂದಾದಾರರಿಗೆ, ವಾರ್ಷಿಕ ಪ್ಯಾಕ್ ಬೆಲೆ 40 ಪ್ರತಿಶತದಷ್ಟು ಕಡಿಮೆಯಾಗಿದ್ದು. ಸ್ಪಾಟಿಫೈ ಇಂಡಿಯಾದ ಈ ಪ್ರಸ್ತಾಪವು ಸೀಮಿತ ಅವಧಿಗೆ ಮಾತ್ರ ಅನ್ವಯವಾಗಲಿದೆ. ಮೂಲಗಳ ಪ್ರಕಾರ ಈ ಪ್ರೀಮಿಯಂ ಡಿಸೆಂಬರ್ 31, 2019 ರಂದು ಕೊನೆಗೊಳ್ಳುತ್ತದೆ ಎಂದು ಹೇಳಲಾಗಿದೆ. ಅಲ್ಲದೆ ಈ ರಿಯಾಯಿತಿ ಕೇವಲ ಸ್ಪಾಟಿಫೈ ಪ್ರೀಮಿಯಂ ನಲ್ಲಿ ಮಾತ್ರ ದೊರೆಯಲಿದ್ದು ಪ್ರೀಮಿಯಂ ಫ್ಯಾಮಿಲಿ ಪ್ಲ್ಯಾನ್‌ನಲ್ಲಿ ದೊರೆಯುವುದಿಲ್ಲ.


 • ಗ್ರಾಹಕ

  ಸ್ಪಾಟಿಫೈ ಮ್ಯೂಸಿಕ್‌ ಸಂಸ್ಥೆ ತನ್ನ ಪ್ರೀಮಿಯಂ ಯೋಜನೆಯನ್ನ 2019 ರ ಆರಂಭದಲ್ಲಿ ಪ್ರಾರಂಭಿಸಿತ್ತು. ಅಲ್ಲದೆ ಪ್ರಾರಂಭದಲ್ಲಿ ಒಬ್ಬ ಗ್ರಾಹಕರಿಗೆ ಅನ್ವಯವಾಗುವ ಪ್ರೀಮಿಯಂ ಅನ್ನು ಶುರು ಮಾಡಿತ್ತು. ಆರಂಭದಲ್ಲಿ 30 ದಿನಗಳ ಪ್ರಾಯೋಗಿಕ ಸೇವೆಯೊಂದಿಗೆ ಪ್ರಾರಂಭಿಸಿತು. ಆದ್ರೆ ಇತ್ತೀಚೆಗೆ, ಸ್ಪಾಟಿಫೈ ತನ್ನ ಪ್ರೀಮಿಯಂ ಉಚಿತ ಪ್ರಯೋಗ ಅವಧಿಯನ್ನು 3 ತಿಂಗಳುಗಳಿಗೆ ವಿಸ್ತರಿಸಿದೆ. ಹಾಗಂತ 3 ತಿಂಗಳ ಉಚಿತ ಕೊಡುಗೆ ಸೀಮಿತ ಅವಧಿಯ ಕೊಡುಗೆಯಲ್ಲ, ಇದನ್ನು ಯಾವುದೇ ಸಮಯದಲ್ಲಿ ಸ್ಟಾಪ್‌ ಮಾಡಲುಬಹುದು.


 • ಪ್ರೀಮಿಯಂ

  ಇನ್ನು ಸ್ಪಾಟಿಫೈ ಇದೇ ಅಕ್ಟೋಬರ್‌ನಲ್ಲಿ, ಭಾರತೀಯ ಗ್ರಾಹಕರಿಗೆ ತನ್ನ ಪ್ರೀಮಿಯಂ ಫ್ಯಾಮಿಲಿ ಯೋಜನೆಯನ್ನು ಪ್ರಾರಂಭಿಸಿದ್ದು ಗೊತ್ತೇ ಇದೆ. ಸ್ಪಾಟಿಫೈ ಪ್ರೀಮಿಯಂ ಫ್ಯಾಮಿಲಿ ಪ್ಲ್ಯಾನ್‌ ಬಿಲ್‌ ತಿಂಗಳಿಗೆ 179 ರೂ.ಆಗಿದ್ದು. ಇದು ಕುಟುಂಬ ಸದಸ್ಯರಿಗೆ ತಮ್ಮದೇ ಆದ ಸಂಗೀತ ಮತ್ತು ಪಾಡ್‌ಕಾಸ್ಟ್‌ಗಳನ್ನು ಆಲಿಸಲು ಅನುವು ಮಾಡಿಕೊಡುತ್ತದೆ.
ಪ್ರಸ್ತುತ ತಂತ್ರಜ್ಞಾನ ಮುಂದುವರೆದಿದ್ದು ಚಂದದ ಹಾಡು ಕೇಳಲು ಅನೇಕ ಆನ್‌ಲೈನ್‌ ಆಪ್‌ಗಳು ಸಿಗುತ್ತವೆ. ನಿಮಗಿಷ್ಟವಾದ ಜನಪ್ರಿಯ ಹಾಡುಗಳನ್ನ ಯಾವಾಗ ಬೇಕಾದರೂ ಕೇಳಲು ಇಂತಹ ಆಪ್‌ಗಳಲ್ಲಿ ಅವಕಾಶವಿದೆ. ಸಧ್ಯ ಭಾರತೀಯ ಮ್ಯೂಸಿಕ್‌ ಮಾರುಕಟ್ಟೆಯಲ್ಲಿ ಸ್ಪಾಟಿಫೈ ಮ್ಯೂಸಿಕ್‌ ಸಂಸ್ಥೆ ಸಿಕ್ಕಾಪಟ್ಟೆ ಸೌಂಡ್‌ ಮಾಡ್ತಿದೆ. ಇದೀಗ ಸ್ಪಾಟಿಫೈ ಸಂಸ್ಥೆಯು ತನ್ನ ಚಂದದಾರರಿಗೆ ಹೊಸ ಪ್ರೀಮಿಯಂ ರಿಯಾಯಿತಿ ನೀಡಿದೆ.

 
ಹೆಲ್ತ್