Back
Home » ಇತ್ತೀಚಿನ
ಭಾರತದಲ್ಲಿ ಸೋನಿ ಆಲ್ಫಾ 9 II ಕ್ಯಾಮೆರಾ ಲಾಂಚ್‌!
Gizbot | 6th Dec, 2019 12:23 PM
 • ಸೋನಿ

  ಹೌದು ಸೋನಿ ಕಂಪೆನಿ ಇದೇ ಡಿಸೆಂಬರ್‌ 5ರಂದು ದೇಶಿ ಮಾರುಕಟ್ಟೆಗೆ ಆಲ್ಫಾ 9 II ಕ್ಯಾಮೆರಾ ಬಿಡುಗಡೆ ಮಾಡಿದೆ. ಇನ್ನು ಈ ಕ್ಯಾಮೆರಾ ಆಟೋ ಫೋಕಸ್ ಮತ್ತು ಆಟೋ ಎಕ್ಸ್‌ಪೋಸರ್ ಟ್ರ್ಯಾಕಿಂಗ್, 60 ಸೆಕೆಂಡಿಗೆ 20 ಫ್ರೇಮ್‌ಗಳವರೆಗೆ ಬ್ಲ್ಯಾಕೌಟ್ ಕ್ಲಿಯರೆನ್ಸ್‌ ಶೂಟಿಂಗ್‌ ಮಾಡಬಹುದಾಗಿದೆ, ಅಲ್ಲದೆ ಗ್ರೌಂಡ್‌ ಬ್ರೆಕಿಂಗ್‌ ಶೂಟಿಂಗ್‌ ಅನ್ನ ನಿರಂತರವಾಗಿ ಮಾಡಬಲ್ಲ ವೇಗದ ಕಾರ್ಯಕ್ಷಮತೆಯನ್ನು ಹೊಂದಿದ್ದು ಪ್ರಬಾವಶಾಲಿಯಾಗಿ ಕಾರ್ಯನಿರ್ವಹಿಸಲಿದೆ ಅಂತಯಾ ಸೋನಿ ಕಂಪೆನಿ ಹೇಳಿಕೊಂಡಿದೆ.


 • ಕ್ಯಾಮೆರಾ

  ಇನ್ನು ಈ ಕ್ಯಾಮೆರಾ ಛಾಯಾಗ್ರಾಹಕರಿಗೆ ಇನ್ನಷ್ಟು ಕ್ರಿಯಾತ್ಮಕವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತೆ. ಕಂಟಿನ್ಯೂ ಶೂಟಿಂಗ್‌ನಲ್ಲಿ ಆಪ್‌ ಟು 10 fps ವರೆಗೂ ಕಾರ್ಯನಿರ್ವಹಿಸುತ್ತೆ. ಜೊತೆಗೆ ಅಟೋಮ್ಯಾಟಿಕ್‌‌ ಶಟರ್‌ ಜೊತೆಗೆ ಹೊಂದಿಕೊಳ್ಳಲು ಆಪ್ಟಿಮೈಸ್ಡ್ ಎಎಫ್ ಕಾರ್ಯಕ್ಷಮತೆಯನ್ನು ಹೆಚ್ಚಿಸಲಾಗಿದೆ. ಅಲ್ಲದೆ ಇದರ ಬಾಳಿಕೆ ಮತ್ತು ಕಾರ್ಯಾಚರಣೆಯನ್ನು ಹೆಚ್ಚಿಸಲು ಅನುಕೂಲವಾಗುವಂತೆ ಇದನ್ನ ಡಿಸೈನ್‌ ಮಾಡಲಾಗಿದೆ.


 • ಆಲ್ಫಾ 9 II

  ಹೊಸ ಆಲ್ಫಾ 9 II ನಲ್ಲಿನ ಸುಧಾರಿತ ಫೋಕಸಿಂಗ್ ವ್ಯವಸ್ಥೆಯು 693 ಫೋಕಲ್-ಪ್ಲೇನ್ ಫೇಸ್‌ ಆಗಿದ್ದು ಎಎಫ್ ಪಾಯಿಂಟ್‌ ಒಳಗೊಂಡಿದೆ. ಅಲ್ಲದೆ ಇದು ಸುಮಾರು ಶೇಕಡಾ 93ರಷ್ಟು ಪೋಟೋ ಆರಿಯಾ ಒಳಗೊಂಡಿರುತ್ತದೆ, ಜೊತೆಗೆ 425 ಕಾಂಟ್ರಾಸ್ಟ್ ಎಎಫ್ ಪಾಯಿಂಟ್‌ಗಳನ್ನು ಒಳಗೊಂಡಿದೆ. ಹೊಸ ಕ್ಯಾಮೆರಾವನ್ನು ಮೆಕ್ಯಾನಿಕಲ್ ಶಟರ್‌ನೊಂದಿಗೆ 10 ಎಫ್‌ಪಿಎಸ್ ವರೆಗೆ ಶೂಟ್ ಮಾಡಲು ಸುಧಾರಿಸಲಾಗಿದ್ದು ಇದರ ವೇಗ ಸುಮಾರು 2x ವೆರಗೂ ಇದೆ.


 • ಸಂಕುಚಿತ

  ಅಲ್ಲದೆ ಹೆಚ್ಚುವರಿಯಾಗಿ, ಹೊಸ ಮಾದರಿಯು 361 ಜೆಪಿಇಜಿ ಚಿತ್ರಗಳು ಅಥವಾ 239 ಸಂಕುಚಿತ ರಾ ಚಿತ್ರಗಳಿಗಾಗಿ 20 ಎಫ್‌ಪಿಎಸ್‌ನಲ್ಲಿ ನಿರಂತರವಾಗಿ ಮತ್ತು ಸಂಪೂರ್ಣವಾಗಿ ಶೂಟ್ ಮಾಡಬಹುದು, ಯಾವುದೇ ವ್ಯೂಫೈಂಡರ್ ಬ್ಲ್ಯಾಕೌಟ್ ಇಲ್ಲದೆ, ಇವಿಎಫ್ (electronic view finder ) ಗೆ ಯಾವುದೇ ಅಡೆತಡೆಯಿಲ್ಲದೆ ಸಬ್ಜೆಕ್ಟ್‌ ಮತ್ತು ಆಕ್ಷನ್‌ ಸೆರೆಹಿಡಿಯಲು ಛಾಯಾಗ್ರಾಹಕರಿಗೆ ಅವಕಾಶ ನೀಡುತ್ತದೆ.


 • ಟಿಎಲ್‌ಎಸ್

  ಇನ್ನು ಆಲ್ಫಾ 9 II ಎಸ್‌ಎಸ್‌ಎಲ್ ಅಥವಾ ಟಿಎಲ್‌ಎಸ್ ಎನ್‌ಕ್ರಿಪ್ಶನ್ (ಎಫ್‌ಟಿಪಿಎಸ್) ಮೂಲಕ ಫೈಲ್ ವರ್ಗಾವಣೆಯನ್ನು ಬೆಂಬಲಿಸುತ್ತದೆ, ಇದು ಡೇಟಾ ಸುರಕ್ಷತೆ ಮತ್ತು ಪಿಸಿ ರಿಮೋಟ್ (ಟೆಥರ್) ಶೂಟಿಂಗ್ ಕಾರ್ಯಕ್ಷಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅಲ್ಲದೆ ಭಾರತದಲ್ಲಿ ಆಲ್ಫಾ 9 II ಲೆನ್ಸ್ ಕ್ಯಾಮೆರಾ ಬೆಲೆ 3,99,990 ರೂ ಆಗಿದೆ. ದೇಶದ ಪ್ರಮುಖ ಚಿಲ್ಲರೆ ಕೌಂಟರ್‌ಗಳಾದ ಸೋನಿ ಸೆಂಟರ್ ಮತ್ತು ದೇಶದ ಪ್ರಮುಖ ಎಲೆಕ್ಟ್ರಾನಿಕ್ ಮಳಿಗೆಗಳಲ್ಲಿ ಲಭ್ಯವಿರುತ್ತದೆ.
ಟೆಕ್‌ ಲೋಕದ ದೈತ್ಯ ಸೋನಿ ಕಂಪೆನಿ ಫೋನ್ ಮಾತ್ರವಲ್ಲ ಕ್ಯಾಮೆರಾ ತಯಾರಿಕೆಯಲ್ಲೂ ಹೆಸರುವಾಸಿಯಾಗಿದೆ. ಸದ್ಯ ತನ್ನ ಹೊಸ ಆವೃತ್ತಿಯಾದ ಆಲ್ಫಾ 9 II ಕ್ಯಾಮೆರಾವನ್ನು ದೇಶಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಭಾರತದಲ್ಲಿ ಇದರ ಬೆಲೆ ಭಾರತದಲ್ಲಿ 3,99,990 ರೂ ಆಗಿದೆ. ಇನ್ನು ಆಲ್ಫಾ 9II ಕ್ಯಾಮೆರಾ ಫುಲ್‌ ಪ್ರೇಮ್‌ ಲೆನ್ಸ್‌ ಅನ್ನು ಪರಸ್ಪರ ಬದಲಾಯಿಸಬಹುದಾದ ಅವಕಾಶವನ್ನು ನೀಡಿದೆ. ಜೊತೆಗೆ 'ರಿಮೋಟ್ ಕ್ಯಾಮೆರಾ ಟೂಲ್' ಡೆಸ್ಕ್‌ಟಾಪ್ ಬಳಸುವಾಗ ಲೈವ್ ವ್ಯೂ ಸ್ಕ್ರೀನ್ ವಿಳಂಬವನ್ನು ಕಡಿಮೆ ಮಾಡುವ ತಂತ್ರಾಂಶವನ್ನು ಹೊಂದಿದೆ.

 
ಹೆಲ್ತ್