Back
Home » ಇತ್ತೀಚಿನ
ಡಾಟಾ ಮತ್ತು ಕರೆಗಳಿಗಾಗಿ ಈ ಮೊಬೈಲ್ ಬಳಕೆದಾರರು ಹೆಚ್ಚು ಪಾವತಿ ಮಾಡುವ ಅಗತ್ಯವಿಲ್ಲ
Gizbot | 4th Dec, 2019 03:01 PM
 • ಏರ್ ಟೆಲ್

  ಬದಲಾವಣೆ ಮಾಡಲಾಗಿರುವ ತಾರಿಫ್ ನಲ್ಲಿನ ಹೆಚ್ಚಳವು ಪ್ರಮುಖವಾಗಿ ಏರ್ ಟೆಲ್, ವಡಾಫೋನ್ ಐಡಿಯಾ ಮತ್ತು ರಿಲಯನ್ಸ್ ಜಿಯೋ ಚಂದಾದಾರರಿಗೆ ದೊಡ್ಡ ಎಫೆಕ್ಟ್ ಮಾಡಲಿದೆ. ಆದರೆ ಪೋಸ್ಟ್ ಪೇಯ್ಡ್ ಚಂದಾದಾರರು ಚಿಂತಿಸುವ ಅಗತ್ಯವಿಲ್ಲ. ಯಾಕೆಂದರೆ ಅವರ ಬಿಲ್ ನಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ.


 • ಏರ್ ಟೆಲ್ ಮತ್ತು ವಡಾಫೋನ್ ಐಡಿಯಾ

  ಏರ್ ಟೆಲ್ ಮತ್ತು ವಡಾಫೋನ್ ಐಡಿಯಾ ಕಂಪೆನಿಗಳು ತಮ್ಮ ಪೋಸ್ಟ್ ಪೋಯ್ಡ್ ಗ್ರಾಹಕರ ತಾರಿಫ್ ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಯಾಕೆಂದರೆ ಈಗಾಗಲೇ ಮಾಸಿಕ ಸರಾಸರಿ 499 ರುಪಾಯಿಯನ್ನು ಗ್ರಾಹಕರು ಪಾವತಿ ಮಾಡುತ್ತಿದ್ದಾರೆ.

  ಇನ್ನೊಂದೆಡೆ ಏರ್ ಟೆಲ್ ಮತ್ತು ವಡಾಫೋನಿನ ಪ್ರಿಪೇಯ್ಡ್ ಚಂದಾದಾರರು ತಮ್ಮ ನೆಟ್ ವರ್ಕ್ ಕಾರ್ಯ ನಿರ್ವಹಿಸಬೇಕು ಎಂದಾದಲ್ಲಿ ಬೆಲೆ ಏರಿಕೆಯ ನಂತರ ಕನಿಷ್ಟ 49 ರುಪಾಯಿಯನ್ನು ತಿಂಗಳಿಗೆ ಪಾವತಿ ಮಾಡಲೇಬೇಕಾಗುತ್ತದೆ ಎಂದು ತಿಳಿದುಬಂದಿದೆ.


 • ರಿಲಯನ್ಸ್ ಜಿಯೋ

  ರಿಲಯನ್ಸ್ ಜಿಯೋ ಸಂಸ್ಥೆ ಅನಿಯಮಿತ ಡಾಟಾ ಮತ್ತು ವಾಯ್ಸ್ ಕರೆಗಳ ಆಲ್-ಇನ್-ಒನ್-ಪ್ಲಾನ್ ನಲ್ಲಿ 40% ಹೆಚ್ಚಳ ಚಾರ್ಜಸ್ ಮಾಡುತ್ತಿದೆ.ಈ ಪ್ಲಾನ್ ನಲ್ಲಿ ಇತರೆ ನೆಟ್ ವರ್ಕ್ ಗಳಿಗೆ ಕರೆ ಮಾಡಿದರೆ ಫೇರ್ ಯ್ಯೂಸೇಸ್ ಪಾಲಿಸಿ(ಎಫ್ ಯುಪಿ) ಇರಲಿದೆ ಮತ್ತು ಇದು ಡಿಸೆಂಬರ್ 6 ರಿಂದ ಜಾರಿಗೆ ಬರಲಿದೆ. ವಡಾಫೋನ್ ಐಡಿಯಾ ಮತ್ತು ಏರ್ ಟೆಲ್ ಕೂಡ ಹೊರಹೋಗುವ ಕರೆಗಳಿಗೆ ನಿಯಂತ್ರಣ ಹೇರಿದೆ. 28 ದಿನಗಳ ವ್ಯಾಲಿಡಿಟಿ ಇರುವ ಪ್ಲಾನ್ ನಲ್ಲಿ 1,000 ನಿಮಿಷ ಮಾತನಾಡುವುದಕ್ಕೆ ಅವಕಾಶವಿರುತ್ತದೆ. 84 ದಿನಗಳ ವ್ಯಾಲಿಡಿಟಿಯ ರೀಚಾರ್ಜ್ ನಲ್ಲಿ 3,000 ನಿಮಿಷಗಳು ಮತ್ತು 365 ದಿನಗಳ ವ್ಯಾಲಿಡಿಟಿಯ ಪ್ಲಾನ್ ನಲ್ಲಿ 12,000 ನಿಮಿಷಗಳ ಕಾಲಾವಧಿ ಇರುತ್ತದೆ.ಈ ಲಿಮಿಟ್ ನ್ನು ಮೀರಿದರೆ ಗ್ರಾಹಕರು ಪ್ರತಿ ನಿಮಿಷಕ್ಕೆ 6 ಪೈಸೆಯಂತೆ ಹೊರಹೋಗುವ ಕರೆಗಳಿಗೆ ಪಾವತಿ ಮಾಡಬೇಕಾಗುತ್ತದೆ.


 • ಟೆಲಿಕಾಂ ಆಪರೇಟರ್

  ತಾರಿಫ್ ಗಳ ಏರಿಕೆಯ ಜೊತೆಗೆ ಈ ಟೆಲಿಕಾಂ ಆಪರೇಟರ್ ಗಳು ಇತರೆ ಹಲವು ವ್ಯಾಲ್ಯೂ ಆಡೆಡ್ ಸೇವೆಗಳನ್ನು ಈ ಪ್ಲಾನ್ ಗಳ ಜೊತೆಗೆ ಆಫರ್ ಮಾಡುತ್ತಿದೆ. ಅದರಲ್ಲಿ ಇ-ಕಾಮರ್ಸ್ ಫ್ಲ್ಯಾಟ್ ಫಾರ್ಮ್ ಗಳಿಗೆ ಸಂಬಂಧಿಸಿರುವ ಆಫರ್ ಗಳು ಮತ್ತು ಓಟಿಟಿ ಆಫರ್ ಗಳು ಸೇರಿವೆ.


 • ಡಾಟಾ ಬೆನಿಫಿಟ್

  ಏರ್ ಟೆಲ್ ನ ಹೊಸ ಪ್ಲಾನಿನ ಪ್ರಕಾರ ಏರಿಕೆಯ ಬದಲಾವಣೆಯು 50 ಪೈಸೆ/ಡೇ ಯಿಂದ ಆರಂಭವಾಗಿ 2.85ಪೈಸೆ/ ಡೇ ವರೆಗೆ ಇದೆ. ಇದರಲ್ಲಿ ಕರೆಗಳ ಮತ್ತು ಡಾಟಾ ಬೆನಿಫಿಟ್ ಕೂಡ ಲಭ್ಯವಿದೆ. ಇದರ ಜೊತೆಗೆ ಏರ್ ಟೆಲ್ ಥ್ಯಾಂಕ್ಸ್ ಫ್ಲ್ಯಾಟ್ ಫಾರ್ಮ್ ನ ಭಾಗವಾಗಿ ಏಕ್ಸ್ ಕ್ಲೂಸೀವ್ ಬೆನಿಫಿಟ್ ಗಳು ಲಭ್ಯವಿದೆ. ಇದು ಏರ್ ಟೆಲ್ ಎಕ್ಸ್ಟ್ರೀಮ್(10,000 ಚಲನಚಿತ್ರಗಳು,ಎಕ್ಸ್ ಕ್ಲೂಸೀವ್ ಶೋಗಳು ಮತ್ತು 400 ಟಿವಿ ಚಾನಲ್ ಗಳು), Wynk ಮ್ಯೂಸಿಕ್, ಡಿವೈಸ್ ಪ್ರೊಟೆಕ್ಷನ್, ಆಂಟಿ-ವೈರಸ್ ಪ್ರೊಟೆಕ್ಷನ್ ಮತ್ತು ಇತ್ಯಾದಿ ಹಲವಕ್ಕೆ ಆಕ್ಸಿಸ್ ಸಿಗುತ್ತದೆ ಎಂದು ಟೆಲ್ಕೋ ತಿಳಿಸಿದೆ.
ಡಿಸೆಂಬರ್ 3 ರಿಂದ ವಡಾಫೋನ್-ಐಡಿಯಾ ಮತ್ತು ಏರ್ ಟೆಲ್ ಚಂದಾದಾರರು ಕರೆಗಳಿಗೆ ಮತ್ತು ಡಾಟಾಗಳಿಗೆ ಹೆಚ್ಚು ಪಾವತಿ ಮಾಡಬೇಕು. ಆದರೆ ರಿಲಯನ್ಸ್ ಜಿಯೋ ಬಳಕೆದಾರರಿಗಾಗಿ ಜಿಯೋ ತಾರಿಫ್ ನಲ್ಲಿ ಬದಲಾವಣೆಗಳನ್ನು ಮಾಡಿದ್ದು ಡಿಸೆಂಬರ್ 6 ರಿಂದ ಇದು ಲಭ್ಯವಾಗುತ್ತದೆ. ಮಾರುಕಟ್ಟೆಯ ಏರಿಳಿತದಿಂದಾಗಿ ತಮ್ಮನ್ನ ತಾವು ರಕ್ಷಿಸಿಕೊಳ್ಳುವುದಕ್ಕಾಗಿ ಟೆಲಿಕಾಂ ಸಂಸ್ಥೆಗಳು ತಮ್ಮ ಪ್ರಿಪೇಯ್ಡ್ ಪ್ಲಾನ್ ಗಳಲ್ಲಿ ಬದಲಾವಣೆಯನ್ನು ಮಾಡುತ್ತಿದ್ದು ಪ್ರತಿ ಬಳಕೆದಾರರ ಸರಾಸರಿ ಆದಾಯ(ಎಆರ್ ಪಿಯು) ಹೆಚ್ಚುವುದಕ್ಕೆ ಪ್ರಯತ್ನಿಸುತ್ತಿವೆ.

 
ಹೆಲ್ತ್