Back
Home » ಇತ್ತೀಚಿನ
ಎಂಆಧಾರ್ ಆಪ್ ನಿಂದಾಗಿ ಇದೀಗ ನೀವು ನಿಮ್ಮ ಆಧಾರ್ ಕಾರ್ಡ್ ನ್ನು ಮನೆಯಲ್ಲೇ ಇಟ್ಟು ತೆರಳಬಹುದು
Gizbot | 5th Dec, 2019 07:00 AM
 • ಆಧಾರ್ ಕಾರ್ಡಿನ ಸಾಫ್ಟ್ ಕಾಪಿ

  ಆಧಾರ್ ಕಾರ್ಡಿನ ಸಾಫ್ಟ್ ಕಾಪಿಯನ್ನು ಡೌನ್ ಲೋಡ್ ಮಾಡಿಕೊಳ್ಳುವ ಆಯ್ಕೆಯನ್ನು ಹೊರತು ಪಡಿಸಿ ಆಪ್ ನಲ್ಲಿ ಬಳಕೆದಾರರಿಗೆ ಆಧಾರ್ ಸಂಬಂಧಿತ ಹಲವು ಸೇವೆಗಳು ಲಭ್ಯವಿದೆ. ಉದಾಹರಣೆಗೆ ಆಫ್ ಲೈನ್ ಇಕೆವೈಸಿ, ಕ್ಯೂರ್ ಕೋಡ್ ಬಳಸಿ ಆಧಾರ್ ಕಾರ್ಡ್ ಹಂಚಿಕೊಳ್ಳುವಿಕೆ, ವಿಳಾಸ ಬದಲಾವಣೆಗೆ ಅವಕಾಶ ಸೇರಿದಂತೆ ಇತ್ಯಾದಿ ಹಲವು ಆಧಾರ್ ಸಂಬಂಧಿತ ಕೆಲಸಗಳನ್ನು ಆಪ್ ಮೂಲಕ ಸ್ಮಾರ್ಟ್ ಫೋನಿನಲ್ಲೇ ಮಾಡಿಕೊಳ್ಳುವುದಕ್ಕೆ ಗ್ರಾಹಕರಿಗೆ ಸಾಧ್ಯವಾಗುತ್ತದೆ.


 • ಎಂಆಧಾರ್ ಆಪ್

  ಎಂಆಧಾರ್ ಆಪ್ ಮೂಲಕ ಬಳಕೆದಾರರು ಸಾಫ್ಟ್ ಕಾಪಿಯನ್ನು ಎಲ್ಲಿಗೆ ಬೇಕಿದ್ದರೂ ಸುಲಭದಲ್ಲಿ ಹೊತ್ತೊಯ್ಯಬಹುದು ಮತ್ತು ಒರಿಜಿನಲ್ ಹಾರ್ಡ್ ಕಾಪಿಯನ್ನು ಮನೆಯಲ್ಲೇ ಬಿಟ್ಟು ಬಂದರೂ ಆಧಾರ್ ಸಂಬಂಧಿತ ಎಲ್ಲಾ ಕೆಲಸಗಳನ್ನು ಈ ಆಪ್ ನಿಂದ ಪಡೆಯಲಾಗುವ ಸಾಫ್ಟ್ ಕಾಪಿಯ ಆಧಾರ್ ಕಾರ್ಡ್ ನಿಂದ ಮಾಡಿಕೊಳ್ಳುವುದಕ್ಕೆ ಅವಕಾಶವಿದೆ. ಒರಿಜಿನಲ್ ಆಧಾರ್ ಕಾರ್ಡ್ ಹಾರ್ಡ್ ಕಾಪಿ ಯಾರ ಬಳಿ ಇಲ್ಲವೋ ಅಂತವರಿಗೆ ಈ ಆಪ್ ಬಹಳ ನೆರವಿಗೆ ಬರುತ್ತದೆ.


 • ಆಧಾರ್ ಕಾರ್ಡ್

  ಒಂದು ವೇಳೆ ಸ್ಮಾರ್ಟ್ ಫೋನಿನಲ್ಲಿ ಆಧಾರ್ ಕಾರ್ಡ್ ನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು ಎಂದು ನೀವು ಬಯಸುತ್ತಿದ್ದಲ್ಲಿ ಈ ಕೆಳಗಿನ ಹಂತಗಳನ್ನು ಅನುಸರಿಸಿ ಮಾಡಿಕೊಳ್ಳಬಹುದು.

  ಪ್ರಮುಖ ಅಗತ್ಯತೆಗಳು:

  • ಎಂಆಧಾರ್ ಆಪ್ ನ ನೂತನ ವರ್ಷನ್ ಇರಬೇಕು

  • ಕಾರ್ಯ ನಿರ್ವಹಿಸುತ್ತಿರುವ ಅಂತರ್ಜಾಲ ಸಂಪರ್ಕವಿರಬೇಕು

  • ನೀವು ಆಧಾರ್ ಕಾರ್ಡಿಗೆ ಲಿಂಕ್ ಮಾಡಿರುವ ಮೊಬೈಲ್ ನಂಬರ್ ಆಕ್ಟಿವ್ ಆಗಿ ಇದೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ.

  • 12 ಸಂಖ್ಯೆಯ ಆಧಾರ್ ಕಾರ್ಡ್ ನಂಬರ್ ಅಥವಾ ವರ್ಚುವಲ್ ಆಧಾರ್ ಐಡಿ (ವಿಐಡಿ) ಅಥವಾ ಎನ್ರೋಲ್ಮೆಂಟ್ ಐಡಿ ನಂಬರ್ ಇರಬೇಕು.


 • ಆಫ್ ಲೈನ್ ನಲ್ಲಿ ಆಧಾರ್ ಕಾರ್ಡ್ ಡೌನ್ ಲೋಡ್ ಮಾಡುವುದಕ್ಕೆ ಅನುಸರಿಸಬೇಕಾಗಿರುವ ಹಂತಗಳು:

  1. ಎಂ ಆಧಾರ್ ಆಪ್ ನ್ನು ನಿಮ್ಮ ಆಪ್ ಸ್ಟೋರ್ ನಿಂದ ಡೌನ್ ಲೋಡ್ ಮಾಡಿ ಇನ್ಸ್ಟಾಲ್ ಮಾಡಿಕೊಳ್ಳಿ.

  2. ಆಪ್ ನ್ನು ತೆರೆಯಿರಿ ಮತ್ತು ಸರ್ವೀಸ್ ಸೆಕ್ಷನ್ ನ ಅಡಿಯಲ್ಲಿ ಡೌನ್ ಲೋಡ್ ಆಧಾರ್ ಆಯ್ಕೆಯನ್ನು ಟ್ಯಾಪ್ ಮಾಡಿ.

  3. ಡೌನ್ ಲೋಡ್ ಆಧಾರ್ ಪೇಜ್ ನ ಅಡಿಯಲ್ಲಿ ಮೂರು ಆಯ್ಕೆಗಳಿರುತ್ತದೆ. - ಆಧಾರ್ ನಂಬರ್, ವರ್ಚುವಲ್ ಐಡಿ(ವಿಐಡಿ) ನಂಬರ್ ಮತ್ತು ಎನ್ರೋಲ್ಮೆಂಟ್ ಐಡಿ ನಂಬರ್

  4. ಆಧಾರ್ ನಂಬರ್ ಬಳಸಿ ಆಧಾರ್ ಕಾರ್ಡ್ ಡೌನ್ ಲೋಡ್ ಮಾಡುವುದಕ್ಕಾಗಿ ಸಂಬಂಧಪಟ್ಟ ಆಯ್ಕೆಯನ್ನು ಟ್ಯಾಪ್ ಮಾಡಿ ಮತ್ತು ಆಧಾರ್ ಸಂಖ್ಯೆಯನ್ನು ಎಂಟರ್ ಮಾಡಿ. ನಂತರ ಸೆಕ್ಯುರಿಟಿ ಕ್ಯಾಪ್ಚಾವನ್ನು ಎಂಟರ್ ಮಾಡಿ ಮತ್ತು ಓಟಿಪಿ ಮನವಿಯನ್ನು ಟ್ಯಾಪ್ ಮಾಡಿ.

  5. ಅದೇ ರೀತಿ ವಿಐಡಿ ಆಯ್ಕೆಯನ್ನು ಟ್ಯಾಪ್ ಮಾಡಿ ಮತ್ತು ವಿಐಡಿ ನಂಬರ್ ನ್ನು ಎಂಟರ್ ಮಾಡಿ ಕ್ಯಾಪ್ಚಾ ಬರೆದು ಓಟಿಪಿ ಮನವಿಯನ್ನು ಟ್ಯಾಪ್ ಮಾಡಿ.

  6. ಒಂದು ವೇಳೆ ನೀವು ಎನ್ರೋಲ್ಮೆಂಟ್ ಐಡಿ ನಂಬರ್ ಬಳಸಿ ಆಧಾರ್ ಕಾರ್ಡ್ ಡೌನ್ ಲೋಡ್ ಮಾಡಲು ಪ್ರಯತ್ನಿಸುತ್ತಿದ್ದಲ್ಲಿ ಇಐಡಿ ನಂಬರ್ ಜೊತೆಗೆ ದಿನಾಂಕ ಮತ್ತು ಎನ್ರೋಲ್ಮೆಂಟ್ ಸಮಯವನ್ನು ಕೈಯಲ್ಲಿ ಇಟ್ಟುಕೊಂಡು ಎಂಟರ್ ಮಾಡಿ ಮುಂದಿನ ಹಂತಗಳನ್ನು ಅನುಸರಿಸಿ.

  7. ನಿಮ್ಮ ರಿಜಿಸ್ಟರ್ ಆಗಿರುವ ಮೊಬೈಲ್ ನಂಬರಿಗೆ ಬಂದಿರುವ ಓಟಿಪಿಯನ್ನು ಎಂಟರ್ ಮಾಡಿ.

  8. ಹೊಸ ಪರದೆಯಲ್ಲಿ ಆಧಾರ್ ಫೈಲ್ ಡೌನ್ ಲೋಡ್ ಮಾಡಿಕೊಳ್ಳುವುದಕ್ಕೆ ಪಾಸ್ ವರ್ಡ್ ಕಾಂಬಿನೇಷನ್ನಿನ ಅನ್ ಲಾಕ್ ನ್ನು ಸಲಹೆ ಮಾಡಲಾಗಿರುತ್ತದೆ.
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ತನ್ನ ಆಧಾರ್ ಆಪ್ ನ್ನು ಅಪ್ ಡೇಟ್ ಮಾಡಿದ್ದು ಹೊಸ ಬಳಕೆದಾರರ-ಇಂಟರ್ಫೇಸ್ ಮತ್ತು ಫೀಚರ್ ಗಳನ್ನು ಅಪ್ ಡೇಟ್ ಮಾಡಿದೆ. ಆಂಡ್ರಾಯ್ಡ್ ನ ಪ್ಲೇ ಸ್ಟೋರ್ ಮತ್ತು ಐಓಎಸ್ ನ ಆಪ್ ಸ್ಟೋರ್ ಎರಡೂ ಅಧಿಕೃತ ಫ್ಲ್ಯಾಟ್ ಫಾರ್ಮ್ ಗಳಲ್ಲಿ ಈ ಆಪ್ ಲಭ್ಯವಿದೆ.

 
ಹೆಲ್ತ್