Back
Home » Business
ಜಿಎಸ್‌ಟಿ ದರ ಹೆಚ್ಚಳಕ್ಕೆ ಕೇಂದ್ರದ ಚಿಂತನೆ: 250ಕ್ಕೂ ಹೆಚ್ಚು ವಸ್ತುಗಳ ದರ ಏರಿಕೆ?
Good Returns | 10th Dec, 2019 12:38 PM
 • 1 ಲಕ್ಷ ಕೋಟಿ ಆದಾಯ ಸಂಗ್ರಹ ಗುರಿ

  ಕೆಲವು ದಿನಗಳ ಹಿಂದೆ ಕೇಂದ್ರ ಸರ್ಕಾರವು ಆದಾಯ ಸಂಗ್ರಹಣೆಗೆ ಸಂಬಂಧಿಸಿದಂತೆ ಹಲವಾರು ಕಾಳಜಿಗಳಿದ್ದು, ನಷ್ಟವನ್ನು ಸರಿದೂಗಿಸಲು ಸಾಧ್ಯವಿಲ್ಲ ಎಂದು ತಿಳಿಸಿತ್ತು. ಹೀಗಾಗಿ ಎರಡೂವರೆ ವರ್ಷಗಳ ಹಿಂದೆ ಜಾರಿಗೆ ಬಂದ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ)ಯ ದರಗಳನ್ನು ಬದಲಿಸಲು ಮತ್ತು ಹೊಸ ವಸ್ತುಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಇದರಿಂದ ಕೇಂದ್ರಕ್ಕೆ ಹೆಚ್ಚುವರಿ 1 ಲಕ್ಷ ಕೋಟಿ ರುಪಾಯಿ ಆದಾಯ ಬರಲಿದೆ.


 • 5 ಪರ್ಸೆಂಟ್ ಜಿಎಸ್‌ಟಿ ದರ 9-10 ಪರ್ಸೆಂಟ್ ಹೆಚ್ಚಳ

  ಸದ್ಯ ಈಗಿರುವ ಜಿಎಸ್‌ಟಿ 5% ಸ್ಲ್ಯಾಬ್ ಅನ್ನು 9 ರಿಂದ 10 ಪರ್ಸೆಂಟ್ ಹೆಚ್ಚಳ ಮಾಡಲು ಹಾಗೆಯೇ 12 ಪರ್ಸೆಂಟ್ ಸ್ಲ್ಯಾಬ್ ರದ್ದುಗೊಳಿಸಿ, ಅದರ ವ್ಯಾಪ್ತಿಯಲ್ಲಿರುವ 243 ವಸ್ತುಗಳನ್ನು 18 ಪರ್ಸೆಂಟ್ ಸ್ಲ್ಯಾಬ್‌ಗೆ ತರಲು ಚಿಂತನೆ ನಡೆಸಿದೆ. ಇದರಿಂದ ಹೆಚ್ಚುವರಿ ಸಂಪನ್ಮೂಲ ಲಭ್ಯವಾಗಲಿದೆ, ಆದರೆ ಗ್ರಾಹಕರು ಮಾತ್ರ ಹೆಚ್ಚುವರಿ ಹೊರೆ ಹೊರಬೇಕಾಗುತ್ತದೆ.

  ಹೊಸ ಜಿಎಸ್‌ಟಿ ದರ ಪ್ರಕಟಿಸುವ ಕುರಿತು ಬದಲಾವಣೆಗಳನ್ನು ತರಲು ಮುಂದಿನ ವಾರ ನಡೆಯುವ ಸಭೆಯಲ್ಲಿ ಕೇಂದ್ರ ಸರ್ಕಾರ ಚರ್ಚೆ ನಡೆಸಲಿದೆ. ಜೊತೆಗೆ ನಾಲ್ಕು ಹಂತದ ಜಿಎಸ್‌ಟಿಯನ್ನು ಮೂರೇ ಹಂತಕ್ಕೆ ತೆರಿಗೆಯಾಗಿ ಬದಲಾಗಲಿದೆ. ಮುಂದಿನ ದಿನಗಳಲ್ಲಿ ಅದನ್ನು 2 ಹಂತಕ್ಕೆ ಬದಲಾಯಿಸುವ ಸಾಧ್ಯತೆಗಳು ಇದೆ.

  ಸರ್ಕಾರದ ಹೊಸ ಜಿಎಸ್‌ಟಿ ದರ ಪ್ರಕಟಗೊಂಡರೆ AC ರೈಲು ಪ್ರಯಾಣ, ವಿಮಾನಯಾನ, ರೆಸ್ಟೋರೆಂಟ್ ದರಗಳು, ಮೊಬೈಲ್ ಫೋನ್, ಬ್ರ್ಯಾಂಡೆಡ್ ಸೂಟ್‌ಗಳ ದರಗಳು ಹೆಚ್ಚಾಗುವ ಸಾಧ್ಯತೆ ಇದೆ.


 • ದುಬಾರಿಯಾಗಲಿರುವ ವಸ್ತುಗಳು ಮತ್ತು ಸೇವೆಗಳು (ಜಿಎಸ್‌ಟಿ 5% )

  ಎಕಾನಮಿ ದರ್ಜೆಯ ವಿಮಾನ ಪ್ರಯಾಣ, AC ರೈಲು ಪ್ರಯಾಣ, ಆಲಿವ್ ಆಯಿಲ್, ಕೋಕೊವಾ ಪೇಸ್ಟ್, ಡ್ರೈ ಫ್ರೂಟ್ಸ್, ಬ್ರಾಂಡೆಡ್ ಆಹಾರ ಧಾನ್ಯಗಳು, ರೇಷ್ಮೆ, ಲೆನಿನ್, ಪುರುಷರ ಸೂಟ್‌ಗೆ ಬಳಸಲಾಗುವ ಬಟ್ಟೆ, ಪ್ರವಾಸ ಸೇವೆ, ಕೇಟರಿಂಗ್, ರೆಸ್ಟೋರೆಂಟ್‌ನಲ್ಲಿ ಮಾಡುವ ಊಟ, ದೋಣಿಗಳ ಪ್ರವಾಸ ಇತ್ಯಾದಿ.

  ಈ ಮೇಲಿನ ಎಲ್ಲಾ ಸೇವೆಗಳಿಗೆ ಸದ್ಯ ಜಿಎಸ್‌ಟಿ 5% ಇದೆ. ಆದರೆ ಇದನ್ನು 9 ರಿಂದ 10 ಪರ್ಸೆಂಟ್ ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.


 • 12 ಪರ್ಸೆಂಟ್ ಸ್ಲ್ಯಾಬ್ ಆಗಲಿದೆ 18 ಪರ್ಸೆಂಟ್

  ಭಾರತದ ವಿಶ್ವದ ಅನೇಕ ಮೊಬೈಲ್ ಕಂಪನಿಗಳ ಬೃಹತ್ ಮಾರುಕಟ್ಟೆಯಾಗಿದೆ. ಮೊಬೈಲ್ ಮೇಲೆ ಕೇಂದ್ರ ಸರ್ಕಾರ ಸದ್ಯ 12 ಪರ್ಸೆಂಟ್ ಜಿಎಸ್‌ಟಿ ವಿಧಿಸುತ್ತಿದೆ. ಇದನ್ನು 18 ಪರ್ಸೆಂಟ್‌ಗೆ ವಿಸ್ತರಿಸಲು ಯೋಜಿಸಿದೆ. ಮೊಬೈಲ್ ಜೊತೆಗೆ ಬಿಸಿನೆಸ್ ಕ್ಲಾಸ್ ವಿಮಾನ ಪ್ರಯಾಣ, ಲಾಟರಿ, ದುಬಾರಿ ಪೇಂಟಿಂಗ್ ಹಾಗೂ 5 ರಿಂದ 7500 ರುಪಾಯಿ ಬಾಡಿಗೆಯ ಹೋಟೆಲ್‌ ಲಾಡ್ಜಿಂಗ್

  ಇದುವರೆಗೆ ಜಿಎಸ್ ಟಿ ವ್ಯಾಪ್ತಿಗೆ ಬರದ ಅನೇಕ ಸರಕು ಮತ್ತು ಸೇವೆಯನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ಕೇಂದ್ರ ಯೋಜಿಸಿದೆ. ದುಬಾರಿ ಆಸ್ಪತ್ರೆಗಳಲ್ಲಿ ಪಡೆಯುವ ಚಿಕಿತ್ಸೆ, 1000 ಒಳಗಿನ ಬಾಡಿಗೆಯ ಹೋಟೆಲ್ ಲಾಡ್ಜಿಂಗ್, ಕಚ್ಚಾ ರೇಷ್ಮೆ, ಬ್ರ್ಯಾಂಡ್ ಅಲ್ಲದ ಪನ್ನೀರ್ ಮುಂತಾದ ಅನೇಕ ಸರಕು ಮತ್ತು ಸೇವೆಗಳು ಜಿಎಸ್‌ಟಿ ವ್ಯಾಪ್ತಿಗೆ ಬರುವ ಸಾಧ್ಯತೆ ಇದೆ.
ತೆರಿಗೆ ಸಂಗ್ರಹದ ಮೂಲಕ ಆದಾಯವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಆರ್ಥಿಕ ಹಿಂಜರಿತದಿಂದ ತೆರಿಗೆ ದರ ಕುಸಿದಿರುವುದರಿಂದ ಹಾಗೂ ರಾಜ್ಯಗಳಿಗೆ ಕೇಂದ್ರ ಸರ್ಕಾರ ಪಾವತಿಸಬೇಕಾಗಿರುವ ತೆರಿಗೆ ಪಾಲು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊಸ ಜಿಎಸ್‌ಟಿ ದರ ಪರಿಚಯಿಸಲು ರಾಜ್ಯಗಳನ್ನು ಕೇಳಿದೆ.

ಜಿಎಸ್‌ಟಿ ಮಂಡಳಿ ಸಭೆಗಳು ಸಾಮಾನ್ಯವಾಗಿ ಉತ್ಪನ್ನಗಳಿಗೆ ದರವನ್ನು ಕಡಿತಗೊಳಿಸುವತ್ತ ಗಮನ ಹರಿಸುತ್ತದೆ. ಆದರೆ ಪರೋಕ್ಷ ತೆರಿಗೆ ವ್ಯವಸ್ಥೆಯಡಿ ಆದಾಯ ಸಂಗ್ರಹವು ತೀವ್ರವಾಗಿ ಕುಸಿತವಾಗಿರುವುದರಿಂದ ಜಿಎಸ್‌ಟಿ ದರ ಏರಿಕೆಗೆ ಯೋಜನೆ ರೂಪಿಸುತ್ತಿದೆ.

   
 
ಹೆಲ್ತ್