Back
Home » ಇತ್ತೀಚಿನ
ಇಂದು 'ವಿವೋ U20' ಫ್ಲ್ಯಾಶ್‌ ಸೇಲ್‌!..ಆರಂಭಿಕ ಬೆಲೆ 10,990ರೂ!
Gizbot | 9th Dec, 2019 10:49 AM
  • ವಿವೋ ಯು20

    ಹೌದು, ವಿವೋ ಯು20 ಸ್ಮಾರ್ಟ್‌ಫೋನ್ ಮತ್ತೊಂದು ಫ್ಲ್ಯಾಶ್‌ ಸೇಲ್ ಇಂದು ನಡೆಯಲಿದ್ದು, ಈ ಸ್ಮಾರ್ಟ್‌ಫೋನ್ 4GB RAM + 64GB ಮತ್ತು 6GB RAM + 64GB ಸ್ಟೋರೇಜ್‌ನ ಎರಡು ವೇರಯಂಟ್‌ ಆಯ್ಕೆಗಳನ್ನು ಒಳಗೊಂಡಿದೆ. ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ, 5,000mAh ಬ್ಯಾಟರಿ ಲೈಫ್ ಮತ್ತು ಸ್ನ್ಯಾಪ್‌ಡ್ರಾಗನ್ 675 ಪ್ರೊಸೆಸರ್‌ ಪ್ರಮುಖ ಹೈಲೈಟ್ಸ್‌ಗಳಾಗಿವೆ. ಹಾಗಾದರೇ ವಿವೋ ಯು20 ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.


  • ಡಿಸ್‌ಪ್ಲೇ ಮತ್ತು ಡಿಸೈನ್

    'ವಿವೋ U20' ಸ್ಮಾರ್ಟ್‌ಫೋನ್ 6.53 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ರೆಸಲ್ಯೂಶನನ್ನು ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಡಿಸ್‌ಪ್ಲೇ ಪಿಲ್ಸಲ್ ರೆಸಲ್ಯೂಶನ್‌ ಸಾಮರ್ಥ್ಯವು 1080 x 2340 ಆಗಿರಲಿದ್ದು, ಸ್ಕ್ರೀನ್‌ನಿಂದ ಬಾಹ್ಯ ಬಾಡಿಯ ಅಡುವಿನ ಅನುಪಾತ ಶೇ.90.3% ಆಗಿದೆ. ಡಿಸ್‌ಪ್ಲೇಯು ವಾಟರ್‌ಡ್ರಾಪ್‌ ನಾಚ್ ಮಾದರಿಯಲ್ಲಿರಲಿದ್ದು, ಡಿಸ್‌ಪ್ಲೇಯ ಪ್ರಖರತೆಯು ಗೇಮಿಂಗ್ ಹಾಗೂ ವಿಡಿಯೊ ವೀಕ್ಷಣೆಗೆ ಅನುಕೂಲಕರವಾಗಿದೆ.


  • ಪ್ರೊಸೆಸರ್‌ ಸಾಮರ್ಥ್ಯ

    'ವಿವೋ U20' ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 675 ಪ್ರೊಸೆಸರ್‌ ಅನ್ನು ಹೊಂದಿದ್ದು, ಅದಕ್ಕೆ ಪೂರಕವಾಗಿ ಫನ್‌ಟಚ್ OS 9 ಬೆಂಬಲಿತ ಅಂಡ್ರಾಯ್ಡ್‌ 9 ಪೈ ಓಎಸ್‌ ಅನ್ನು ಪಡೆದಿದೆ. ಇದರೊಂದಿಗೆ 4GB RAM ಮತ್ತು 64GB ಹಾಗೂ 6GB RAM ಮತ್ತು 64GB ವೇರಿಯಂಟ್‌ ಆಯ್ಕೆಗಳನ್ನು ಹೊಂದಿದೆ. ಜೊತೆಗೆ ಎಸ್‌ಡಿ ಕಾರ್ಡ್‌ ಮೂಲಕ 256GB ಮೆಮೊರಿ ವಿಸ್ತರಿಸುವ ಅವಕಾಶ ನೀಡಲಾಗಿದೆ. ಹಾಗೆಯೇ ಆಂಡ್ರಾಯ್ಡ್‌ 10 ಓಎಸ್‌ ಅಪ್‌ಡೇಟ್ ಆಯ್ಕೆ ಇದೆ.


  • ಸ್ಪೆಷಲ್‌ ಕ್ಯಾಮೆರಾ

    ವಿವೋ U20' ಸ್ಮಾರ್ಟ್‌ಫೋನ್ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಮುಖ್ಯ ಕ್ಯಾಮೆರಾವು 16ಎಂಪಿ ಸೆನ್ಸಾರ್‌ ಹಾಗೂ ನೈಟ್‌ ಮೋಡ್ ಆಯ್ಕೆಯನ್ನು ಹೊಂದಿದೆ. ಇನ್ನು ಸೆಕೆಂಡ್ ಕ್ಯಾಮೆರಾವು 8ಎಂಪಿ ಸೆನ್ಸಾರ್‌ನ ವೈಡ್‌ ಆಂಗಲ್ ಲೆನ್ಸ್‌ನಲ್ಲಿದೆ. ತೃತೀಯ ಕ್ಯಾಮೆರಾವು 2ಎಂಪಿ ಮೈಕ್ರೋ ಸೆನ್ಸಾರ್‌ ಹೊಂದಿರಲಿದೆ. ಇದರೊಂದಿಗೆ ಸೆಲ್ಫಿ ಕ್ಯಾಮೆರಾವು 16ಎಂಪಿ ಸೆನ್ಸಾರ್‌ ಪಡೆದುಕೊಂಡಿದೆ ಜತೆಗೆ ಅಗತ್ಯ ಎಡಿಟಿಂಗ್ ಫೀಚರ್ಸ್‌ಗಳು ಇವೆ.


  • ಬ್ಯಾಟರಿ ಪವರ್

    ವಿವೋ U20' ಸ್ಮಾರ್ಟ್‌ಫೋನಿನಲ್ಲಿ 5,000mAh ಬ್ಯಾಟರಿ ಸಾಮರ್ಥ್ಯವನ್ನು ನೀಡಲಾಗಿದೆ ಹಾಗೆಯೇ ಇದಕ್ಕೆ ಬೆಂಬಲವಾಗಿ 18W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಲಾಗಿದೆ. ಬ್ಯಾಟರಿಯನ್ನು ಒಮ್ಮೆ ಪೂರ್ಣ ಚಾರ್ಜ್ ಮಾಡಿದರೇ 273 ಗಂಟೆಗಳ ಸ್ಟ್ಯಾಂಡ್‌ಬೈ ಬ್ಯಾಕ್‌ಅಪ್ ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಹಾಗೇ 11 ಗಂಟೆಗಳ ಫೇಸ್‌ಬುಕ್ ಮತ್ತು ಯೂಟ್ಯೂಬ್ ಬಳಕೆ ಬ್ಯಾಕ್‌ಅಪ್‌ ನೀಡಲಿದೆ.


  • ಫ್ಲ್ಯಾಶ್‌ ಸೇಲ್

    ವಿವೋ U20' ಸ್ಮಾರ್ಟ್‌ಫೋನ್ ಆರಂಭಿಕ 4GB RAM ಮತ್ತು 64GB ವೇರಿಯಂಟ್ ಬೆಲೆಯು 10,990ರೂ.ಗಳಾಗಿದೆ. ಅದೇ ರೀತಿ 6GB RAM ಮತ್ತು 64GB ಸ್ಟೋರೇಜ್ ವೇರಿಯಂಟ್‌ ಬೆಲೆಯು 11,990ರೂ.ಗಳಾಗಿದೆ. ಇನ್ನು ಈ ಫೋನ್ ರೇಸಿಂಗ್ ಬ್ಲ್ಯಾಕ್‌ ಮತ್ತು ಬ್ಲೆಜ್‌ ಬ್ಲೂ ಬಣ್ಣಗಳ ಆಯ್ಕೆಗಳಲ್ಲಿ ಸಿಗಲಿದೆ. ಅಮೆಜಾನ್ ಮತ್ತು ವಿವೋ ತಾಣಗಳಲ್ಲಿ ಇಂದು(ಡಿ.9) ಫ್ಲ್ಯಾಶ್‌ ಸೇಲ್‌ ಇದ್ದು, ಗ್ರಾಹಕರ ಖರೀದಿಗೆ ಲಭ್ಯ ಇದೆ.




ಇತ್ತೀಚಿಗೆ ದೇಶಿಯ ಮೊಬೈಲ್ ಮಾರುಕಟ್ಟೆಯಲ್ಲಿ ಬಜೆಟ್‌ ಬೆಲೆಯಲ್ಲಿ ಗ್ರಾಹಕರನ್ನು ಆಕರ್ಷಿಸಿರುವ ವಿವೋ U20 ಸ್ಮಾರ್ಟ್‌ಫೋನಿನ ಫ್ಲ್ಯಾಶ್‌ ಸೇಲ್ ಇಂದು (ಡಿ.9) ನಡೆಯಲಿದೆ. ಜನಪ್ರಿಯ ಅಮೆಜಾನ್ ಇ-ಕಾಮರ್ಸ್‌ ಮತ್ತು ವಿವೋದ ಅಧಿಕೃತ ತಾಣಗಳಲ್ಲಿ ಮಧ್ಯಾಹ್ನ 12ಗಂಟೆಗೆ ಸೇಲ್ ಆರಂಭವಾಗಲಿದೆ. ಅಂದಹಾಗೇ ಈ ಸ್ಮಾರ್ಟ್‌ಫೋನಿನ ಆರಂಭಿಕ ಬೆಲೆಯು ಕೇವಲ 10,990ರೂ.ಗಳು ಆಗಿದೆ.

   
 
ಹೆಲ್ತ್