Back
Home » ಆರೋಗ್ಯ
ಸಾಮಾನ್ಯವಾಗಿ ನಾವು ತೆಗೆದುಕೊಳ್ಳುವ ಔಷಧಿ ಬೀರುವ ಭಯಂಕರ ಅಡ್ಡಪರಿಣಾಮಗಳು
Boldsky | 11th Dec, 2019 06:01 PM
 • ಮೂತ್ರದ ಬಣ್ಣ ಬದಲಾಗುವುದು-ನೀಲಿಯಾಗಬಹುದು

  ಹೆಚ್ಚಾಗಿ ಔಷಧಿಗಳನ್ನು ಸೇವನೆ ಮಾಡಿದ ವೇಳೆ ಮೂತ್ರದ ಬಣ್ಣ ಬದಲಾಗುವುದು ಎಂದು ಮೂತ್ರನಾಳದ ಸೋಂಕಿನ ಸಮಸ್ಯೆಗೆ ಸೇವಿಸುವಂತಹ ಪಿರಿಡಿಯಮ್ ಎನ್ನುವ ಔಷಧಿಯಿಂದ ಮೂತ್ರದ ಬಣ್ಣವು ಬದಲಾಗುವುದು ಎಂದು ಹೇಳಲಾಗುತ್ತದೆ. ಈ ಔಷಧಿಯು ಮೂತ್ರದ ಆಮ್ಲೀಯತೆಗೆ ಅನುಗುಣವಾಗಿ ಮೂತ್ರದ ಬಣ್ಣವನ್ನು ಕಿತ್ತಳೆಯಿಂದ ಕೆಂಪು ಬಣ್ಣವಾಗಿ ಮಾರ್ಪಾಡು ಮಾಡುವುದು. ಕ್ಷಯರೋಗದ ಔಷಧಿ ರಿಫಾಂಪಿನ್, ಉರಿಯೂತ ಶಮನಕಾರಿ ಔಷಧಿ ಸಲ್ಫಾಸಲಾಜಿನ್, ರಕ್ತ ತೆಳು ಮಾಡುವ ವಾರ್ಫಾರಿನ್ ಔಷಧಿಯು ಮೂತ್ರದ ಬಣ್ಣವನ್ನು ಕಿತ್ತಳೆ ಬಣ್ಣಕ್ಕೆ ತಿರುಗಿಸುವುದು. ಆಂಟಿಬಯೋಟಿಕ್ ಗಳಾಗಿರುವಂತಹ ನೈಟ್ರೋಫುರಾಂಟೊಯಿನ್ ಮತ್ತು ಮೆಟ್ರೋನಿಡಜೋಲ್ ಮೂತ್ರದ ಬಣ್ಣವನ್ನು ಕಂದು ಬಣ್ಣಕ್ಕೆ ತಿರುಗಿಸಬಹುದು. ಸಾಮಾನ್ಯವಾಗಿ ಸೂಚಿಸಲ್ಪಡುವಂತಹ ಔಷಧಿಗಳಾದ ಅಮಿಟ್ರಿಪ್ಟಿಲೈನ್, ಡಾಕ್ಸೊರುಬಿಸಿನ್, ಇಂಡೊಮೆಥಾಸಿನ್, ಸಿಮೆಟಿಡಿನ್, ಫೆನೆರ್ಗನ್ ಮತ್ತು ಟ್ರಯಾಮ್ಟೆರೀನ್ ಮೂತ್ರದ ಬಣ್ಣವನ್ನು ನೀಲಿ ಅಥವಾ ಹಸಿರು ಬಣ್ಣಕ್ಕೆ ತಿರುಗಿಸುವುದು. ನಿಮಗೆ ತುಂಬಾ ಬದಲಾವಣೆ ಅಥವಾ ವಿಚಿತ್ರವೆಂದು ಅನಿಸಿದರೆ ಆಗ ನೀವು ವೈದ್ಯರನ್ನು ಸಂಪರ್ಕಿಸಬೇಕು.


 • ಲೈಂಗಿಕ ಉದ್ರೇಕದಲ್ಲಿ ಬದಲಾವಣೆ

  ಹೆಚ್ಚಿನ ಔಷಧಿಗಳು ಲೈಂಗಿಕ ಆಸಕ್ತಿಯನ್ನು ಕುಂದಿಸುವುದು ಅಥವಾ ಹೆಚ್ಚು ಮಾಡುವುದು. ಸೆರೊಟಿನ್ ಮರುಹಂಚಿಕ ಪ್ರತಿರೋಧಕ (ಎಸ್ ಎಸ್ ಆರ್ ಐ)ಗಳಾಗಿರುವಂತಹ ಪ್ಯಾಕ್ಸಿಲ್, ಸೆಲೆಕ್ಸ, ಜೊಲೋಫ್ಟ್, ಕೆಲವು ಅಧಿಕ ರಕ್ತದದೊತ್ತಡದ ಔಷಧಿಗಳು ಮತ್ತು ಹಾರ್ಮೋನ್ ಮತ್ತು ಗರ್ಭನಿರೋಧಕ ಮಾತ್ರೆಗಳು ಇದರಲ್ಲಿ ಒಳಗೊಂಡಿದೆ. ನಿಮಿರು ದೌರ್ಬಲ್ಯಕ್ಕಾಗಿ ತೆಗೆದುಕೊಳ್ಳುವಂತಹ ವಯಾಗ್ರವು ನಿರಂತರ ಹಾಗೂ ನೋವಿನ ನಿಮಿರುವಿಕೆ ಉಂಟು ಮಾಡಬಹುದು. ಅದೇ ರೀತಿಯಾಗಿ ಖಿನ್ನತೆ ನಿವಾರಣೆಗೆ ತೆಗೆದುಕೊಳ್ಳುವಂತಹ ಟ್ರಾಜೋಡೋನ್ ಔಷಧಿ ಕೂಡ ಇದೇ ರೀತಿಯ ಪರಿಣಾಮ ಬೀರಬಹುದು.


 • ಚಟದ ವರ್ತನೆ

  ರೆಸ್ಟ್ಲೆಸ್ ಲೆಗ್ ಕಾಯಿಲೆಗೆ ತೆಗೆದುಕೊಳ್ಳುವ ಔಷಧಿ, ಪಾರ್ಕಿಸನ್ ಕಾಯಿಲೆಗೆ ತೆಗೆದುಕೊಳ್ಳುವಂತಹ ಮಿರಾಪೆಕ್ಸ್ (ಪ್ರಮಿಪೆಕ್ಸೋಲ್) ಮತ್ತು ರಿಕ್ವಿಪ್ (ರೋಪಿನಿರೋಲ್) ವಿಚಿತ್ರ ವರ್ತನೆ ಉಂಟು ಮಾಡಬಹುದು. ಇದರಲ್ಲಿ ಮುಖ್ಯವಾಗಿ ಜೂಜಾಟ, ಲೈಂಗಿಕ ಚಟ, ನಿರಂತರ ಶಾಪಿಂಗ್, ಅತಿಯಾಗಿ ತಿನ್ನುವುದು ಮತ್ತು ಇತರ ಕೆಲವು ತಿನ್ನುವ ಕಾಯಿಲೆಗಳು ಬರಬಹುದು. ಖಿನ್ನತೆ ವಿರೋಧಿಗೆ ಸೂಚಿಸಿರುವಂತಹ ಅಬಿಲಿಫಿಯಿಂದಾಗಿ ತುಂಬಾ ವಿಚಿತ್ರವಾದ ವರ್ತನೆ ಜೂಜಾಟವು ಕಾಣಿಸಿಕೊಂಡಿದೆ ಎಂದು ಜನರು ಹೇಳುತ್ತಾರೆ.


 • ನಿದ್ರೆಯಲ್ಲಿ ನಡೆಯುವುದು

  ಕೆಲವೊಂದು ಔಷಧಿಗಳ ಸೇವನೆಯಿಂದಾಗಿ ಜನರು ನಿದ್ರೆಯಲ್ಲಿ ನಡೆಯುವುದು ಅಥವಾ ವಾಹನ ಚಾಲನೆ ಮಾಡುವ ಘಟನೆಗಳು ನಡೆದಿದೆ. ಹಗಲಿನಲ್ಲಿ ಅವರಿಗೆ ತಿಳಿಯದೆ ಅವರು ನಿದ್ರೆಗೆ ಜಾರುವುದು ಇದೆ. ನರ ಮಂಡಲದ ಮೇಲೆ ಬೀರುವಂತಹ ಪ್ರಭಾವದಿಂದಾಗಿ ಜನರು ವಿಭಿನ್ನವಾಗಿ ಇದಕ್ಕೆ ಪ್ರತಿಕ್ರಿಯಿಸುವರು. ಆತಂಕ ನಿವಾರಣೆ ಮದ್ದುಗಳಾಗಿರುವಂತಹ ಬೆಂಜೊಡಿಯಜೆಪೈನ್ ಗಳು ಮತ್ತು ನಿದ್ರೆಗೆ ನೀಡುವಂತಹ ಅಂಬಿನ್, ಲುನೆಸ್ಟಾ ಮತ್ತು ಸೋನಾಟಾ ಈ ರೀತಿಯ ಪರಿಣಾಮ ಬೀರುವುದು. ನೋವಿನ ಔಷಧಿ ಒಪಿಯಾಡ್, ಸ್ನಾಯುಗಳಿಗೆ ಆರಾಮ ನೀಡುವ ಮತ್ತು ಬೆನಡ್ರಿಲ್ ನಂತಹ ಆಂಟಿಹಿಸ್ಟಮೈನ್ ಗಳು ಕೆಲವು ಜನರಲ್ಲಿ ಪರಿಣಾಮ ಬೀರುವುದು ಎಂದು ಹೇಳುತ್ತಾರೆ.


 • ಪರಿಮಳ ಮತ್ತು ರುಚಿ ಕಳೆದುಕೊಳ್ಳುವುದು

  ಆಂಟಿಬಯೋಟಿಕ್ ಗಳಿಂದಾಗಿ ಪರಿಮಳ ಮತ್ತು ರುಚಿಯಲ್ಲಿ ತುಂಬಾ ಬದಲಾವಣೆಗಳು ಆಗುವುದು. ಇದರಲ್ಲಿ ಮುಖ್ಯವಾಗಿ ಆಂಪಿಸಿಲಿನ್, ಮ್ಯಾಕ್ರೋಲೈಡ್ಗಳು, ಕ್ವಿನೋಲೋನ್ ಗಳು, ಸಲ್ಫಮೆಥೊಕ್ಸಜೋಲ್, ಟ್ರಿಮೆಥೊಪ್ರಿಮ್, ಟೆಟ್ರಾಸೈಕ್ಲಿನ್ ಮತ್ತು ಮೆಟ್ರೋನಿಡಜೋಲ್ ಔಷಧಿಗಳು ಈ ರೀತಿಯ ಪರಿಣಾಮ ಬೀರುವುದು. ಕೆನಡಾದ ಕೆಲವೊಂದು ವೈದ್ಯರ ಪ್ರಕಾರ ನರದ ಸಮಸ್ಯೆಗೆ ತೆಗೆದುಕೊಳ್ಳುವ ಆಂಟಿಪಾರ್ಕಿನ್ಸೋನಿಯನ್, ಮೈಗ್ರೇನ್ ಔಷಧಿ ಮತ್ತು ಸ್ನಾಯುಗಳಿಗೆ ಆರಾಮ ನೀಡುವಂತಹ ಔಷಧಿಗಳು ಇದೇ ರೀತಿಯ ಪರಿಣಾಮ ಬೀರಬಹುದು. ಕೆಲವು ಹೃದಯ ಕಾಯಿಲೆ ಔಷಧಿಗಳಾಗಿರುವ (ರಕ್ತದೊತ್ತಡ ನಿವಾರಕ, ಮೂತ್ರವರ್ಧಕ) ಮತ್ತು ಹೆಚ್ಚಿನ ಥೈರಾಯ್ಡ್ ಔಷಧಿಗಳು ಹೀಗೆ ಪರಿಣಾಮ ಬೀರುವುದು. ಇತರ ಕೆಲವೊಂದು ಖಿನ್ನತೆ ವಿರೋಧಿ ಮಾತ್ರೆಗಳು, ಕೆಲವು ಮನಸ್ಥಿತಿ ಸುಧಾರಕ, ಉರಿಯೂತ ಶಮನಕಾರಿ, ಶಿಲೀಂಧ್ರ ವಿರೋಧಿ ಮತ್ತು ವೈರಲ್ ವಿರೋಧಿ ಔಷಧಿಗಳು ಕೂಡ ಇದೇ ರೀತಿಯಾಗಿ ಪರಿಣಾಮ ಬೀರುವುದು.


 • ಭ್ರಮೆಗಳು

  ಹಲವಾರು ರೀತಿಯ ಔಷಧಿಗಳು ನರಮಂಡಲದ ಮೇಲೆ ಪರಿಣಾಮ ಬೀರುವ ಪರಿಣಾಮವಾಗಿ ಭ್ರಮೆ ಉಂಟು ಮಾಡಬಹುದು. ಮಾರ್ಫಿನ್ ಸೇವನೆ ಬಳಿಕ ಗೋಡೆಯಲ್ಲಿ ಜೇಡ ಕಾಣುತ್ತಿದ್ದ ಕುಟುಂಬ ಸದಸ್ಯರೊಬ್ಬರನ್ನು ನಾನು ಕಂಡಿದ್ದೇನೆ ಎಂದು ವೈದ್ಯರೊಬ್ಬರು ತಿಳಿಸುತ್ತಾರೆ. ನೋವು ಹಾಗೂ ಆತಂಕ ನಿವಾರಣೆ ಮಾಡಲು ತೆಗೆದುಕೊಳ್ಳುವಂತಹ ಕೆಲವೊಂದು ಔಷಧಿಗಳಿಂದಾಗಿ ಭ್ರಮೆ ಉಂಟಾಗಬಹುದು. ಅದೇ ರೀತಿಯಾಗಿ ಮೂತ್ರನಾಳದ ಸಮಸ್ಯೆ, ದೀರ್ಘಕಾಲದ ಪ್ರತಿಬಂಧಕ ಶ್ವಾಸಕೋಶದ ರೋಗ ಮತ್ತು ಪರ್ಕಿಸ್ ಗೆ ತೆಗೆದುಕೊಳ್ಳುವಂತ ಮಾತ್ರೆಗಳು ಭ್ರಮೆ ಉಂಟು ಮಾಡಬಹುದು. ಪಾರ್ಕಿನ್ ಸನ್‌ ಕಾಯಿಲೆಗೆ ತೆಗೆದುಕೊಳ್ಳುವ ಮಿರಾಪೆಕ್ಸ್ ಎನ್ನುವ ಔಷಧಿಯು ವಯಸ್ಸಾದವರಲ್ಲಿ ಭ್ರಮೆ ಉಂಟು ಮಾಡಬಹುದು.


 • ಅತಿಯಾಗಿ ತೂಕ ಹೆಚ್ಚಳ

  ಶೇ.10-15ರಷ್ಟು ತೂಕ ಹೆಚ್ಚಳದ ಸಮಸ್ಯೆಯು ಔಷಧಿಯಿಂದ ಬರುವುದು. ಕೆಲವೊಂದು ಔಷಧಿಗಳು ಹಸಿವು ಹೆಚ್ಚು ಮಾಡುವುದು ಮತ್ತು ದೇಹವು ಕ್ಯಾಲರಿ ದಹಿಸುವ ಕ್ಷಮತೆಯನ್ನು ಕುಗ್ಗಿಸುವುದು ಅಥವಾ ದೇಹದಲ್ಲಿ ದ್ರವಾಂಶ ಶೇಖರಣೆ ಮಾಡುವುದು. ತೂಕ ಹೆಚ್ಚಳ ಮಾಡುವಂತಹ ಕೆಲವೊಂದು ಸಾಮಾನ್ಯ ಔಷಧಿಗಳೆಂದರೆ ಕಾರ್ಟಿಕೊಸ್ಟೆರಾಯ್ಡ್ ಗಳು, ಖಿನ್ನತೆ ನಿವಾರಣೆ ಔಷಧಿಗಳು, ಎಸ್ ಎಸ್ ಆರ್ ಐ ಗಳಾಗಿರುವಂತಹ ಪ್ರೊಜಾಕ್, ಸೆಲೆಕ್ಸಾ ಮತ್ತು ಪ್ಯಾಕ್ಸಿಲ್ ಮತ್ತು ಟೈಪ್ 2 ಮಧುಮೇಹಕ್ಕೆ ಬಳಸುವಂತಹ ಸಲ್ಫೋನಿಲ್ಯುರಿಯಾಸ್ ಭ್ರಮೆ ಉಂಟು ಮಾಡಬಹುದು.


 • ದೃಷ್ಟಿ ತೊಂದರೆ

  ಕೆಲವೊಂದು ಔಷಧಿಗಳು ದೃಷ್ಟಿ ಮಂದವಾಗುವುದರಿಂದ ಹಿಡಿದು ಅಕ್ಷಿಪಟಲಕ್ಕೆ ಹಾನಿ ಉಂಟು ಮಾಡಬಹುದು. ಈ ಔಷಧಿಗಳೆಂದರೆ ನಿಮಿರು ದೌರ್ಬಲ್ಯಕ್ಕೆ ತೆಗೆದುಕೊಳ್ಳುವ ಔಷಧಿ, ರಕ್ತದೊತ್ತಡದ ಔಷಧಿ, ಮಿನೋಸೈಕ್ಲಿನ್ ಮತ್ತು ಇತರ ಆಂಟಿಬಯೋಟಿಕ್ ಹಾಗೂ ಕೆಲವೊಂದು ಗಿಡಮೂಲಿಕೆ ಔಷಧಿಗಳು ಕೂಡ ದೃಷ್ಟಿ ಮಂದವಾಗಿಸಬಹುದು. ಕೊರ್ಟಿಕೊಸ್ಟೆರಾಯಿಡ್ ಗಳು, ಮನೋವಿಕೃತಿ, ಮಲೇರಿಯಾ ನಿರೋಧಕ ಔಷಧಿಗಳು ದೃಷ್ಟಿ ದೋಷ ಉಂಟು ಮಾಡಬಹುದು.


 • ಸ್ನಾಯುರಜ್ಜು ಛಿದ್ರವಾಗುವುದು

  ಉರಿಯೂತ ಮತ್ತು ಸ್ನಾಯುರಜ್ಜುಗಳನ್ನು ಛಿದ್ರಗೊಳಿಸುವಂತಹ ಕೆಲವೊಂದು ಔಷಧಿಗಳೆಂದರೆ ಅದು ಸಿಪ್ರೊ, ಸಿಪ್ರೊ ಎಕ್ಸ್ ಆರ್, ಪ್ರೊಕ್ವಿನ್ ಎಕ್ಸ್ ಆರ್, ಲೆವಕ್ವಿನ್, ಫ್ಲೊಕ್ಸಿನ್ ಮತ್ತು ಕೆಲವೊಂದು ಸಾರ್ವತ್ರಿಕ ಔಷಧಿಗಳು ಇದರಲ್ಲಿ ಸೇರಿಕೊಂಡಿದೆ. ಛಿದ್ರಗೊಂಡ ಸ್ನಾಯುರಜ್ಜು, ಬಾಗಿದ ಕೈ ಮತ್ತು ಹೆಬ್ಬೆರಳಿನಲ್ಲಿ ಇದು ಪರಿಣಾಮ ಬೀರುವುದು.


 • ನಾಲಗೆಯಲ್ಲಿ ಕಪ್ಪು ಕೂದಲು

  ಇದು ಔಷಧಿ ಲೋಕದಲ್ಲಿ ಒಂದು ರೀತಿಯ ತಮಾಷೆಯ ಅಡ್ಡ ಪರಿಣಾಮವಾಗಿದೆ. ಇದು ಬಾಯಿಯಲ್ಲಿ ಕೆಲವೊಂದು ಸಾಮಾನ್ಯ ಬ್ಯಾಕ್ಟೀರಿಯಾಗಳ ಬದಲಾವಣೆಗಳಿಂದ ಉಂಟಾಗಬಹುದು ಅಥವಾ ಆಂಟಿಬಯೋಟಿಕ್ ಸೇವನೆ ಮಾಡುವ ಪರಿಣಾವು ಆಗಿರಬಹುದು. ಇಂತಹ ಸಮಸ್ಯೆಗೆ ಮತ್ತೊಂದು ಕಾರಣವೆಂದರೆ ಅದು ಬಾಯಿಯ ಸ್ವಚ್ಛತೆ ಇಲ್ಲದೆ ಇರುವುದು, ಧೂಮಪಾನ, ಅತಿಯಾಗಿ ಕಾಫಿ ಕುಡಿಯುವುದು ಮತ್ತು ನಿರ್ಜಲೀಕರಣ. ಪೆಪ್ಟೋ-ಬಿಸ್ಮೋಲ್ ನಂತಹ ಉತ್ಪನ್ನಗಳು ಇಂತಹ ಸಮಸ್ಯೆ ಉಂಟು ಮಾಡಬಹುದು. ಮುಂದಿನ ಸಲ ನೀವು ಯಾವುದೇ ಔಷಧಿ ತೆಗೆದುಕೊಂಡ ವೇಳೆ ಈ ಮೇಲಿನ ಕೆಲವೊಂದು ಅಡ್ಡಪರಿಣಾಮಗಳು ಕಾಣಿಸಿಕೊಳ್ಳಬಹುದು.
ಅನಾರೋಗ್ಯವೆಂದು ವೈದ್ಯರು ಬಳಿಗೆ ಹೋದ ವೇಳೆ ಅವರ ನಮಗೆ ಕೆಲವೊಂದು ಔಷಧಿಗಳನ್ನು ಬರೆದುಕೊಡುವರು ಹಾಗೂ ಯಾವೆಲ್ಲಾ ಆಹಾರ ತಿನ್ನಬೇಕು ಮತ್ತು ತಿನ್ನಬಾರದು ಎಂದು ಹೇಳುವರು. ಆದರೆ ಅವರು ನೀಡುವಂತಹ ಔಷಧಿಯಲ್ಲಿ ಕೆಲವೊಂದು ರೀತಿಯ ಅಡ್ಡ ಪರಿಣಾಮಗಳು ಕೂಡ ಇರುವುದು. ಇದರ ಬಗ್ಗೆ ವೈದ್ಯರು ನಮಗೆ ಹೇಳುವುದೇ ಇಲ್ಲ. ಹೀಗಾಗಿ ಔಷಧಿ ತೆಗೆದುಕೊಂಡ ಬಳಿಕ ನಾವು ಗಾಬರಿಗೊಳ್ಳುತ್ತೇವೆ.

ಯಾಕೆಂದರೆ ಔಷಧಿ ತೆಗೆದುಕೊಂಡ ಬಳಿಕ ಮೂತ್ರವು ನೀಲಿಯಾಗಬಹುದು, ತೂಕ ಹೆಚ್ಚಾಗಬಹುದು ಅಥವಾ ನಾಲಗೆಯ ಬಣ್ಣ ಬದಲಾಗಬಹುದು. ಆದರೆ ಇದರ ಬಗ್ಗೆ ನಾವು ಎಚ್ಚರಿಕೆ ವಹಿಸಬೇಕು. ಯಾಕೆಂದರೆ ಕೆಲವೊಂದು ಔಷಧಿಗಳಲ್ಲಿ ಇಂತಹ ಅಡ್ಡ ಪರಿಣಾಮಗಳು ಇದ್ದೇ ಇರುತ್ತದೆ. ತಲೆನೋವು, ನಿಶ್ಯಕ್ತಿ ಮತ್ತು ವಾಕರಿಕೆಯಂತಹ ಅಡ್ಡ ಪರಿಣಾಮಗಳು ಬರಬಹುದು. ಇಂತಹ ಅಡ್ಡಪರಿಣಾಮಗಳ ಬಗ್ಗೆ ತಿಳಿಯಲು ನೀವು ಈ ಲೇಖನವನ್ನು ಓದಲೇಬೇಕು. ಯಾಕೆಂದರೆ ಈ ಲೇಖನದಲ್ಲಿ ನಿಮಗೆ ನಾವು ಕೆಲವೊಂದು ವಿಚಿತ್ರ ಅಡ್ಡಪರಿಣಾಮಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಅಂತಹ ಅಡ್ಡ ಪರಿಣಾಮಗಳನ್ನು ತಿಳಿದರೆ ಆಗ ಖಂಡಿವಾಗಿಯೂ ನಿಮಗೆ ಅಚ್ಚರಿಯಾಗುವುದು. ಇದು ಯಾವುದು ಎಂದು ತಿಳಿಯಿರಿ.

 
ಹೆಲ್ತ್