Back
Home » Business
ಭಾರತದ ವಿದೇಶ ವಿನಿಮಯ ಸಂಗ್ರಹ ನ. 29ಕ್ಕೆ $ 451.08 ಬಿಲಿಯನ್
Good Returns | 8th Dec, 2019 06:25 PM

ಭಾರತದ ವಿದೇಶ ವಿನಿಮಯ ಸಂಗ್ರಹವು ನವೆಂಬರ್ 29ಕ್ಕೆ ಕೊನೆಯಾದ ವಾರಕ್ಕೆ $ 2.48 ಬಿಲಿಯನ್ ಏರಿಕೆ ಆಗಿದೆ ಎಂದು ಅಧಿಕೃತ ಅಂಕಿ- ಅಂಶಗಳು ತಿಳಿಸಿವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಸಾಪ್ತಾಹಿಕ ಮಾಹಿತಿ ಅನ್ವಯ, ಭಾರತದ ಒಟ್ಟಾರೆ ವಿದೇಶಿ ವಿನಿಮಯ ಸಂಗ್ರಹವು $ 451.08 ಬಿಲಿಯನ್ ತಲುಪಿದೆ. ನವೆಂಬರ್ 22ಕ್ಕೆ ಕೊನೆಯಾದ ವಾರಕ್ಕೆ ಈ ಮೊತ್ತ $ 448.59 ಬಿಲಿಯನ್ ಇತ್ತು.

ಭಾರತದ ವಿದೇಶ ವಿನಿಮಯದಲ್ಲಿ ಫಾರಿನ್ ಕರೆನ್ಸಿ ಅಸೆಟ್ಸ್ (FCA), ಚಿನ್ನದ ಸಂಗ್ರಹ, ಸ್ಪೆಷಲ್ ಡ್ರಾಯಿಂಗ್ ರೈಟ್ಸ್ (SDR) ಮತ್ತು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯಲ್ಲಿ (IMF) ಇರುವ ಭಾರತದ ಸಂಗ್ರಹವು ಒಳಗೊಂಡಿರುತ್ತದೆ.

ವಾರಗಳ ಲೆಕ್ಕದಲ್ಲಿ ಹೇಳಬೇಕು ಅಂದರೆ, ವಿದೇಶಿ ವಿನಿಮಯ ಸಂಗ್ರಹದಲ್ಲಿ ದೊಡ್ಡ ಪ್ರಮಾಣ FCAಯದು. ಅದು $ 2.64 ಬಿಲಿಯನ್ ಹೆಚ್ಚಾಗಿ, $ 419.36 ಬಿಲಿಯನ್ ನಷ್ಟಿದೆ. ಆದರೆ ಆರ್ ಬಿಐ ವರದಿ ಪ್ರಕಾರ, ದೇಶದಲ್ಲಿನ ಚಿನ್ನದ ಸಂಗ್ರಹ $ 148 ಮಿಲಿಯನ್ ಇಳಿಕೆಯಾಗಿ $ 26.64 ಬಿಲಿಯನ್ ನಷ್ಟಿದೆ.

ಅದೇ ರೀತಿ SDR ಕೂಡ $ 4 ಮಿಲಿಯನ್ ಇಳಿದು $ 1.43 ಬಿಲಿಯನ್ ಇದೆ. ಇನ್ನು ಐಎಂಎಫ್ ನಲ್ಲಿ ಇರುವ ಭಾರತದ ಸಂಗ್ರಹ ಕೂಡ $ 6 ಮಿಲಿಯನ್ ನಷ್ಟು ಇಳಿದು, $ 3.62 ಬಿಲಿಯನ್ ನಷ್ಟಿದೆ.

   
 
ಹೆಲ್ತ್