Back
Home » ಇತ್ತೀಚಿನ
ಲಾಂಚ್‌ ಆಯ್ತು ಮೊಟೊರೊಲಾ ಒನ್‌ ಹೈಪರ್‌ ಸ್ಮಾರ್ಟ್‌ಫೋನ್‌ !
Gizbot | 5th Dec, 2019 04:00 PM
 • ಮೊಟೊರೊಲಾ

  ಹೌದು ಮೊಟೊರೊಲಾ ಒನ್‌ ಹೈಪರ್‌ ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 675 SoC ಪ್ರೊಸೆಸರ್‌ ಹೊಂದಿದ್ದು. p2i ನ್ಯಾನೊ-ಕೋಟಿಂಗ್‌ ಪದರದಿಂದ ಡಿಸ್‌ಪ್ಲೇಯನ್ನ ರಕ್ಷಿಸಲಾಗಿದೆ. ಅಷ್ಟೇ ಅಲ್ಲ ಮೊಟೊರೊಲಾದ 64 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದ ಮೊದಲ ಸ್ಮಾರ್ಟ್‌ಫೋನ್ ಇದಾಗಿದೆ. ಹಾಗಾದ್ರೆ ಮೊಟೊರೊಲಾ ಒನ್‌ ಹೈಪರ್‌ ಸ್ಮಾರ್ಟ್‌ಫೋನ್‌ ಯಾವೆಲ್ಲಾ ವಿಶೇಷತೆಗಳನ್ನ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ನೋಡೋಣ ಬನ್ನಿ.


 • ಡಿಸ್‌ಪ್ಲೇ

  ಮೊಟೊರೊಲಾ ಒನ್ ಹೈಪರ್ ಸ್ಮಾರ್ಟ್‌ಫೋನ್‌ 6.5-ಇಂಚಿನ ಪೂರ್ಣ-ಎಚ್‌ಡಿ + ಡಿಸ್‌ಪ್ಲೇ ಹೊಂದಿದ್ದು. 1080 x 2340 ಪಿಕ್ಸೆಲ್‌ ರೆಸಲ್ಯೂಶನ್‌ ಹೊಂದಿದೆ. ಜೊತೆಗೆ ಎಲ್‌ಸಿಡಿ ಡಿಸ್‌ಪ್ಲೇ ಇದಾಗಿದ್ದು ಡಿಸ್‌ಪ್ಲೇ 19: 9 ಅನುಪಾತದಲ್ಲಿದೆ ಮತ್ತು 395ಪಿಪಿಐ ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ. ಅಲ್ಲದೆ ಫಿಂಗರ್‌ಪ್ರಿಂಟ್ ಸೆನ್ಸಾರ್ ಒಳಗೊಂಡಿದ್ದು. ವಿಡಿಯೊ ವೀಕ್ಷಣೆಗೆ ಹೆಚ್ಚು ಪೂರಕವಾದ ಡಿಸ್‌ಪ್ಲೇ ಇದಾಗಿದೆ.


 • ಪ್ರೊಸೆಸರ್‌

  ಇನ್ನು ಮೊಟೊರೊಲಾ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ ಪ್ರೊಸೆಸರ್‌ 675 ಎಸ್‌ಒಸಿ ಆಗಿದ್ದು ಆಂಡ್ರಾಯ್ಡ್ 10 ನಿಂದ ನಿಯಂತ್ರಿಸಲ್ಪಡುತ್ತದೆ. ಅಲ್ಲದೆ ಇದರ ಆಕ್ಟಾ-ಕೋರ್ 2.0 GHz ಆಗಿದೆ. ಜೊತೆಗೆ 4GB RAM ಮತ್ತು 128GB ಶೇಖರಣ ಸಾಮರ್ಥ್ಯವನ್ನು ಹೊಂದಿದ್ದು. ಇದನ್ನು ಮೆಮೊರಿ ಕಾರ್ಡ್ ಮೂಲಕ 1 ಟಿಬಿ ವರೆಗೆ ವಿಸ್ತರಿಸಬಹುದಾಗಿದೆ.


 • ಕ್ಯಾಮೆರಾ

  ಮೊಟೊರೊಲಾ ಹೈಪರ್‌ ಒನ್‌ ಸ್ಮಾರ್ಟ್‌ ಪೋನ್‌ ಡ್ಯುಯೆಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಹೊಂದಿದ್ದು ಮುಖ್ಯ ಕ್ಯಾಮೆರಾ64 ಮೆಗಾಫಿಕ್ಸೆಲ್‌ ಹೊಂದಿದ್ದು f/ 1.8 ಲೆನ್ಸ್‌ಹೊಂದಿದ್ದು 1.6 ಮೈಕ್ರೋ ಫಿಕ್ಸೆಲ್‌ ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಫಿಕ್ಸೆಲ್‌ ಹೊಂದಿದ್ದು f/ 2.2 ಲೆನ್ಸ್‌ ಮೂಲಕ ಅಲ್ಟ್ರಾ ವೈಡ್‌ ಆಂಗಲ್‌ ಲೆನ್ಸ್‌ ಹೊಂದಿದೆ. ಇನ್ನು 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಒಳಗೊಂಡಿದ್ದು ,2.0ಲೆನ್ಸ್‌ 0.8 ಮೈಕ್ರಾನ್ ಪಿಕ್ಸೆಲ್ ಗಾತ್ರವನ್ನು ಹೊಂದಿದೆ. ಇದು ಪಾಪ್-ಅಪ್ ಕ್ಯಾಮೆರಾ ಆಗಿದೆ. ಜೊತೆಗೆ ನೈಟ್ ವಿಷನ್, ರಾ ಕ್ಯಾಪ್ಚರ್, ಹೈ-ರೆಸ್ ಜೂಮ್, ಮತ್ತು ಫಿಲ್-ಎಚ್ಡಿ 60 ಎಫ್‌ಪಿಎಸ್ ವೀಡಿಯೊಗಳನ್ನು ಸೆರೆಹಿಡಿಯುವ ಫಿಚರ್ಸ್‌ ಗಳನ್ನ ಒಳಗೊಂಡಿದೆ.


 • ಬ್ಯಾಟರಿ ಮತ್ತು ಇತರೆ

  ಮೊಟೊರೊಲಾ ಒನ್ ಹೈಪರ್ ಫೋನ್‌ 45W ಹೈಪರ್ ಚಾರ್ಜ್ ತಂತ್ರಜ್ಞಾನವನ್ನು ಬೆಂಬಲಿಸುವ 4,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಯುಎಸ್ಬಿ ಟೈಪ್-ಸಿ ಪೋರ್ಟ್ ಅನ್ನು ಹೊಂದಿದ್ದು. ಗೇಮಿಂಗ್‌ಗೆ ಬ್ಯಾಟರಿ ಅತ್ಯುತ್ತಮ ಬ್ಯಾಕ್‌ಅಪ್‌ ನೀಡಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ದಿಕ್ಸೂಚಿ, ಗೈರೊಸ್ಕೋಪ್, ಸೆನ್ಸಾರ್‌ ಅನ್ನು ಸಹ ಒಳಗೊಂಡಿದೆ. ಜೊತೆಗೆ ಇದು 161.8 x 76.6 x 8.9 ಮಿಮೀ ಗ್ರಾತ್ರವನ್ನು ಹೊಂದಿದೆ. ಸಧ್ಯ ಮೊಟೊರೊಲಾ ಒನ್‌ ಹೈಪರ್‌ ಪೋನ್‌ 29,000 ರೂಗಳಿಗೆ ಲಭ್ಯವಿದೆ.
ಸ್ಮಾರ್ಟ್‌ಫೋನ್‌ ಪ್ರಿಯರ ಬಹು ನಿರೀಕ್ಷಿತ ಮೊಟೊರೊಲಾ ಒನ್ ಹೈಪರ್ ಸ್ಮಾರ್ಟ್‌ಫೋನ್‌‌ ಯುಎಸ್‌ನಲ್ಲಿ ಲಾಂಚ್‌ ಆಗಿದೆ. 32 ಮೆಗಾಪಿಕ್ಸೆಲ್ ಸೆನ್ಸಾರ್‌ನ ಪಾಪ್-ಅಪ್ ಸೆಲ್ಫಿ ಕ್ಯಾಮೆರಾ ಮಾಡ್ಯೂಲ್ ಹೊಂದಿದ ಮೊಟೊರೊಲಾ-ಬ್ರಾಂಡ್ ಆಂಡ್ರಾಯ್ಡ್ ಫೋನ್ ಇದಾಗಿದೆ. 64 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದ್ದು ಹೋಲ್-ಪಂಚ್ ಇಲ್ಲದ ಫುಲ್‌ ಹೆಚ್‌ಡಿ ಡಿಸ್‌ಪ್ಲೇ ಮೂಲಕ ಹಲವು ವಿಶೇಷತೆಗಳನ್ನ ಈ ಸ್ಮಾರ್ಟ್‌ಫೋನ್‌ ಒಳಗೊಂಡಿದೆ.

 
ಹೆಲ್ತ್