Back
Home » ಆರೋಗ್ಯ
ನಾಯಿ ಕಡಿತ: ಪ್ರಥಮ ಚಿಕಿತ್ಸೆ, ಸೋಂಕು ತಡೆಗಟ್ಟುವುದು ಹೇಗೆ?
Boldsky | 11th Dec, 2019 10:49 AM
 • ನಾಯಿ ಕಚ್ಚಿದಾಗ ಏನು ಮಾಡಬೇಕು?

  ನಾಯಿ ಕಚ್ಚಿದ ತಕ್ಷಣ ಮೊದಲು ಮಾಡಬೇಕಾಗಿರುವುದು ಆದಷ್ಟು ಬೇಗ ಚಿಕಿತ್ಸೆ ತೆಗೆದುಕೊಳ್ಳುವುದು. ಗಾಯ ಚಿಕ್ಕದಾಗಿರಲಿ, ದೊಡ್ಡದಾಗಿರಲಿ ಒಮ್ಮೆ ನಾಯಿಯ ಹಲ್ಲು ಸೋಕಿ ಗಾಯವಾಯಿತು ಎಂದಾದರೆ ಕೂಡಲೇ ಹೋಗಿ ಚುಚ್ಚುಮದ್ದು ತೆಗೆದುಕೊಳ್ಳಿ.
  * ತರಚು ಗಾಯದ ರೀತಿ ಉಂಟಾಗಿದ್ದರೆ ಸೋಪು ಹಚ್ಚಿ, ಬಿಸಿ ನೀರಿನಿಂದ ತೊಳೆದು ಬ್ಯಾಕ್ಟಿರಿಯಾ ಫ್ರೀ ಲೋಷನ್ ಹಚ್ಚಬಹುದು.
  ಇನ್ನು ಚಿಕಿತ್ಸೆ ತೆಗೆದುಕೊಳ್ಳುವ ಮುನ್ನ ಪ್ರಥಮ ಚಿಕಿತ್ಸೆ ತೆಗೆದುಕೊಳ್ಳಬಯಸುವುದಾದರೆ ಹೀಗೆ ಮಾಡಿ.
  * ಗಾಯವಾದ ಜಾಗವನ್ನು ಬಿಸಿಯಾದ ನೀರಿನಿಂದ ಸೋಪು ಹಾಕಿ ತೊಳೆಯಿರಿ, ನಂತರ ರಕ್ತ ಸೋರದಂತೆ ಗಾಯವನ್ನು ಮೆಲ್ಲನೆ ಒತ್ತಿ ಹಿಡಿಯಿರಿ, ಹೀಗೆ ಮಾಡುವುದರಿಂದ ನಾಯಿ ಕಚ್ಚಿದಾಗ ಉಂಟಾದ ಸೋಂಕಾಣುಗಳನ್ನು ನಾಶ ಪಡಿಸಬಹುದು.
  * ಗಾಯದಿಂದ ರಕ್ತ ತುಂಬಾ ಸೋರುತ್ತಿದ್ದರೆ, ಆ್ಯಂಟಿ ಬ್ಯಾಕ್ಟಿರಿಯಾ ಲೋಷನ್ ಇದ್ದರೆ ಹಚ್ಚಿ ಬ್ಯಾಂಡೆಡ್ ಬಟ್ಟೆ ಅಥವಾ ಶುದ್ಧವಾದ ಬಟ್ಟೆಯನ್ನು ಗಾಯಕ್ಕೆ ಸುತ್ತಿ, ರಕ್ತ ಸೋರದಂತೆ ಮೆಲ್ಲನೆ ಒತ್ತಿ ಹಿಡಿಯಿರಿ.
  * ಇನ್ನು ಮೊದಲಿಗೆ ತರಚು ಗಾಯವಾಗಿದ್ದರೂ ನಂತರ ಗಾಯವಾದ ಭಾಗದಲ್ಲಿ ಕೆಂಪಗಾಗುವುದು, ಊತ ಉಂಟಾದರೆ ಕೂಡಲೇ ವೈದ್ಯರನ್ನು ಕಾಣಿ.

 • ತುರ್ತು ಚಿಕಿತ್ಸೆ ಯಾವಾಗ ತೆಗೆದುಕೊಳ್ಳಬೇಕು?

  ಕಾಯಿಲೆ ನಿಯಂತ್ರಣಾ ಕೇಂದ್ರದ ಪ್ರಕಾರ ನಾಯಿ ಕಚ್ಚಿದ ಐದು ಜನರಲ್ಲಿ ಒಬ್ಬರಿಗೆ ತುರ್ತು ಚಿಕಿತ್ಸೆಯ ಅಗ್ಯತವಿರುತ್ತದೆ, ಈ ಸಂದರ್ಭದಲ್ಲಿ ತುರ್ತು ಚಿಕಿತ್ಸೆ ತೆಗೆದುಕೊಳ್ಳಲೇಬೇಕು:
  * ರಕ್ತಸ್ರಾವ ನಿಲ್ಲದಿದ್ದರೆ
  * ತುಂಬಾ ನೋವು ಉಂಟಾಗುತ್ತಿದ್ದರೆ
  * ಒಂದು ವೇಳೆ ನಿಮಗೆ ಕಚ್ಚಿದ ನಾಯಿಗೆ ರೇಬಿಸ್‌ ಚುಚ್ಚುಮದ್ದು ಈ ಹಿಂದೆ ನೀಡಿದ್ದರೆ
  * ಗಾಯ ತುಮಬಾ ಆಳವಾಗಿದ್ದರೆ, ಮೂಳೆಗಳು ಎದ್ದು ಕಾಣುತ್ತಿದ್ದರೆ
  * ಗಾಯ ಊದಿಕೊಂಡು ತುಂಬಾ ನೋವು ಉಂಟಾಗುತ್ತಿದ್ದರೆ
  * ಕಚ್ಚಿ ಎರಡು ದಿನವಾದ ಮೇಲೆ ಗಾಯದಲ್ಲಿ ಕೀವು ಉಂಟಾಗಿದ್ದರೆ
  ನಾಯಿ ಕಚ್ಚಿದ ಬಳಿಕ ರೇಬಿಸ್‌ ಚುಚ್ಚುಮದ್ದು ಹಾಕಿಸಿಕೊಳ್ಳಿ. ರೇಬೀಸ್‌ ಎನ್ನುವುದು ಮಾರಾಣಾಂತಿಕವಾದ ಕಾಯಿಲೆಯಾಗಿದ್ದು, ಈ ಕಾಯಿಲೆ ನಿಧಾನಕ್ಕೆ ಉಲ್ಭಣವಾಗುವುದರಿಂದ ರೇಬಿಸ್‌ ವೈರಸ್‌ಗಳನ್ನು ನಾಶ ಪಡಿಸಲು ಚುಚ್ಉ ಮದ್ದು ಹಾಕಿಸುವುದು ಕ್ಷೇಮ.

 • ಸೋಂಕು ತಡೆಗಟ್ಟುವುದು ಹೇಗೆ?

  ನಾಯಿ ಬಾಯಲ್ಲಿ ಟ್ಯಾಫಿಲೋಕೊಕಸ್, ಪಾಶ್ಚುರೆಲ್ಲಾ ಮತ್ತು ಕ್ಯಾಪ್ನೋಸೈಟೋಫಾಗಾ ಎಂಬ ಅನೇಕ ಬಗೆಯ ಬ್ಯಾಕ್ಟಿರಿಯಾಗಳಿರುತ್ತದೆ. ಈ ಬ್ಯಾಕ್ಟಿರಿಯಾಗಳು ನಮ್ಮ ದೇಹವನ್ನು ಸೇರಿದರೆ ಅನೇಕ ತೊಂದರೆಗಳು ಉಂಟಾಗಬಹುದು. ಇದನ್ನು ತಡೆಗಟ್ಟಲು ಹೀಗೆ ಮಾಡಿ:
  * ಗಾಯವನ್ನು ಸೋಪು ಹಚ್ಚಿ ತೊಳೆಯಿರಿ, ಆ್ಯಂಟಿಬ್ಯಾಕ್ಟಿರಿಯಾ ಲೋಷನ್ ಹಚ್ಚಿ ವೈದ್ಯರನ್ನು ಭೇಟಿಯಾಗಿ ಅವರು ಸೂಚಿಸಿದ ಲೋಷನ್‌ ಹಚ್ಚುತ್ತಾ ಬನ್ನಿ.
  *ಗಾಯವನ್ನು ಬ್ಯಾಂಡೇಜ್‌ ಹಾಕಿ ಮುಚ್ಚಿ ಹಾಗೂ ಸೋಂಕು ಏನಾದರೂ ಉಂಟಾಗಿದೆಯೇ ಎಂದು ಗಮನಿಸುತ್ತಾ ಇರಿ, ಏನಾದರೂ ಸ್ವಲ್ಪ ವ್ಯತ್ಯಾಸ ಕಂಡರೂ ಕೂಡಲೇ ವೈದ್ಯರನ್ನು ಕಾಣಿ.

 • ನಾಯಿ ಕಚ್ಚಿಸುವುದನ್ನು ತಪ್ಪಿಸುವುದು ಹೇಗೆ?

  * ಮನೆಯಲ್ಲಿ ನಾಯಿ ಸಾಕುವಾಗ ತುಂಬಾ ಸ್ನೇಹ ಒಡನಾಡ ತೋರುವ ನಾಯಿಗಳನ್ನು ಸಾಕಿ. ಕೆಲವು ನಾಯಿಗಳು ತುಂಬಾ ಜೋರಾಗಿರುತ್ತದೆ, ಮನೆಯಲ್ಲಿ ಮಕ್ಕಳಿದ್ದರೆ ಅಂಥ ನಾಯಿಗಳನ್ನು ಸಾಕಬೇಡಿ.
  * ನಾಯಿ ಎಷ್ಟೇ ಒಡನಾಟ ತೋರಿಸಿದ್ದರೂ ಮಕ್ಕಳನ್ನು ನಾಯಿಯೊಂದಿಗೆ ಆಡಲು ಬಿಡುವಾಗ ನೀವೂ ಅಲ್ಲೇ ಇರಿ. ಮಗುವನ್ನು ನಾಯಿ ಜತೆ ಒಂಟಿಯಾಗಿ ಬಿಡಬೇಡಿ.
  * ನಾಯಿ ತನ್ನ ಮಕ್ಕಳಿಗೆ ಹಾಲುಣಿಸುವಾಗ ಅಥವಾ ಆಹಾರ ಸೇವಿಸುವಾಗ ಅದಕ್ಕೆ ತೊಂದರೆ ಕೊಡಲು ಹೋಗಬೇಡಿ.
  * ನಾಯಿ ಹೆರಿಗೆಯಾದಾಗ ಅದರ ಮರಿಗಳನ್ನು ಎತ್ತಿಕೊಳ್ಳಲು ಹೋಗುವಾಗ ಎಚ್ಚರ, ಅದು ಮಗುವನ್ನು ಎತ್ತಿಕೊಂಡು ಹೋಗುತ್ತಾರೆ ಎಂಬ ಭಯದಲ್ಲಿ ಅಟ್ಯಾಕ್‌ ಮಾಡುವ ಸಾಧ್ಯತೆ ಇದೆ.
  * ನಾಯಿ ಕೋಪಗೊಂಡಾಗ ನಿಮ್ಮನ್ನು ನೋಡಿ ಬೊಗಳುತ್ತಾ ಕಚ್ಚಲು ಬರುವಂತೆ ಬಂದಾಗ ಓಡಬೇಡಿ, ಹೀಗೆ ಓಡುವುದರಿಂದ ಅದು ಅಟ್ಟಾಡಿಸಿಕೊಂಡು ಕಚ್ಚುತ್ತದೆ, ನಾಯಿ ನಿಮ್ಮನ್ನು ಹೆದರಿಸಲು ಬಂದಾಗ ಓಡದೆ ಅದನ್ನು ದಿಟ್ಟಿಸಿ ನೋಡಿ, ಆಗ ಅದು ಸುಮ್ಮನಾಗುತ್ತದೆ.
  * ಇನ್ನು ಸುಮ್ಮನೆ ನಾಯಿಗೆ ಹೊಡೆಯುವುದು, ತೊಂದರೆ ಕೊಡುವುದು ಮಾಡಬೇಡಿ. ಹೀಗೆ ಮಾಡುವುದರಿಂದ ಅದು ನಿಮ್ಮ ಮೇಲೆ ಅಟ್ಯಾಕ್ ಮಾಡಬಹುದು.
ನಾವು ದಾರಿಯಲ್ಲಿ ಹೋಗುತ್ತಾ ಇರುತ್ತೇವೆ ಬೀದಿ ನಾಯಿಯೊಂದು ನಮ್ಮನ್ನು ನೋಡಿ ಬೊಗಳಲು ಶುರು ಮಾಡುತ್ತದೆ, ನಮ್ಮ ಕೈ ಕಾಲುಗಳಲ್ಲಿ ನಡುಕ ಶುರುವಾಗುತ್ತದೆ. ನಮ್ಮ ಭಯ ನೋಡುವಾಗಲೇ ಅದರ ಜೋಶ್‌ ಮತ್ತಷ್ಟು ಹೆಚ್ಚಾಗುತ್ತದೆ, ಬಂದು ಕಚ್ಚು ಬಿಡುತ್ತದೆ. ಇನ್ನು ಯಾರಾದರೂ ಮನೆಗೆ ಹೋದಾಗ ಅವರ ನಾಯಿ ಸಾಕಿ ಕೊಂಡಿದ್ದರೆ ಸ್ವಲ್ಪ ಎಚ್ಚರವಹಿಸಿಕೊಳ್ಳಬೇಕು. ಏಕೆಂದರೆ ನಾಯಿಗಳು ಮನೆಯಲ್ಲಿದ್ದರೆ ಕಾವಲುಗಾರನ ಅಗ್ಯತವಿರಲ್ಲ ಅಷ್ಟು ಚೆನ್ನಾಗಿ ಮನೆ ಕಾಯುತ್ತಿರುತ್ತವೆ, ಯಾರಾದರೂ ಅಪರಿಚಿತರು ಬಂದಾಗ ಕಚ್ಚಿ ಬಿಡುತ್ತವೆ.

ಸಾಕು ನಾಯಿರಲಿ, ಬೀದಿ ನಾಯಿರಲಿ ನಾಯಿ ಕಚ್ಚಿದರೆ ಚುಚ್ಚುಮದ್ದುಗಳು ತೆಗೆದುಕೊಳ್ಳಬೇಕು, ಇಲ್ಲದಿದ್ದರೆ ಅಪಾಯ ತಪ್ಪಿದ್ದಲ್ಲ. ಮನೆ ನಾಯಿ ಕಚ್ಚಿದ್ದು ಆದ್ದರಿಂದ ತೊಂದರೆಯಿಲ್ಲ ಎಂದು ಭಾವಿಸಲೇಬಾರದು, ಏಕೆಂದರೆ ಒಂದು ವೇಳೆ ಆ ನಾಯಿಗೆ ಯಾವುದಾದರೂ ಹುಚ್ಚು ನಾಯಿ ಬಂದು ಕಚ್ಚಿ ಹೋಗಿದ್ದರೆ? ಆದ್ದರಿಂದ ನಾಯಿ ಕಚ್ಚಿದರೆ ನಿರ್ಲಕ್ಷ್ಯ ಮಾಡಲೇಬೇಡಿ. ಪ್ರತಿವರ್ಷ ಭಾರತದಲ್ಲಿ ಸುಮಾರು 15 ಮಿಲಿಯನ್‌ ಜನರು ನಾಯಿಯಿಂದ ಕಚ್ಚಿಸಿಕೊಳ್ಳುತ್ತಾರೆ. ಅದರಲ್ಲಿ ಶೇ.60ರಷ್ಟು ಜನರು ಬೀದಿ ನಾಯಿಂದ ಕಚ್ಚಿಸಿ ಕೊಂಡಿದ್ದರೆ, ಶೇ.40ರಷ್ಟು ಸಾಕು ನಾಯಿಗಳಿಂದ ಕಚ್ಚಿಸಿಕೊಂಡಿರುತ್ತಾರೆ.

ಒಂದು ಸಮೀಕ್ಷೆ ಪ್ರಕಾರ ಭಾರತದಲ್ಲಿ ಸುಮಾರು 25 ಮಿಲಿಯನ್ ನಾಯಿಗಳಿವೆ, ಮನುಷ್ಯರ ಹಾಗೂ ನಾಯಿಗಳ ಅನುಪಾತ ನೋಡಿದರೆ 1:6 ಇದೆ. ನಾಯಿಗಳಲ್ಲಿ ಸಾಕು ನಾಯಿ, ಕುಟುಂಬದ ನಾಯಿ, ಸಮುದಾಯ ನಾಯಿಗಳು ಹೀಗೆ ಸಾಕಿ ಕೊಂಡಿರುತ್ತಾರೆ. ಇನ್ನು ಕೆಲವು ನಾಯಿಗಳಿಗೆ ಮಾಲೀಕರಿಲ್ಲದೆ ಬೀದಿ ನಾಯಿಗಳಾಗಿರುತ್ತವೆ.

ಪ್ರತಿ 2 ಸೆಕೆಂಡ್‌ಗೆ ಒಬ್ಬ ಮನುಷ್ಯ ನಾಯಿ ಕಡಿತಕ್ಕೆ ಒಳಗಾಗುತ್ತಿದ್ದಾನೆ. ಪ್ರತಿ 30 ನಿಮಿಷಕ್ಕೆ ಒಬ್ಬ ನಾಯಿ ಕಡಿತದಿಂದ ರೇಬಿಸ್‌ ಬಂದು ಸಾವನ್ನಪ್ಪುತ್ತಿದ್ದಾರೆ. ನಾಯಿ ಕಡಿತ ಹೆಚ್ಚಾಗುತ್ತಿದ್ದಂತೆ ನಾಯಿ ಕಡಿತಕ್ಕೆ ಚುಚ್ಚುಮದ್ದಿಗೆ ಬೇಡಿಕೆ ಕೂಡ ಹೆಚ್ಚಾಗುತ್ತಿದೆ.

ಈ ಲೇಖನದಲ್ಲಿ ನಾಯಿ ಕಚ್ಚಿದರೆ ಏನು ಮಾಡಬೇಕು,ಅದರ ಸೋಂಕು ಹರಡುವುದನ್ನು ತಡೆಯುವುದು ಹೇಗೆ ಹಾಗೂ ನಾಯಿ ಕಚ್ಚುವುದನ್ನು ತಡೆಗಟ್ಟಲು ಏನು ಮಾಡಬೇಕು ಎಂಬ ಬಗ್ಗೆ ಮಾಹಿತಿ ನೀಡಿದ್ದೇವೆ ನೋಡಿ:

ಹೆಲ್ತ್