Back
Home » Business
ದೀದಿ ಸರ್ಕಾರದಿಂದ 50 ರುಪಾಯಿಗೆ 1 ಕೆಜಿ ಈರುಳ್ಳಿ
Good Returns | 9th Dec, 2019 10:57 AM

ದೇಶಾದ್ಯಂತ ಈರುಳ್ಳಿ ಬೆಲೆ ಗಗನಕ್ಕೇರಿದೆ. ಏರುಮಖದಲ್ಲೇ ಸಾಗಿರುವ ಈರುಳ್ಳಿ ಬೆಲೆ ಏರಿಕೆ ಜನಸಾಮಾನ್ಯರಲ್ಲಿ ಕಣ್ಣೀರು ತರಿಸಿದೆ. ದೇಶದ ಹಲವು ನಗರಗಳಲ್ಲಿ ಚಿಲ್ಲರೆ ಮಾರುಕಟ್ಟೆಗಳಲ್ಲಿ ಈರುಳ್ಳಿ ಬೆಲೆ ಕೆಜಿಗೆ 200 ರುಪಾಯಿ ತಲುಪಿದೆ. ಆದರೆ ದೀದಿ ಸರ್ಕಾರವು ಕೆಜಿಗೆ 50 ರುಪಾಯಿ ದರದಲ್ಲಿ ಈರುಳ್ಳಿ ನೀಡುತ್ತಿದೆ.

ದೇಶದ ಇತರೆ ನಗರಗಳಂತೆಯೇ ಕೊಲ್ಕತ್ತಾದಲ್ಲಿ ಕೆಜಿ ಈರುಳ್ಳಿ ಬೆಲೆ 150 ರುಪಾಯಿ ದಾಟಿದೆ. ಗ್ರಾಹಕರು 5 ಕೆಜಿ ಈರುಳ್ಳಿ ತೆಗೆದುಕೊಳ್ಳುವ ಪ್ರಮಾಣದಲ್ಲಿ 500 ಗ್ರಾಂ ಖರೀದಿಸುತ್ತಿದ್ದಾರೆ. ಬೆಲೆ ಏರಿಕೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಸರ್ಕಾರ ಪಡಿತರ ಅಂಗಡಿಗಳ ಮೂಲಕ ಸಬ್ಸಿಡಿ ದರದಲ್ಲಿ ಸೋಮವಾರದಿಂದ ಪ್ರತಿ ಕೆಜಿ ಈರುಳ್ಳಿಗೆ 50 ರುಪಾಯಿಯಂತೆ ಮಾರಾಟ ಮಾಡುವುದಾಗಿ ಘೋಷಿಸಿದೆ.

ಪಶ್ಚಿಮ ಬಂಗಾಳದ ಒಟ್ಟು 935 ಪಡಿತರ ಮಳಿಗೆಗಳಲ್ಲಿ ಈರುಳ್ಳಿ ಸಬ್ಸಿಡಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಪಡಿತರ ಕಾರ್ಡ್ ನೀಡಿದರೆ ಒಂದು ಕುಟುಂಬಕ್ಕೆ 1 ಕೆಜಿ ಈರುಳ್ಳಿ ಸಿಗಲಿದೆ.

ಈರುಳ್ಳಿ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ಹೊರೆ ತಗ್ಗಿಸಲು ಪಶ್ಚಿಮ ಬಂಗಾಳ ಸರ್ಕಾರ 1 ಕೆಜಿ ಈರುಳ್ಳಿಗೆ 50 ರುಪಾಯಿ ದರದಲ್ಲಿ ಮಾರಾಟ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಆಗಿದೆ. ಆದರೆ 1 ಕುಟುಂಬಕ್ಕೆ 1 ಕೆಜಿ ಈರುಳ್ಳಿ ಸಾಕಾಗುತ್ತಾ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

   
 
ಹೆಲ್ತ್