Back
Home » ಇತ್ತೀಚಿನ
2020ಕ್ಕೆ ಚೀನಾದಲ್ಲಿ ಶುರುವಾಗಲಿದೆ ರಿಯಲ್‌ಮಿ ಯ 5G ದರ್ಬಾರ್!
Gizbot | 5th Dec, 2019 08:01 AM
 • ಸ್ಮಾರ್ಟ್‌ಫೋನ್‌

  ಹೌದು 2020ರಿಂದ ಚೀನಾದ ಮಾರುಕಟ್ಟೆಯಲ್ಲಿ 5G ಸ್ಮಾರ್ಟ್‌ಫೋನ್‌ಗಳನ್ನ ಮಾತ್ರ ಬಿಡುಗಡೆ ಮಾಡ್ತೇವೆ ಅಂತಾ ರಿಯಲ್‌ ಮಿ ಸ್ಮಾರ್ಟ್‌ಫೋನ್‌ ಕಂಪೆನಿಯ ಸಿಇಒ ಮತ್ತು ಸಂಸ್ಥಾಪಕ Sky Li, ಚೀನಾದ Weibo ವೆಬ್‌ಸೈಟ್‌ನಲ್ಲಿ ಫೋಸ್ಟ್‌ ಮಾಡಿದ್ದಾರೆ. ಈ ಮೂಲಕ ರಿಯಲ್‌ಮಿ ಸ್ಮಾರ್ಟ್‌ಫೋನ್‌ ಕಂಪೆನಿಯ ನೀತಿ ನಿಯಮಗಳಲ್ಲಿ ಬದಲಾವಣೆ ಯಾಗಲಿದ್ದು, 2020ರಲ್ಲಿ ರಿಯಲ್‌ ಮಿಯ 5G ಜಮಾನ ಶುರುವಾಗಲಿದೆ.


 • ಮೊಬೈಲ್

  ಹಾಗೇ ನೋಡಿದ್ರೆ 4Gಜಿ ಮೊಬೈಲ್ ಟೆಲಿಕಮ್ಯುನಿಕೇಶನ್ ನಿಧಾನವಾಗಿ ತನ್ನ ಜನಪ್ರಿಯತೆಯನ್ನು ಗಳಿಸಿಕೊಳ್ಳುತ್ತಿದೆ. ಇದೇ ಸಮಯದಲ್ಲಿ 5G ಲಗ್ಗೆ ಹಾಕ್ತಿದ್ದು ಹೆಚ್ಚು ವೇಗದ ನೆಟ್‌ವರ್ಕ್ ಎಂದೇ ಜನಪ್ರಿಯತೆಯನ್ನು ಗಳಿಸಿಕೊಂಡಿದೆ. ಮುಂದಿನ ತಲೆಮಾರಿನ ಹೈ ಸ್ಪೀಡ್ ನೆಟ್‌ವರ್ಕ್ ಎಂದೇ ಖ್ಯಾತಿವೆತ್ತಿರುವ 5G ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಲಗ್ಗೆ ಹಾಕಿದ್ರೆ ಯುವಜನತೆ ಖರೀದಿಗೆ ಮುಗಿ ಬೀಳೋದು ಖಂಡಿತ. ಈಗಾಗ್ಲೆ 5Gಗಾಗಿ ಕಾಯ್ತಿರೋ ನಿರೀಕ್ಷೆಯಲ್ಲಿರೋ ಜನತೆಗೆ ರಿಯಲ್‌ ಮಿಯ ನಿರ್ಧಾರ ಇನ್ನಷ್ಟು ನಿರೀಕ್ಷೆಯನ್ನ ಹುಟ್ಟುಹಾಕಿದೆ.


 • ರಿಯಲ್‌ ಮಿ

  ಸಧ್ಯ ಮುಂದಿನ ಐದು ವರ್ಷಗಳಲ್ಲಿ ರಿಯಲ್‌ ಮಿ 5G ಸ್ಮಾರ್ಟ್‌ಫೋನ್‌ಗಳನ್ನ ಮಧ್ಯಮ ಶ್ರೇಣಿಯ ಮತ್ತು ಬಜೆಟ್ ಫೋನ್‌ಗಳನ್ನು ಬಿಡುಗಡೆ ಮಾಡಲು ಕಂಪನಿಯು ಯೋಜನೆ ರೂಪಿಸಿದೆ ಎಂದು ರಿಯಲ್‌ ಮಿ ಹೇಳಿದೆ. ಈ ಮೂಲಕ ಹೆಚ್ಚು ಜನಪ್ರಿಯತೆ ಮತ್ತು ಯುವ ಜನತೆಯನ್ನ ನೇರವಾಗಿ ತಲುಪಬಹುದು ಅನ್ನೊ ಚಿಂತನೆ ರಿಯಲ್‌ ಮಿ ಕಂಪೆನಿಯದ್ದಾಗಿದೆ. ಇನ್ನು ರಿಯಲ್‌ ಮಿ ಕಂಪನಿಯು ತಮ್ಮ ಮೊದಲ 5 ಜಿ ಫೋನ್‌ಗಳನ್ನು ರಿಯಲ್‌ ಮಿ ಎಕ್ಸ್50 ಮತ್ತು ಎಕ್ಸ್50 ಯೂತ್ ಎಡಿಷನ್ ಸ್ಮಾರ್ಟ್‌ಫೋನ್‌ ರೂಪದಲ್ಲಿ ಚೀನಾದಲ್ಲಿ ಬಿಡುಗಡೆ ಮಾಡಲಿದೆ.


 • ಮಲ್ಟಿ

  ಇನ್ನು 5Gವೇಗದ ರಿಯಲ್‌ ಮಿ ಸ್ಮಾರ್ಟ್‌ಫೋನ್‌ಗಳು 5G Standalone ಮತ್ತು Non-Standalone ನೆಟ್‌ವರ್ಕ್‌ಗಳಿಗೆ ಬೆಂಬಲವನ್ನು ನೀಡುತ್ತದೆ, ಅಂದರೆ ಡ್ಯುಯಲ್-ಮೋಡ್ 5 ಜಿ ಸಂಪರ್ಕ ಬೆಂಬಲವನ್ನು ನೀಡುತ್ತದೆ. 5G, 4Gಗಿಂತಲೂ ಹೆಚ್ಚಿನ ವೇಗವನ್ನು ಪಡೆದುಕೊಂಡಿದ್ದು. ಮಲ್ಟಿ ಸ್ಟ್ರೀಮ್, ಮಲ್ಟಿ ಯೂಸರ್, ಸ್ಪೀಡ್ ಮ್ಯಾಚಿಂಗ್ ಹೀಗೆ ಬಹು ವಿಶೇಷತೆಗಳನ್ನು 5G ಹೊಂದಿರಲಿದೆ.


 • ಶಿಯೋಮಿ

  ರಿಯಲ್‌ ಮಿ ಮಾತ್ರವಲ್ಲದೆ ಶಿಯೋಮಿ ಸ್ಮಾರ್ಟ್‌ಫೋನ್‌ ಕಂಪೆನಿ ಕೂಡ 2020ರಲ್ಲಿ ಕನಿಷ್ಠ ಹತ್ತು 5 ಜಿ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುವ ಗುರಿಯನ್ನು ಹೊಂದಿದೆ. ಒಟ್ನಲ್ಲಿ ಮಾರುಕಟ್ಟೆಗೆ ಬರಲಿರುವ 5ಜಿ ತಂತ್ರಜ್ಞಾನ ಬಳಕೆದಾರರಲ್ಲಿ ಸಂತಸದ ಅಲೆಯನ್ನು ತರುವುದಂತೂ ಖಂಡಿತ. ಯಾವುದೇ ತೊಡಕಿಲ್ಲದೆ ಇಂಟರ್ನೆಟ್‌ನಲ್ಲಿ ತಮ್ಮ ಇಷ್ಟದ ಹಾಡು, ವೀಡಿಯೋ, ಚಾಟ್ ಮಾಡುವುದು ಹೀಗೆ ಹತ್ತು ಹಲವು ಕೆಲಸಗಳನ್ನು ಮಾಡಬಹುದಾಗಿದೆ.
ಪ್ರಸ್ತುತ 4G ಜಮಾನ ಇದೆ ಆದ್ರೆ ಇದೀಗ 4g ಗೆ ಗುಡ್‌ಬೈ ಹೇಳಿ 5G ಜಮಾನವನ್ನ ಬರಮಾಡಿಕೊಳ್ಳೊಕೆ ಇಡೀ ಜಗತ್ತು ಕಾತುರದಿಂದ ಕಾಯ್ತಿದೆ. ಈಗಾಗ್ಲೆ ವಿಶ್ವದ ನಾನಾ ಕಡೆ 5G ನೆಟ್‌ವರ್ಕ ಬಗ್ಗೆನೆ ಚರ್ಚೆ ಆಗ್ತಿದೆ. ಕೆಲ ಸ್ಮಾರ್ಟ್‌ಫೋನ್‌ ಕಂಪೆನಿಗಳು 5G ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡೋದಕ್ಕೆ ವೇದಿಕೆ ಸಿದ್ದಮಾಡಿಕೊಳ್ತಿವೆ. 2020ಕ್ಕೆ 5G ತರಲೇಬೇಕೆಂದು ಯೋಜನೆ ರೂಪಿಸುತ್ತಿವೆ. ಇದೀಗ ರಿಯಲ್‌ ಮಿ ಸ್ಮಾರ್ಟ್‌ಫೋನ್‌ ಕಂಪೆನಿ 2020ಕ್ಕೆ ಚೀನಾ ಮಾರುಕಟ್ಟೆಯಲ್ಲಿ ತನ್ನ 5G ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡ್ತೇವೆ ಅಂತಾ ಹೇಳಿಕೊಂಡಿದೆ.

 
ಹೆಲ್ತ್