Back
Home » ಆರೋಗ್ಯ
ಈ ರೀತಿ ಈಜುವುದರಿಂದ ಮೈ ಬೊಜ್ಜು ಸುಲಭವಾಗಿ ಕರಗಿಸಬಹುದು
Boldsky | 12th Dec, 2019 10:40 AM
 • 1. ಬೆಳಗ್ಗೆ ಉಪಾಹಾರಕ್ಕೆ ಮೊದಲು ಸ್ವಿಮ್ ಮಾಡಿ

  ಪ್ರತಿಯೊಬ್ಬರಿಗೂ ಬೆಳಗ್ಗೆ ಈಜು ಕೊಳಕ್ಕೆ ಹೋಗಿ ಈಜಲು ಸಾಧ್ಯವಾಗದು. ಆದರೆ ಉಪಾಹಾರ ಮಾಡುವ ಮೊದಲು ಈಜಿದರೆ ಒಳ್ಳೆಯದು.

  ಬೆಳಗ್ಗೆ ಎದ್ದ ಬಳಿಕ ನೀವು ನೇರವಾಗಿ ಈಜಲು ಹೋದರೆ ಆಗ ದೇಹವು ತನ್ನಲ್ಲಿ ಇರುವಂತಹ ಕೊಬ್ಬನ್ನು ಶಕ್ತಿಯಾಗಿ ಪರಿವರ್ತನೆ ಮಾಡಿಕೊಳ್ಳುವುದು.

  ಈಜುವುದು ಕೇವಲ ಹೃದಯಕ್ಕೆ ಮಾತ್ರವಲ್ಲದೆ, ಸಂಪೂರ್ಣ ದೇಹಕ್ಕೆ ಇದು ಒಳ್ಳೆಯದು ಮತ್ತು ಇದರಿಂದ ನಿಮಗೆ ಅದ್ಬುತ ಫಲಿತಾಂಶವು ಸಿಗುವುದು.


 • 2. ಬಲ ಹಾಗೂ ವೇಗವಾಗಿ ಈಜಿ

  ಈಜುವುದರಿಂದ ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲರಿ ದಹಿಸಲ್ಪಡುವುದು. ಆದರೆ ನಿಮ್ಮ ಈಜುವ ಕೌಶಲ್ಯವು ಸುಧಾರಣೆ ಆದ ಬಳಿಕ ನೀವು ತುಂಬಾ ಪರಿಣಾಮಕಾರಿ ಆಗುವಿರಿ ಮತ್ತು ಹೃದಯದ ಬಡಿತವು ಹಿಂದಿನಷ್ಟು ಹೆಚ್ಚಾಗುವುದಿಲ್ಲ. ಇದಕ್ಕಾಗಿ ನೀವು ತುಂಬಾ ಬಲ ಹಾಗೂ ವೇಗವಾಗಿ ಈಜಬೇಕು. ಇದರಿಂದ ಹೃದಯಬಡಿತವು ಹೆಚ್ಚಾಗುವುದು.

  ಈಜುವ ವೇಳೆ ವಾಟರ್ ಫ್ರೂಪ್ ಆಗಿರುವಂತಹ ಫಿಟ್ನೆಸ್ ಟ್ರ್ಯಾಕರ್ ನ್ನು ನೀವು ಬಳಸಿಕೊಂಡು ಹೃದಯಬಡಿತ ಲೆಕ್ಕ ಹಾಕಬಹುದು. ಗರಿಷ್ಠ ಹೃದಯ ಬಡಿತದ 50-70ರಷ್ಟು ಹೃದಯ ಬಡಿತವು ವ್ಯಾಯಾಮ ಮತ್ತು ಈಜುವ ವೇಳೆ ಇರಬೇಕು. ವಯಸ್ಸನ್ನು 220ರಿಂದ ಕಳೆಯುವ ಮೂಲಕ ಗರಿಷ್ಠ ಹೃದಯಬಡಿತವನ್ನು ಪತ್ತೆ ಮಾಡಬಹುದು.


 • 3. ಈಜುವ ತರಬೇತಿ ಪಡೆಯಿರಿ

  ಸರಿಯಾಗಿ ಈಜುವ ತರಬೇತಿ ಪಡೆದರೆ ಅದರಿಂದ ಮಧ್ಯಮ ವೇಗದಲ್ಲಿ ಈಜಲು ಸಹಕಾರಿ ಆಗುವುದು. ಈಜುವ ತರಗತಿ ಬಗ್ಗೆ ನೀವು ಯಾವುದೇ ತರಗತಿ ಸೇರಿಕೊಂಡು ಅಲ್ಲಿಂದ ಮಾಹಿತಿ ಪಡೆಯಬಹುದು.


 • 4. ಈಜುವ ದಿನಚರಿ ಬದಲಾಯಿಸಿ

  ಒಂದೇ ವೇಗ ಹಾಗೂ ಶೈಲಿಯಲ್ಲಿ ನೀವು ಪ್ರತಿನಿತ್ಯವೂ ಈಜುತ್ತಲಿದ್ದರೆ ಆಗ ನಿಮ್ಮ ದೇಹದಲ್ಲಿ ಯಾವುದೆ ಬದಲಾವಣೆ ಆಗದು. ನೀವು ಪ್ರತಿನಿತ್ಯವು ಹೊಸತನ್ನು ಈಜಿನಲ್ಲಿ ಅಳವಡಿಸಿಕೊಳ್ಳಿ ಮತ್ತು ದೈನಂದಿನ ದಿನಚರಿಯಿಂದ ಹೊರಗೆ ಬನ್ನಿ. ಇದರಿಂದ ಸ್ನಾಯುಗಳ ಬಲಗೊಳ್ಳಲು ಮತ್ತು ದೇಹದಲ್ಲಿನ ಕೊಬ್ಬು ಕರಗಲು ಸಹಕಾರಿ ಆಗಲಿದೆ.


 • 5. ವಾರದಲ್ಲಿ 4-5 ದಿನ ಈಜಿ

  ತೂಕ ಕಳೆದುಕೊಳ್ಳಲು ಹೆಚ್ಚಿನ ಪ್ರಮಾಣದಲ್ಲಿ ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕು. ಜಾಗಿಂಗ್, ವಾಕಿಂಗ್ ಅಥವಾ ಸ್ವಿಮ್ಮಿಂಗ್ ಗೂ ಇದು ಅನ್ವಯವಾಗುವುದು. ಕೆಲವೊಂದು ರೀತಿಯ ವ್ಯಾಯಾಮದಂತೆ ತೂಕ ಕಳೆದುಕೊಳ್ಳಲು ವಾರದಲ್ಲಿ ನಾಲ್ಕರಿಂದ ಐದು ದಿನಗಳ ಕಾಲ ಈಜಬೇಕು.


 • 6. ನಿಧಾನವಾಗಿ ಆರಂಭಿಸಿ

  ಆರಂಭದಲ್ಲಿ ನೀವು ಒಮ್ಮೆಲೇ ಗಂಟೆಗಟ್ಟಲೆ ಈಜಲು ಹೋಗಬೇಡಿ. ಪ್ರತಿನಿತ್ಯ ನೀವು 15-20 ನಿಮಿಷ ಕಾಲ ಈಜಿ. ಇದರ ಬಳಿಕ ಇದನ್ನು ವಾರದಲ್ಲಿ ಐದು ದಿನಗಳ ಕಾಲ 30 ನಿಮಿಷಕ್ಕೆ ಹೆಚ್ಚಿಸಿಕೊಳ್ಳಿ. ನೀವು ಒಂದೇ ಸಲ ಅತಿಯಾಗಿ ಈಜಿದರೆ ಆಗ ಸ್ನಾಯುಗಳಲ್ಲಿ ನೋವು ಮತ್ತು ನಿಶ್ಯಕ್ತಿಯು ಕಾಣಿಸುವುದು.


 • 7. ವಾಟರ್ ಏರೋಬಿಕ್ಸ್ ಈಜಿಗೆ ಪರ್ಯಾಯ

  ಫಲಿತಾಂಶ ಪಡೆಯಲು ನೀವು ಪ್ರತಿನಿತ್ಯವು ಈಜಬೇಕು ಎಂದೇನಿಲ್ಲ. ರಜಾ ದಿನಗಳಲ್ಲಿ ನೀವು ವಾಟರ್ ಏರೋಬಿಕ್ಸ್ ತರಗತಿಗೆ ಹೋಗಬಹುದು. ಇದು ತುಂಬಾ ಕಡಿಮೆ ಒತ್ತಡದ ವ್ಯಾಯಮವಾಗಿದೆ ಮತ್ತು ಚೇತರಿಕೆಗೆ ಇದು ನೆರವಾಗುವುದು.


 • 8. ಪೂಲ್ ನೂಡಲ್ ಬಳಸಿ ಈಜಿ

  ನೀವು ಮೊದಲ ಬಾರಿಗೆ ಈಜಲು ಹೋಗುತ್ತಲಿದ್ದರೆ ಆಗ ನೀವು ಪೂಲ್ ನೂಡಲ್ ಬಳಸಿಕೊಂಡು ಈಜಿ. ಇದು ನಿಮ್ಮನ್ನು ನೀರಿನ ಮೇಲ್ಭಾಗದಲ್ಲಿ ಇಡುವುದು. ಕಾಲುಗಳು ಮತ್ತು ಕೈಗಳು ಹಾಗೆ ನೀರಿನಲ್ಲಿ ಅಲುಗಾಡಿಸುತ್ತಲಿರಿ.


 • 9. ವಾಟರ್ ವೆಯ್ಟ್ ಬಳಸಿ

  ತೂಕ ಇಳಿಸಲು ಮತ್ತು ಸ್ನಾಯುಗಳನ್ನು ಬಲಪಡಿಸಲು ನೀವು ಈಜಲು ಹೋಗುತ್ತಲಿದ್ದರೆ ಆಗ ನೀವು ಮಧ್ಯೆ ಮಧ್ಯೆ ವಾಟರ್ ವೆಯ್ಟ್ ಬಳಸಿ. ಯಾಕೆಂದರೆ ನೀರು ಪ್ರತಿರೋಧ ಒಡ್ಡುವ ಪರಿಣಾಮವಾಗಿ ನಿಮಗೆ ಹೆಚ್ಚಿನ ಶಕ್ತಿ ವ್ಯಯಿಸಬೇಕಾಗುತ್ತದೆ.


 • 10. ಆಹಾರ ಕ್ರಮ ಬದಲಾವಣೆ ಮಾಡಿಕೊಳ್ಳಿ

  ತೂಕ ಕಳೆದುಕೊಳ್ಳುವ ಪ್ರತಿಯೊಂದು ವ್ಯಾಯಾಮದಲ್ಲಿ ಕೂಡ ನಾವು ಸೇವಿಸುವಂತಹ ಕ್ಯಾಲರಿಗಿಂತಲೂ ಹೆಚ್ಚಿನ ಕ್ಯಾಲರಿ ದಹಿಸಬೇಕು. ಕೆಲವು ಕೆಜಿ ಇಳಿಸಿಕೊಳ್ಳಲು ಬಯಸಿದ್ದರೂ ಆಹಾರ ಕ್ರಮದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳಬೇಕು.

  ಇನ್ನೊಂದು ಮಹತ್ವದ ವಿಚಾರವೆಂದರೆ ಈಜಿಗೆ ಹೆಚ್ಚಿನ ಶಕ್ತಿ ಬೇಕಾಗುವುದು. ಇದರಿಂದ ಆಹಾರ ಕ್ರಮವು ಸರಿಯಾಗಿ ಇರಬೇಕು. ಈಜಿ ಬಂದ ಬಳಿಕ ಹಸಿವು ತೀವ್ರವಾಗಿ ಹೆಚ್ಚಾಗುವುದು. ಈಜಿ ಬಂದ ಬಳಿಕ ತೀವ್ರ ರೀತಿಯಲ್ಲಿ ಹಸಿವಾಗುತ್ತಲಿದ್ದರೆ ಆಗ ನೀವು ತರಕಾರಿ, ಪ್ರೋಟೀನ್ ಶೇಕ್ ನ್ನು ಆಹಾರ ಕ್ರಮಕ್ಕೆ ಸೇರಿಸಿಕೊಳ್ಳಿ ಮತ್ತು ತಿಂಡಿ ತಿನ್ನುವುದರಿಂದ ದೂರವಿರಿ.
ದೇಹದಲ್ಲಿ ಇರುವ ಮಿತಿಗಿಂತ ಹೆಚ್ಚಿನ ತೂಕ ಇಳಿಸಿಕೊಳ್ಳಲು ಇಂದಿನ ದಿನಗಳಲ್ಲಿ ಹಲವಾರು ರೀತಿಯ ತರಗತಿಗಳು, ವ್ಯಾಯಾಮಗಳು ನಿಮಗೆ ಸಿಗುವುದು. ಕೆಲವು ಮಂದಿ ಜಿಮ್ ಗೆ ಹೋಗಿ ವ್ಯಾಯಾಮ ಮಾಡಿಕೊಳ್ಳುವರು. ಆದರೆ ಜಿಮ್ ಗೆ ಸೇರಿದ ಕೆಲವರು ಅತಿಯಾಗಿ ತಿನ್ನುವ ಪರಿಣಾಮವಾಗಿ ಇನ್ನಷ್ಟು ತೂಕ ಹೆಚ್ಚಿಸುವರು. ಹೀಗೆ ಬದ್ಧತೆ ಇಲ್ಲದೆ ಇದ್ದರೆ ಖಂಡಿತವಾಗಿಯೂ ತೂಕ ಇಳಿಸಿಕೊಳ್ಳಲು ಆಗಲ್ಲ. ತುಂಬಾ ಸರಳ ವಿಧಾನದಿಂದ ತೂಕ ಇಳಿಸಿಕೊಳ್ಳಲು ಸ್ವಿಮ್ಮಿಂಗ್(ಈಜುವುದು) ಮಾಡಬಹುದು. ಇದು ನಿಮ್ಮ ಮನಸ್ಸಿಗೆ ಖುಷಿ ನೀಡುವ ಜತೆಗೆ ತೂಕ ಇಳಿಸಲು ಸಹಕಾರಿ ಆಗಲಿದೆ.

ಓಡುವುದನ್ನು ವ್ಯಾಯಾಮವನ್ನಾಗಿಸಿಕೊಂಡು ತೂಕ ಇಳಿಸಬಹುದಾದಷ್ಟೇ ಸ್ಮಿಮ್ಮಿಂಗ್ ನಿಂದಲೂ ಸಾಧ್ಯವಿದೆ. ಗಾಯಾಳು ಸಮಸ್ಯೆ ಮತ್ತು ಗಂಟು ನೋವು ಇರುವವರಿಗೆ ಇದು ತುಂಬಾ ಪರಿಣಾಮಕಾರಿ. ತೂಕ ಇಳಿಸಿಕೊಳ್ಳಲು ಯಾವ ರೀತಿಯಲ್ಲಿ ಸ್ವಿಮ್ಮಿಂಗ್ ಮಾಡಬಹುದು ಎಂದು ನೀವು ಮುಂದೆ ಓದುತ್ತಾ ತಿಳಿಯಿರಿ.

ತೂಕ ಕಳೆದುಕೊಳ್ಳಲು ಸ್ಮಿಮ್ಮಿಂಗ್ ಮಾಡಲು ಹತ್ತು ಸಲಹೆಗಳು

ಹೊಟ್ಟೆಯಲ್ಲಿನ ಕೊಬ್ಬು ಕರಗಿಸಿಕೊಂಡು ಸ್ನಾಯುಗಳನ್ನು ಬಲಪಡಿಸಲು ನೀವು ಸ್ವಿಮ್ಮಿಂಗ್ ಮಾಡಬಯಸಿದ್ದರೆ ಅಥವಾ ವ್ಯಾಯಾಮ ಕ್ರಮವನ್ನು ಬದಲಾಯಿಸಲು ಸ್ವಿಮ್ಮಿಂಗ್ ಮಾಡುತ್ತಿದ್ದರೆ ಇಲ್ಲಿ ಕೆಲವೊಂದು ವಿಧಾನಗಳಿವೆ.

 
ಹೆಲ್ತ್