Back
Home » ಆರೋಗ್ಯ
ನೀವು ಹೀಗೆ ಮಾಡಿದರೆ ಆಗಾಗ ಕಾಯಿಲೆ ಬೀಳುವುದು ಪಕ್ಕಾ!
Boldsky | 10th Dec, 2019 04:10 PM
 • 1. ನೀವು ಕಲುಷಿತ ಸ್ಥಳದಲ್ಲಿ ವಾಸಿಸುತ್ತಿರಬಹುದು

  ನಿಮ್ಮ ಸುತ್ತಲಿರುವ ಗಾಳಿ ಕೇವಲ ನಿಮ್ಮ ಶ್ವಾಸಕೋಶಕ್ಕೆ ಮಾತ್ರವೇ ಹಾನಿ ಮಾಡುವುದಿಲ್ಲ ಬದಲಾಗಿ ನಿಮ್ಮ ರೋಗನಿರೋಧಕ ಶಕ್ತಿಯ ಮೇಲೂ ಕೂಡ ಪರಿಣಾಮವನ್ನು ಉಂಟು ಮಾಡುತ್ತದೆ. ಈಗಾಗಲೇ ನಡೆದಿರುವ ಹಲವು ಅಧ್ಯಯನಗಳು ತಿಳಿಸುವ ಪ್ರಕಾರ ಕಲುಷಿತಗೊಂಡಿರುವ ಗಾಳಿಯು ನಿಮ್ಮ ಟಿ-ಜೀವಕೋಶಗಳನ್ನು ನಿಗ್ರಹಿಸುತ್ತದೆ. ಈ ಜೀವಕೋಶಗಳು ನಿಮ್ಮ ರೋಗನಿರೋಧಕ ಶಕ್ತಿಯು ಉತ್ತಮವಾಗಿರುವಂತೆ ನೋಡಿಕೊಳ್ಳುವುದಕ್ಕೆ ಪ್ರಮುಖವಾಗಿರುತ್ತದೆ.

  ನೀವೇನು ಮಾಡಬಹುದು?

  ಗಾಳಿಯ ಗುಣಮಟ್ಟವನ್ನು ಹೊರಗಡೆ ನೀವು ಕಂಟ್ರೋಲ್ ಮಾಡುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಗಾಳಿ ಶುದ್ಧೀಕರಣ ಯಂತ್ರಕ್ಕೆ ಹೂಡಿಕೆ ಮಾಡಬಹುದು ಮತ್ತು ಫೇಸ್ ಮಾಸ್ಕ್ ಗಳನ್ನು ಖರೀದಿಸಬಹುದು. ಇವು ನಿಮಗೆ ಒಳಾಂಗಣ ಮತ್ತು ಹೊರಾಂಗಣದಲ್ಲಿ ಉತ್ತಮ ರೀತಿಯಲ್ಲಿ ಉಸಿರಾಟ ಪ್ರಕ್ರಿಯೆ ಮಾಡುವುದಕ್ಕೆ ಅನುಕೂಲ ಮಾಡುತ್ತದೆ.


 • 2. ಅತೀ ಹೆಚ್ಚು ಪ್ರೊಟೀನ್‌ಗಳನ್ನು ನೀವು ಸೇವಿಸುತ್ತಿರಬಹುದು

  ಹೆಚ್ಚಾಗಿ ಶಾಖಾಹಾರಿ ಅಥವಾ ಪ್ರಾಣಿಗಳಿಂದ ಲಭ್ಯವಾಗುವ ಆಹಾರಗಳನ್ನು ಸೇವಿಸುವುದರಿಂದ ನಿಮ್ಮ ದೇಹವು 1ಜಿಎಫ್1 ಹಾರ್ಮೋನನ್ನು ಅಧಿಕವಾಗಿ ಉತ್ಪಾದಿಸುತ್ತದೆ. ಈ ಹಾರ್ಮೋನು ಬೇಗನೆ ವಯಸ್ಸಾಗುವಂತೆ ಮಾಡುವ ಗುಣಲಕ್ಷಣಗಳನ್ನು ಹೊಂದಿದೆ ಮತ್ತು ನಿಮ್ಮ ರೋಗನಿರೋಧಕ ಶಕ್ತಿಯ ಮೇಲೂ ಕೂಡ ಪರಿಣಾಮ ಬೀರುವ ತಾಕತ್ತನ್ನು ಹೊಂದಿರುತ್ತದೆ.

  ನೀವೇನು ಮಾಡಬಹುದು?

  ನೀವು ದಿನದಲ್ಲಿ ಸೇವಿಸುವ ಕ್ಯಾಲೋರಿ ಪ್ರಮಾಣದಲ್ಲಿ 10 ಶೇಕಡಾಕ್ಕಿಂತ ಅಧಿಕವು ಪ್ರಾಣಿ ಮೂಲದಿಂದ ಅಂದರೆ ಮಾಂಸ ಅಥವಾ ಡೈರಿ ಪ್ರೊಡಕ್ಟ್ ಗಳಿಂದ ಬರಬಾರದು ಎಂಬುದು ನಿಮಗೆ ಚೆನ್ನಾಗಿ ನೆನಪಿರಲಿ. ಒಂದು ವೇಳೆ ಇದು ನಿಮಗೆ ಸಹಾಯ ಮಾಡದೇ ಇದ್ದಲ್ಲಿ 10 ಶೇಕಡಾವನ್ನು 5 ಶೇಕಡಾಕ್ಕೆ ಇಳಿಕೆ ಮಾಡಿಕೊಂಡರೂ ತೊಂದರೆಯಿಲ್ಲ.


 • 3. ದಿನದ ಬಹುಪಾಲು ಸಮಯವನ್ನು ನೀವು ಏಕಾಂಗಿಯಾಗಿ ಕಳೆಯುತ್ತಿದ್ದೀರಾ

  ಒಂಟಿಯಾಗಿರುವ ವ್ಯಕ್ತಿಗಳು ಒತ್ತಡವನ್ನು ಎದುರಿಸುತ್ತಾರೆ. ದಿನದ ಹೆಚ್ಚು ಸಮಯವನ್ನು ಏಕಾಂಗಿಯಾಗಿ ಕಳೆಯುವ ಇವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಹಾಗಾಗಿ ಆಗಾಗ ರೋಗದಿಂದ ಬಳಲುತ್ತಾರೆ.

  ನೀವೇನು ಮಾಡಬಹುದು?

  ನಿಮ್ಮ ಸ್ನೇಹಿತರ ಜೊತೆಗೆ, ಪ್ರೀತಿಪಾತ್ರರ ಜೊತೆಗೆ, ಅಕ್ಕಪಕ್ಕದವರ ಜೊತೆಗೆ ಕೆಲವು ಸಮಯವನ್ನು ಕಳೆಯಿರಿ. ಯಾವ ವ್ಯಕ್ತಿಗಳು ತಮ್ಮ ಸಂಬಂಧದಲ್ಲಿ ಹೆಚ್ಚು ಖುಷಿಯಾಗಿರುತ್ತಾರೋ ಅವರು ಒಂಟಿಯಾಗಿ ಬದುಕುವ ವ್ಯಕ್ತಿಗಳಿಗೆ ಹೋಲಿಸಿದರೆ ಕಡಿಮೆ ಸೋಂಕಿಗೆ ಒಳಗಾಗುತ್ತಾರೆ ಎಂಬುದು ಅಧ್ಯಯನದಿಂದಲೇ ತಿಳಿದುಬಂದಿದೆ.


 • 4. ದಿನಪೂರ್ತಿ ಕುಳಿತಿರುವುದು

  ಒಂದು ವೇಳೆ ನಿಮ್ಮದು 9 ಘಂಟೆಯಿಂದ 5 ಘಂಟೆವರೆಗಿನ ಕೆಲಸವಾಗಿದ್ದು ಹೆಚ್ಚು ಸಮಯ ಖುರ್ಚಿಯಲ್ಲೇ ಕುಳಿತಿರುತ್ತೀರಿ ಎಂದಾದರೆ ನಿಮ್ಮ ಚಯಾಪಚಯ ಕ್ರಿಯೆಯು ನಿಧಾನಗೊಳ್ಳುತ್ತದೆ. ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪೋಷಕಾಂಶಗಳನ್ನು ಸಾಮಾನ್ಯಕ್ಕಿಂತ ನಿಧಾನಗತಿಯಲ್ಲಿ ಹೀರಿಕೊಳ್ಳುವುದಕ್ಕೆ ಕಾರಣವಾಗುವ ಸಾಧ್ಯತೆ ಇದೆ.

  ನೀವೇನು ಮಾಡಬಹುದು?

  ಪ್ರತಿ ಅರ್ಧ ಘಂಟೆಗೆ ಒಮ್ಮೆ 5 ನಿಮಿಷ ಬ್ರೇಕ್ ತೆಗೆದುಕೊಳ್ಳುವುದನ್ನು ಮರೆಯಬೇಡಿ. ಹೀಗೆ ಸ್ವಲ್ಪ ಚಲನೆಯಲ್ಲಿರುವುದರಿಂದ ನಿಮ್ಮ ದೇಹದ ಮಾಂಸಖಂಡಗಳು ಆಕ್ಟೀವ್ ಆಗಿ ಇರುತ್ತದೆ ಮತ್ತು ನಿಮ್ಮ ಚಯಾಪಚಯ ಕ್ರಿಯೆಯು ಸರಾಗವಾಗಿ ಇರುತ್ತದೆ.

  ಬಾಟಲಿಯನ್ನು ಪಕ್ಕದಲ್ಲಿ ಇಟ್ಟುಕೊಳ್ಳುವುದಕ್ಕಿಂತ ಲೋಟ ಇಟ್ಟುಕೊಳ್ಳುವುದರಿಂದ ನೀವು ಪದೇ ಪದೇ ಓಡಾಡುವಂತಾಗುತ್ತದೆ. ಹಾಗಾಗಿ ನಿಮ್ಮ ಚಯಾಪಚಯ ಕ್ರಿಯೆ ಉತ್ತಮಗೊಳ್ಳುತ್ತದೆ. ಅಂದರೆ ನಿಮ್ಮ ಚಲನೆ ಅಧಿಕವಾಗುವುದರಿಂದಾಗಿ ನಿಮ್ಮ ರೋಗನಿರೋಧಕ ಶಕ್ತಿಯೂ ಕೂಡ ಅಭಿವೃದ್ಧಿ ಹೊಂದುತ್ತದೆ. ಒಟ್ಟಾರೆ ಕೆಲವು ಸಿಂಪಲ್ ಕಾರಣಗಳು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ನಿಮಗೆ ನೆನಪಿರಲಿ.
ಆರೋಗ್ಯವೇ ಭಾಗ್ಯ, ಯಾವಾಗಲೂ ಆರೋಗ್ಯವಾಗಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ಆದರೂ ಕೂಡ ಕೆಲವರಿಗೆ ಅನಾರೋಗ್ಯ ಆಗಾಗ ಬಾಧಿಸುತ್ತಲೇ ಇರುತ್ತದೆ. ಸಣ್ಣಪುಟ್ಟ ಸೋಂಕುಗಳು ಕೆಲವರನ್ನು ಕಾಡುತ್ತಲೇ ಇರುತ್ತದೆ. ಏನೇ ಪ್ರಯತ್ನ ಮಾಡಿದರೂ ಕಾಯಿಲೆಯಿಂದ ಮುಕ್ತರಾಗಿ ಇರುವುದಕ್ಕೆ ಅವರಿಗೆ ಸಾಧ್ಯವಾಗುವುದೇ ಇಲ್ಲ. ತೀರ್ಥ ತಗೊಂಡ್ರೆ ಥಂಡೀ, ಆರತಿ ತಗೊಂಡ್ರೆ ಉಷ್ಣ ಅಂತ ಗಾದೆಯೇ ಇದೆಯಲ್ಲ! ಕೆಲವರ ದೇಹಸ್ಥಿತಿ ಈ ಗಾದೆಗೆ ಸರಿಯಾಗಿ ಹೊಂದಿಕೆಯಾಗುತ್ತದೆ. ಇದಕ್ಕೆ ಕಾರಣ ಅವರಲ್ಲಿರುವ ರೋಗನಿರೋಧಕ ಶಕ್ತಿಯ ಕೊರತೆ.

ಹೌದು, ಯಾವಾಗಲೂ ನಿಮ್ಮ ಕೈಗಳನ್ನು ತೊಳೆಯುತ್ತೀರಿ, ರೋಗವಿರುವ ಜನರಿಂದ ದೂರವಿರುತ್ತೀರಿ, ಜೀವಸತ್ವವಿರುವ ಆಹಾರವನ್ನು ಸೇವಿಸುವುದಕ್ಕೆ ಯಾವಾಗಲೂ ಕೂಡ ಮರೆಯುವುದಿಲ್ಲ. ಆದರೂ ಕೂಡ ಜ್ವರ ಇನ್ನಿತರ ಕಾಯಿಲೆಗಳು ನಿಮ್ಮನ್ನ ಬಾಧಿಸುತ್ತಲೇ ಇರುತ್ತವೆಯೇ? ಯಾಕೆ ಹೀಗೆ ಪದೇ ಪದೇ ಸೋಂಕಿಗೆ ಒಳಗಾಗುತ್ತೀರಿ ಎಂಬ ಬಗ್ಗೆ ಆಲೋಚಿಸುತ್ತಿದ್ದೀರಾ?

ದುರ್ಬಲಗೊಳ್ಳುವ ಈ ರೀತಿಯ ರೋಗನಿರೋಧಕ ಶಕ್ತಿಗೆ ಇಂತಹದ್ದೇ ಕಾರಣ ಎಂದು ಹೇಳಲು ಸಾಧ್ಯವಿಲ್ಲ. ಆದರೂ ಕೂಡ ನಾವಿಲ್ಲಿ ಪ್ರಮುಖ ಕಾರಣಗಳನ್ನು ಪಟ್ಟಿ ಮಾಡಿದ್ದೇವೆ. ಇವು ಖಂಡಿತ ನಿಮಗೆ ಆಶ್ಚರ್ಯ ಹುಟ್ಟಿಸುವಂತಹ ಕಾರಣಗಳು.

 
ಹೆಲ್ತ್