Back
Home » ಇತ್ತೀಚಿನ
2020 ನ್ನು ಆರಂಭಿಸುವ ಮುನ್ನ ನೀವು ಈ ಟೆಕ್ ಗೆಜೆಟ್ ಗಳನ್ನು ಹೊಂದಿರಲೇಬೇಕು!
Gizbot | 6th Dec, 2019 07:01 AM
 • ಟೆಕ್ ವಸ್ತು

  2020 ನ್ನು ಆರಂಭಿಸುವುದಕ್ಕೆ ನಾವಿಲ್ಲಿ ಕೆಲವು ಟೆಕ್ ವಸ್ತುಗಳನ್ನು ಪಟ್ಟಿ ಮಾಡುತ್ತಿದ್ದೇವೆ.ಈ ಲಿಸ್ಟ್ ನಲ್ಲಿರುವುದನ್ನು ನಾವು ಈಗಿನ ಜಗತ್ತಿನ ಆಗುಹೋಗುಗಳಿಗೆ ಹೇಗೆ ಅನುಕೂಲಕಾರಿಯಾಗಿರುತ್ತದೆ ಎಂಬ ಬಗ್ಗೆ ಟೆಸ್ಟ್ ಮಾಡಿದ್ದೇವೆ. ದಿನನಿತ್ಯದ ಬಳಕೆಯಲ್ಲಿ ಇವು ಹೇಗೆ ಉಪಯೋಗಗಾರಿಯಾಗಬಲ್ಲವು ಮತ್ತು ಇವುಗಳ ಅಗತ್ಯತೆ ನಿಮ್ಮ ಕೆಲಸವನ್ನು ಹೇಗೆ ಸುಲಭಗೊಳಿಸಬಲ್ಲವು ಎಂಬುದನ್ನು ನಾವಿಲ್ಲಿ ತಿಳಿಸುತ್ತಿದ್ದೇವೆ. ಆ ಮೂಲಕ 2020 ರಲ್ಲಿ ನೀವು ನಿಮ್ಮ ಕೆಲಸವನ್ನು ಈ ಟೆಕ್ ಗೆಜೆಟ್ ಗಳನ್ನು ಬಳಸಿ ಸುಲಭಗೊಳಿಸಿಕೊಳ್ಳಬಹುದು.


 • 20-ಪಿನ್ USB-C ಮ್ಯಾಗ್ನೆಟಿಕ್ ಬ್ರೇಕ್ ಅವೇ ಕನೆಕ್ಟರ್

  ಪದೇ ಪದೇ ಹೊಸ ಲ್ಯಾಪ್ ಟಾಪ್ ಗಳನ್ನು, ಮ್ಯಾಕ್ ಬುಕ್ ಗಳನ್ನು ಖರೀದಿಸುವುದನ್ನು ಇವು ತಡೆಯುತ್ತದೆ ಆ ಮೂಲಕ ನಿಮ್ಮ ಹಣವನ್ನು ಇವು ಉಳಿತಾಯ ಮಾಡುತ್ತದೆ.ಇದು ಕೇವಲ ಮ್ಯಾಕ್ ಬುಕ್ ಗಳಿಗಾಗಿ ಮಾತ್ರವಲ್ಲ ಬದಲಾಗಿ ಯುಎಸ್ ಬಿ-ಸಿ ಪೋರ್ಟ್ ಹೊಂದಿರುವ ಯಾವುದೇ ಗೆಜೆಟ್ ಗಳಿಗೆ ಹೇಳಿ ಮಾಡಿಸಿದ ಫರ್ಫೆಕ್ಟ್ ಡಿವೈಸ್ ಆಗಿದೆ. ಇದರಲ್ಲಿರುವ ಮ್ಯಾಗ್ನೆಟ್ ಬಹಳ ಶಕ್ತಿಶಾಲಿಯಾಗಿದ್ದು ಕನೆಕ್ಟರ್ ನ ಎರಡು ಭಾಗಗಳನ್ನು ಅಟ್ಯಾಚ್ ಮಾಡುವುದಕ್ಕೆ ಸಾಧ್ಯವಾಗುತ್ತದೆ.

  ಹೆಚ್ಚು ಕಾಂಪ್ಯಾಕ್ಟ್ ಆಗಿರುವ ಪರಿಹಾರ ನಿಮಗೆ ಬೇಕು ಎಂದಿದ್ದಲ್ಲಿ ಯುಎಸ್ ಬಿ ಕೇಬಲ್ ಅಟ್ಯಾಚ್ ಆಗಿರುವ ವರ್ಷನ್ ಕೂಡ ಲಭ್ಯವಿದೆ ಈ ಅಡಾಪ್ಟರ್ 100W (20V/5A) ಚಾರ್ಜಿಂಗ್ ನ್ನು ಬೆಂಬಲಿಸುತ್ತದೆ. ಎಲ್ಲಾ ಮ್ಯಾಕ್ ಬುಕ್ಸ್ ಗಳಿಗೂ ಕೂಡ ಫರ್ಫೆಕ್ ಆಗಿದೆ ಮತ್ತು ಲ್ಯಾಪ್ ಟಾಪ್ ಮತ್ತು ಯುಎಸ್ಬಿ -ಸಿ ಡಿವೈಸ್ ಗಳಿಗೂ ಕೂಡ ಹೇಳಿ ಮಾಡಿಸಿದಂತಿದೆ. ಇದು10Gbps ಡಾಟಾ ಟ್ರಾನ್ಸ್ಫರ್ ಮತ್ತು 4K@60Hz ವೀಡಿಯೋ ಔಟ್ ಪುಟ್ ನ್ನು ಬೆಂಬಲಿಸುತ್ತದೆ.


 • ಜೆನ್ಡ್ಯೂರ್ ಸೂಪರ್ ಟ್ಯಾಂಕ್ ಯುಎಸ್ ಬಿ-ಸಿ ಪೋರ್ಟೇಬಲ್ ಚಾರ್ಜರ್

  ಸಣ್ಣದೇನಲ್ಲ-ಇದು 4.7- ಬೈ 2.9- ಬೈ1.6- ಇಂಚಿನದ್ದಾಗಿದೆ. ಕಡಿಮೆ ತೂಕದ್ದೂ ಅಲ್ಲ - ಇದರ ತೂಕ 17.6 ಔನ್ಸ್ ನಷ್ಟಿದೆ. ಹಾಗಂತ ಕಡಿಮೆ ಬೆಲೆಯದ್ದು ಅಂದುಕೊಳ್ಳಬೇಡಿ- ಇದರ ಬೆಲೆ 191.99 ಡಾಲರ್ ಗಳು.ಆದರೆ ನೀವು ಲ್ಯಾಪ್ ಟಾಪ್ ಹಿಡಿದು ಪ್ರಯಾಣ ಕೈಗೊಳ್ಳುವವರಾಗಿದ್ದಲ್ಲಿ ಅಥವಾ ಹಲವು ಡಿವೈಸ್ ಗಳನ್ನು ಯಾವಾಗಲೂ ಹೊತ್ತೊಯ್ಯುತ್ತಿರುವವರು ನೀವಾಗಿದ್ದಲ್ಲಿ ಖಂಡಿತ ಇದು ಬೆಸ್ಟ್ ಪೋರ್ಟೇಬಲ್ ಪವರ್ ಬ್ಯಾಂಕ್ ಆಗಿದೆ.

  ಇದರ ಕೆಪಾಸಿಟಿ 27,000mAh (99.9Wh, ಹಾಗಾಗಿ ಇದು ಏರ್ ಲೈನ್ ನಲ್ಲಿ ಪ್ರಯಾಣಿಸುವವರಿಗೆ ಹೇಳಿ ಮಾಡಿದ ಡಿವೈಸ್ ಆಗಿದೆ). ಇದರಲ್ಲಿ 100W ಔಟ್ ಪುಟ್ ಇದೆ. ಹಾಗಾಗಿ 15-ಇಂಚಿನ ಮ್ಯಾಕ್ ಬುಕ್ ಪ್ರೋವನ್ನು ಫುಲ್ ಸ್ಪೀಡ್ ನಲ್ಲಿ ಚಾರ್ಜ್ ಮಾಡಬಹುದು. ಐಫೋನ್ ಎಕ್ಸ್ಎಸ್ ನ್ನು ಏಳು ಬಾರಿ ಚಾರ್ಜ್ ಮಾಡುವುದಕ್ಕೆ ಇದರಿಂದ ಸಾಧ್ಯವಾಗುತ್ತದೆ.

  ಈ ಪವರ್ ಬ್ಯಾಂಕ್ ನಲ್ಲಿ ಕನಿಷ್ಟ ಪವರ್ ಮೋಡ್ ಕೂಡ ಇದ್ದು ಸಣ್ಣಪುಟ್ಟ ಪವರ್ ಡಿವೈಸ್ ಗಳಾಗಿರುವ ಸ್ಮಾರ್ಟ್ ವಾಚ್ ಗಳು, ಬ್ಲೂಟೂತ್ ಇಯರ್ ಫೋನ್ ಗಳು ಮತ್ತು ಫಿಟ್ನೆಸ್ ಬ್ಯಾಂಡ್ ಗಳನ್ನು ರೀಚಾರ್ಜ್ ಮಾಡುವುದಕ್ಕೂ ಕೂಡ ಅವಕಾಶವಿರುತ್ತದೆ. ಕೆಲವು ಕಡಿಮೆ ಬೆಲೆಯ ಪವರ್ ಬ್ಯಾಂಕ್ ಗಳು ಕನಿಷ್ಟ ಲೋಡ್ ನಲ್ಲಿ ಸ್ವಿಚ್ ಆಫ್ ಆಗುವ ಸಾಧ್ಯತೆ ಇರುತ್ತದೆ.

  ಎರಡು ಪಿಡಿ-ಅನೇಬಲ್ ಆಗಿರುವ ಯುಎಸ್ ಬಿ-ಸಿ ಪೋರ್ಟ್ಸ್ ಮತ್ತು ಎರಡು ಯುಎಸ್ ಬಿ-ಎ ಪೋರ್ಟ್ ಗಳಿದ್ದು ಮಲ್ಟಿ ಡಿವೈಸ್ ಗಳನ್ನು ಚಾರ್ಜ್ ಮಾಡುವ ಬೆಸ್ಟ್ ಹಬ್ ಇದಾಗಿದೆ. ಇದರಲ್ಲಿ ಸೂಪರ್ ಹ್ಯಾಂಡಿ ಎಲ್ ಸಿಡಿ ಇದ್ದು ಚಾರ್ಜಿಂಗ್ ಲೆವೆಲ್ ನ್ನು ತೋರಿಸುತ್ತದೆ. ಪ್ರಯಾಣದಲ್ಲಿ ಎದುರಾಗುವ ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸಿ ನಿಮ್ಮ ಡಿವೈಸ್ ಗಳನ್ನು ಚಾರ್ಜ್ ಮಾಡುವ ಸಾಮರ್ಥ್ಯವನ್ನು ಇದು ಹೊಂದಿದೆ. ಹಾಗಾಗಿ 2020 ರಲ್ಲಿ ನಿಮ್ಮ ಬಳಿ ಇರಬೇಕಾದ ಪ್ರಮುಖ ಡಿವೈಸ್ ಗಳಲ್ಲಿ ಇದೂ ಕೂಡ ಒಂದು ಎಂದು ಪರಿಗಣಿಸಬಹುದು.


 • ಸೌಂಡ್ ಕೋರ್ ಲಿಬರ್ಟಿ 2 ಪ್ರೋ

  ಕೇವಲ ಆಡಿಯೋ ಗುಣಮಟ್ಟಕ್ಕಾಗಿ ಮಾತ್ರವೇ ಅಲ್ಲ. ಇವು ಬಹಳ ಆರಾಮದಾಯಕ ಅನುಭವವನ್ನು ನೀಡುತ್ತದೆ. ದೀರ್ಘಾವಧಿ ಬ್ಯಾಟರಿ ಲೈಫ್ ನ್ನು ಇದು ಹೊಂದಿದೆ( 8 ಘಂಟೆಗಳ ಬ್ಯಾಟರಿ ಲೈಫ್ ಇದೆ. 32 ಘಂಟೆಗಳ ಚಾರ್ಜಿಂಗ್ ಕೇಸ್ ನ್ನು ಇದು ಹೊಂದಿದೆ. ಕೇಸ್ ನ್ನು ಯುಎಸ್ ಬಿ-ಸಿ ಅಥವಾ ಕ್ಯೂಐ ಸರ್ಟಿಫೈಡ್ ಚಾರ್ಜರ್ ಬಳಸಿ ರೀಚಾರ್ಜ್ ಮಾಡಬಹುದು.ವೇಗವಾಗಿ ಚಾರ್ಜ್ ಆಗುವ ಫೀಚರ್ ನ್ನು ಹೊಂದಿದೆ. (10 ಮಿನಿಟ್ಸ್ ಕೇಸ್ 2 ತಾಸುಗಳ ಚಾರ್ಜ್ ನ್ನು ನೀಡುತ್ತದೆ) ಕ್ಯಾರಿ ಕೇಸ್ ಕೂಡ ಸಣ್ಣದಾಗಿದೆ ಮತ್ತು ಕಡಿಮೆ ತೂಕವನ್ನು ಹೊಂದಿದೆ ಮತ್ತು ಕರೆಗಳ ಗುಣಮಟ್ಟವು ಕೂಡ ಸೆಕಂಡ್ ಅಥವಾ ಅದಕ್ಕಿಂತ ಕಡಿಮೆ ಇದೆ.


 • ಟೈಲ್ ಪ್ರೋ ಮತ್ತು ಟೈಲ್ ಸ್ಲಿಮ್

  ಕೀಗಳು ಮತ್ತು ವ್ಯಾಲೆಟ್ ಗಳನ್ನು ಟ್ರ್ಯಾಕ್ ಮಾಡುವುದಕ್ಕೆ ಬೇಕಾಗುವ ವಸ್ತುವಿನ ಅಗತ್ಯತೆಯ ಬಗ್ಗೆ ಮೊದಲಿಗೆ ಅಷ್ಟೇನು ಮನಸ್ಸು ಇಲ್ಲದೇ ಇದ್ದರೂ ಕೂಡ ಈಗಿನ ಜಮಾನದಲ್ಲಿ ಇಂತಹದ್ದೊಂದು ವಸ್ತುವನ್ನು ಇಟ್ಟುಕೊಂಡಿರುವುದು ಬಹಳ ಸಮಂಜಸವೆನ್ನಿಸುತ್ತದೆ. ಯಾಕೆಂದರೆ ಯಾವಾಗ ನಿಮ್ಮ ವ್ಯಾಲೆಟ್ ಮತ್ತು ಕೀಗಳು ನಿಮ್ಮ ಕೈತಪ್ಪಿ ಹೋಗುತ್ತವೆ, ಎಲ್ಲಿ ಕಳ್ಳರ ಪಾಲಾಗುತ್ತದೆ ಎಂದು ಹೇಳಲಾಗುವುದಿಲ್ಲ!ಇಂತಹ ಪ್ರೊಡಕ್ಟ್ ಗಳು ನಿಮಗೆ ಅಗತ್ಯವೆನಿಸುವುದೇ ಅದರ ಅನಿವಾರ್ಯತೆ ಎದುರಾದಾಗ. ಹಾಗಾಗಿ ಟೈಲ್ ಪ್ರೋ ಮತ್ತು ಟೈಲ್ ಸ್ಲಿಮ್ ಗಳು 2020 ರಲ್ಲಿ ನೀವು ಕೊಂಡುಕೊಂಡಿರಬೇಕಾಗಿರುವ ಪ್ರಮುಖ ವಸ್ತುಗಳಲ್ಲಿ ಒಂದೆನಿಸಿದೆ.


 • ಯುಎಸ್ ಬಿ ರೀಚಾರ್ಜೇಬಲ್ ಎಎ ಮತ್ತು ಎಎಎ ಬ್ಯಾಟರಿಗಳು

  2020 ನೇ ಇಸವಿಯೇ ಆಗಿದ್ದರೂ ಕೂಡ ಎಎ ಮತ್ತು ಎಎಎ ಬ್ಯಾಟರಿಗಳ ಅಗತ್ಯತೆ ಖಂಡಿತ ಇದೆ. ಚಾರ್ಜ್ ಮಾಡುವುದಕ್ಕೆ ಇವು ಬಹಳ ಅನುಕೂಲಕಾರಿಯಾಗಿರುವುದರಿಂದಾಗಿ ಖಂಡಿತ ಎಲ್ಲರೂ ಪ್ರೀತಿಸಬಹುದಾದ ಡಿವೈಸ್ ಗಳಲ್ಲಿ ಇದೂ ಕೂಡ ಒಂದು. ಡೆಸ್ಕ್ ನಲ್ಲಿ ಸಪರೇಟ್ ಚಾರ್ಜರ್ ಸಿಟ್ಟಿಂಗ್ ನ ಅಗತ್ಯತೆ ಇದರಲ್ಲಿ ಇರುವುದಿಲ್ಲ.ಇದರ ಸಾಮರ್ಥ್ಯ ಕೂಡ ಅತ್ಯುತ್ತಮವಾಗಿದೆ ಮತ್ತು ಅತೀ ಹೆಚ್ಚು ಕಾಲ ಬಾಳಿಕೆ ಬರುತ್ತದೆ ಮತ್ತು ಎಎ ಮತ್ತು ಎಎಎ ಬ್ಯಾಟರಿಗಳ ಅಗತ್ಯತೆಯನ್ನು ಬೇಡುವ ಪ್ರಮುಖ ಡಿವೈಸ್ ಗಳಿಗೆ ಇವು ಹೇಳಿ ಮಾಡಿಸಿದ ಪ್ರೊಡಕ್ಟ್ ಆಗಿರುತ್ತದೆ.
ತಾಂತ್ರಿಕವಾಗಿ ಮುಂದುವರಿಯುತ್ತಿರುವ ಈಗಿನ ಜಮಾನದಲ್ಲಿ ನಾವೂ ಕೂಡ ತಂತ್ರಜ್ಞಾನವನ್ನು ಅನಿವಾರ್ಯವಾಗಿ ಬಳಸಲೇಬೇಕಾಗುತ್ತದೆ. ಇಲ್ಲದೇ ಇದ್ದಲ್ಲಿ ನಿಮ್ಮ ಕೆಲಸಗಳು ಸುಲಭವಾಗಿ, ಸರಳವಾಗಿ, ವೇಗವಾಗಿ ಮುಗಿಯುವುದೇ ಇಲ್ಲ. ನಿಮ್ಮ ದೈನಂದಿನ ಚಟುವಟಿಕೆಗಳು ಎಲ್ಲರಂತೆಯೇ ವೇಗವಾಗಿ ಮತ್ತು ಅತೀ ಸರಳವಾಗಿ ಪೂರ್ಣಗೊಳ್ಳಬೇಕು ಎಂದಾದಲ್ಲಿ ನೀವು ಟೆಕ್ನಾಲಜಿಗೆ ನಿಮ್ಮನ್ನು ನೀವು ತೆರೆದುಕೊಳ್ಳಲೇಬೇಕಾಗುತ್ತದೆ. ಅದೇ ಕಾರಣಕ್ಕೆ ಹೊಸ ವರ್ಷದಲ್ಲಿ ನೀವು ಹೊಂದಿರಬೇಕಾದ ಕೆಲವು ಟೆಕ್ ವಸ್ತುಗಳ ಬಗ್ಗೆ ನಾವಿಲ್ಲಿ ನಿಮಗೆ ತಿಳಿಸುತ್ತಿದ್ದೇವೆ. ಇವುಗಳು ನಿಮ್ಮ ಕೆಲಸದ ಒತ್ತಡವನ್ನು ಕಡಿಮೆ ಮಾಡಬಲ್ಲವು.

 
ಹೆಲ್ತ್