Back
Home » Business
Mi ನೋಟ್ 10 ಭಾರತದಲ್ಲಿ 2020ರ ಜನವರಿಯಲ್ಲಿ ಬಿಡುಗಡೆ
Good Returns | 9th Dec, 2019 06:12 PM

ಚೀನಾದ ಮೊಬೈಲ್ ತಯಾರಿಕೆ ಕಂಪೆನಿ ಶಿಯೋಮಿಯು ಯುರೋಪ್ ನಲ್ಲಿ Mi ನೋಟ್ 10 ಅಂತಲೂ ಚೀನಾದ ದೇಶೀ ಮಾರುಕಟ್ಟೆಯಲ್ಲಿ Mi CC9 Pro ಅಂತಲೂ ಮೊಬೈಲ್ ಫೋನ್ ಬಿಡುಗಡೆ ಮಾಡಿತ್ತು. ಅದರ ವೈಶಿಷ್ಟ್ಯ ಇರುವುದು ಕ್ಯಾಮೆರಾದಲ್ಲಿ. ಏಕೆಂದರೆ 108 ಮೆಗಾಪಿಕ್ಸೆಲ್ ಕ್ಯಾಮೆರಾದ ಫೋನ್ ಇದು.

ಇದೀಗ 2020ರ ಜನವರಿಯಲ್ಲಿ ಆ ಸ್ಮಾರ್ಟ್ ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ ಶಿಯೋಮಿ ಎಂದು ಗಿಜ್ಮೋಚೀನಾ ಸೋಮವಾರ ವರದಿ ಮಾಡಿದೆ. ಕಂಪೆನಿಯಿಂದ ಜಾಗತಿಕ ಮಟ್ಟದಲ್ಲಿ ಫೋಟೋಗ್ರಫಿ ಸ್ಪರ್ಧೆ ನಡೆಸಲಾಗುತ್ತಿದೆ. ನಿಯಮ- ನಿಂಬಂಧನೆ ಪ್ರಕಾರ ವಿಜಯಿಯಾದವರಿಗೆ 46,832 ರುಪಾಯಿ ಮೌಲ್ಯದ Mi ನೋಟ್ 10 ಮೊಬೈಲ್ ಫೋನ್ ದೊರೆಯಲಿದೆ.

ಅಂದಹಾಗೆ, ಈ ಮೊಬೈಲ್ ಫೋನ್ ನ ಬೆಲೆ ಭಾರತದಲ್ಲೂ ಇಷ್ಟೇ ಇರುತ್ತದೆಯಾ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ಯುರೋಪಿಯನ್ ಮಾಡೆಲ್ ಫೋನ್ ನ ಸದ್ಯದ ಬೆಲೆ ಆಧಾರದಲ್ಲಿ ಹೀಗೆ ಎನ್ನಲಾಗುತ್ತಿದೆ. ಇನ್ನು ಮೊಬೈಲ್ ಫೋನ್ ಬಗ್ಗೆ ಹೇಳಬೇಕೆಂದರೆ, 6.47 ಇಂಚಿನ FHD AMOLED ಡಿಸ್ ಪ್ಲೇ ಜತೆಗೆ ಫಿಂಗರ್ ಪ್ರಿಂಟ್ ರೀಡರ್ ಅದರ ಕೆಳಗಿದೆ. ಮತ್ತು ವಾಟರ್ ಡ್ರಾಪ್ ನಾಚ್ ಕೂಡ 32 MP ಸೆಲ್ಫಿ ಕ್ಯಾಮೆರಾದ ಜತೆಗಿದೆ.

ಪ್ರೈಮರಿ 108 MPಯ ಕ್ಯಾಮೆರಾ ಜತೆಗೆ 20 MP ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾ, 12 MP ಟೆಲಿಫೋಟೋ ಸೆನ್ಸರ್, ಸೆಕೆಂಡರಿ 5 MP ಟೆಲಿಫೋಟೋ ಸೆನ್ಸರ್ ಮತ್ತು 2 MP ಮ್ಯಾಕ್ರೊ ಕ್ಯಾಮೆರಾ ಇರುತ್ತದೆ.

ಮೊಬೈಲ್ ಫೋನ್ ನಲ್ಲಿ ಕ್ವಾಲ್ ಕಾಮ್ ಸ್ನ್ಯಾಪ್ ಡ್ರ್ಯಾಗನ್ 730G ಚಿಪ್ ಸೆಟ್ ಜತೆಗೆ 8GB RAM ಮತ್ತು 256 GB ಆಂತರಿಕ ಸಂಗ್ರಹ ಸಾಮರ್ಥ್ಯ ಇದೆ. 5260 mAh ಬ್ಯಾಟರಿ ಇದ್ದು, 30W ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಸಪೋರ್ಟ್ ಮಾಡುತ್ತದೆ.

   
 
ಹೆಲ್ತ್